ಒಟ್ಟು ಮೂರು ಮಾದರಿಯಲ್ಲಿ ಐಫೋನ್ 8 ಲಾಂಚ್.!

Written By: Lekhaka

ಇದೇ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿರುವ ಐಫೋನ್ 8 ಬಗ್ಗೆ ಈಗಾಗಲೇ ಅನೇಕ ಮಾಹಿತಿಗಳು ಲೀಕ್ ಆಗಿದ್ದು, ಬಿಡುಗಡೆಯಾಗಿ ಕೇಲವು ದಿನಗಳಲ್ಲೇ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಕಾರಣ ಈಗ ತಾನೇ ಐಫೋನ್ 8 ರ ಪ್ರೋಡೆಷನ್ ಆರಂಭವಾಗಿದೆ.

ಒಟ್ಟು ಮೂರು ಮಾದರಿಯಲ್ಲಿ ಐಫೋನ್ 8 ಲಾಂಚ್.!

ಮೂಲಗಳ ಪ್ರಕಾರ ಈ ಫೋನ್ ಆಕ್ಟೋಬರ್ ಮಧ್ಯ ಭಾಗದಲ್ಲಿ ಇಲ್ಲವೇ ಅಂತ್ಯದ ವೇಳೆಗೆ ಗ್ರಾಹಕರ ಕೈ ಸೇರಲಿದೆ ಎನ್ನಲಾಗಿದೆ. ಅಲ್ಲದೇ ಐಫೋನ್ 8 ಸದ್ಯಕ್ಕೆ ಲಿಮಿಟೆಡ್ ಅಡಿಷನ್ ಆಗಿದ್ದು, ಮೊದಲಿಗೆ ಕೇವಲ 2 ರಿಂದ 4 ಮಿಲಿಯನ್ ಫೋನ್ ಗಳು ಮಾತ್ರವೇ ಬಿಡುಗೆಯಾಗಲಿದೆ.

ಕಾರಣ ಒಟ್ಟು ಮೂರು ಮಾದರಿಯಲ್ಲಿ ಈ ಫೋನ್ ಲಾಂಚ್ ಆಗಲಿದೆ. OLED ಮಾಡಲ್ ನವಂಬರ್ ನಲ್ಲಿ ಬಿಡುಗಡೆ ಯಾಗಲಿದೆ. ಇದೇ ಮಾದರಿಯಲ್ಲಿ ಮತ್ತೊಂದು ಮಾದರಿಯ OLED ಸೆಪ್ಟೆಂಬರ್ ನಲ್ಲಿ ಲಾಂಚ್ ಆಗಲಿದೆ. ಆದರೆ ಈ ಐಫೋನ್ ಗಳಿಗೆ ಇನ್ನು ಹೆಸರಿಟ್ಟಿಲ್ಲ ಎನ್ನಲಾಗಿದೆ.

ಈಗಾಘಲೇ LCD ಮಾಡಲ್ ಮಾರುಕಟ್ಟಗೆ ಆಗಮಿಸಲು ಸಿದ್ಧವಾಗಿದೆ. ಇನ್ನು ಎರಡು ಮಾದರಿಯ ಫೋನ್ ಗಳು ತಿಂಗಳ ಅಂತರದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಸ್ಯಾಮ್ ಸಂಗ್ ನಿಂದ ಆಪಲ್ OLED ಸ್ಕ್ರಿನ್ ಗಳನ್ನು ಆಮದು ಮಾಡಿಕೊಂಡಿದ್ದು, ಬೆಲೆಯೂ ಸಹ ಲೀಕ್ ಆಗಿದೆ. ಮೂಲಗಳ ಪ್ರಕಾರ ಭಾರತೀಯ ಬೆಲೆಯಲ್ಲಿ ರೂ.64122 ಕ್ಕೆ ಐಫೋನ್ 8 ದೊರೆಯಲಿದೆ ಎನ್ನಲಾಗಿದೆ.

English summary
Apple is all set to unveil its new flagship the iPhone 8 next week on September 12 and the company has already sent out media invites for the launch event.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot