ಭಾರತದಲ್ಲಿ ಆಪಲ್ ಐಫೋನ್ ನ ಬ್ಯಾಟರಿ ರಿಪ್ಲೇಸ್ ಮಾಡಲು ಸಾಕು ಕೇವಲ ರೂ 2000!

By Tejaswini P G
|

ಇತ್ತೀಚೆಗಷ್ಟೇ ಆಪಲ್ ತನ್ನ ಫೋನ್ ಹಳೆಯದಾಗುತ್ತಿದ್ದಂತೆ ಕುಸಿಯುವ ತನ್ನ ಬ್ಯಾಟರಿಯ ಸಾಮರ್ಥ್ಯವನ್ನು ಮರೆಮಾಚಲು ಐಫೋನ್ ನ ಕಾರ್ಯಕ್ಷಮತೆಯನ್ನೇ ನಿಧಾನವಾಗಿಸುವ ಕಾರ್ಯತಂತ್ರವನ್ನು ಬಳಸುವ ಮೂಲಕ ಸುದ್ದಿಯಾಗಿತ್ತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಆಪಲ್ ತನ್ನ ಫೋನ್ ಅನ್ನು ಉದ್ದೇಶಪೂರ್ವಕ ನಿಧಾನವಾಗಿಸಿದ್ದಕ್ಕೆ ಗ್ರಾಹಕರ ಕ್ಷಮೆಯಾಚಿಸುತ್ತಾ ಪತ್ರವೊಂದನ್ನು ಬಿಡುಗಡೆಮಾಡಿತ್ತು.

ಭಾರತದಲ್ಲಿ ಆಪಲ್ ಐಫೋನ್ ನ ಬ್ಯಾಟರಿ ರಿಪ್ಲೇಸ್ ಮಾಡಲು ಸಾಕು ಕೇವಲ ರೂ 2000!


ಯುಎಸ್ ನಲ್ಲಿ ಆಪಲ್ ಕಡಿಮೆ ವೆಚ್ಚದಲ್ಲಿ ತನ್ನ ಐಫೋನ್ಗಳ ಹಳೆಯ ಬ್ಯಾಟರಿಯ ಬದಲಿಸಿ ಹೊಸ ಬ್ಯಾಟರಿಯನ್ನು ನೀಡಲು ಮುಂದಾಗಿದೆ. ಭಾರತದಲ್ಲಿಯೂ ಇದೇ ನೀತಿಯನ್ನು ಅನುಸರಿಸುತ್ತಿರುವ ಆಪಲ್ ಬ್ಯಾಟರಿ ರಿಪ್ಲೇಸ್ಮೆಂಟ್ ನ ವೆಚ್ಚದಲ್ಲಿ ಭಾರಿ ಕಡಿತವನ್ನು ನೀಡಿದೆ.

91ಮೊಬೈಲ್ಸ್ ನ ವರದಿಯೊಂದರ ಅನುಸಾರ ಭಾರತದಲ್ಲಿ ಐಫೋನ್ ನ ಹಳೆಯ ಬ್ಯಾಟರಿಯನ್ನು ಹೊಸ ಬ್ಯಾಟರಿಯೊಂದಿಗೆ ಬದಲಾಯಿಸಿಕೊಳ್ಳಲು ಗ್ರಾಹಕರು ಪಾವತಿಸಬೇಕಾದ ಮೊತ್ತ ಕೇವಲ ರೂ 2000 ಎಂದು ಕಂಪೆನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಈ ಮೊತ್ತದಲ್ಲಿ ಟ್ಯಾಕ್ಸ್ ಕೂಡ ಸೇರಿದೆ.

How to Sharing a Mobile Data Connection with Your PC (KANNADA)

ಬ್ಯಾಟರಿ ರಿಪ್ಲೇಸ್ಮೆಂಟ್ ನಲ್ಲಿ ಈ ಕಡಿತ ಐಫೋನ್ 6, ಐಫೋನ್ 6 ಪ್ಲಸ್, ಐಫೋನ್ 6s,ಐಫೋನ್ 6s ಪ್ಲಸ್ , ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಮಾಡೆಲ್ಗಳ ಮೇಲೆ ಅನ್ವಯಿಸುತ್ತದೆ. ಇದಕ್ಕಿಂತ ಮೊದಲು ಈ ಮಾಡೆಲ್ಗಳ ಬ್ಯಾಟರಿ ಬದಲಾಯಿಸಲು ರೂ 6500 ತೆರಬೇಕಾಗಿತ್ತು. ಹೊಸ ಬೆಲೆ ಹಿಂದಿಗಿಂತ ಮೂರನೇ ಒಂದರಷ್ಟು ಅಗ್ಗವಾಗಿದೆ. ಹಳೆಯ ಐಫೋನ್ ಬಳಕೆದಾರರು ಭಾರತದೆಲ್ಲೆಡೆ ಥರ್ಡ್-ಪಾರ್ಟಿ ಸರ್ವೀಸ್ ಪಾರ್ಟ್ನರ್ಗಳ ಮೂಲಕ ತಮ್ಮ ಬ್ಯಾಟರಿಯನ್ನು ಬದಲಾಯಿಸಬಹುದಾಗಿದೆ.

ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ಸರ್ಕಾರದಿಂದ ನೋಟಿಸ್: ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ಸರ್ಕಾರದಿಂದ ನೋಟಿಸ್: ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!

ಆಪಲ್ ಮೊಬೈಲ್ಗಳಲ್ಲಿ ಇರುವ ಈ ದೋಷವನ್ನು ಮೊದಲು ರೆಡ್ಡಿಟ್ ಬಳಕೆದಾರರಬ್ಬರು ಬಹಿರಂಗಪಡಿಸಿದ್ದು , ಐಫೋನ್ 6s ಬಳಕೆದಾರರಾದ ಇವರು ಐಓಎಸ್ 11.2 ಅಪ್ಡೇಟ್ ಅನ್ನು ಇನ್ಸ್ಟಾಲ್ ಮಾಡಿದ ಬಳಿಕ ತಮ್ಮ ಐಫೋನ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸಿದ್ದನ್ನು ಗಮನಿಸಿದ್ದಾರೆ.

ಬ್ಯಾಟರಿಯನ್ನು ಬದಲಾಯಿಸಿದ ನಂತರ ಐಫೋನ್ ಮತ್ತೆ ಉತ್ತಮ ಕಾರ್ಯಕ್ಷಮತೆಯನ್ನು ತೋರಿದೆ.ನಂತರ ಈ ಬಳಕೆದಾರರು ಗೀಕ್ಬೆಂಚ್ ಬೆಂಚ್ಮಾರ್ಕಿಂಗ್ ಆಪ್ ಅನ್ನು ಬಳಸಿ ತಮ್ಮ ಮೊಬೈಲ್ ಅನ್ನು ಪರೀಕ್ಷಿಸಿದ್ದಾರೆ. ಈ ಪರೀಕ್ಷೆಗಳ ಮೂಲಕ ಆಪಲ್ ಸಂಸ್ಥೆಯು ತಮ್ಮ ಸಾಫ್ಟ್ವೇರ್ ಅಪ್ಡೇಟ್ಗಳ ಮೂಲಕ ಉದ್ದೇಶಪೂರ್ವಕವಾಗಿ ಹಳೆಯ ಐಫೋನ್ಗಳನ್ನು ನಿಧಾನವಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿ ಹರಡುತ್ತಿದ್ದಂತೆ ಜನರ ಆಕ್ರೋಶಕ್ಕೊಳಗಾದ ಆಪಲ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಬ್ಯಾಟರಿ ಹಳೆಯದಾದರೂ ಐಫೋನ್ ತಮ್ಮ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಈ ನಿರ್ಧಾರ ತೆಗದುಕೊಂಡಿರುವುದಾಗಿ ತಿಳಿಸಿದೆ. ಆಪಲ್ ಸಂಸ್ಥೆಯ ಉದ್ದೇಶ ಮೇಲ್ನೋಟಕ್ಕೆ ಸರಿಯಾಗಿಯೇ ಕಂಡರೂ ಬಳಕೆದಾರರು ಆಪಲ್ ನ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.ಹಲವು ಗ್ರಾಹಕರು ಆಪಲ್ ತಮ್ಮಿಂದ ಈ ವಿಷಯವನ್ನು ಮರೆಮಾಚಿದ್ದಕ್ಕಾಗಿ ಆಪಲ್ ನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಆಪಲ್ ಕೂಡ ಇದರಿಂದ ಪರಿಣಾಮಕ್ಕೊಳಗಾಗಿರುವ ಎಲ್ಲಾ ಮೊಬೈಲ್ಗಳಿಗೆ ಹೊಸ ಸಾಫ್ಟ್ವೇರ್ ಅಪ್ಡೇಟ್ ಅನ್ನು ನೀಡುವುದಾಗಿ ತಿಳಿಸಿದೆ.

Best Mobiles in India

Read more about:
English summary
Apple announced that it will provide battery replacements for the older iPhones at a lesser cost in the US. Following this move, the company has now slashed the battery replacement cost of the older iPhones models in India. The users of older iPhones can replace the battery of the device by paying Rs. 2,000 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X