ಐಫೋನ್‌ಗಳು ಇತ್ತೀಚೆಗೆ ಪಡೆದುಕೊಂಡ ಫೀಚರ್ಸ್‌ಗಳಾವುವು; ಇಲ್ಲಿದೆ ಲಿಸ್ಟ್‌

|

ಐಫೋನ್‌ಗಳು ತನ್ನ ಬಳಕೆದಾರರಿಗೆ ವಿಶೇಷ ಅನುಭವ ನೀಡುವುದರ ಜೊತೆಗೆ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತಿವೆ. ಹಾಗೆಯೇ ಈ ವರ್ಷದಲ್ಲಿ ವಿವಿಧ ಫೀಚರ್ಸ್‌ಗಳನ್ನು ಐಫೋನ್‌ಗಳಿಗೆ ಆಪಲ್‌ ಕಂಪೆನಿ ಪರಿಚಯಿಸಿದೆ. ಅದರಲ್ಲೂ ಆಪರೇಟಿಂಗ್ ಸಿಸ್ಟಮ್ ನವೀಕರಣದ ವಿಷಯ ಮಾತ್ರ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಅಂತೆಯೇ ಆಪಲ್‌ ಐಓಎಸ್‌ 16 ಅನ್ನು ಸೆಪ್ಟೆಂಬರ್ 12, 2022 ರಂದು ಲಾಂಚ್‌ ಮಾಡಿತ್ತು, ಇದಾದ ನಂತರ ಐಪ್ಯಾಡ್‌ಗೆ ಐಪ್ಯಾಡ್‌ ಓಎಸ್‌16.1 ಅನ್ನು ಅಕ್ಟೋಬರ್ 24 ರಂದು ಲಾಂಚ್ ಮಾಡಿದೆ.

ಆಪಲ್

ಹೌದು, ಆಪಲ್ ಕಂಪೆನಿಯು ಐಫೋನ್ ಬಳಕೆದಾರರಿಗೆ ಅಧಿಕೃತವಾಗಿ ಐಓಎಸ್‌ 16 ಅನ್ನು ನೀಡಿದ ನಂತರ ಈಗ ಐಓಎಸ್‌ 16.2 ನವೀಕರಣವನ್ನು ಹೊರತಂದಿದೆ. ಇದಿಷ್ಟೇ ಅಲ್ಲದೆ, ಭಾರತದಲ್ಲಿ ಕೆಲವು ಐಫೋನ್ ವೇರಿಯಂಟ್‌ಗೆ 5G ಬೆಂಬಲ ಸಿಗುವಂತೆ ಮಾಡುತ್ತಿದ್ದು, ಹೊಸ ಲಾಕ್ ಸ್ಕ್ರೀನ್ ವಿಜೆಟ್‌ಗಳು ಫೀಚರ್ಸ್‌ಗಳ ವಿಭಾಗದಲ್ಲಿ ವಿಶೇಷ ಎನಿಸಿಕೊಂಡಿವೆ. ಇದರೊಂದಿಗೆ ಇನ್ನೂ ಹತ್ತು ಹಲವು ಹೊಸ ಫೀಚರ್ಸ್‌ಗಳನ್ನು ಐಫೋನ್‌ಗಳು ಹೊಂದಿದ್ದು, ಅವುಗಳ ಸಂಪೂರ್ಣ ವಿವರಕ್ಕಾಗಿ ಈ ಲೇಖನ ಓದಿ.

5G ಸೌಲಭ್ಯ

5G ಸೌಲಭ್ಯ

ಐಓಎಸ್‌ 16.2 ರ ರೋಲ್‌ಔಟ್‌ನೊಂದಿಗೆ ಭಾರತದಲ್ಲಿ ಕೆಲವು ಐಫೋನ್ ಬಳಕೆದಾರರು 5G ಲಭ್ಯವಿರುವ ಪ್ರದೇಶಗಳಲ್ಲಿ ಈ ಸೇವೆ ಪಡೆದುಕೊಳ್ಳಬಹುದಾಗಿದೆ ಐಫೋನ್‌ 12 ಸರಣಿಗಿಂತ ಹಳೆಯದಾದ ಐಫೋನ್‌ ಹೊಂದಿದ್ದರೆ ಅವುಗಳಲ್ಲಿ ನೀವು 5G ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಅಂತೆಯೇ ಈ 5G ಸೇವೆಯನ್ನು ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ ಸಂಸ್ಥೆಗಳು ಆಯ್ದ ನಗರಗಳಲ್ಲಿ ಮಾತ್ರ ನೀಡುತ್ತಿವೆ ಎಂಬುದು ಸಹ ನಿಮ್ಮ ಗಮನಕ್ಕಿರಲಿದೆ.

ಆಪಲ್ ಮ್ಯೂಸಿಕ್ ಸಿಂಗ್

ಆಪಲ್ ಮ್ಯೂಸಿಕ್ ಸಿಂಗ್

ಈ ವರ್ಷ ಆಪಲ್‌ ಫೋನ್‌ಗಳು ಪಡೆದುಕೊಂಡ ಮನರಂಜನಾತ್ಮಕ ಫೀಚರ್ಸ್‌ಗಳಲ್ಲಿ ಆಪಲ್ ಮ್ಯೂಸಿಕ್ ಸಿಂಗ್ ಪ್ರಮುಖವಾಗಿದೆ. ಈ ಫೀಚರ್ಸ್‌ ಮೂಲಕ ನೀವು ನೆಚ್ಚಿನ ಹಾಡುಗಳ ಮ್ಯೂಸಿಕ್‌ ಜೊತೆಗೆ ನೀವು ಹಾಡಬಹುದಾಗಿದೆ. ಹಾಗೆಯೇ ಬೇರೆ ವ್ಯಕ್ತಿಗಳ ಜೊತೆಗೂ ಹಾಡುವ ಅವಕಾಶ ಕಲ್ಪಿಸಲಾಗಿದ್ದು, ಈ ಹಾಡುಗಳನ್ನು ಶೇರ್‌ ಸಹ ಮಾಡಿಕೊಳ್ಳಬಹುದು.

ಆಲ್‌ವೇಸ್‌ ಆನ್ ಡಿಸ್‌ಪ್ಲೇ

ಆಲ್‌ವೇಸ್‌ ಆನ್ ಡಿಸ್‌ಪ್ಲೇ

ಆಪಲ್‌ ಫೋನ್‌ಗಳಿಗೆ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್ಸ್‌ ನೀಡಿದೆ. ಈ ಫೀಚರ್ಸ್‌ ಐಫೋನ್‌ 14 ಪ್ರೊ ಹಾಗೂ ಐಫೋನ್‌ 14 ಪ್ರೊ ಮ್ಯಾಕ್ಸ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಫೀಚರ್ಸ್‌ನಿಂದ ವಾಲ್‌ಪೇಪರ್ ಮತ್ತು ನೋಟಿಫಿಕೇಶನ್‌ಗಳನ್ನು ಮರೆಮಾಡಬಹುದು. ಇದನ್ನು ಸಕ್ರಿಯಗೊಳಿಸಿದರೆ ಲಾಕ್‌ ಸ್ಕ್ರೀನ್ ಬ್ಲ್ಯಾಕ್‌ ಡಿಸ್‌ಪ್ಲೇ ನಲ್ಲಿ ಕಾಣಿಸಿಕೊಳ್ಳುತ್ತದೆ.

ಏರ್‌ಡ್ರಾಪ್ ಫೀಚರ್ಸ್‌

ಏರ್‌ಡ್ರಾಪ್ ಫೀಚರ್ಸ್‌

ಏರ್‌ಡ್ರಾಪ್‌ ಮೂಲಕ ನೀವು ನಿಮ್ಮ ಫೋಟೋಗಳು, ವಿಡಿಯೋಗಳು, ವೆಬ್‌ಸೈಟ್‌ಗಳು, ಸ್ಥಳಗಳು ಮತ್ತು ಇನ್ನೂ ಹೆಚ್ಚಿನದನ್ನು ಹತ್ತಿರದ ಇತರ ಡಿವೈಸ್‌ಗಳು ಮತ್ತು ಮ್ಯಾಕ್‌ ಕಂಪ್ಯೂಟರ್‌ಗಳಿಗೆ ಸೆಂಡ್ ಮಾಡಬಹುದಾಗಿದೆ. ಇದು ವೈ-ಫೈ ಮತ್ತು ಬ್ಲೂಟೂತ್ ಬಳಸಿಕೊಂಡು ಮಾಹಿತಿಯನ್ನು ವರ್ಗಾಯಿಸುತ್ತದೆ. ಅದರಂತೆ ಈಗ ಐಓಎಸ್‌ 16.2 ನೊಂದಿಗೆ, ಎವರಿಒನ್‌ ಫಾರ್‌ 10 ಮಿನಿಟ್ಸ್‌ ಎಂಬ ಹೊಸ ಫೀಚರ್ಸ್‌ ಬಳಕೆ ಮಾಡಿಕೊಳ್ಳಬಹುದಾಗಿದೆ.

ಐಕ್ಲೌಡ್ ನಲ್ಲಿ ಸುಧಾರಿತ ಡೇಟಾ ರಕ್ಷಣೆ

ಐಕ್ಲೌಡ್ ನಲ್ಲಿ ಸುಧಾರಿತ ಡೇಟಾ ರಕ್ಷಣೆ

ಆಪಲ್ ಈಗ ಬಳಕೆದಾರರಿಗೆ ತಮ್ಮ ಐಕ್ಲೌಡ್ ಡೇಟಾವನ್ನು ಇನ್ನಷ್ಟು ಸುರಕ್ಷಿತಗೊಳಿಸುವ ಆಯ್ಕೆಯನ್ನು ನೀಡಿದೆ. ಇದರಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಸಿ ರಕ್ಷಿಸಲಾದ ಒಟ್ಟು ಐಕ್ಲೌಡ್ ಡೇಟಾ ವರ್ಗಗಳ ಸಂಖ್ಯೆಯನ್ನು 23 ಕ್ಕೆ ವಿಸ್ತರಿಸಲಾಗಿದೆ.

ಮೆಸೆಜ್‌ಗಳ ಸುಧಾರಿತ ಹುಡುಕಾಟದ ಫೀಚರ್ಸ್‌

ಮೆಸೆಜ್‌ಗಳ ಸುಧಾರಿತ ಹುಡುಕಾಟದ ಫೀಚರ್ಸ್‌

ಹೊಸ ನವೀಕರಣದಲ್ಲಿ ಮೆಸೆಜ್‌ ಹುಡುಕಾಟಕ್ಕೆ ಸುಲಭ ಮಾರ್ಗ ನೀಡಲಾಗಿದೆ. ಉದಾಹರಣೆಗೆ ಹೇಳುವುದಾದರೆ ನಾಯಿ, ಕಾರು, ವ್ಯಕ್ತಿ ಅಥವಾ ಟೆಕ್ಟ್ಸ್ ನಂತಹ ವಿಷಯದ ಆಧಾರದ ಮೇಲೆ ಫೋಟೋಗಳನ್ನು ಇದು ಸುಲಭವಾಗಿ ಹುಡುಕುತ್ತದೆ.

ಉತ್ತಮ ಸಹಯೋಗಕ್ಕೆ ಫ್ರೀಫಾರ್ಮ್ ಆಪ್‌

ಉತ್ತಮ ಸಹಯೋಗಕ್ಕೆ ಫ್ರೀಫಾರ್ಮ್ ಆಪ್‌

ಫ್ರೀಫಾರ್ಮ್ ಎಂಬುದು ಮ್ಯಾಕ್‌, ಐಪ್ಯಾಡ್‌ ಹಾಗೂ ಐಫೋನ್‌ಗಳ ಸಹಯೋಗವನ್ನು ಸುಲಭಗೊಳಿಸುವ ಹೊಸ ಆಪ್‌ ಆಗಿದೆ. ಇದು ಡಿಜಿಟಲ್ ವೈಟ್‌ಬೋರ್ಡ್‌ನಂತಿದ್ದು, ಬಳಕೆದಾರರಿಗೆ ಫೈಲ್‌ಗಳು, ಚಿತ್ರಗಳು, ಸ್ಟಿಕಿಗಳು ಮತ್ತು ಹೆಚ್ಚಿನದನ್ನು ಸೇರಿಸಲು ಅನುಮತಿ ನೀಡುತ್ತದೆ. ಹಾಗೆಯೇ ಬಳಕೆದಾರರು ತಮ್ಮ ಬೆರಳಿನಿಂದ ಕ್ಯಾನ್ವಾಸ್‌ನಲ್ಲಿ ಎಲ್ಲಿ ಬೇಕಾದರೂ ಚಿತ್ರಿಸಬಹುದಾದ ಡ್ರಾಯಿಂಗ್ ಪರಿಕರಗಳನ್ನು ಸಹ ನೀಡಲಾಗಿದೆ.

ಲಾಕ್ ಸ್ಕ್ರೀನ್ ವಿಜೆಟ್‌ಗಳು

ಲಾಕ್ ಸ್ಕ್ರೀನ್ ವಿಜೆಟ್‌ಗಳು

ಎರಡು ರೀತಿಯ ಹೊಸ ಲಾಕ್ ಸ್ಕ್ರೀನ್ ವಿಜೆಟ್‌ಗಳನ್ನು ಸೇರಿಸಲಾಗಿದೆ. ಇದರಲ್ಲಿ ಸ್ಲೀಪ್ ವಿಜೆಟ್ ಬಳಕೆದಾರರಿಗೆ ಅವರ ಇತ್ತೀಚಿನ ನಿದ್ರೆ ಡೇಟಾವನ್ನು ವೀಕ್ಷಿಸಲು ಅನುಮತಿಸುತ್ತದೆ. ಮತ್ತು ಮೆಡಿಕೇಷನ್ಸ್ ವಿಜೆಟ್ ಬಳಕೆದಾರರಿಗೆ ಜ್ಞಾಪನೆಗಳನ್ನು ವೀಕ್ಷಿಸಲು ಮತ್ತು ಮೆಡಿಷನ್‌ ವೇಳಾಪಟ್ಟಿಯನ್ನು ತಿಳಿಸಲು ಸಹಕಾರ ಮಾಡಲಿದೆ.

ಗೇಮ್‌ ಸೆಂಟರ್‌ನಲ್ಲಿ ಹೊಸ ಫೀಚರ್ಸ್‌

ಗೇಮ್‌ ಸೆಂಟರ್‌ನಲ್ಲಿ ಹೊಸ ಫೀಚರ್ಸ್‌

ಮಲ್ಟಿಪ್ಲೇಯರ್ ಗೇಮ್‌ಗಳಿಗಾಗಿ ಗೇಮ್ ಸೆಂಟರ್‌ನಲ್ಲಿ ಬಳಕೆದಾರರು ಈಗ ಶೇರ್‌ಪ್ಲೇ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಇದರರ್ಥ ಅವರು ಫೇಸ್‌ಟೈಮ್ ಕಾಲ್‌ನಲ್ಲಿರುವಾಗ ಇತರರರೊಂದಿಗೆ ಆಟವಾಡಬಹುದು. ಹಾಗೆಯೇ ಹೊಸ ಚಟುವಟಿಕೆಯ ವಿಜೆಟ್ ಬಳಕೆದಾರರು ತಮ್ಮ ಸ್ನೇಹಿತರು ಯಾವ ಗೇಮ್‌ ಆಡುತ್ತಿದ್ದಾರೆ, ಏನೆಲ್ಲಾ ಸಾಧನೆ ಮಾಡಿದ್ದಾರೆ ಎನ್ನುವುದನ್ನು ನೋಡಬಹುದಾಗಿದೆ.

Best Mobiles in India

Read more about:
English summary
Apple Iphone get new features with 5G support, Freeform app and 7 other new.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X