ಐಫೋನ್‌ SE 2022 ಖರೀದಿಸುವ ಗ್ರಾಹಕರಿಗೆ ಈಗ ಬಿಗ್ ಶಾಕ್‌!

|

ಜನಪ್ರಿಯ ಆಪಲ್ ಸಂಸ್ಥೆಯ ಕೈಗೆಟುಕುವ ಐಫೋನ್‌ ಎಂದೇ ಗುರುತಿಸಿಕೊಂಡಿರುವ ಐಫೋನ್‌ SE 2022 (iPhone SE 2022) ಅನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಆಗಿತ್ತು. ಇದೀಗ ಭಾರತದಲ್ಲಿ ಈ ಐಫೋನ್‌ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, ಐಫೋನ್‌ ಖರೀದಿಸುವ ಗ್ರಾಹಕರಿಗೆ ಬಿಗ್ ಎನಿಸಿದೆ. ಇನ್ನು ಈ ಐಫೋನ್‌ A15 ಬಯೋನಿಕ್ ಚಿಪ್‌ಸೆಟ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ.

ವೇರಿಯಂಟ್‌

ಆಪಲ್ ಐಫೋನ್‌ SE 2022 (iPhone SE) ಬೆಲೆಯಲ್ಲಿ 6000ರೂ. ಗಳ ಏರಿಕೆ ಆಗಿದೆ. 64GB ಸ್ಟೋರೇಜ್‌ ವೇರಿಯಂಟ್‌ 43,900ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಆಗಿತ್ತು. ಬೆಲೆ ಏರಿಕೆ ಬಳಿಕ ಇದೀಗ ಈ ಐಫೋನ್ ಈಗ 49,900ರೂ. ನಲ್ಲಿ ಲಭ್ಯವಿದೆ. ಹಾಗೆಯೇ 128GB ಸ್ಟೋರೇಜ್ ವೇರಿಯಂಟ್‌ 54,900ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 256GB ಸ್ಟೋರೇಜ್ ವೇರಿಯಂಟ್‌ 64,900ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಐಫೋನ್

ಆಪಲ್ ಐಫೋನ್ SE (2022) 4.7 ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750 x 1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರೆತೆಯು 326ppi ಆಗಿದ್ದು, 625 nits ವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಹೊಸ ಮಾದರಿಯು IP67 ಪ್ರಮಾಣೀಕೃತ ನಿರ್ಮಾಣದೊಂದಿಗೆ ಬರುತ್ತದೆ. ಹಾಗೆಯೇ ಈ ಹೊಸ ಐಫೋನ್ SE ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಕಠಿಣವಾದ ಗ್ಲಾಸ್ ಅನ್ನು ಹೊಂದಿದೆ.

ಐಫೋನ್‌

ಐಫೋನ್ SE (2022) ಆಪಲ್‌ ಕಂಪೆನಿ A 15 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 15 ಬೆಂಬಲ ನೀಡಲಿದೆ. ಇದರೊಂದಿಗೆ ಈ ಐಫೋನ್‌ 64GB, 128GB ಮತ್ತು 256GB ಸ್ಟೋರೇಜ್ ವೇರಿಯಂಟ್‌ ಮಾದರಿಗಳನ್ನು ಹೊಂದಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

SE

ಇನ್ನು ಐಫೋನ್ SE (2022) ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಪ್ರಾಥಮಿಕ ಕ್ಯಾಮರಾವು 12 ಮೆಗಾ ಪಿಕ್ಸೆಲ್ ಸೆನ್ಸಾರ್ ಇದ್ದು, f/ 1.8 ಲೆನ್ಸ್‌ + ಒಐಎಸ್ ಹೊಂದಿದೆ. ಇದು ಡೀಪ್ ಫ್ಯೂಷನ್, ಸ್ಮಾರ್ಟ್ HDR 4 ಮತ್ತು ಫೋಟೋಗ್ರಾಫಿಕ್ ಸ್ಟೈಲ್ಸ್ ಸೇರಿದಂತೆ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಪಿಕ್ಸಲ್

ಇನ್ನು ಸೆಲ್ಫಿಗಾಗಿ ಮುಂಬಾಗದಲ್ಲಿ 7 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಸೆಲ್ಫಿ ಕ್ಯಾಮೆರಾವು ನ್ಯಾಚುರಲ್, ಸ್ಟುಡಿಯೋ, ಬಾಹ್ಯರೇಖೆ, ಹಂತ, ಸ್ಟೇಜ್ ಮೊನೊ ಮತ್ತು ಹೈ-ಕೀ ಮೊನೊ ಎಂಬ ಆರು ಪರಿಣಾಮಗಳೊಂದಿಗೆ ಪೋರ್ಟ್ರೇಟ್ ಲೈಟಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡೀಪ್ ಫ್ಯೂಷನ್, ಫೋಟೋಗಳಿಗಾಗಿ ಸ್ಮಾರ್ಟ್ HDR 4 ಮತ್ತು ಫೋಟೋಗ್ರಾಫಿಕ್ ಶೈಲಿಗಳನ್ನು ಸಹ ಒಳಗೊಂಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾದಿಂದ 1080p ವೀಡಿಯೊ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಿದೆ. ಟೈಮ್ ಲ್ಯಾಪ್ಸ್ ವೀಡಿಯೊ ಮತ್ತು ನೈಟ್ ಮೋಡ್ ಟೈಮ್ ಲ್ಯಾಪ್ಸ್‌ಗೆ ಸಹ ಬೆಂಬಲವಿದೆ.

ಸಾಮರ್ಥ್ಯದ

ಆಪಲ್‌ ಐಫೋನ್‌ SE (2022) ಉತ್ತಮ ಬ್ಯಾಟರಿ ಸಾಮರ್ಥ್ಯದ ಹೊಂದಿದ್ದು, ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋಈನ್ 5G, 4G VoLTE, Wi-Fi 5, ಬ್ಲೂಟೂತ್ v5, GPS/ A-GPS, NFC ಮತ್ತು ಲೈಟ್ನಿಂಗ್ ಪೋರ್ಟ್ ಸೇರಿದಂತೆ ಸಂಪರ್ಕ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬ್ಯಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ.

Best Mobiles in India

English summary
Apple iPhone SE 2022 gets a price hike of Rs 6,000 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X