ಭಾರತಕ್ಕೂ ಕಾಲಿಡಲಿರುವ ಅತ್ಯಾಕರ್ಷಕ ಹೊಚ್ಚ ಹೊಸ ಐಫೋನ್‌ಗಳು

ಭಾರತದಲ್ಲಿ ಕೂಡ ಐಫೋನ್ ಅನ್ನು ಯಾವಾಗ ಲಾಂಚ್ ಮಾಡಲಾಗುತ್ತಿದೆ ಮತ್ತು ಇದರ ಬೆಲೆ ಏನು ಎಂಬುದನ್ನು ಈಗಾಗಲೇ ಪ್ರಕಟಿಸಿರುವುದು ಆಪಲ್ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ.

By Shwetha Ps
|

ಐಫೋನ್‌ಗಳ ಲಾಂಚ್ ಅನ್ನು ಕಂಪನಿ ಈಗಾಗಲೇ ಮಾಡಿದ್ದು ಇದರಿಂದಾಗಿ ಈಗ ಆಪಲ್ ಹೆಚ್ಚು ಸುದ್ದಿಯಲ್ಲಿದೆ. ಭಾರತದಲ್ಲಿ ಕೂಡ ಐಫೋನ್ ಅನ್ನು ಯಾವಾಗ ಲಾಂಚ್ ಮಾಡಲಾಗುತ್ತಿದೆ ಮತ್ತು ಇದರ ಬೆಲೆ ಏನು ಎಂಬುದನ್ನು ಈಗಾಗಲೇ ಪ್ರಕಟಿಸಿರುವುದು ಆಪಲ್ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ. ಇತ್ತೀಚಿನ ಬಿಜಿಆರ್ ವರದಿಯ ಪ್ರಕಾರ ಮೂರು ಹೊಸ ಐಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ ಎಂದಾಗಿದೆ.

ಭಾರತಕ್ಕೂ ಕಾಲಿಡಲಿರುವ ಅತ್ಯಾಕರ್ಷಕ ಹೊಚ್ಚ ಹೊಸ ಐಫೋನ್‌ಗಳು

ಈ ಐಫೋನ್‌ಗಳು ಎರಡು ಆವೃತ್ತಿಗಳಲ್ಲಿ ಬಳಕೆದಾರರ ಕೈ ಸೇರಲಿದೆ. 64 ಜಿಬಿ ಇನ್ನೊಂದು 256 ಜಿಬಿಯಾಗಿದೆ. ಐಫೋನ್ 8 ನ ಬೆಲೆ ರೂ 64,000 ಮತ್ತು 77,000 ಆಗಿದೆ. ಐಫೋನ್ 8 ಪ್ಲಸ್ ಬೆಲೆ ರೂ 73,000 ಮತ್ತು 86,000 ಆಗಿದೆ. ಐಫೋನ್ ಎಕ್ಸ್ ಬೆಲೆ ರೂ 89,000 ಹಾಗೂ 102,000 ಆಗಿದೆ.

ಇನ್ನು ಫೋನ್‌ನ ರಿಲೀಸ್ ದಿನಾಂಕ ಸೆಪ್ಟೆಂಬರ್ 29 ಆಗಿದ್ದು ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಈ ದಿನಾಂಕದಂದು ಬಿಡುಗಡೆ ಆಗಲಿದ್ದು ಹೆಚ್ಚು ದುಬಾರಿ ಐಫೋನ್ ಎಕ್ಸ್ ನವೆಂಬರ್ 3 ರಂದು ಬಿಡುಗಡೆಯನ್ನು ಕಾಣಲಿದೆ. ಫೋನ್‌ಗಳ ಪ್ರಿ ಆರ್ಡರ್ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 27 ರವರೆಗೆ ನಡೆಯಲಿದೆ.

ಜಿಯೋ ಡೇಟಾ ಸಾಲುತ್ತಿಲ್ಲವೇ? ಹೆಚ್ಚು ಡೇಟಾ ಪಡೆಯುವುದು ಹೇಗೆ?ಜಿಯೋ ಡೇಟಾ ಸಾಲುತ್ತಿಲ್ಲವೇ? ಹೆಚ್ಚು ಡೇಟಾ ಪಡೆಯುವುದು ಹೇಗೆ?

ಅದಾಗ್ಯೂ ಐಫೋನ್ ಎಕ್ಸ್ ಹೆಚ್ಚು ದುಬಾರಿಯಾಗಿದ್ದು ಬಿಡುಗಡೆಯಲ್ಲೂ ಕೊಂಚ ಸಮಯವನ್ನು ತೆಗೆದುಕೊಳ್ಳುತ್ತಿದೆ ಇದು ಏಕೆಂದರೆ ಇದು ವಿಶೇಷ ವಾರ್ಷಿಕೋತ್ಸವ ಆವೃತ್ತಿ ಎಂದೆನಿಸಿದ್ದು ಪರದೆಯ ಸುತ್ತಲೂ ಇದು ಬೆಜೆಲ್‌ಗಳನ್ನು ಒಳಗೊಂಡಿದೆ ಎಡ್ಜ್ ಟು ಎಡ್ಜ್ ಓಲೆಡ್ ಪರದೆಯೊಂದಿಗೆ ಸೂಪರ್ ರೆಟೀನಾ ಡಿಸ್‌ಪ್ಲೇಯನ್ನು ಇದು ಹೊಂದಿದೆ ಫೇಸ್ ಐಡಿ ಅಥೆಂಟಿಕೇಶನ್ ವೈಶಿಷ್ಟ್ಯಗಳನ್ನು ಇದು ಪಡೆದುಕೊಂಡಿದೆ.

ಐಫೋನ್ 8, 8 ಪ್ಲಸ್ ಮತ್ತು ಐಫೋನ್ ಎಕ್ಸ್‌ನಲ್ಲಿ ಐಓಎಸ್ 11 ಚಾಲನೆಯಾಗುತ್ತಿದ್ದು ಆಪಲ್ 11 ಚಿಪ್‌ಸೆಟ್ ಅನ್ನು ಇದು ಹೊಂದಿದೆ. ಐಫೋನ್ ಎಕ್ಸ್ ಮತ್ತು 8 ಪ್ಲಸ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು ಐಫೋನ್ 7 ಪ್ಲಸ್‌ನಲ್ಲಿದ್ದಂತೆ ರಿಯರ್ ಕ್ಯಾಮೆರಾದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಇವು ಹೊಂದಿವೆ.

Best Mobiles in India

English summary
Apple iPhone X, iPhone 8 and 8 Plus will be exclusive to the online retailer Flipkart in India, claims a new report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X