ವಿಕಲಾಂಗರಿಗಾಗಿ ಆಪಲ್‌ ಕಂಪೆನಿಯಿಂದ ಹೊಸ ಫೀಚರ್ಸ್‌ ಬಿಡುಗಡೆ!

|

ಆಪಲ್‌ ಕಂಪೆನಿ ತನ್ನ ಬಳಕೆದಾರರಿಗೆ ಉಪಯುಕ್ತವಾಗುವ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಇದೀಗ ವಿಕಲಾಂಗತೆ ಹೊಂದಿರುವ ಬಳಕೆದಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಫೀಚರ್ಸ್‌ ಅನ್ನು ಪ್ರಕಟಿಸಿದೆ. ಈ ಫೀಚರ್ಸ್‌ಗಳನ್ನು ದೃಷ್ಟಿಹೀನರಾಗಿರುವ, ಹಾಗೂ ವಿಕಲಾಂಗತೆಯನ್ನು ಹೊಂದಿರುವ ಬಳಕೆದಾರರಿಗೆ ಸಹಾಯ ಮಾಡಲು ಪರಿಚಯಿಸಲಾಗಿದೆ. ಇದರಲ್ಲಿ ಐಫೋನ್‌ ಮತ್ತು ಐಪಾಡ್‌ ಬಳಕೆದಾರರಿಗಾಗಿ ಡೋರ್ ಡಿಟೆಕ್ಷನ್, ಆಪಲ್‌ ವಾಚ್‌ ಬಳಕೆದಾರರಿಗೆ ಮಿರರಿಂಗ್ ಮತ್ತು ಲೈವ್ ಕ್ಯಾಪ್ಶನ್‌ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ವಿಕಲಾಂಗತೆ ಹೊಂದಿರುವ ಬಳಕೆದಾರರಿಗೆ ಡೋರ್‌ ಡಿಟೆಕ್ಷನ್‌, ಆಪಲ್‌ ವಾಚ್‌ ಮಿರರಿಂಗ್‌ ಫೀಚರ್ಸ್‌ಗಳನ್ನು ಪ್ರಕಟಿಸಿದೆ. ಇದರಿಂದ ವಿಕಲಾಂಗ ಬಳಕೆದಾರರು ತಮ್ಮ ಮನೆಯ ಬಾಗಿಲನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ವಾಚ್‌ ಮಿರರಿಂಗ್‌ ಮೂಲಕ ಐಫೋನ್‌ನಲ್ಲಿ ವಾಚ್‌ ಅನ್ನು ಕಂಟ್ರೋಲ್‌ ಮಾಡಲು ಅವಕಾಶ ನೀಡಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್

ಆಪಲ್ ತನ್ನ ವಿಕಲಾಂಗ ಬಳಕೆದಾರರಿಗೆ ಪರಿಚಯಿಸಿರುವ ಡೋರ್ ಡಿಟೆಕ್ಷನ್ ಫೀಚರ್ಸ್‌ ಐಫೋನ್‌ ಅಥವಾ ಐಪ್ಯಾಡ್‌ನಲ್ಲಿ ಲಭ್ಯವಾಗಲಿದೆ. ಇವುಗಳಲ್ಲಿ LiDAR ಸೆನ್ಸಾರ್‌ ಅನ್ನು ಬಳಸಿಕೊಂಡು ಬಳಕೆದಾರರಿಗೆ ಬಾಗಿಲನ್ನು ಪತ್ತೆಹಚ್ಚಲು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಈ ಫೀಚರ್ಸ್‌ LiDAR, ಕ್ಯಾಮರಾ ಮತ್ತು ಆನ್-ಡಿವೈಸ್ ಮೆಷಿನ್ ಕಲಿಕೆಯ ಸಂಯೋಜನೆಯನ್ನು ಬಳಸುತ್ತದೆ. ಇದರಿಂದ ಬಳಕೆದಾರರು ಬಾಗಿಲಿನಿಂದ ಎಷ್ಟು ದೂರದಲ್ಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಬಾಗಿಲು ತೆರೆದಿದೆಯೇ ಅಥವಾ ಮುಚ್ಚಿದೆಯೇ ಎಂಬುದನ್ನು ತಿಳಿಯುವುದಕ್ಕೆ ಅವಕಾಶ ನೀಡಲಿದೆ.

ಡಿಟೆಕ್ಷನ್

ಇನ್ನು ಡೋರ್ ಡಿಟೆಕ್ಷನ್ ಫೀಚರ್ಸ್‌ ಐಫೋನ್‌ 13ಪ್ರೊ, ಐಫೋನ್‌ 13ಪ್ರೊ ಮ್ಯಾಕ್ಸ್‌, ಐಫೋನ್‌ 12 ಪ್ರೊ, ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಪ್ಯಾಡ್‌ ಪ್ರೊ 11-ಇಂಚ್‌ (2020), ಐಪ್ಯಾಡ್‌ ಪ್ರೊ 11 ಇಂಚ್‌(2021) ಮತ್ತು ಐಪ್ಯಾಡ್‌ ಪ್ರೊ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ 12.9 ಇಂಚಿನ (2020) ಮತ್ತು ಐಪ್ಯಾಡ್‌ ಪ್ರೊ 12.9-ಇಂಚ್‌ (2021)ನಲ್ಲಿ ಮೊದಲೇ ಇನ್‌ಸ್ಟಾಲ್‌ ಮಾಡಲಾದ ಮ್ಯಾಗ್ನಿಫೈಯರ್ ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತದೆ. ಆಪಲ್‌ನ ಮ್ಯಾಗ್ನಿಫೈಯರ್ ಅಪ್ಲಿಕೇಶನ್ ಡೋರ್ ಡಿಟೆಕ್ಷನ್ ಫೀಚರ್ಸ್‌ಗೆ ಪ್ರವೇಶವನ್ನು ನೀಡಲು ಹೊಸ ಡಿಟೆಕ್ಷನ್ ಮೋಡ್ ಅನ್ನು ಹೊಂದಿರುತ್ತದೆ.

ಆಪಲ್

ಇದಲ್ಲದೆ ಆಪಲ್ ಕಂಪೆನಿ ಆಪಲ್ ವಾಚ್ ಮಿರರಿಂಗ್ ಬೆಂಬಲವನ್ನು ಸಹ ಪರಿಚಯಿಸಿದೆ. ಇದರಿಂದ ಬಳಕೆದಾರರು ತಮ್ಮ ಐಫೋನ್ ಬಳಸಿ ಸ್ಮಾರ್ಟ್ ವಾಚ್ ಅನ್ನು ರಿಮೋಟ್‌ನಲ್ಲಿ ನಿಯಂತ್ರಿಸಲು ಅವಕಾಶ ನೀಡುತ್ತದೆ. ಈ ಹೊಸ ಫೀಚರ್ಸ್‌ ವಾಯ್ಸ್ ಕಂಟ್ರೋಲ್ ಮತ್ತು ಸ್ವಿಚ್ ಕಂಟ್ರೋಲ್ ಸೇರಿದಂತೆ ಐಫೋನ್‌ನ ಅಸಿಸ್ಟೆಂಟ್‌ ಫೀಚರ್ಸ್‌ಗಳನ್ನು ಬಳಸಿಕೊಂಡು ಆಪಲ್ ವಾಚ್ ಅನ್ನು ನಿಯಂತ್ರಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದೆಲ್ಲವೂ ದೈಹಿಕ ಮತ್ತು ಮೋಟಾರು ವಿಕಲಾಂಗರಿಗೆ ಸಹಾಯ ಮಾಡುತ್ತದೆ.

ಆಪಲ್

ಇನ್ನು ಆಪಲ್ ವಾಚ್ ಬಳಕೆದಾರರು ಡಬಲ್ ಪಿಂಚ್ ಗೆಸ್ಚರ್ ಬೆಂಬಲವನ್ನು ಸಹ ಪಡೆಯಲಿದ್ದಾರೆ. ಇದರಿಂದ ಬಳಕೆದಾರರು ಫೋನ್ ಕರೆಗೆ ಉತ್ತರಿಸಲು ಅಥವಾ ಕಾಲ್‌ ಎಂಡ್‌ ಮಾಡಲು, ನೋಟಿಫಿಕೇಶನ್‌ ರಿಮೂವ್‌ ಮಾಡಲು, ಫೋಟೋ ತೆಗೆಯಲು ಅವಕಾಶ ನೀಡಲಿದೆ. ಹಾಗೆಯೇ ನೌ ಪ್ಲೇಯಿಂಗ್‌ ಅಪ್ಲಿಕೇಶನ್‌ನಲ್ಲಿ ಮೀಡಿಯಾವನ್ನು ಪ್ಲೇ ಮಾಡಲು ಸಹಾಯ ಮಾಡುತ್ತದೆ. ಇದು ಆಪಲ್‌ವಾಚ್‌ನಲ್ಲಿ ಅಸಿಸ್ಟಿವ್‌ ಟಚ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಆಪಲ್‌

ಇದರೊಂದಿಗೆ ಆಪಲ್‌ ಕಂಪೆನಿ ಶ್ರವಣ ದೋಷವುಳ್ಳ ಬಳಕೆದಾರರಿಗಾಗಿ ಲೈವ್‌ ಕ್ಯಾಪ್ಶನ್‌ ಫೀಚರ್ಸ್‌ ಪರಿಚಯಿಸಿದೆ. ಇದು ಆಪಲ್‌ ಐಫೋನ್‌, ಐಪ್ಯಾಡ್‌ ಮತ್ತು ಮ್ಯಾಕ್‌ನಲ್ಲಿ ಲೈವ್ ಲಭ್ಯವಾಗಲಿದೆ. ಇನ್ನು ಲೈವ್ ಕ್ಯಾಪ್ಶನ್‌ಗಳು ಫೋನ್ ಮತ್ತು ಫೇಸ್‌ಟೈಮ್ ಕರೆಗಳು, ಹಾಗೆಯೇ ವೀಡಿಯೊ ಕಾನ್ಫರೆನ್ಸಿಂಗ್ ಅಥವಾ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್, ಸ್ಟ್ರೀಮಿಂಗ್ ಮೀಡಿಯಾ ಕಂಟೆಂಟ್ ಮತ್ತು ಬಳಕೆದಾರರು ತಮ್ಮ ಪಕ್ಕದಲ್ಲಿರುವ ಯಾರೊಂದಿಗಾದರೂ ಸಂಭಾಷಣೆ ನಡೆಸುತ್ತಿದ್ದರೂ ಯಾವುದೇ ಆಡಿಯೊ ವಿಷಯದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಆಪಲ್‌ ಕಂಪನಿ ಹೇಳಿದೆ.

Best Mobiles in India

Read more about:
English summary
Apple iPhones Now Support Door Detection And Live Captions Features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X