ಆಪಲ್‌ನಿಂದ ಹೋಮ್‌ಪಾಡ್‌ 2ನೇ ಜನ್ ಸ್ಪೀಕರ್‌ ಲಾಂಚ್‌; ಯಾವೆಲ್ಲಾ ಫೀಚರ್ಸ್‌ ಇವೆ?

|

ಆಪಲ್‌ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ನಿರ್ಮಾಣ ಆಗಿರುವುದರ ಜೊತೆಗೆ ಆಪಲ್‌ನ ಇತರೆ ಡಿವೈಸ್‌ಗಳಿಗೂ ಗ್ರಾಹಕರು ಮಾರುಹೋಗಿದ್ದಾರೆ. ಈಗಾಗಲೇ ಆಪಲ್‌ ವಿವಿಧ ಫೀಚರ್ಸ್‌ ಆಯ್ಕೆ ಇರುವ ಸ್ಮಾರ್ಟ್‌‌ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅದರಲ್ಲಿ ಸ್ಮಾರ್ಟ್‌ವಾಚ್‌, ಸ್ಪೀಕರ್ಸ್‌, ಏರ್‌ಟ್ಯಾಗ್‌ ಸೇರಿದಂತೆ ಹಲವು ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆದಿವೆ. ಇದರ ನಡುವೆ ಆಪಲ್‌ ಹೊಸ ಹೋಮ್ ಪಾಡ್‌ವೊಂದನ್ನು ಅನಾವರಣ ಮಾಡಿದೆ.

ಆಪಲ್‌ನಿಂದ ಹೋಮ್‌ಪಾಡ್‌ 2ನೇ ಜನ್ ಸ್ಪೀಕರ್‌ ಲಾಂಚ್‌; ಯಾವೆಲ್ಲಾ ಫೀಚರ್ಸ್‌ ಇವೆ?

ಹೌದು, ಆಪಲ್‌ ಸಂಸ್ಥೆಯು ಹೋಮ್‌ಪಾಡ್ 2 ನೇ ಜನ್ (HomePod 2nd Gen) ಅನ್ನು ಪರಿಚಯಿಸಿದ್ದು, ಇದು ಅತ್ಯಾಕರ್ಷಕ ವಿನ್ಯಾಸ ಪಡೆದುಕೊಂಡಿದೆ. ಹಾಗೆಯೇ ಇದನ್ನು ಎಲ್ಲಿ ಬೇಕಾದರೂ ಒಯ್ಯಬಹುದಾಗಿದೆ. ಇದರೊಂದಿಗೆ ಅತ್ಯುತ್ತಮ ಸೌಂಡ್‌ ಜೊತೆಗೆ ಮನೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಎಚ್ಚರಿಸುವ ಫೀಚರ್ಸ್‌ ಅನ್ನು ಸಹ ಪಡೆದುಕೊಂಡಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ. ಭಾರತದಲ್ಲಿ ಇದಕ್ಕೆ ನಿಗದಿ ಮಾಡಲಾದ ಆಫರ್‌ ಬೆಲೆ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಪ್ರಮುಖ ಫೀಚರ್ಸ್‌
ಕೆಲವು ದಿನಗಳ ಹಿಂದಷ್ಟೇ ಹೊಸ ಮ್ಯಾಕ್‌ಬುಕ್ ಪ್ರೊ ಅನ್ನು ಲಾಂಚ್‌ ಮಾಡಿದ ಬಳಿಕ ಹೋಮ್‌ಪಾಡ್ 2 ನೇ ಜನ್ ಅನ್ನು ಲಾಂಚ್‌ ಮಾಡಲಾಗಿದೆ. ಇದು ಅತ್ಯುತ್ತಮ ಅನುಭವ ನೀಡುವ ಸ್ಪೀಕರ್ ಆಗಿದೆ. ಅದರಲ್ಲೂ ನೆಕ್ಟ್‌ ಲೆವಲ್‌ನ ಅಕೌಸ್ಟಿಕ್ಸ್ ಮತ್ತು ಐಕಾನಿಕ್ ವಿನ್ಯಾಸದೊಂದಿದೆ ಪ್ಯಾಕ್‌ ಆಗಿದ್ದು, ಸಿರಿ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ ಆಡಿಯೋ ಅನುಭವವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸುಧಾರಿತ ಕಂಪ್ಯೂಟೇಶನಲ್ ಆಡಿಯೋ ಫಿಚರ್ಸ್‌ ಬೆಂಬಲ ಪಡೆದುಕೊಂಡಿದ್ದು, ಈ ಮೂಲಕ ತಲ್ಲೀನಗೊಳಿಸುವ ಪ್ರಾದೇಶಿಕ ಆಡಿಯೊ ಟ್ರ್ಯಾಕ್‌ಗಳನ್ನು ಸಹ ಬೆಂಬಲಿಸುತ್ತದೆ.

ಆಪಲ್‌ನಿಂದ ಹೋಮ್‌ಪಾಡ್‌ 2ನೇ ಜನ್ ಸ್ಪೀಕರ್‌ ಲಾಂಚ್‌; ಯಾವೆಲ್ಲಾ ಫೀಚರ್ಸ್‌ ಇವೆ?

ಎಚ್ಚರಿಕೆ ಸಹ ನೀಡುತ್ತದೆ!
ಈ ಸ್ಮಾರ್ಟ್‌ ಡಿವೈಸ್‌ ಅನ್ನು ನೀವು ಮನೆಯಲ್ಲಿ ಇರಿಸಿದ್ದಾಗ ಅಲ್ಲಿ ಏನಾದರೂ ಹೊಗೆ ಅಥವಾ ಕಾರ್ಬನ್ ಮಾನಾಕ್ಸೈಡ್ ಕಂಡುಬಂದರೆ ಅಲಾರಂ ಮೂಲಕ ಬಳಕೆದಾರರನ್ನು ಎಚ್ಚರಿಸುತ್ತದೆ ಎಂದು ಆಪಲ್‌ ಮಾಹಿತಿ ನೀಡಿದೆ. ಅದರಂತೆ ಮನೆಯಲ್ಲಿ ಈ ರೀತಿಯ ಘಟನೆಯಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ.

S7 ಚಿಪ್‌ನಲ್ಲಿ ಕಾರ್ಯನಿರ್ವಹಿಸುವ ಈ ಪಾಡ್‌, ಉತ್ತಮ ಗುಣಮಟ್ಟದ ಆಡಿಯೊವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಇನ್‌ಬಿಲ್ಟ್ ಬೇಸ್‌- ಇಕ್ಯೂ ಮೈಕ್ ಮತ್ತು ಸರೌಂಡಿಂಗ್‌ ಬೇಸ್‌ ಆಯ್ಕೆ ನಿಮ್ಮನ್ನು ಇನ್ನಷ್ಟು ರಂಜನೀಯವಾಗಿ ಮಾಡುತ್ತದೆ. ಇದರೊಂದಿಗೆ ರೂಂ ಸೆನ್ಸಿಂಗ್ ತಂತ್ರಜ್ಞಾನದ ಫೀಚರ್ಸ್‌ ನೀಡಲಾಗಿದ್ದು, ಈ ಮೂಲಕ ಇದು ಗೋಡೆಯ ವಿರುದ್ಧ ನಿಂತಿದೆಯೇ ಅಥವಾ ಸ್ವತಂತ್ರವಾಗಿ ನಿಂತಿದೆಯೇ ಎಂಬುದನ್ನು ನಿರ್ಧರಿಸಿಕೊಳ್ಳುತ್ತದೆ. ಅದರಂತೆ ಹತ್ತಿರದ ಮೇಲ್ಮೈಗಳಿಂದ ಧ್ವನಿ ಪ್ರತಿಫಲನಗಳನ್ನು ಫೈಂಡ್‌ ಮಾಡಿ ಅದಕ್ಕೆ ತಕ್ಕ ಸೌಂಡ್‌ ಅನ್ನು ಸೆಟ್‌ ಮಾಡಿಕೊಳ್ಳುತ್ತದೆ.

ಆಪಲ್‌ನಿಂದ ಹೋಮ್‌ಪಾಡ್‌ 2ನೇ ಜನ್ ಸ್ಪೀಕರ್‌ ಲಾಂಚ್‌; ಯಾವೆಲ್ಲಾ ಫೀಚರ್ಸ್‌ ಇವೆ?

ಎಲ್ಲವೂ ಎನ್‌ಕ್ರಿಪ್ಟ್ ಆಗಿರುತ್ತವೆ
ಆಪಲ್‌ ತನ್ನ ಸ್ಮಾರ್ಟ್ ಹೋಮ್ ಡಿವೈಸ್‌ಗಳ ಮೂಲಕ ನಡೆಯುವ ಯಾವುದೇ ಸಂವಹನವು ಅಂತ್ಯದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಆಗಿರುತ್ತದೆ. ಈ ಕಾರಣಕ್ಕೆ ನಿಮ್ಮ ಸಂಭಾಷಣೆಗಳನ್ನು ಯಾರೂ ಸಹ ಕೇಳಲು ಸಾಧ್ಯವಿಲ್ಲ. ಹಾಗೆಯೇ ಆಪಲ್ ಸಹ ಸ್ಮಾರ್ಟ್ ಹೋಮ್ ಡಿವೈಸ್‌ಗಳೊಂದಿಗೆ ನೀವು ನಡೆಸುತ್ತಿರುವ ಸಂಭಾಷಣೆಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ ಎಂದು ಆಪಲ್ ಮಾಹಿತಿ ನೀಡಿದೆ.

ಭಾರತದಲ್ಲಿ ಹೋಮ್‌ಪಾಡ್‌ 2ನೇ ಜನ್‌ ಬೆಲೆ
ಭಾರತದಲ್ಲಿ ಹೋಮ್‌ಪಾಡ್‌ 2ನೇ ಜನ್‌ ಖರೀದಿ ಮಾಡಲು ಬಯಸುವವರು ಮುಂಗಡ ಆರ್ಡರ್ ಮಾಡಬಹುದಾಗಿದೆ. ಫೆಬ್ರವರಿ 3, 2023 ರಿಂದ ಈ ಡಿವೈಸ್‌ ಲಭ್ಯ ಇರಲಿದ್ದು, ಆಪಲ್‌ನ ಅಧಿಕೃತ ರಿಟೇಲರ್‌ ಶಾಪ್‌ ಹಾಗೂ ಆಪಲ್‌ನ ಆನ್‌ಲೈನ್‌ ಶಾಪಿಂಗ್‌ ಮೂಲಕ ಖರೀದಿ ಮಾಡಬಹುದು. ಈ ಡಿವೈಸ್‌ನ ಸಾಮಾನ್ಯ ದರ 32,900 ರೂ. ಗಳಾಗಿದ್ದು, ಈ ಹಿಂದೆ ಲಾಂಚ್ ಮಾಡಲಾಗಿದ್ದ ಹೋಮ್‌ಪಾಡ್ 1 ನೇ ಜನ್ ನ ಬೆಲೆ 19,900 ರೂ. ಗಳಾಗಿತ್ತು ಎಂಬುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

Best Mobiles in India

English summary
Apple has launched the HomePod 2nd gen speaker, packed with Next Level Acoustics. complete details are in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X