ಆಪಲ್‌ ಕಂಪೆನಿಯಿಂದ ಆಪಲ್‌ ಪೇ ಲೇಟರ್‌ ಸೇವೆ ಪ್ರಾರಂಭ! ಏನಿದರ ವಿಶೇಷ!

|

ಟೆಕ್‌ ಲೋಕದ ದಿಗ್ಗಜ ಆಪಲ್‌ ಕಂಪೆನಿ ತನ್ನ WWDC 2022ನಲ್ಲಿ ಹಲವು ಹೊಸ ವಿಚಾರಗಳನ್ನು ಪ್ರಕಟಿಸಿದೆ. ಇದರಲ್ಲಿ ಆಪಲ್‌ ಪೇ ಲೇಟರ್‌ ಕೂಡ ಒಂದಾಗಿದೆ. ಆಪಲ್‌ ಪೇ ಲೇಟರ್‌ ಮೂಲಕ ಈಗ ಖರೀದಿಸಿ ನಂತರ ಪಾವತಿಸಿ ಯೋಜನೆಯನ್ನ ಪರಿಚಯಿಸಲು ಮುಂದಾಗಿದೆ. iOS 16 ನ ಸ್ಥಿರ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಆಪಲ್‌ ಪೇ ಲೇಟರ್‌ ಫೀಚರ್ಸ್‌ ಅನ್ನು ಆಪಲ್‌ ವ್ಯಾಲೇಟ್‌ನಲ್ಲಿ ಸೇರಿಸಲಾಗುತ್ತದೆ ಎನ್ನಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಆಪಲ್‌ ಪೇ ಲೇಟರ್‌ ಅನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಆಪಲ್‌ ಪೇ ಲೇಟರ್‌ ಮೂಲಕ ಬಳಕೆದಾರರು ಹಣವಿಲ್ಲದೆ ಹೋದರೂ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಲ್ಲದೆ ಗ್ರಾಹಕರು ಖರೀದಿಸಿದ ವಸ್ತುವಿನ ಬೆಲೆಯನ್ನು ನಾಲ್ಕು ಕಂತಿನಲ್ಲಿ ಮರು ಪಾವತಿಸುವುದಕ್ಕೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ಆಪಲ್‌ ಪೇ ಲೇಟರ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಪೇ ಲೇಟರ್ ಎಂದರೇನು?

ಆಪಲ್ ಪೇ ಲೇಟರ್ ಎಂದರೇನು?

ಆಪಲ್ ಪೇ ಲೇಟರ್ ಹೆಸರೇ ಸೂಚಿಸುವಂತೆ ಹಣವಿಲ್ಲದೇ ಹೋದರು ಮೊದಲು ಖರೀದಿಸಿ ನಂತರ ನಿರ್ಧಿಷ್ಟ ಕಂತುಗಳಲ್ಲಿ ಪಾವತಿಸುವುದಕ್ಕೆ ಅವಕಾಶ ನೀಡಲಿದೆ. ಅಂದರೆ ಬಳಕೆದಾರರು ಉತ್ಪನ್ನವನ್ನು ಕಂತುಗಳಲ್ಲಿ ಖರೀದಿಸಲು ಅನುಮತಿಸುತ್ತದೆ. ಗ್ರಾಹಕರು ಖರೀದಿಸಿದ ವಸ್ತುವಿನ ಬೆಲೆಯನ್ನು ನಾಲ್ಕು ಕಂತುಗಳಲ್ಲಿ ವಿಭಜಿಸಬಹುದಾಗಿದ್ದು, ನಿರ್ದಿಷ್ಟ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಆಪಲ್ ವಾಲೆಟ್‌ನಲ್ಲಿ ಪೇ ಲೇಟರ್‌ನೊಂದಿಗೆ ಉತ್ಪನ್ನವನ್ನು ಖರೀದಿಸಿದರೆ ಬಳಕೆದಾರರು ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು ಆಪಲ್ ಹೇಳಿದೆ. ಆದರೆ ಬಳಕೆದಾರರ ಡೆಬಿಟ್ ಕಾರ್ಡ್ ಖಾತೆಯು ಸಾಕಷ್ಟು ಹಣವನ್ನು ಹೊಂದಿದ್ದರೆ ಬಳಕೆದಾರ ಕಾರ್ಡ್ ನೀಡುವ ಬ್ಯಾಂಕ್ ಶುಲ್ಕವನ್ನು ವಿಧಿಸಬಹುದು ಎಂದು ಹೇಳಿದೆ.

ಅಪಲ್‌ ಪೇ

ಇನ್ನು ಬಳಕೆದಾರರು ಅಪಲ್‌ ಪೇ ಅಥವಾ ವಾಲೇಟ್‌ನಲ್ಲಿ ಚೆಕ್ ಔಟ್ ಮಾಡುವಾಗ ಆಪಲ್‌ ಪೇ ಲೇಟರ್‌ಗೆ ಅರ್ಜಿ ಸಲ್ಲಿಸಬಹುದು. ಇನ್ನು ಆಪಲ್‌ ಪೇ ಲೇಟರ್‌ ಸುರಕ್ಷಿತ ಪಾವತಿಯನ್ನು ಹೊಂದಿದ್ದು, ಇದಕ್ಕಾಗಿ ಕೀಗಳು ಮತ್ತು ಐಡಿಗಳ ಮೇಲೆ ನಿಯಂತ್ರಣವನ್ನು ನೀಡುವ ಭರವಸೆಯನ್ನು ಆಪಲ್ ಕಂಪೆನಿ ನೀಡಿದೆ. ಇನ್ನು ಆಪಲ್‌ ಪೇ ಲೇಟರ್‌ಗೆ ಸಾಲ ನೀಡಲು ಗೋಲ್ಡ್‌ಮನ್ ಸ್ಯಾಚ್ಸ್‌ನೊಂದಿಗೆ ಆಪಲ್‌ ಕಂಪೆನಿ ಪಾಲುದಾರಿಕೆಯನ್ನು ಮಾಡಿಕೊಂಡಿದೆ ಎಂದು ಕೂಡ ವರದಿಯಾಗಿದೆ.

ಭಾರತದಲ್ಲಿ ಆಪಲ್ ಪೇ ಲೇಟರ್‌ ಅನ್ನು ಬಳಸಬಹುದೇ?

ಭಾರತದಲ್ಲಿ ಆಪಲ್ ಪೇ ಲೇಟರ್‌ ಅನ್ನು ಬಳಸಬಹುದೇ?

ಆಪಲ್‌ ಪೇ ಹೊಂದಿರುವ ಬಳಕೆದಾರರಿಗೆ ಮಾತ್ರ ಆಪಲ್‌ ಪೇ ಲೇಟರ್‌ ಅನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ. ಆದರೆ ಭಾರತದಲ್ಲಿ ಈ ಫೀಚರ್ಸ್‌ ಇನ್ನು ಕೂಡ ಲಭ್ಯವಿಲ್ಲ ಕಾರಣ ಆಪಲ್‌ ಪೇ ಲೇಟರ್‌ ಅನ್ನು ಬಳಸುವುದಕ್ಕೆ ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಶೀಘ್ರದಲ್ಲೇ ಭಾರತದಲ್ಲಿಯೂ ಕೂಡ ಇದು ಲಭ್ಯವಾಗಲಿದೆ ಎಂದು ಹೇಳಲಾಗಿದೆ.

Best Mobiles in India

Read more about:
English summary
Apple launches pay later service in select markets, not yet available in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X