ಆಪಲ್‌ WWDC 2022: M2 ಚಿಪ್‌ಸೆಟ್ ಬೆಂಬಲಿಸುವ ಮ್ಯಾಕ್‌ಬುಕ್‌ ಅನಾವರಣ!

|

ಟೆಕ್‌ ದೈತ್ಯ ಆಪಲ್‌ ಕಂಪೆನಿ ತನ್ನ ವಾರ್ಷಿಕ ಸಮ್ಮೇಳನ WWDC 2022ನಲ್ಲಿ ಹೊಸ M2 ಚಿಪ್‌ಸೆಟ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಚಿಪ್‌ಸೆಟ್‌ನಲ್ಲಿ ರನ್‌ ಆಗುವ ಮೊದಲ ಎರಡು ಕಂಪ್ಯೂಟರ್‌ಗಳಾದ ಮ್ಯಾಕ್‌ಬುಕ್ ಏರ್ (2022), ಮತ್ತು 13 ಇಂಚಿನ ಮ್ಯಾಕ್‌ಬುಕ್ ಪ್ರೊ (2022) ಪರಿಚಯಿಸಿದೆ. ಇದರಲ್ಲಿ ಮ್ಯಾಕ್‌ಬುಕ್ ಏರ್ ಕಂಪನಿಯ ಮ್ಯಾಕ್‌ಬುಕ್ ಏರ್ ಲ್ಯಾಪ್‌ಟಾಪ್‌ನ ಮೊದಲ ರಿಫ್ರೆಶ್ ಆಗಿದೆ. ಇನ್ನು ಮ್ಯಾಕ್‌ಬುಕ್ ಏರ್ (2022) ಮತ್ತು ಮ್ಯಾಕ್‌ಬುಕ್ ಪ್ರೊ (2022) ಎರಡೂ ಕೂಡ 13 ಇಂಚಿನ ಎಲ್‌ಸಿಡಿ ಡಿಸ್‌ಪ್ಲೆಯನ್ನು ಹೊಂದಿವೆ.

ಆಪಲ್‌

ಹೌದು, ಆಪಲ್‌ ಕಂಪೆನಿ ತನ್ನ ವಾರ್ಷಿಕ ಸಮ್ಮೇಳನದಲ್ಲಿ ಹೊಸ ಮಾದರಿಯ ಡಿವೈಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಮ್ಯಾಕ್‌ಬುಕ್‌ ಏರ್‌ ಮತ್ತು ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳು ಸೇರಿವೆ. ಇನ್ನು 2022 ರ ಮ್ಯಾಕ್‌ಬುಕ್ ಏರ್ ಮಾದರಿಯು ಮ್ಯಾಕ್‌ಬುಕ್ ಪ್ರೊ ಮಾದರಿಗಳಂತೆಯೇ ಹೊಸ ಚಾಸಿಸ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಎರಡು ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌ ಮ್ಯಾಕ್‌ಬುಕ್‌ ಏರ್‌ (2022)

ಆಪಲ್‌ ಮ್ಯಾಕ್‌ಬುಕ್‌ ಏರ್‌ (2022)

ಆಪಲ್‌ ಮ್ಯಾಕ್‌ಬುಕ್‌ ಏರ್‌ (2022) M2 ಚಿಪ್‌ಸೆಟ್‌ ಅನ್ನು ಹೊಂದಿದೆ. ಇದು ಮೊದಲ ತಲೆಮಾರಿನ M1 ಆಪಲ್ ಸಿಲಿಕಾನ್ ಚಿಪ್‌ನ ಸುಧಾರಿತ ಆವೃತ್ತಿಯಾಗಿದೆ. ಇನ್ನು ಈ ಹೊಸ ಚಿಪ್‌ಸೆಟ್ ಹಿಂದಿನ ಚಿಪ್‌ಸೆಟ್‌ಗಿಂತ 18% ಸುಧಾರಿತ CPU ಕಾರ್ಯಕ್ಷಮತೆ ಮತ್ತು 35% GPU ಕಾರ್ಯಕ್ಷಮತೆಯನ್ನು ನೀಡುತ್ತದೆ. ಅಲ್ಲದೆ ಸ್ಪರ್ಧಾತ್ಮಕ 10 ಕೋರ್ ಪ್ರೊಸೆಸರ್‌ಗಳಿಗೆ ಹೋಲಿಸಿದರೆ 1.9 ಪಟ್ಟು ವೇಗವಾಗಿ ಕಾರ್ಯನಿರ್ವಹಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ 13.6 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಆಪಲ್‌ ಮ್ಯಾಕ್‌ಬುಕ್‌ ಏರ್‌(2022) 2TB ಸ್ಟೋರೇಜ್‌ ಅನ್ನು ಹೊಂದಿದೆ. ಇದನ್ನು 24GB ಯ ಏಕೀಕೃತ ಮೆಮೊರಿಯೊಂದಿಗೆ ಕಾನ್ಫಿಗರ್ ಮಾಡಬಹುದು. ಇದಲ್ಲದೆ ಈ ಲ್ಯಾಪ್‌ಟಾಪ್ 1080p ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಸಿಂಗಲ್‌ ಚಾರ್ಜ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ಮ್ಯಾಕ್‌ಬುಕ್ ಏರ್ (2022) ಐಚ್ಛಿಕ 67W USB ಟೈಪ್-ಸಿ ಪವರ್ ಅಡಾಪ್ಟರ್‌ನೊಂದಿಗೆ 30 ನಿಮಿಷಗಳಲ್ಲಿ ಡಿವೈಸ್‌ ಅನ್ನು 50% ವೇಗವಾಗಿ ಚಾರ್ಜ್ ಮಾಡಲು ಬೆಂಬಲವನ್ನು ನೀಡಲಿದೆ.

ಆಪಲ್‌ ಮ್ಯಾಕ್‌ಬುಕ್‌ ಪ್ರೊ (2022)

ಆಪಲ್‌ ಮ್ಯಾಕ್‌ಬುಕ್‌ ಪ್ರೊ (2022)

ಮ್ಯಾಕ್‌ಬುಕ್ ಪ್ರೊ (2022) ಕೂಡ ಹೊಸ M2 ಚಿಪ್‌ಸೆಟ್‌ ಅನ್ನು ಒಳಗೊಂಡಿದೆ. ಇದರಲ್ಲಿ ಬಳಕೆದಾರರು 24GB ವರೆಗೆ ಏಕೀಕೃತ ಮೆಮೊರಿ ಜೊತೆಗೆ 2TB ಸ್ಟೋರೇಜ್‌ ಅನ್ನು ಆರಿಸಿಕೊಳ್ಳಬಹುದಾಗಿದೆ. ಇನ್ನು ಮ್ಯಾಕ್‌ಬುಕ್ ಪ್ರೊ (2022) 13 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ P3 ಕಲರ್‌ ಬೆಂಬಲದೊಂದಿಗೆ 500 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಮ್ಯಾಕ್‌ಬುಕ್ ಪ್ರೊ ಕೂಡ ಸಕ್ರಿಯ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಸಿಂಗಲ್‌ ಚಾರ್ಜ್‌ನಲ್ಲಿ 20 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಪಲ್‌ ಮ್ಯಾಕ್‌ಬುಕ್‌ ಏರ್‌ (2022) ಬೆಲೆಯು $1,199 (ಅಂದಾಜು 93,300ರೂ.) ಗಳಿಂದ ಪ್ರಾರಂಭವಾಗುತ್ತದೆ. ಇನ್ನು ಆಪಲ್‌ ಮ್ಯಾಕ್‌ಬುಕ್‌ ಪ್ರೊ (2022) ಬೆಲೆ $1,299 (ಅಂದಾಜು 1,01,000ರೂ) ಹೊಂದಿದೆ. ಇದರಲ್ಲಿ ಹೊಸ ಮ್ಯಾಕ್‌ಬುಕ್ ಏರ್ ಮಾಡೆಲ್ ಆಪಲ್ ಆನ್‌ಲೈನ್ ಸ್ಟೋರ್ ಮೂಲಕ ಮಿಡ್‌ನೈಟ್, ಸಿಲ್ವರ್, ಸ್ಪೇಸ್ ಗ್ರೇ ಮತ್ತು ಸ್ಟಾರ್‌ಲೈಟ್ ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ ಬಳಕೆದಾರರು ಆಪಲ್‌ ವೆಬ್‌ಸೈಟ್ ಮೂಲಕ ಕಾನ್ಫಿಗರೇಶನ್ ಆಯ್ಕೆಗಳನ್ನು ಆಯ್ಕೆ ಮಾಡಲು ಸಹ ಅನುಮತಿಸುತ್ತದೆ. ಇನ್ನು ಭಾರತದಲ್ಲಿ, ಹೊಸ ಮ್ಯಾಕ್‌ಬುಕ್ ಮಾದರಿಗಳು ಮುಂದಿನ ತಿಂಗಳಿನಿಂದ ಲಭ್ಯವಿರುತ್ತವೆ. ಇದರಲ್ಲಿ ಮ್ಯಾಕ್‌ಬುಕ್ ಏರ್ 1,19,900ರೂ (ಶಿಕ್ಷಣಕ್ಕಾಗಿ 1,09,900ರೂ) ಬೆಲೆಯನ್ನು ಹೊಂದಿದೆ. ಇನ್ನು ಮ್ಯಾಕ್‌ಬುಕ್ ಪ್ರೊ 1,29,900ರೂ. (ಶಿಕ್ಷಣಕ್ಕೆ 1,19,900ರೂ)ಬೆಲೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Apple MacBook Air (2022), MacBook Pro (2022) With M2 Processors Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X