ಆಪಲ್ ಲಾಂಚ್ ಮಾಡಬಹುದು ಮಡಚಬಹುದಾದ ಐಫೋನ್! ಸಲ್ಲಿಸಿದೆ ಪೇಟೆಂಟ್ ಗೆ ಅರ್ಜಿ

By Tejaswini P G
|

ಸ್ಮಾರ್ಟ್ಫೋನ್ ಲೋಕದಲ್ಲಿ ಮುಂದಿನ ಟ್ರೆಂಡ್ ಏನಿರಬಹುದು..? ಫೊಲ್ಡೇಬಲ್ ಸ್ಮಾರ್ಟ್ಫೋನ್? ಈಗ ಕೇಳಿಬರುತ್ತಿರುವ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ ಹಾಗೆ ಅನಿಸುತ್ತದೆ.ಸ್ಯಾಮ್ಸಂಗ್ ಫೋಲ್ಡೇಬಲ್ ಫೋನ್ ಒಂದರ ಮೇಲೆ ಕೆಲಸಮಾಡುತ್ತಿದ್ದರೆ, ZTE ತಿಂಗಳ ಹಿಂದಷ್ಟೇ ಫೋಲ್ಡೇಬಲ್ ಆಕ್ಸನ್ M ಸ್ಮಾರ್ಟ್ಫೋನ್ ಅನ್ನು ಬಿಡುಗಡೆಮಾಡಿತ್ತು.

ಆಪಲ್ ಲಾಂಚ್ ಮಾಡಬಹುದು ಮಡಚಬಹುದಾದ ಐಫೋನ್! ಸಲ್ಲಿಸಿದೆ ಪೇಟೆಂಟ್ ಗೆ ಅರ್ಜಿ

ಈಗ ಆಪಲ್ ಕೂಡ ಇದೇ ದಿಕ್ಕಿನತ್ತ ಹೆಜ್ಜೆ ಹಾಕುತ್ತಿರುವಂತೆ ತೋರುತ್ತಿದೆ.USPTO ಗೆ ಆಪಲ್ ಸಲ್ಲಿಸಿದ ಪೇಟೆಂಟ್ ಅರ್ಜಿಯೊಂದು ಬಹಿರಂಗಗೊಂಡಿದ್ದು ಈ ಊಹಾಪೋಹಗಳಿಗೆ ಕಾರಣವಾಗಿದೆ.ಭವಿಷ್ಯದಲ್ಲಿ ಫೋಲ್ಡೇಬಲ್ ಐಫೋನ್ ಬಂದರೆ ಆಚ್ಚರಿಯೇನಿಲ್ಲ. ಈ ಮೊದಲೂ ಕೂಡ ಆಪಲ್ ಮಡಚಬಹುದಾದ ಐಫೋನ್ ಕುರಿತು ಕೆಲಸಮಾಡುತ್ತಿರುವ ಸುದ್ದಿ ಕೇಳಿಬಂದಿತ್ತು.

ಈ ಹೊಸ ಪೇಟೆಂಟ್ ಈ ಪ್ರಯತ್ನದ ಕರಿತು ಹೆಚ್ಚಿನ ಮಾಹಿತಿ ನೀಡುತ್ತಿದೆ. ಆಪಲ್ ಕಂಪೆನಿಯು ಪುಸ್ತಕದ ರೀತಿಯಲ್ಲಿ ತೆರೆಯಬಹುದಾದ ಮತ್ತು ಮಡಚಬಹುದಾದ ಐಫೋನ್ ಒಂದನ್ನು ತಯಾರಿಸುವ ಉದ್ದೇಶ ಹೊಂದಿದೆ ಎಂದು ಈ ಪೇಟೆಂಟ್ ತಿಳಿಸುತ್ತದೆ.

ಈ ಪೇಟೆಂಟ್ ನ ಸಾರಾಂಶ ವಿಭಾಗ ಈ ಪೇಟೆಂಟ್ ಅನ್ನು ಹೀಗೆ ವಿವರಿಸುತ್ತದೆ- " ಒಂದು ಇಲೆಕ್ಟ್ರಾನಿಕ್ ಸಾಧನ ಫ್ಲೆಕ್ಸಿಬಲ್/ಬಾಗುವ ಭಾಗಗಳನ್ನು ಹೊಂದಿದ್ದು ಆ ಸಾಧನವನ್ನು ಮಡಚುವಂತಿರಬಹುದು.ಆ ಸಾಧನವು ಬಾಗಬಲ್ಲ ಡಿಸ್ಪ್ಲೇ ಹೊಂದಿರಬಹುದು. ಅಲ್ಲದೆ ಅದರ ಫ್ಲೆಕ್ಸಿಬಲ್ ಡಿಸ್ಪ್ಲೇ ಬಾಗಬಲ್ಲ ಭಾಗವನ್ನು ಹೊಂದಿದ್ದು, ಸಾಧನವನ್ನು ಮಡಚಿದಾಗ ನಿರ್ದಿಷ್ಟ ರೇಖೆಯಲ್ಲಿ ಅದರ ಡಿಸ್ಪ್ಲೇ ಅನ್ನು ಬೆಂಡ್ ಮಾಡಬಹುದು ಅಥವಾ ಮಡಚಬಹುದಾಗಿದೆ".

ಹೊಸ ಮಾದರಿಯ ಬ್ಲೂಟೂತ್ ಹೆಡ್ ಸೆಟ್: ಇದನ್ನು ಮಡಚಲು ಬಹುದಂತೆ..!ಹೊಸ ಮಾದರಿಯ ಬ್ಲೂಟೂತ್ ಹೆಡ್ ಸೆಟ್: ಇದನ್ನು ಮಡಚಲು ಬಹುದಂತೆ..!

ಈ ರೀತಿಯ ನೂತನ ತಂತ್ರಜ್ಞಾನ ಮೈಕ್ರೋಸಾಫ್ಟ್ ಕೊರಿಯರ್ ನಂತಹ ಡಿಜಿಟಲ್ ಜರ್ನಲ್ ಸಾಧನಗಳಿಗೆ ಹೆಚ್ಚು ಸೂಕ್ತವೆನಿಸದರೂ ,ಭವಿಷ್ಯದಲ್ಲಿ ಆಪಲ್ ತನ್ನ ಐಫೋನ್ ಗಳಲ್ಲಿ ಈ ತಂತ್ರಜ್ಞಾನವನ್ನು ತರಲು ಯೋಚಿಸುತ್ತಿದೆ.

ಅಲ್ಲದೆ ಈ ಪೇಟಂಟ್ನಲ್ಲಿ ಹೀಗೆ ಹೇಳಿದ್ದಾರೆ " ಆ ಸಾಧನವು ಲ್ಯಾಪ್ಟಾಪ್ ಕಂಪ್ಯೂಟರ್, ಟ್ಯಾಬ್ಲೆಟ್ ಕಂಪ್ಯೂಟರ್, ಸೆಲ್ಯುಲಾರ್ ದೂರವಾಣಿ, ಕೈಗಡಿಯಾರ ಅಥವಾ ಇನ್ನಿತರ ಇಲೆಕ್ಟ್ರಾನಿಕ್ ಸಾಧನವಾಗಿರಬಹುದು(ಉದಾಹರಣೆಗೆ , ಪೋರ್ಟೆಬಲ್ ಸಾಧನ, ಹ್ಯಾಂಡ್ಹೆಲ್ಡ್ ಸಾಧನ)". ಹೀಗಾಗಿ ಆಪಲ್ ಈ ತಂತ್ರಜ್ಞಾನವನ್ನು ತಮ್ಮ ಐಫೋನ್ಗಳಲ್ಲಿ ಮಾತ್ರವಲ್ಲದೆ ಇತರ ಆಪಲ್ ಸಾಧನಗಳಲ್ಲಿಯೂ ಅಳವಡಿಸಬಹುದೆಂದು ತೋರುತ್ತದೆ.

ಆಪಲ್ ಕೆಲವು ಫೀಚರ್ಗಳನ್ನು ತನ್ನೆಲ್ಲಾ ಉತ್ಪನ್ನಗಳಲ್ಲಿ ಅಳವಡಿಸಿಕೊಳ್ಳುವ ಕಾರಣ ಆಪಲ್ ಈ ತಂತ್ರಜ್ಞಾನವನ್ನು ಕೂಡ ತನ್ನ ಇತರ ಸಾಧನಗಳಲ್ಲಿ ಅಳವಡಿಸುವ ಸಾಧ್ಯತೆ ಇದೆ. ಉದಾಹರಣೆಗೆ, ಆಪಲ್ ನ ಬಹುಚರ್ಚಿತ 3D ಫೇಸ್ ರೆಕಗ್ನಿಶನ್ ತಂತ್ರಜ್ಞಾನ ಶೀಘ್ರವೇ ಐಪ್ಯಾಡ್ ಮತ್ತು ಮ್ಯಾಕ್ಬುಕ್ ಗಳಲ್ಲೂ ಬರಲಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಇನ್ನು ಫೋಲ್ಡೇಬಲ್ ಐಫೋನ್ ಬಗ್ಗೆ ಹೇಳುವುದಾದರೆ, ಆಪಲ್ ಪೇಟೆಂಟ್ ಗೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಫೋಲ್ಡೇಬಲ್ ಐಫೋನ್ ಕಾರ್ಯರೂಪಕ್ಕೆ ಬಂದೇ ಬರುತ್ತದೆ ಎನ್ನುವ ಖಾತ್ರಿಯಿಲ್ಲ. ಏನೇ ಅಗಲಿ ಈ ಫೋಲ್ಡೇಬಲ್ ಐಫೋನ್ ನ ವಿಚಾರವೇ ಅತ್ಯಂತ ಆಕರ್ಷಕವಾಗಿದ್ದು ಈ ಕುರಿತು ನಾವೆಲ್ಲ ಅತ್ಯಂತ ಉತ್ಸುಕರಾಗಿರುವುದಂತೂ ಸತ್ಯ!

Best Mobiles in India

Read more about:
English summary
The patent reveals that Apple intends to make an iPhone with a display that can open and close like a book.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X