ಟೆಕ್‌ ವಲಯದಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ ಆಪಲ್‌! ಬರಲಿದೆ ಫೋಲ್ಡಬಲ್‌ ಐಫೋನ್‌!

|

ಸ್ಮಾರ್ಟ್‌ಫೋನ್‌ ವಲಯದಲ್ಲಿ ಫೋಲ್ಡಬಲ್‌ ಫೋನ್‌ಗಳ ಆರ್ಭಟ ಜೋರಾಗಿಯೇ ಇದೆ. ಕೆಲವೇ ಬ್ರ್ಯಾಂಡ್‌ಗಳು ಮಾತ್ರವೇ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಟ್ರೆಂಡ್‌ ಸೆಟ್‌ ಮಾಡಿವೆ. ಇದೀಗ ಫೋಲ್ಟಬಲ್‌ ಫೋನ್‌ ಮಾರುಕಟ್ಟೆಯಲ್ಲಿ ಹೊಸ ಬಿರುಗಾಳಿಯೊಂದು ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಿದೆ. ಯಾಕಂದ್ರೆ ಐಫೋನ್‌ ದೈತ್ಯ ಆಪಲ್‌ ಕಂಪೆನಿ ಮುಂದಿನ ದಿನಗಳಲ್ಲಿ ಫೋಲ್ಡಬಲ್‌ ಐಫೋನ್‌ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಕೂಡ ಮುಂದಿನ ದಿನಗಳಲ್ಲಿ ಫೋಲ್ಡಬಲ್‌ ಐಫೋನ್‌ ಬಿಡುಗಡೆ ಮಾಡುವ ವಿಚಾರ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಟೆಕ್‌ ದೈತ್ಯ ಎಂದು ಹೆಸರುವಾಸಿಯಾಗಿರುವ ಆಪಲ್‌ನ ಫೋಲ್ಡಬಲ್‌ ಐಫೋನ್‌ ಹೇಗಿರಲಿದೆ ಅನ್ನೊದೇ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಐಫೋನ್‌ಗಿಂತ ಮೊದಲು ಫೋಲ್ಡಬಲ್‌ ಐಪ್ಯಾಡ್‌ ಬರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಹಾಗಾದ್ರೆ ಆಪಲ್‌ನ ಫೋಲ್ಡಬಲ್‌ ಐಫೋನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌

ಆಪಲ್‌ ಕಂಪೆನಿ ಫೋಲ್ಡಬಲ್‌ ಐಫೋನ್‌ ಪರಿಚಯಿಸೋಕೆ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ. ಅಲ್ಲದೆ ಈ ಫೋಲ್ಡಬಲ್‌ ಐಫೋನ್‌ 2025ಕ್ಕೆ ಎಂಟ್ರಿ ನೀಡಲಿದೆ ಎನ್ನಲಾಗಿದೆ. ಇನ್ನು "iPhone ಫೋಲ್ಡ್" USB-C ಪೋರ್ಟ್ ಮತ್ತು ಮ್ಯಾಗ್‌ಸೇಫ್‌ ಸಪೋರ್ಟ್‌ ಅನ್ನು ಪಡೆದಿರುವ ಸಾಧ್ಯತೆಯಿದೆ. ಜೊತೆಗೆ ಇದು ಕನಿಷ್ಠ ಟಚ್ ಐಡಿಯನ್ನು ಬಳಸುವ ನಿರೀಕ್ಷೆಯಿದೆ. ಇದರಲ್ಲಿಯೂ ಸಹ ಆಪಲ್ ಫೇಸ್ ಐಡಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಐಫೋನ್‌

ಇದರ ನಡುವೆ ಐಫೋನ್‌ ಫೋಲ್ಡ್‌ಗಿಂತ ಮೊದಲು ಫೋಲ್ಡಬಲ್ ಐಪ್ಯಾಡ್ ಅನ್ನು ಪ್ರಾರಂಭಿಸಬಹುದು ಎನ್ನುವ ವರದಿ ಕೂಡ ಇದೆ. ಹೇಳಿಕೊಂಡಿದೆ. ಇನ್ನು ಆಪಲ್ ಕಂಪನಿಯ ಫೋಲ್ಡಬಲ್ ಪ್ರಾಡಕ್ಟ್‌ಗಳಲ್ಲಿ ಬಳಸಬಹುದಾದ ಅಲ್ಟ್ರಾ-ತೆಳುವಾದ ಕವರ್ ಗ್ಲಾಸ್ ಅನ್ನು ರಚಿಸಲು LG ಯೊಂದಿಗೆ ಕೆಲಸ ಮಾಡುತ್ತಿದೆ ಎನ್ನುವ ಸುದ್ದಿ ಕೂಡ ಇದೆ. ಜೊತೆಗೆ, ಆಪಲ್ ತನ್ನದೇ ಆದ ಚಿಪ್ ವಿನ್ಯಾಸದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ. ಇದರಿಂದ ಆಪಲ್‌ ಫೋಲ್ಡಬಲ್‌ನಲ್ಲಿ ಕೂಡ ಆಪಲ್‌ನ ಚಿಪ್‌ಸೆಟ್‌ ಹೊಂದಿರಲಿದೆ.

ಫೋಲ್ಡಬಲ್‌

ಆಪಲ್ ಪ್ರಸ್ತುತ 20 ಇಂಚಿನ ಫೋಲ್ಡಬಲ್‌ ಡಿಸ್‌ಪ್ಲೇಗಾಗಿ ಡಿಸ್‌ಪ್ಲೇ ಪೂರೈಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಇದರಿಂದ ಆಪಲ್‌ ಕಂಪೆನಿಯ ಐಫೋನ್‌ ಫೋಲ್ಡ್‌ 20 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಅನ್ನೊದು ಕನ್ಫರ್ಮ್‌ ಆಗಿದೆ. ಇದಲ್ಲದೆ ಆಪಲ್‌ ಕಂಪನಿಯು ಫೋಲ್ಡಬಲ್ ಮ್ಯಾಕ್‌ಬುಕ್‌ಗಳಲ್ಲಿ ಕೂಡ ಫೋಲ್ಡಬಲ್‌ ಡಿಸ್‌ಪ್ಲೇ ತರುವುದಕ್ಕೆ ಸಿದ್ಧತೆ ನಡೆಸಿದೆ. ಈ ಮ್ಯಾಕ್‌ಬುಕ್ ಮಾದರಿಗಳು 2026 ಅಥವಾ 2027 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಇತ್ತೀಚಿನ

ಇನ್ನು ಇತ್ತೀಚಿನ ಮಾಹಿತಿಯಂತೆ ಆಪಲ್‌ ಐಫೋನ್‌ ಫೋಲ್ಡ್‌ ಡಿಸ್‌ಪ್ಲೇಗಾಗಿ ಸಿಲ್ವರ್‌ ನ್ಯಾನೊವೈರ್ ಟಚ್ ಸಲ್ಯೂಶನ್‌ ಅನ್ನು ಬಳಸುವ ಸಾಧ್ಯತೆಯಿದೆ. ಇದರಿಂದ ಫೋಲ್ಡಬಲ್‌ ವಲಯದಲ್ಲಿ ಐಫೋನ್‌ ಹೊಸ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದರಿಂದ ಈಗಾಗಲೇ ಫೋಲ್ಡಬಲ್‌ ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್‌, ಒಪ್ಪೋ, ಹುವಾವೇ ಕಂಪೆನಿಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಫೋಲ್ಡಬಲ್‌

ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಫೋಲ್ಡಬಲ್‌ ಡಿವೈಸ್‌ಗಳ ವಿಚಾರಕ್ಕೆ ಬಂದರೆ ಸ್ಯಾಮ್‌ಸಂಗ್‌ ಸಂಸ್ಥೆಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಸ್ಮಾರ್ಟ್‌ಫೋನ್‌ ಕೂಡ ಸೇರಿದೆ. ಈ ಸ್ಮಾರ್ಟ್‌ಫೋನ್‌ 7.6 ಇಂಚಿನ ಡೈನಾಮಿಕ್ ಅಮೋಲೆಡ್‌ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೇನ್‌ ಡಿಸ್‌ಪ್ಲೇ ಆಗಿದ್ದು, QXGA+ ರೆಸಲ್ಯೂಶನ್ ಮತ್ತು 21.6:18 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 1Hz ನಿಂದ 120Hz ವರೆಗೆ ರಿಫ್ರೆಶ್‌ ರೇಟ್‌ ನೀಡಲಿದೆ. ಇದಲ್ಲದೆ 6.2 ಇಂಚಿನ HD+ ಡೈನಾಮಿಕ್ ಅಮೋಲೆಡ್‌ 2X ಕವರ್‌ ಡಿಸ್‌ಪ್ಲೇ ಹೊಂದಿದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 23.1:9 ರಚನೆಯ ಅನುಪಾತವನ್ನು ಹೊಂದಿದೆ.

Best Mobiles in India

English summary
Apple may launch its first foldable iPhone in 2025: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X