2019 ರಲ್ಲಿ ಆಪಲ್ ನಿಂದ ಈ ಪ್ರೊಡಕ್ಟ್ ಗಳು ಪರಿಚಯವಾಗಲಿವೆ

|

ಸ್ಮಾರ್ಟ್ ಫೋನ್ ಲೈನ್ ಅಪ್ ನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಪ್ರತಿವರ್ಷವು ಆಪಲ್ ಸಂಸ್ಥೆ ಹೊಸ ಹೊಸ ಐಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತದೆ. ಆದರೆ ಅದಕ್ಕಿಂತ ಮುಂಚೆ ಕ್ಯೂಪರ್ಟಿನೋ ಮೂಲಕ ಟೆಕ್ ಸಂಸ್ಥೆ ಕನಿಷ್ಟ ಒಂದು ಐಪ್ಯಾಡ್ ನ್ನು ಪರಿಚಯಿಸಿ ಈ ಸರಣಿಯನ್ನು ತಾಜಾ ಮತ್ತು ಶಕ್ತಿಶಾಲಿಯಾಗಿಡಲು ಮತ್ತು ಹೊಸದಾಗಿರುವ ಶ್ರೀಮಂತ ಡಿವೈಸ್ ನ್ನು ಪರಿಚಯಿಸಲು ಪ್ರಯತ್ನಿಸುತ್ತದೆ.ಆದರೆ ಈ ವರ್ಷ ಡಿಜಿಟೈಮ್ಸ್ ವರದಿ ಹೇಳುವಂತೆ ಕನಿಷ್ಟ ಎರಡು ಐಪ್ಯಾಡ್ ಟ್ಯಾಬ್ಲೆಟ್ ಗಳನ್ನು ಆಪಲ್ ಸಂಸ್ಥೆ ಬಿಡುಗಡೆಗೊಳಿಸಲಿದೆಯಂತೆ.

ಟಚ್ ಪೆನಲ್ ತಯಾರಿಕಾ ಸಂಸ್ಥೆಗಳಿಂದ ಮಾಹಿತಿ:

ಟಚ್ ಪೆನಲ್ ತಯಾರಿಕಾ ಸಂಸ್ಥೆಗಳಿಂದ ಮಾಹಿತಿ:

ವರದಿಯು ತಿಳಿಸುವಂತೆ ಎರಡು ಥೈವಾನ್ ಮೂಲದ ಟಚ್ ಪೆನಲ್ ತಯಾರಿಕಾ ಸಂಸ್ಥೆಗಳು ಜನರಲ್ ಇಂಟರ್ಫೇಸ್ ಸಲ್ಯೂಷನ್(ಜಿಐಎಸ್) ಮತ್ತು ಟಿಪಿಕೆ ಹೋಲ್ಡಿಂಗ್ಸ್ ಗಳು ಹೊಸ ಐಪ್ಯಾಡ್ ಸರಣಿಗೆ ಪೆನಲ್ ಗಳನ್ನು ತಯಾರಿಸಿ ಕೊಡಲಿದೆಯಂತೆ.

ಎರಡು ಹೊಸ ಡಿವೈಸ್ ಪರಿಚಯ:

ಎರಡು ಹೊಸ ಡಿವೈಸ್ ಪರಿಚಯ:

ಅಷ್ಟೇ ಅಲ್ಲ 2019 ರ ಮೊದಲಾರ್ಧದಲ್ಲಿ ಎರಡು ಎಂಟ್ರಿ-ಲೆವೆಲ್ ಐಪ್ಯಾಡ್ ಡಿವೈಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಲಾಗಿದೆ. ಇದರ ಪ್ರಕಾರವೇ ಹೇಳುವುದಾದರೆ 5ನೇ ಜನರೇಷನ್ನಿನ ಐಪ್ಯಾಡ್ ಮಿನಿ ಟ್ಯಾಬ್ಲೆಟ್ ಜೊತೆಗೆ ಎಂಟ್ರಿ ಲೆವೆಲ್ ಐಪ್ಯಾಡ್ ಸೇರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯಾವ ಸಂಸ್ಥೆಗೆ ಎಷ್ಟು?

ಯಾವ ಸಂಸ್ಥೆಗೆ ಎಷ್ಟು?

ಜಿಐಎಸ್ 40% ಟಚ್ ಸಲ್ಯೂಷನ್ ಗಳನ್ನು ಹೊಸ ಐಪ್ಯಾಡ್ ಡಿವೈಸ್ ಗಳಿಗಾಗಿ ತಯಾರಿಸಿ ನೀಡಿದರೆ ಇನ್ನುಳಿದ 60% ದಷ್ಟನ್ನು ಟಿಪಿಕೆ ಮತ್ತು ಓ-ಫಿಲ್ಮ್ ಟೆಕ್ನಾಲಜಿ ಸಂಸ್ಥೆಗಳು ತಯಾರಿಸಿ ನೀಡಲಿದೆ ಎಂದು ತಿಳಿದುಬಂದಿದೆ.

ವರದಿಗೆ ಪುಷ್ಠೀ:

ವರದಿಗೆ ಪುಷ್ಠೀ:

ಈಗ ಬಂದಿರುವ ವರದಿಯು ಮ್ಯಾಕ್ ರೂಮರ್ಸ್ ಕಳೆದ ತಿಂಗಳು ನೀಡಿದ ಆಪಲ್ 5ನೇ ಜನರೇಷನ್ನಿನ ಐಪ್ಯಾಡಾ ಮಿನಿಯನ್ನು H-1 2019 ರಲ್ಲಿ ಜೊತೆಗೆ ಚೀಪರ್ ಆಗಿರುವ ಐಪ್ಯಾಡ್ ನ್ನು ಕೂಡ ಬಿಡುಗಡೆಗೊಳಿಸುತ್ತದೆ ಎಂಬ ವರದಿಯ ಜೊತೆಗೆ ಹೊಂದಿಕೆಯಾಗುತ್ತಿದೆ. ಕ್ಯೂಪರ್ಟಿನೋ ಮೂಲದ ಟೆಕ್ ಸಂಸ್ಥೆ ಆಪಲ್ ತನ್ನ ಆಪಲ್ ಐಪ್ಯಾಡ್ ಮಿನಿ ಮಾಡೆಲ್ ನ್ನು 2015 ರಲ್ಲಿ ಅಪ್ ಡೇಟ್ ಮಾಡಿತ್ತು. ಹಾಗಾಗಿ ಈ ನಿರೀಕ್ಷೆ ಸುಳ್ಳಾಗಲಿಕ್ಕಿಲ್ಲ.

LED ತಯಾರಿಕಾ ಸಂಸ್ಥೆಯ ಬದಲಾವಣೆ:

LED ತಯಾರಿಕಾ ಸಂಸ್ಥೆಯ ಬದಲಾವಣೆ:

ಸದ್ಯದ 9.7 ಇಂಚಿನ ಡಿಸ್ಪ್ಲೇ ಐಪ್ಯಾಡ್ (6ನೇ ಜನರೇಷನ್) ನಿಂದ 10 ಇಂಚಿನ ಡಿಸ್ಪ್ಲೇ ಜೊತೆಗೆ ನ್ಯಾರೋವರ್ ಫ್ರೇಮ್ ಒಳಗೊಂಡಿರುವಂತಹ ಐಪ್ಯಾಡ್ ಗೆ ಮುಂದುವರಿಯಲು ಸಂಸ್ಥೆ ಚಿಂತನೆ ನಡೆಸಿದೆ. ಜಪಾನಿನ LED ವ್ಯವಸ್ಥೆಯನ್ನು ಕಡಿಮೆಗೊಳಿಸಿ ಕೊರಿಯನ್ ಮೂಲದ ಸಂಸ್ಥೆ ತಯಾರಿಸುವ LED ಡಿಸ್ಪ್ಲೇ ಗಳಿಗೆ ಹೆಚ್ಚು ಗಮನ ಕೇಂದ್ರಿಕರಿಸುವ ಸಾಧ್ಯತೆ ಇದೆ.

ಆಪಲ್ ಪ್ಲಾನ್ ಹೀಗಿರಬಹುದು:

ಆಪಲ್ ಪ್ಲಾನ್ ಹೀಗಿರಬಹುದು:

ಅಕ್ಟೋಬರ್ 2018 ರಲ್ಲಿ ಆಪಲ್ ಸಂಸ್ಥೆ ತನ್ನ ಕೊನೆಯ ಐಪ್ಯಾಡ್ ನ್ನು ಬಿಡುಗಡೆಗೊಳಿಸಿತ್ತು ಅದುವೇ ಆಪಲ್ ಐಪ್ಯಾಡ್ ಪ್ರೋ(2018). ನವೆಂಬರ್ ನಲ್ಲಿ ಭಾರತದಲ್ಲಿ ಅದು ಲಭ್ಯವಾಗಲು ಪ್ರಾರಂಭವಾಗಿತ್ತು. ಆದರೆ ಐಪ್ಯಾಡ್ ಮತ್ತು ಐಪೋನ್ ಗಳನ್ನು ಮಾತ್ರವೇ ಈ ವರ್ಷ ಆಪಲ್ ಬಿಡುಗಡೆಗೊಳಿಸಲು ಯೋಜಿಸಿರುವ ಹಾರ್ಡ್ ವೇರ್ ಪ್ರೊಡಕ್ಟ್ ಗಳಲ್ಲ ಬದಲಾಗಿ 7ನೇ ಜನರೇಷನ್ನಿನ ಐಪಾಡ್ ಟಚ್ ಎಂಪಿ3 ಪ್ಲೇಯರ್ ನ್ನು ಕೂಡ ಪರಿಚಯಿಸಲಿದೆ ಎಂಬ ಗಾಸಿಪ್ ಇದೆ. ಐಪಾಡ್ ನ್ಯಾನೋ ಮತ್ತು ಐಪಾಡ್ ಶಫಲ್ ನ್ನು ಕಳೆದ ವರ್ಷವೇ ಆಪಲ್ ತಯಾರಿಸುವುದನ್ನು ನಿಲ್ಲಿಸಿದೆ. ಹಾಗಾಗಿ ನಿರೀಕ್ಷೆಗಳು ಅಧಿಕವಿದೆ.

Best Mobiles in India

Read more about:
English summary
Apple may launch these new products before the 2019 iPhones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X