ಭಾರತದಲ್ಲಿ ಆಪಲ್‌ ಮ್ಯೂಸಿಕ್‌ ಸ್ಟೂಡೆಂಟ್‌ ಪ್ಲಾನ್‌ ಬೆಲೆ ಹೆಚ್ಚಳ?

|

ಟೆಕ್‌ ದೈತ್ಯ ಆಪಲ್‌ ಕಂಪೆನಿ ಮ್ಯೂಸಿಕ್‌ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತೆ ಮಾಡಿದೆ. ತನ್ನ ಆಪಲ್‌ ಮ್ಯೂಸಿಕ್‌ ಸ್ಟೂಡೆಂಟ್‌ ಪ್ಲಾನ್‌ ಬೆಲೆಯನ್ನು ಹೆಚ್ಚಳ ಮಾಡಿದ್ದು, ಭಾರತ ಸೇರಿದಂತೆ ಕೆಲವು ಮಾರುಕಟ್ಟೆಗಳಲ್ಲಿ ಆಪಲ್‌ ಮ್ಯೂಸಿಕ್‌ ಸ್ಟೂಡೆಂಟ್‌ ಪ್ಲಾನ್ ಬೆಲೆಯನ್ನು ಹೆಚ್ಚಿಸಿದೆ. ಆಂದರೆ ಈ ಹಿಂದೆ ವಿದ್ಯಾರ್ಥಿಗಳಿಗೆ, ಮ್ಯೂಸಿಕ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ತಿಂಗಳಿಗೆ ಕೇವಲ 49 ರೂ.ಗಳಿಗೆ ಲಭ್ಯವಿತ್ತು. ಇದೀಗ ವಿದ್ಯಾರ್ಥಿಗಳಿಗೆ ತಿಂಗಳಿಗೆ ಶೇಕಡಾ 20 ರಷ್ಟು ಅಂದರೆ 59ರೂ.ಗಳಿಗೆ ಹೆಚ್ಚಿಸಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿಯ ಆಪಲ್‌ ಮ್ಯೂಸಿಕ್‌ ಸ್ಟೂಡೆಂಟ್‌ ಪ್ಲಾನ್‌ ಬೆಲೆಯನ್ನು ಹೆಚ್ಚಳ ಮಾಡಿದೆ. ಸಾಮಾನ್ಯ ಬಳಕೆದಾರರಿಗೆ, ಇದು ತಿಂಗಳಿಗೆ 99ರೂ.ಗಳಲ್ಲಿ ಲಭ್ಯವಿದೆ. ಇನ್ನು ಆಪಲ್‌ ಕಂಪೆನಿ ತನ್ನ ವಿದ್ಯಾರ್ಥಿ ಬಳಕೆದಾರರಿಗೆ ಆಪಲ್ ಮ್ಯೂಸಿಕ್ ಚಂದಾದಾರಿಕೆಯ ಹೆಚ್ಚಳದ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ. ಇನ್ನುಳಿದಂತೆ ಆಪಲ್‌ ಕಂಪೆನಿಯ ಆಪಲ್‌ ಮ್ಯೂಸಿಕ್‌ ಸ್ಟೂಡೆಂಟ್‌ ಪ್ಲಾನ್‌ ಬೆಲೆ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್

ಆಪಲ್ ಮ್ಯೂಸಿಕ್ ಸ್ಟೂಡೆಂಟ್‌ ಪ್ಲಾನ್‌ ಚಂದಾದಾರಿಕೆಯ ಬೆಲೆಯನ್ನು ಶೇಕಡಾ 20 ರಷ್ಟು ಅಂದರೆ 59ರೂ.ಗಳಿಗೆ ಹೆಚ್ಚಿಸಲಾಗಿದೆ. ಇನ್ನು ಈ ಚಂದಾದಾರಿಕೆಯು 90 ಮಿಲಿಯನ್ ಹಾಡುಗಳಿಗೆ ಮತ್ತು 30,000 ಎಕ್ಸ್‌ಫರ್ಟ್‌-ಕ್ಯುರೇಟೆಡ್ ಪ್ಲೇ ಲಿಸ್ಟ್‌ಗಳಿಗೆ ಪ್ರವೇಶವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಆಫರ್‌ಗಳು ತಿಂಗಳಿಗೆ 99ರೂ. ದರದಲ್ಲಿ ಬರುವ ಜನರಲ್‌ ಮ್ಯೂಸಿಕ್‌ ವೈಯಕ್ತಿಕ ಪ್ಲಾನ್‌ಗೆ ಹೋಲುತ್ತವೆ. ಸದ್ಯ ಪರಿಷ್ಕೃತ ಆಪಲ್‌ ಮ್ಯೂಸಿಕ್‌ ಚಂದಾದಾರಿಕೆ ಯೋಜನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನವೀಕರಿಸಲಾಗಿದೆ.

ಆಪಲ್

ಆಪಲ್ ಕಂಪೆನಿ ಭಾರತದಲ್ಲಿ ಮಾತ್ರವಲ್ಲದೆ ಇತರ ಕೆಲವು ಮಾರುಕಟ್ಟೆಗಳಲ್ಲಿಯೂ ಕೂಡ ಸ್ಟೂಡೆಂಟ್‌ ಮ್ಯೂಸಿಕ್‌ ಚಂದಾದಾರಿಕೆಯ ಬೆಲೆಯನ್ನು ಹೆಚ್ಚಿಸಿದೆ. ಅಂದರೆ ಆಸ್ಟ್ರೇಲಿಯಾ, ಇಂಡೋನೇಷ್ಯಾ, ಇಸ್ರೇಲ್, ಕೀನ್ಯಾ, ಮಲೇಷ್ಯಾ, ನ್ಯೂಜಿಲ್ಯಾಂಡ್, ಸೌದಿ ಅರೇಬಿಯಾ, ಸಿಂಗಾಪುರ್, ದಕ್ಷಿಣ ಆಫ್ರಿಕಾ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಚಂದಾದಾರಿಕೆ ಬೆಲೆಯನ್ನು ಹೆಚ್ಚಳ ಮಾಡಿದೆ. ಇನ್ನು ಆಪಲ್‌ ಮ್ಯೂಸಿಕ್‌ ಸ್ಟೂಡೆಂಟ್‌ ಚಂದಾದಾರಿಕೆಯು ಪ್ರಾಥಮಿಕವಾಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ.

ಆಪಲ್‌

ಇನ್ನು ವಿದ್ಯಾರ್ಥಿ ಬಳಕೆದಾರರು ತಮ್ಮ ವಿಶ್ವವಿದ್ಯಾನಿಲಯದ ಗುರುತಿನ ಚೀಟಿಯನ್ನು ಬಳಸಿಕೊಂಡು ಈ ಮ್ಯೂಸಿಕ್‌ ಸೇವೆಗೆ ಸೈನ್ ಅಪ್ ಮಾಡಬಹುದಾಗಿದೆ. ಗುರುತಿನ ಚೀಟಿಯನ್ನು ಬಳಸಿಕೊಂಡು ಸೈನ್‌ ಅಪ್‌ ಮಾಡಿದ ಬಳಕೆದಾರರು ರಿಯಾಯಿತಿ ದರದಲ್ಲಿ ಆಪಲ್‌ ಮ್ಯೂಸಿಕ್‌ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ವಿದ್ಯಾರ್ಥಿ ಬಳಕೆದಾರರು ತಮ್ಮ ವಿಶ್ವವಿದ್ಯಾಲಯದ ದಾಖಲಾತಿಯನ್ನು ರಿಯಾಯಿತಿ ಸೈಟ್ ಯುನಿಡೇಸ್ ಮೂಲಕ ಪರಿಶೀಲಿಸಬೇಕಾಗುತ್ತದೆ.

ಆಪಲ್

ಇದಲ್ಲದೆ ಸ್ಟೂಡೆಂಟ್‌ ಪ್ಲಾನ್‌ ಹೊರತಾಗಿ, ಆಪಲ್ ಮ್ಯೂಸಿಕ್ ವೈಯಕ್ತಿಕ ಯೋಜನೆಯನ್ನು ತಿಂಗಳಿಗೆ 99ರೂ.ಗಳಿಗೆ ಪಡೆದುಕೊಳ್ಳಬಹುದಾಗಿದೆ. ಇನ್ನು ಆಪಲ್ ಮ್ಯೂಸಿಕ್ ಫ್ಯಾಮಿಲಿ ಪ್ಲಾನ್ ತಿಂಗಳಿಗೆ 149ರೂ. ಬೆಲೆಯಲ್ಲಿ ಬರುತ್ತದೆ. ಈ ಪ್ಲಾನ್‌ನಲ್ಲಿ ಒಂದೇ ಸಮಯದಲ್ಲಿ ಆರು ಬಳಕೆದಾರರಿಗೆ ಪ್ರವೇಶವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ಆಪಲ್ ಮ್ಯೂಸಿಕ್ ವಾಯ್ಸ್ ಪ್ಲಾನ್ ಅನ್ನು ಒಂದು ಪೂರ್ಣ ತಿಂಗಳಿಗೆ 49ರೂ. ದರದಲ್ಲಿ ನೀಡುತ್ತದೆ.

Best Mobiles in India

Read more about:
English summary
Apple Music Student plan price has been hiked in some markets including India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X