ಆಪಲ್‌ ಮ್ಯಾಕ್‌ ಲ್ಯಾಪ್‌ಟಾಪ್‌ ಖರೀದಿಗೆ ಇದುವೇ ಸಕಾಲ; ಭರ್ಜರಿ ಡಿಸ್ಕೌಂಟ್‌ ಇದೆ!

|

ಆಪಲ್‌ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರಲ್ಲಿಯೂ ಐಫೋನ್‌ ಹಾಗೂ ಮ್ಯಾಕ್‌ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಡಿಮ್ಯಾಂಡ್‌ ಪಡೆದಿವೆ. ನೀವೇನಾದರೂ ಸದ್ಯ ಭರ್ಜರಿ ಡಿಸ್ಕೌಂಟ್‌ನಲ್ಲಿ ಆಪಲ್‌ ಮ್ಯಾಕ್‌ಬುಕ್‌ ಏರ್‌ M2 ಡಿವೈಸ್‌ ಖರೀದಿಸಬೇಕು ಎಂದು ಪ್ಲ್ಯಾನ್ ಮಾಡಿದ್ದರೆ, ಅದಕ್ಕೆ ಈಗ ಸಕಾಲ ಬಂದಿದೆ ಎನ್ನಬಹುದು.

ಆಪಲ್‌ ಮ್ಯಾಕ್‌ ಲ್ಯಾಪ್‌ಟಾಪ್‌ ಖರೀದಿಗೆ ಇದುವೇ ಸಕಾಲ; ಭರ್ಜರಿ ಡಿಸ್ಕೌಂಟ್‌ ಇದೆ!

ಹೌದು, ಆಪಲ್‌ ಸಂಸ್ಥೆಯು ಆಪಲ್‌ ಮ್ಯಾಕ್‌ಬುಕ್‌ ಏರ್‌ M2 (MacBook Air M2) ಡಿವೈಸ್‌ಗೆ 10,000ರೂ. ರಿಯಾಯಿತಿ ಲಭ್ಯ ಮಾಡಿದ್ದು, ಆಪಲ್‌ ವೆಬ್‌ಸೈಟ್‌ನಲ್ಲಿ 1,19,900ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಪ್ರಮುಖ ಇ ಕಾಮರ್ಸ್‌ ತಾಣಗಳಲ್ಲಿ ಒಂದಾಗಿ ಕಾಣಿಸಿಕೊಂಡಿರುವ ವಿಜಯ ಸೇಲ್ಸ್‌ (Vijay Sales) ನಲ್ಲಿ ಆಪಲ್‌ ಮ್ಯಾಕ್‌ಬುಕ್‌ ಏರ್‌ M2 (MacBook Air M2) ಡಿವೈಸ್‌ 1,05,500ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಹಾಗೆಯೇ ಆಯ್ದ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ, ಹೆಚ್ಚುವರಿ ಯಾಗಿ 10,000ರೂ. ಡಿಸ್ಕೌಂಟ್‌ ಲಭ್ಯವಾಗಲಿದೆ. ಈ ಕೊಡುಗೆ ಮೂಲಕ ಆಪಲ್‌ ಮ್ಯಾಕ್‌ಬುಕ್‌ ಏರ್‌ M2 ಡಿವೈಸ್‌ ಅನ್ನು 95,500ರೂ. ಗಳ ಆಕರ್ಷಕ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಆಪಲ್‌ ಮ್ಯಾಕ್‌ ಲ್ಯಾಪ್‌ಟಾಪ್‌ ಖರೀದಿಗೆ ಇದುವೇ ಸಕಾಲ; ಭರ್ಜರಿ ಡಿಸ್ಕೌಂಟ್‌ ಇದೆ!

ಆಪಲ್‌ ಮ್ಯಾಕ್‌ಬುಕ್‌ ಏರ್‌ (2022) M2 ಫೀಚರ್ಸ್‌
ಆಪಲ್‌ ಮ್ಯಾಕ್‌ಬುಕ್‌ ಏರ್‌ M2 ಡಿವೈಸ್‌ ನಲ್ಲಿ ಸಂಸ್ಥೆಯ M2 ಚಿಪ್‌ಸೆಟ್‌ ಇದೆ. ಇದು ಮೊದಲ ತಲೆಮಾರಿನ M1 ಆಪಲ್ ಸಿಲಿಕಾನ್ ಚಿಪ್ನ ಸುಧಾರಿತ ಆವೃತ್ತಿಯಾಗಿದೆ. ಇನ್ನು ಈ ಹೊಸ ಚಿಪ್‌ಸೆಟ್ ಹಿಂದಿನ ಚಿಪ್‌ಸೆಟ್‌ಗಿಂತ 18% ಸುಧಾರಿತ CPU ಮತ್ತು 35% GPU ಅನ್ನು ಬಳಸಲಾಗಿದೆ. ಜೊತೆಗೆ ಸ್ಪರ್ಧಾತ್ಮಕ 10 ಕೋರ್ ಪ್ರೊಸೆಸರ್‌ಗಳಿಗೆ 1.9 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಲ್ಯಾಪ್‌ಟಾಪ್ 13.6 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇಯನ್ನು ಹೊಂದಿದೆ. ಈ ಆಪಲ್ ಮ್ಯಾಕ್‌ಬುಕ್ ಏರ್‌ (2022) 2TB ಸ್ಟೋರೇಜ್ ಅನ್ನು ಹೊಂದಿದೆ. ಇದನ್ನು 24GB ಯ ಏಕೀಕೃತ ಸೂಚಕದೊಂದಿಗೆ ಕಾನ್ಫಿಗರ್ ಮಾಡಬಹುದು. ಇದಲ್ಲದೆ ಈ ಲ್ಯಾಪ್‌ಟಾಪ್ 1080p ಕ್ಯಾಮೆರಾ ವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್ ಸಿಂಗಲ್ ಚಾರ್ಜ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಎಂದು ಹೇಳಲಾಗಿದೆ. ಜೊತೆಗೆ ಮ್ಯಾಕ್‌ಬುಕ್ ಏರ್‌ಗಳು (2022) ಐಚ್ಛಿಕ 67W USB ಟೈಪ್-ಸಿ ಪವರ್ ಅಡಾಪ್ಟರ್‌ ನೊಂದಿಗೆ 30 ನಿಮಿಷಗಳಲ್ಲಿ ಡಿವೈಸ್‌ಗೆ 50% ವೇಗವಾಗಿ ಚಾರ್ಜ್ ಮಾಡಲು ಬೆಂಬಲವನ್ನು ನೀಡಲಾಗುವುದು.

ಆಪಲ್‌ ಮ್ಯಾಕ್‌ ಲ್ಯಾಪ್‌ಟಾಪ್‌ ಖರೀದಿಗೆ ಇದುವೇ ಸಕಾಲ; ಭರ್ಜರಿ ಡಿಸ್ಕೌಂಟ್‌ ಇದೆ!

ಏರ್‌ಪಾಡ್ಸ್‌ ಪ್ರೊ (AirPods Pro) ಆಫರ್
ಆಪಲ್‌ ಏರ್‌ಪಾಡ್ಸ್‌ ಪ್ರೊ ಇಯರ್‌ಫೋನ್‌ ಡಿವೈಸ್‌ ಸಹ ಆಕರ್ಷಕ ರಿಯಾಯಿತಿ ಪಡೆದಿದೆ. ಈ ಡಿವೈಸ್ ಅಧಿಕೃತ ಆಪಲ್‌ ವೆಬ್‌ಸೈಟ್‌ ನಲ್ಲಿ 26,900ರೂ. ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ ಮೂಲಕ ಖರಿದಿಸಿದರೆ 2,000ರೂ, ಡಿಸ್ಕೌಂಟ್‌ ಲಭ್ಯವಾಗಲಿದೆ. ಇನ್ನು ಈ ಫೋನ್ ಒತ್ತಡವನ್ನು ಸಮಗೊಳಿಸಲು ಮತ್ತು ಕಿವಿ ಆಯಾಸವನ್ನು ಕಡಿಮೆ ಮಾಡಲು ಹೊಸ ತೆರಪಿನ ವ್ಯವಸ್ಥೆಯನ್ನು ಬಳಸುತ್ತವೆ.

ಸಕ್ರಿಯ ಶಬ್ದ ರದ್ದತಿಯನ್ನು ಸಾಧಿಸಲು ಇಯರ್‌ಫೋನ್‌ಗಳು ಎರಡು ಮೈಕ್ರೊಫೋನ್ ಮತ್ತು ಸಾಫ್ಟ್‌ವೇರ್ ವರ್ಧನೆ ಗಳನ್ನು ಬಳಸಿ ಸಮಾನ ಶಬ್ದ ವಿರೋಧಿ ಶಬ್ದವನ್ನು ರಚಿಸುವ ಮೂಲಕ ಹಿನ್ನೆಲೆ ಶಬ್ದವನ್ನು ತೆಗೆದುಹಾಕುತ್ತವೆ. ಒಂದೇ ಚಾರ್ಜ್‌ನಲ್ಲಿ 24 ಗಂಟೆಗಳ ಬ್ಯಾಟರಿಯನ್ನು ನೀಡುತ್ತದೆ. ಇದಲ್ಲದೆ, ಐದು ನಿಮಿಷಗಳ ತ್ವರಿತ ಚಾರ್ಜ್ ಸಮಯವು ಒಂದು ಗಂಟೆ ಕೇಳುವ ಸಮಯ ಅಥವಾ ಒಂದು ಗಂಟೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ.

Best Mobiles in India

English summary
Apple is offering big discount on MacBook Air M2 and AirPods Pro; know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X