ಮ್ಯೂಸಿಕ್‌ ಪ್ರಿಯರ ಮನಗೆದ್ದಿದ್ದ ಐಪಾಡ್‌ ಟಚ್‌ ಇನ್ನು ನೆನಪು ಮಾತ್ರ!

|

ಆಪಲ್‌ ಕಂಪೆನಿ ತನ್ನ ಪೋರ್ಟಬಲ್‌ ಮ್ಯೂಸಿಕ್‌ ಪ್ಲೇಯರ್‌ ಐಪಾಡ್‌ ಟಚ್‌ ಅನ್ನು ಸ್ಟಾಪ್‌ ಮಾಡುವುದಾಗಿ ಘಷಣೆ ಮಾಡಿದೆ. ಇಪ್ಪತ್ತು ವರ್ಷಗಳ ಹಿಂದೆ ಶುರುವಾಗಿದ್ದ ಆಪಲ್‌ ಐಪಾಡ್‌ ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ. ಆಪಲ್‌ನ ಐಪಾಡ್‌ ಟಚ್‌ ಅಷ್ಟೇನೂ ಜನಪ್ರಿಯತೆ ಪಡೆಯದಿದ್ದರೂ ಅದರ ವಿನ್ಯಾಸದ ಕಾರಣಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಅಲ್ಲದೆ ಆಪಲ್ ಕಂಪೆನಿ ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಜನಪ್ರಿಯವಾದ ಐಪಾಡ್ ಮಿನಿ, ಐಪಾಡ್ ನ್ಯಾನೋ, ಐಪಾಡ್ ಷಫಲ್ ಮತ್ತು ಐಪಾಡ್ ಟಚ್ ಸರಣಿಗಳನ್ನು ಸಹ ಮಾರಾಟ ಮಾಡಿದೆ.

 ಐಪಾಡ್‌ ಟಚ್‌

ಹೌದು, ಆಪಲ್‌ ಕಂಪೆನಿ ಅಂತಿಮವಾಗಿ ತನ್ನ ಐಪಾಡ್‌ ಟಚ್‌ ಮಾದರಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಆಪಲ್‌ ಕಂಪೆನಿ ಕಳೆದ ಹಲವಾರು ವರ್ಷಗಳಿಂದ ಐಪಾಡ್ ಮಾದರಿಯನ್ನು ಹಂತಹಂತವಾಗಿ ಸ್ಟಾಪ್‌ ಮಾಡುತ್ತಾ ಬಂದಿದೆ. ಐಪಾಡ್ ನ್ಯಾನೊ ಮತ್ತು ಐಪಾಡ್ ಷಫಲ್ ಅನ್ನು ಈಗಾಗಲೇ ಸ್ಥಗಿತಗೊಳಿಸಿದೆ.ಇದೀಗ ಐಪಾಡ್‌ ಟಚ್‌ ಅನ್ನು ಇನ್ಮುಂದೆ ಪೂರೈಕೆ ಮಾಡುವುದಿಲ್ಲ ಎಂದು ಹೇಳಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಉಳಿದಿರುವ ಐಪಾಡ್‌ಗಳನ್ನು ಬಿಟ್ಟು ಹೊಸ ಐಪಾಡ್‌ ಮಾದರಿಗಳು ಮಾರುಕಟ್ಟೆಗೆ ಬರುವುದಿಲ್ಲ. ಹಾಗಾದ್ರೆ ಆಪಲ್‌ ಕಂಪೆನಿ ಈ ರೀತಿಯ ನಿರ್ಧಾರಕ್ಕೆ ಬರುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಪೋರ್ಟಬಲ್‌ ಮ್ಯೂಸಿಕ್‌ ಪ್ಲೇಯರ್‌ ಆಗಿರುವ ಆಪಲ್‌ ಐಪಾಡ್ ಪಾಪ್ ಸಂಸ್ಕೃತಿಯ ಸೆನ್ಸೆಶನ್‌ ಆಗಿದೆ. ಈ ಐಪಾಡ್‌ಗಳು ಇಪ್ಪತ್ತು ವರ್ಷಗಳ ಹಿಂದೆ ಹೊಸ ಸಂಚಲನವನ್ನು ಸೃಷ್ಟಿಸಿದ್ದವು. ಅದರಲ್ಲೂ ಮ್ಯೂಸಿಕ್‌ ಪ್ರಿಯರ ಪಾಲಿಗೆ ಐಪಾಡ್‌ ಟಚ್‌ ಉತ್ತಮ ಆಯ್ಕೆಯಾಗಿತ್ತು. ಅದರಂತೆ ಮೂಲ ಐಪಾಡ್, 5GB ಸಾಮರ್ಥ್ಯ ಮತ್ತು ಫೈರ್‌ವೈರ್ ಸಂಪರ್ಕದೊಂದಿಗೆ, ಮ್ಯಾಕ್‌ಗಳೊಂದಿಗೆ ಪ್ರತ್ಯೇಕವಾಗಿ ಸೆಟ್‌ ಮಾಡುವ ಅವಕಾಶವನ್ನು ಒಳಗೊಂಡಿತ್ತು. ಇನ್ನು ಆಪಲ್‌ ಐಪಾಡ್‌ಗಳಲ್ಲಿ ಮ್ಯೂಸಿಕ್‌ ಅನ್ನು ಮ್ಯಾನೇಜ್‌ ಮಾಡುವುದಕ್ಕಾಗಿ ಅಗತ್ಯವಾದ iTunes ಅಪ್ಲಿಕೇಶನ್‌ನ ವಿಂಡೋಸ್ ಆವೃತ್ತಿಯನ್ನು ಘೋಷಿಸಿತ್ತು. ಇದೀಗ ಇದೆಲ್ಲವೂ ಇತಿಹಾಸ ಪುಟವನ್ನು ಸೇರಿದೆ.

ಆಪಲ್

ಇನ್ನು ಕಳೆದ 20 ವರ್ಷಗಳಲ್ಲಿ, ಆಪಲ್ ಐಪಾಡ್‌ ಟಚ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಇದರಲ್ಲಿ ಟಚ್‌ ಸರ್ಫೇಸ್ ಮತ್ತು ಇಂಟಿಗ್ರೇಟೆಡ್ ಬಟನ್‌ಗಳೊಂದಿಗೆ ಕ್ಲಿಕ್ ವೀಲ್ ಮತ್ತು ಐಪಾಡ್ ನ್ಯಾನೋ ಲೈನ್‌ನಿಂದ ಪ್ರಾರಂಭವಾಗುವ ಫ್ಲಾಶ್ ಮೆಮೊರಿಯಂತಹ ಹೊಸ ಫೀಚರ್ಸ್‌ಗಳು ಕೂಡ ಸೇರಿವೆ. ಹಿಂದಿನ ದಿನಗಳಲ್ಲಿ ಸ್ಟ್ರೀಮಿಂಗ್‌ ಸೇವೆಗಳಿಗಿಂತ ಮ್ಯೂಸಿಕ್‌ ಸೇವೆ ಹೆಚ್ಚು ಪ್ರಸಿದ್ದಿ ಪಡೆದಿತ್ತು. ಇದರಿಂದ ಐಪಾಡ್‌ನಲ್ಲಿ ಐಟ್ಯೂನ್ಸ್ ಮ್ಯೂಸಿಕ್ ಸ್ಟೋರ್ ಬಳಕೆದಾರರಿಗೆ ಮ್ಯೂಸಿಕ್‌ ಅನ್ನು ಖರೀದಿಸುವ ಮತ್ತು ಸಿಂಕ್ ಮಾಡಲು ಅವಕಾಶ ಮಾಡಿಕೊಟ್ಟಿತು.

ಐಫೋನ್

ಪ್ರಸ್ತುತ ಐಫೋನ್ ಮತ್ತು ಸ್ಟ್ರೀಮಿಂಗ್ ಸೇವೆಗಳ ಹೆಚ್ಚುತ್ತಿರುವ ಜನಪ್ರಿಯತೆಯ ಕಾರಣಕ್ಕೆ ಐಪಾಡ್ ಲೈನ್‌ ಆಪ್‌ನಲ್ಲಿ ತನ್ನ ಗಮನವನ್ನು ಕಡಿಮೆ ಮಾಡಿದೆ. ಇದೇ ಕಾರಣಕ್ಕಾಗಿ ತನ್ನ ಐಪ್ಯಾಡ್‌ ಟಚ್‌ ಮಾದರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸ್ಟ್ರೀಮಿಂಗ್‌ ಸೇವೆಗಳ ಕಡೆಗೆ ಗಮನ ನೀಡುತ್ತಿರುವುದರಿಂದ ಐಪ್ಯಾಡ್‌ ಸರಣಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಇನ್ನು ಐಪಾಡ್ ಟಚ್ ಅನ್ನು ಮಕ್ಕಳಿಗಾಗಿ ವಿಶೇಷವಾಗಿ ಹೈಲೈಟ್‌ ಮಾಡಲಾಗಿತ್ತು. ಆದರೂ ಕೂಡ ತನ್ನ ಹಿಂದಿನ ಜನಪ್ರಿಯತೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಸದ್ಯ ಆಪಲ್ ಈಗ ಈ ಮಾದರಿಯ ಉಳಿದ ಸ್ಟಾಕ್‌ಗಳು ಮಾತ್ರ ಮಾರಾಟವಾಗಲಿವೆ ಎಂದು ಹೇಳಿಕೊಂಡಿದೆ. ಆದರೆ ಐಫೋನ್‌ಗಳು, ಆಪಲ್ ವಾಚ್ ಮತ್ತು ಹೋಮ್‌ಪಾಡ್ ಮಿನಿ ಸೇರಿದಂತೆ ಅದರ ಹಲವಾರು ಇತರ ಪ್ರಾಡಕ್ಟ್‌ಗಳಲ್ಲಿ ಮ್ಯೂಸಿಕ್‌ ಅನ್ನು ಕೇಳುವುದಕ್ಕೆ ಅವಕಾಶ ನೀಡಲಿವೆ.

Best Mobiles in India

Read more about:
English summary
Apple has officially announced the discontinuation of the last iPod Touch model

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X