ಮುಂದಿನ ಸ್ಮಾರ್ಟ್ ಫೋನ್’ಗಾಗಿ ಬದ್ಧ ವೈರಿಯಿಂದ 70 ಮಿಲಿಯನ್ OLED ಸ್ಕ್ರೀನ್ ತರಿಸಲಿದೆ ಆ್ಯಪಲ್: ಇಲ್ಲಿದೆ ಹಾಟ್ ನ್ಯೂಸ್!

OLED ಸ್ಕ್ರೀನ್’ಗಳನ್ನು ತಯಾರಿಸುವುದರಲ್ಲಿ ಸ್ಯಾಮ್ಸಂಗ್ ಕಂಪೆನಿ ಮುಂಚೂಣಿಯಲ್ಲಿರುವುದರಿಂದ ಆ್ಯಪಲ್ OLED ಡಿಸ್ಪ್ಲೇಯನ್ನು ತನ್ನ ಬದ್ಧ ವೈರಿಯಾಗಿರುವ ಸ್ಯಾಮ್ಸಂಗ್ ಕಂಪನಿಯಿಂದ ಪಡೆಯಲಿದೆ ಎಂಬ ರೂಮರ್ಸ್ ಹಬ್ಬಿವೆ.

By Precilla Dias
|

ಸ್ಮಾರ್ಟ್ ಪೋನ್ ಲೋಕದಲ್ಲಿ ಮೆರೆದು, ತನ್ನ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಸಾಮ್ರಾಜ್ಯ ನಡೆಸುತ್ತಿರುವ ಆ್ಯಪಲ್ ಕುರಿತಾಗಿ ಇದೀಗ ಸುದ್ದಿಯೊಂದು ಹರಿದಾಡಲಾರಂಬಿಸಿದೆ. ದೊರೆತಿರುವ ಮಾಹಿತಿಯೊಂದರ ಪ್ರಕಾರ ಆ್ಯಪಲ್ ಬಿಡುಗಡೆ ಮಾಡಲಿರುವ ಐಫೋನ್ 8 OLED ಸ್ಕ್ರೀನ್ ಹೊಂದಲಿದೆ ಎಂದು ತಿಳಿದು ಬಂದಿದೆ. ಆದರೆ OLED ಸ್ಕ್ರೀನ್’ಗಳನ್ನು ತಯಾರಿಸುವುದರಲ್ಲಿ ಸ್ಯಾಮ್ಸಂಗ್ ಕಂಪೆನಿ ಮುಂಚೂಣಿಯಲ್ಲಿರುವುದರಿಂದ ಆ್ಯಪಲ್ ಈ OLED ಡಿಸ್ಪ್ಲೇಯನ್ನು ತನ್ನ ಬದ್ಧ ವೈರಿಯಾಗಿರುವ ಸ್ಯಾಮ್ಸಂಗ್ ಕಂಪನಿಯಿಂದ ಪಡೆಯಲಿದೆ ಎಂಬುವುದು ಸದ್ಯದ ಹಾಟ್ ನ್ಯೂಸ್.

ಸ್ಯಾಮ್ಸಂಗ್’ನಿಂದ 70 ಮಿಲಿಯನ್ OLED ಸ್ಕ್ರೀನ್ ತರಿಸಲಿದೆ ಆ್ಯಪಲ್!

ಈ ಹಿಂದೆ ಐಫೋನ್ 7 ತಯಾರಿಕೆಯ ಸಮಯದಲ್ಲೂ ಆ್ಯಪಲ್ ಸ್ಯಾಮ್ಸಂಗ್’ನೊಂದಿಗಿನ ತನ್ನ ವೈರತ್ವ ಮರೆತು 100 ಮಿಲಿಯನ್ 5.5 ಇಂಚಿನ AMOLED ಸ್ಕ್ರೀನ್ ಗಳನ್ನು ತರಿಸಿಕೊಂಡಿತ್ತು ಎಂಬ ಮಾತುಗಳು ಹಬ್ಬಿದ್ದವು. ಈಗ ಮತ್ತೊಮ್ಮೆ ಸ್ಯಾಮ್ ಸಂಗ್’ನಿಂದಲೇ OLED ಸ್ಕ್ರೀನ್ ತರಿಸಿಕೊಳ್ಳಲು ಒಪ್ಪಂದವನ್ನು ಮಾಡಿಕೊಂಡಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.

ಕೆಲ ಸಮಯದ ಹಿಂದೆ ಎರಡೂ ಕಂಪೆನಿಗಳ ನಡುವೆ 4.3 ಬಿಲಿಯನ್ ಡಾಲರ್’ಗೆ 60 ಮಿಲಿಯನ್ OLED ಸ್ಕ್ರೀನ್ ತರಿಸಿಕೊಳ್ಳುವ ಒಪ್ಪಂದ ನಡೆದಿದೆ ಎಂದು ವರದಿಯಾಗಿತ್ತು.

ಆದರೆ ನಿಕ್ಕಿ ಏಷಿಯನ್ ರಿವ್ಯೂವ್ ಕೆಲ ದಿನಗಳ ಹಿಂದಷ್ಟೇ ಮಾಡಿರುವ ವರದಿಯಲ್ಲಿ ಆ್ಯಪಲ್ 70 ಮಿಲಿಯನ್ ಹ್ಯಾಂಡ್ ಸೆಟ್’ಗಳಿಗಾಗಿ ಬೇಕಾಗುವ OLED ಸ್ಕ್ರೀನ್’ಗಳನ್ನು ಸ್ಯಾಮ್ಸ್ಂಗ್’ನಿಂದ ಆರ್ಡರ್ ಮಾಡಿಕೊಂಡಿದೆ ಎಂದು ತಿಳಿಸಿದೆ.

ಜಿಯೋ ಗ್ರಾಹಕರಿಗೆ ಸಂಕಷ್ಟ: ಶೀಘ್ರವೇ ಬ್ಲಾಕ್ ಆಗಲಿದೆ ಜಿಯೋ ಸಿಮ್‌ಗಳು..!!

ಈ ನಡುವೆ ರಿಸರ್ಚ್ ಕಂಪೆನಿ HIS ಮಾರ್ಕಿಟ್’ನ ಹಿರಿಯ ನಿರ್ದೇಶಕ ಈ ಕುರಿತಾದ ರೋಚಕ ಮಾಹಿತಿಯನ್ನು ಬಿಚ್ಚಿಟ್ಟಿದ್ದು, 'ಪ್ರಸಕ್ತ ವರ್ಷಕ್ಕಾಗಿ ಆ್ಯಪಲ್ ಈಗಾಗಲೇ ಸ್ಯಾಮ್ಸಂಗ್’ನಿಂದ 70 ಮಿಲಿಯನ್’ನಷ್ಟು OLED ಸ್ಕ್ರೀನ್’ಗಳನ್ನು ಆರ್ಡರ್ ಮಾಡಿದೆ. ಆದರೆ ಅಂದಾಜಿಗಿಂತ ಜನರ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಹೊಂದಿರುವ ಸ್ಯಾಮ್ಸಂಗ್ ಮಾತ್ರ 95 ಮಿಲಿಯನ್ OLED ಪ್ಯಾನಲ್’ಗಳನ್ನು ತಯಾರಿಸುತ್ತಿದೆ’ ಎಂದಿದ್ದಾರೆ.

ಆದರೆ ಹಬ್ಬಿರುವ ಮತ್ತೊಂದು ಸುದ್ದಿಯನ್ವಯ ಐಫೋನ್ 8 ಮತ್ತು 7ಎಸ್ ಫೋನ್’ಗಳು ಕೇವಲ LED ಪರದೆಯನ್ನು ಮಾತ್ರ ಹೊಂದಲಿದೆ ಎನ್ನಲಾಗಿದೆ. ಅದೇನಿದ್ದರೂ ಆ್ಯಪಲ್ ಮಾತ್ರ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಕ್ಕೆ ಹಾಕಿಲ್ಲ. ಇನ್ನು ಹೊಸ ಐಫೋನ್’ಗಳು ಮಾರುಕಟ್ಟೆಗೆ ಬಂದ ನಂತರವೇ ಈ ವಿಷಯ ಬಹಿರಂಗಗೊಳ್ಳಲಿದೆ.

Best Mobiles in India

English summary
Samsung being the lead in mobile OLED space, it was known to everyone that Apple will be going to order it from them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X