ಗೌಪ್ಯತೆಯ ಬಗ್ಗೆ ಹೊಸ ಜಾಹಿರಾತು ಪ್ರಕಟಿಸಿದ ಆಪಲ್‌ ಕಂಪೆನಿ! ಏನಿದರ ವಿಶೇಷ?

|

ಆಪಲ್‌ ಕಂಪೆನಿ ತನ್ನ ಬಳಕೆದಾರರಿಗಾಗಿ ಹೊಸ ಜಾಹಿರಾತು ಒಂದನ್ನು ಪ್ರಕಟಿಸಿದೆ. ಈ ಜಾಹಿರಾತು ಆಪಲ್‌ ಐಫೋನ್‌ ಬಳಕೆದಾರರು ತಮ್ಮ ಡೇಟಾ ಪ್ರೈವೆಸಿಯನ್ನು ಹೇಗೆ ಕಾಪಾಡಬೇಕು ಎಂದು ಹೇಳಲಾಗಿದೆ. 34-ಸೆಕೆಂಡ್‌ಗಳ ಈ ಗೌಪ್ಯತೆ ಫೀಚರ್ಸ್‌ನಲ್ಲಿ ಬಳಕೆದಾರರ ಡೇಟಾವನ್ನು ಹೇಗೆ ಕದಿಯಲಾಗುತ್ತದೆ. ಹೇಗೆ ಡೇಟಾವನ್ನು ಹರಾಜು ಹಾಕಲಾಗುತ್ತದೆ ಎನ್ನುವ ವಿಚಾರವನ್ನು ಹಂಚಿಕೊಂಡಿದೆ. ಈ ಒಂದು ವೀಡಿಯೋ ಮೂಲಕ ಡೇಟಾ ಪ್ರೈವೆಸಿಯ ಬಗ್ಗೆ ಜನರು ಹೆಗೆ ಎಚ್ಚರಿಕೆ ವಹಸಿಬೇಕು ಅನ್ನೊದನ್ನ ತಿಳಿಸಲಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಹೊಸ ಜಾಹಿರಾತು ವೀಡಿಯೋದಲ್ಲಿ ಗೌಪ್ಯತೆ ವಿಚಾರದ ಬಗ್ಗೆ ಹೈಲೈಟ್‌ ಮಾಡಿದೆ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯುವ ಹ್ಯಾಕರ್‌ಗಳು ಹೇಗೆ ಡೇಟಾ ಹರಾಜು ಮಾಡುತ್ತಾರೆ ಅನ್ನೊದನ್ನ ಇದರಲ್ಲಿ ತೋರಿಸಲಾಗಿದೆ. ಇದಲ್ಲದೆ ಒಬ್ಬರ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಹೇಗೆ ಬಳಕೆದಾರರ ಡೇಟಾ ಕದಿಯುತ್ತವೆ ಅನ್ನೊದನ್ನ ಹೈಲೈಟ್‌ ಮಾಡಲಾಗಿದೆ. ಹಾಗಾದ್ರೆ ಆಪಲ್‌ ಕಂಪೆನಿ ಪ್ರಕಟಿಸಿರುವ ಗೌಪ್ಯತೆ ಜಾಹಿರಾತು ವೀಡಿಯೋದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಆಪಲ್‌ ಕಂಪೆನಿ ತನ್ನ ವಿಡಿಯೋ ಜಾಹಿರಾತಿನಲ್ಲಿ ಅಪ್ಲಿಕೇಶನ್‌ಗಳು ಹೇಗೆ ಡೇಟಾವನ್ನು ಸಂಗ್ರಹಿಸುತ್ತವೆ ಅನ್ನೊದನ್ನು ಸೂಚಿಸುತ್ತದೆ. ಅಂದರೆ ನೀವು ಬಳಸುವ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವ ಮತ್ತು ಹಂಚಿಕೊಳ್ಳುವ ವಿವಿಧ ವಿಧಾನಗಳನ್ನು ಜಾಹೀರಾತು ಹೈಲೈಟ್ ಮಾಡಿದೆ. ಆದರೆ ನಿಮ್ಮ ವೈಯುಕ್ತಿಕ ಡೇಟಾ ಟ್ರ್ಯಾಕಿಂಗ್ ಅನ್ನು ನಿಲ್ಲಿಸಲು ಐಫೋನ್ ಹೇಗೆ ಸೂಕ್ತ ಮಾರ್ಗವನ್ನು ನೀಡುತ್ತದೆ ಎಂಬ ನಿರೂಪಣೆಯನ್ನು ಈ ವೀಡಿಯೋದಲ್ಲಿ ಹೇಳಲಾಗಿದೆ.

ಆಪಲ್‌

ಇನ್ನು ಆಪಲ್‌ನ ಜಾಹೀರಾತು ಯಾವಾಗಲೂ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ಪ್ರಮುಖ 'ಸಂದೇಶ'ವನ್ನು ನೀಡುವ ಪ್ರಯತ್ನ ಮಾಡಿದೆ. ಈ ಹೊಸ ಜಾಹೀರಾತು, ಐಫೋನ್‌ 13ಪ್ರೊ ಬಗ್ಗೆ ಯಾವುದೇ ಪ್ರಚರ ಮಾಡಿಲ್ಲ. ಆದರೆ ಇದು "ಗೌಪ್ಯತೆ" ಬಗ್ಗೆ ಮತ್ತು ಬಳಕೆದಾರರು ತಮ್ಮ ಡೇಟಾವನ್ನು ಹೇಗೆ ಕಾಳಜಿ ವಹಿಸಬೇಕು ಅನ್ನೊದನ್ನ ಸೂಚಿಸಿದೆ. ಬಳಕೆದಾರರು ತಮ್ಮ ಪ್ರತಿಸ್ಪರ್ಧಿಗಳು ತಮ್ಮ ಡೇಟಾದೊಂದಿಗೆ ಏನು ಮಾಡುತ್ತಾರೆ ಅನ್ನೊದನ್ನ ಗ್ರಾಹಕರಿಗೆ ತಿಳಿಸುವ ಪ್ರಯತ್ನ ನಡೆದಿದೆ.

ಅಪ್ಲಿಕೇಶನ್

ಆಪಲ್‌ನ ಇತ್ತೀಚಿನ ಅಪ್ಲಿಕೇಶನ್ ಟ್ರ್ಯಾಕಿಂಗ್ ಪಾರದರ್ಶಕತೆ (ATT) ಫೀಚರ್ಸ್‌ ಅನ್ನು ಮೂಲತಃ iOS 14.5 ನಲ್ಲಿ ಪರಿಚಯಿಸಲಾಗಿದೆ. ಅಲ್ಲದೆ ಇದನ್ನು iOS 15 ನಲ್ಲಿ ಮತ್ತಷ್ಟು ಬಿಲ್ಡ್‌ ಮಾಡಲಾಗಿದೆ. ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಾದ್ಯಂತ ಬಳಕೆದಾರರನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವ ಮೊದಲು ಡೆವಲಪರ್‌ಗಳು ಅನುಮತಿಯನ್ನು ಕೋರಬೇಕಾಗುತ್ತದೆ. ಇದರಿಂದ ಆಪಲ್ ತನ್ನ ಡಿವೈಸ್‌ಗಳಲ್ಲಿ ನಿಮ್ಮ ಡೇಟಾವನ್ನು ಬೇರೆಯವರು ಟ್ರ್ಯಾಕ್‌ ಮಾಡದಂತೆ ಹೇಗೆ ಫೀಚರ್ಸ್‌ಗಳನ್ನು ನೀಡಲಾಗಿದೆ ಅನ್ನೊದನ್ನ ತಿಳಿಸಲಾಗಿದೆ.

ಆಪಲ್

ಇದಲ್ಲದೆ ಆಪಲ್ ಕಂಪೆನಿ ಇದೀಗ ತನ್ನ ವಿಕಲಾಂಗ ಬಳಕೆದಾರರಿಗೆ ಡೋರ್ ಡಿಟೆಕ್ಷನ್ ಫೀಚರ್ಸ್‌ ಪರಿಚಯಿಸಿದೆ. ಈ ಫೀಚರ್ಸ್‌ ಐಫೋನ್‌ ಅಥವಾ ಐಪ್ಯಾಡ್‌ನಲ್ಲಿ ಲಭ್ಯವಾಗಲಿದೆ. ಇವುಗಳಲ್ಲಿ LiDAR ಸೆನ್ಸಾರ್‌ ಅನ್ನು ಬಳಸಿಕೊಂಡು ಬಳಕೆದಾರರಿಗೆ ಬಾಗಿಲನ್ನು ಪತ್ತೆಹಚ್ಚಲು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಈ ಫೀಚರ್ಸ್‌ LiDAR, ಕ್ಯಾಮರಾ ಮತ್ತು ಆನ್-ಡಿವೈಸ್ ಮೆಷಿನ್ ಕಲಿಕೆಯ ಸಂಯೋಜನೆಯನ್ನು ಬಳಸುತ್ತದೆ. ಇದರಿಂದ ಬಳಕೆದಾರರು ಬಾಗಿಲಿನಿಂದ ಎಷ್ಟು ದೂರದಲ್ಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಬಾಗಿಲು ತೆರೆದಿದೆಯೇ ಅಥವಾ ಮುಚ್ಚಿದೆಯೇ ಎಂಬುದನ್ನು ತಿಳಿಯುವುದಕ್ಕೆ ಅವಕಾಶ ನೀಡಲಿದೆ.

ಫೀಚರ್ಸ್‌

ಇನ್ನು ಡೋರ್ ಡಿಟೆಕ್ಷನ್ ಫೀಚರ್ಸ್‌ ಐಫೋನ್‌ 13ಪ್ರೊ, ಐಫೋನ್‌ 13ಪ್ರೊ ಮ್ಯಾಕ್ಸ್‌, ಐಫೋನ್‌ 12 ಪ್ರೊ, ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಪ್ಯಾಡ್‌ ಪ್ರೊ 11-ಇಂಚ್‌ (2020), ಐಪ್ಯಾಡ್‌ ಪ್ರೊ 11 ಇಂಚ್‌(2021) ಮತ್ತು ಐಪ್ಯಾಡ್‌ ಪ್ರೊ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ 12.9 ಇಂಚಿನ (2020) ಮತ್ತು ಐಪ್ಯಾಡ್‌ ಪ್ರೊ 12.9-ಇಂಚ್‌ (2021)ನಲ್ಲಿ ಮೊದಲೇ ಇನ್‌ಸ್ಟಾಲ್‌ ಮಾಡಲಾದ ಮ್ಯಾಗ್ನಿಫೈಯರ್ ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತದೆ. ಆಪಲ್‌ನ ಮ್ಯಾಗ್ನಿಫೈಯರ್ ಅಪ್ಲಿಕೇಶನ್ ಡೋರ್ ಡಿಟೆಕ್ಷನ್ ಫೀಚರ್ಸ್‌ಗೆ ಪ್ರವೇಶವನ್ನು ನೀಡಲು ಹೊಸ ಡಿಟೆಕ್ಷನ್ ಮೋಡ್ ಅನ್ನು ಹೊಂದಿರುತ್ತದೆ.

Best Mobiles in India

Read more about:
English summary
apple's new privacy ad is here and it's an eye opener

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X