ಶಾಕಿಂಗ್ ನ್ಯೂಸ್!..ಜನರ ಆರೋಗ್ಯದ ಜೊತೆ ಆಪಲ್, ಸ್ಯಾಮ್‌ಸಂಗ್‌ ಚೆಲ್ಲಾಟ?!

|

ಸ್ಮಾರ್ಟ್‌ಫೋನ್‌ಗಳಿಂದ ಅಧಿಕ ಪ್ರಮಾಣದಲ್ಲಿ ಅಪಾಯಕಾರಿ ರೇಡಿಯೊ ಫ್ರೀಕ್ಷೆನ್ಸಿ (ಆರ್ ಎಫ್) ವಿಕಿರಣಗಳನ್ನು ಹೊರಸೂಸುತ್ತಿರುವ ಆರೋಪವನ್ನು ಹೊರಿಸಿ ಜನಪ್ರಿಯ ಮೊಬೈಲ್ ತಯಾರಿಕ ಕಂಪೆನಿಗಳಾದ ಆಪಲ್ ಮತ್ತು ಸ್ಯಾಮ್‌ಸಂಗ್ ವಿರುದ್ಧ ಅಮೆರಿಕಾದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ವಿಶ್ವದ ಟಾಪ್ ಎರಡು ಮೊಬೈಲ್ ತಯಾರಿಕಾ ಕಂಪೆನಿಗಳಾದ ಆಪಲ್ ಮತ್ತು ಸ್ಯಾಮ್‌ಸಂಗ್ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿವೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಮೂಡಿದೆ.!

ಶಾಕಿಂಗ್ ನ್ಯೂಸ್!..ಜನರ ಆರೋಗ್ಯದ ಜೊತೆ ಆಪಲ್, ಸ್ಯಾಮ್‌ಸಂಗ್‌ ಚೆಲ್ಲಾಟ?!

ಹೌದು, ಅಮೆರಿಕಾದ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ನ್ಯಾಯಾಲಯದಲ್ಲಿ ಸಾಮೂಹಿಕ ದಾವೆ ಹೂಡಲಾಗಿದ್ದು, ಆಪಲ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಹೊರಸೂಸುವ ರೇಡಿಯೊ ಫ್ರೀಕ್ಷೆನ್ಸಿ (ಆರ್ ಎಫ್) ವಿಕಿರಣ ಪ್ರಮಾಣ ಮಿತೀಮೀರಿದೆ ಎಂದು ಆರೋಪಿಸಲಾಗಿದೆ. ಆರ್ ಎಫ್ ಪ್ರಮಾಣ ಸಂಯುಕ್ತ ಸಂವಹನ ಆಯೋಗ (ಎಫ್‌ಸಿಸಿ) ನಿಗದಿಪಡಿಸಿರುವ ಮಿತಿಗಿಂತ ಆಪಲ್ ಮತ್ತು ಸ್ಯಾಮ್‌ಸಂಗ್ ಫೋನ್‌ಗಳು ಹೆಚ್ಚು ವಿಕಿರಣ ಸೂಸುತ್ತಿವೆ ಎಂದು ದಾವೆಯಲ್ಲಿ ಹೇಳಲಾಗಿದೆ.

ಆಪಲ್ ಐಫೋನ್ 7, ಐಫೋನ್ 8, ಐಫೋನ್ ಎಕ್ಸ್ ಹಾಗೂ ಗ್ಯಾಲಕ್ಸಿ ಎಸ್‌8 ಮತ್ತು ಗ್ಯಾಲಕ್ಸಿ ನೋಟ್ 8 ಫೋನ್‌ಗಳು ಎಫ್‌ಸಿಸಿ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ವಿಕಿರಣ ಸೂಸುತ್ತಿವೆ ಎಂದು ಆರೋಪಿಸಲಾಗಿದೆ. ಇನ್ನು ಐಫೋನ್ 7 ದುಪ್ಪಟ್ಟು ಪ್ರಮಾಣದಲ್ಲಿ ವಿಕಿರಣ ಸೂಸುತ್ತಿದೆ ಎಂದು ಚಿಕಾಗೊ ಟ್ರಿಬ್ಯೂನ್ ನಡೆಸಿದ ಪ್ರತ್ಯೇಕ ತನಿಖೆಯಿಂದ ತಿಳಿದುಬಂದಿದೆ. ಇದು ಆತಂಕಕಾರಿ ವಿಷಯವಾಗಿದ್ದು, ಜನರ ಆರೋಗ್ಯದ ಪರಿಣಾಮಗಳ ಬಗ್ಗೆ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಗ್ಯ ತಜ್ಞರು ಆರೋಪಿಸಿದ್ದಾರೆ.

ಶಾಕಿಂಗ್ ನ್ಯೂಸ್!..ಜನರ ಆರೋಗ್ಯದ ಜೊತೆ ಆಪಲ್, ಸ್ಯಾಮ್‌ಸಂಗ್‌ ಚೆಲ್ಲಾಟ?!

ಸತತ ಬಳಕೆಯಿಂದ ಮೊಬೈಲಿನಿಂದ ಹೊರಹೊಮ್ಮುವ ವಿಕಿರಣಗಳು ನಮ್ಮ ಪ್ರತಿ ಜೀವಕೋಶದ ಡಿಎನ್ಎ ಅಥವಾ ಜೀವತಂತುಗಳ ಮೇಲೆ ಪ್ರಭಾವ ಬೀರಬಹುದಾಗಿದೆ. ಕೆಲ ಅಧ್ಯಯನಗಳಲ್ಲಿ ಕಂಡುಕೊಂಡಿರುವ ಪ್ರಕಾರ ಈ ವಿಕಿರಣಗಳು ಕಣ್ಣಿನ ಕ್ಯಾನ್ಸರ್, ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್, ಮೆಲನೋಮಾ ಎಂಬ ಒಂದು ಬಗೆಯ ಚರ್ಮದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸಹಿತ ಇನ್ನೂ ಹಲವು ಕ್ಯಾನ್ಸರ್ ರೋಗಗಳಿಗೆ ಕಾರಣವಾಗಬಹುದು ಎಂದು ಹೇಳಿವೆ.

ಅದರಲ್ಲೂ ಮೊಬೈಲಿನಿಂದ ಹೊರಹೊಮ್ಮುವ ವಿಕಿರಣಗಳಿಂದ ಗರ್ಭಿಣಿಯರ ಮೇಲೆ ಇದರ ಪರಿಣಾಮ ತೀರಾ ಹೆಚ್ಚಾಗುತ್ತದೆ ಎಂದು ಮತ್ತೆ ಕೆಲ ಅಧ್ಯಯನಗಳು ತಿಳಿಸಿವೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಸಹಾ ವಿಕಿರಣಗಳ ಮೂಲಕ ಉಲ್ಬಣಗೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಹಾಗಾಗಿ, ಅಧಿಕ ಪ್ರಮಾಣದಲ್ಲಿ ಅಪಾಯಕಾರಿ ರೇಡಿಯೊ ಫ್ರೀಕ್ಷೆನ್ಸಿ (ಆರ್ ಎಫ್) ವಿಕಿರಣಗಳನ್ನು ಹೊರಸೂಸುವ ಮೊಬೈಲ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಈ ಕೆಳಗಿನ ಕೆಲ ಸುರಕ್ಷತಾ ಕ್ರಮಗಳನ್ನಾದರೂ ಅನುಸರಿಸಲೇಬೇಕು.

ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ.

ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ.

ಮೊಬೈಲ್‌ನ್ನು ಯಾವತ್ತೂ ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ. ನಿಮ್ಮ ತಲೆಗೆ ಹತ್ತಿರವಾದಷ್ಟು ಅದು ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವುದು. ಮಾತನಾಡುವಾದ ಸ್ಪೀಕರ್ ಫೋನ್ ಬಳಸಿ. ಇದರಿಂದ ಮೊಬೈಲ್ ಅನ್ನು ನಿಮ್ಮ ದೇಹದಿಂದ ದೂರವಿಡಬಹುದು. ಪೂರ್ತಿ ನೆಟ್ ವರ್ಕ್ ಇರುವಾಗಲೇ ಮೊಬೈಲ್ ಬಳಸಿ. ಕಡಿಮೆ ಇದ್ದರೆ ಅದರಿಂದ ಹೆಚ್ಚಿನ ವಿಕಿರಣ ಹೊರಸೂಸುವುದು.

ಏರೋಪ್ಲೇನ್ ಮೋಡ್ ನಲ್ಲಿರಿಸಿ.

ಏರೋಪ್ಲೇನ್ ಮೋಡ್ ನಲ್ಲಿರಿಸಿ.

ಯಾವ ಹೊತ್ತಿನಲ್ಲಿ ಕರೆಗಳು ಬರುವುದಿಲ್ಲವೋ ಆಗ ಮೊಬೈಲನ್ನು ಏರೋಪ್ಲೇನ್ ಮೋಡ್ ನಲ್ಲಿರಿಸಿ. ಇದರಿಂದ ವಿಕಿರಣದ ಸಾಧ್ಯತೆ ಕಡಿಮೆಯಾಗುತ್ತದೆ.ಸಾಧ್ಯವಾದಷ್ಟು ಹೆಚ್ಚು ಇಯರ್ ಫೋನ್ ಬಳಸಿ. ಇದರಿಂದ ಮೊಬೈಲಿನ ವಿಕಿರಣಗಳು ನೇರವಾಗಿ ಮೆದುಳಿಗೆ ತಲುಪುವುದನ್ನು ತಡೆಯಬಹುದು. ಆದರೆ ಬ್ಲೂಟೂಥ್ ಕೂಡ ಬೇಡ ಏಕೆಂದರೆ ಇದರಲ್ಲಿಯೂ ವಿಕಿರಣಗಳಿವೆ.!

ಎಸ್‌ಎಂಎಸ್ ಸೇವೆ ಬಳಸಿ.

ಎಸ್‌ಎಂಎಸ್ ಸೇವೆ ಬಳಸಿ.

ಮೊಬೈಲ್‌ನಲ್ಲಿ ತುಂಬಾ ಕಡಿಮೆ ಮಾತನಾಡಿ ಕಡಿಮೆ ಮಾತನಾಡಿದಷ್ಟು ವಿಕಿರಣವು ಕಡಿಮೆ ಸೂಸುವುದು. ಇತರರಿಗೆ ನಿಮ್ಮ ಸಂದೇಶಗಳನ್ನು ತಿಳಿಸಲು ಆದಷ್ಟು ಎಸ್‌ಎಂಎಸ್ ಸೇವೆಯನ್ನು ಬಳಸಿ. ಇದರಿಂದ ಮೊಬೈಲ್ ನಿಮ್ಮ ದೇಹದಿಂದ ದೂರವಿರುತ್ತದೆ ಮತ್ತು ವಿಕಿರಣಕ್ಕೆ ನಿಮ್ಮ ದೇಹವು ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ ಎಂದು ಹೇಳಬಹುದು.

ಅಂಗದಲ್ಲಿ ಲೋಹ ಹೊಂದಿರುವವರು!

ಅಂಗದಲ್ಲಿ ಲೋಹ ಹೊಂದಿರುವವರು!

ದೇಹದ ಯಾವುದಾದರೂ ಅಂಗದಲ್ಲಿ ಲೋಹ ಅಳವಡಿಸಿಕೊಂಡಿರುವವರು ಆದಷ್ಟು ಮೊಬೈಲ್‌ನಿಂದ ದೂರವಿರಬೇಕು. ಕೂದಲು ಒದ್ದೆಯಾಗಿರುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು. ಯಾಕೆಂದರೆ ನೀರು ಮತ್ತು ಲೋಹವು ವಿಕಿರಣಗಳನ್ನು ಬೇಗನೆ ಸೆಳೆಯುತ್ತದೆ. ಸಿಗ್ನಲ್ ಕಡಿಮೆ ಇರುವಲ್ಲಿ ತುರ್ತಾದ ಕರೆ ಮಾಡಲೇಬೇಕಾದ ಅಗತ್ಯವಿಲ್ಲದ ವಿನಃ ಕರೆ ಮಾಡಲು ಹೋಗಬೇಡಿ.

ಮೊಬೈಲಿಗೆ ದಾಸರಾಗಬೇಡಿ.

ಮೊಬೈಲಿಗೆ ದಾಸರಾಗಬೇಡಿ.

ಮೊಬೈಲು ನಮ್ಮ ಅನುಕೂಲಕ್ಕೆ ಇದೆಯೇ ಹೊರತು ನಾವು ಅದರ ಅನುಕೂಲಕ್ಕಲ್ಲ. ಸುಮ್ಮಸುಮ್ಮನೇ ಕರೆ ಮಾಡಲು ಹೋಗಬೇಡಿ. ಅಗತ್ಯವಿದ್ದರೆ ಮಾತ್ರ ಕರೆ ಮಾಡಿ, ಚುಟುಕಾಗಿ ಹೇಳಬೇಕೆಂದಿದ್ದನ್ನು ತಿಳಿಸಿ ಇಟ್ಟುಬಿಡಿ. ಮೊಬೈಲಿನಲ್ಲಿರುವ ಸಾವಿರಾರು ಆಪ್ ಗಳನ್ನು ಪ್ರಯತ್ನಿಸಲು ಹೋಗಬೇಡಿ. ನಿಮಗೆ ನಿಜವಾಗಿಯೂ ಅಗತ್ಯವಿದ್ದರಷ್ಟೇ ಮೊಬೈಲ್ ಬಳಸಿ.

Best Mobiles in India

English summary
The devices mentioned in the suit are Apple's iPhone 7 Plus, iPhone 8 and iPhone X, and Samsung's Galaxy S8 and Galaxy Note 8. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X