ತನ್ನದೇ ಮೈಕ್ರೋ LED ಡಿಸ್ ಪ್ಲೇಯನ್ನು ಅಭಿವೃದ್ಧಿ ಪಡಿಸುತ್ತಿರುವ ಆಪಲ್..!

ಈಗಾಗಲೇ ಮಾರುಕಟ್ಟೆಯಲ್ಲಿರುವ OLED ಡಿಸ್ ಪ್ಲೇ ಹೆಚ್ಚು ಸದ್ದು ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಮೈಕ್ರೋ LED ಡಿಸ್ ಪ್ಲೇಯನ್ನು ಆಪಲ್ ಅಭಿವೃದ್ಧಿ ಮಾಡುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ.

By Precilla Dias
|

ಇಷ್ಟು ದಿನ ತನ್ನ ಐಪೋನ್ ಗಳಿಗೆ ಬೇರೆ ಕಡೆಯಿಂದ ಡಿಸ್ ಪ್ಲೇಯನ್ನು ಖರೀದಿಸುತ್ತಿದ್ದ ಆಪಲ್, ಈ ಬಾರಿ ತನ್ನ ನೂತನ ಐಫೋನ್ ಗಳಿಗೆ ತನ್ನದೇ ಡಿಸ್ ಪ್ಲೇಯನ್ನು ನಿರ್ಮಿಸಲು ಮುಂದಾಗಿದೆ. ಈಗಾಗಲೇ ಗುಟ್ಟಾಗಿ ಕಾರ್ಯವನ್ನು ಆರಂಭಿಸಿರುವ ಆಪಲ್, ಮೈಕ್ರೋ LED ಡಿಸ್ ಪ್ಲೇಯನ್ನು ಅಭಿವೃದ್ಧಿ ಪಡಿಸುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇದು ಮುಂದಿನ ತಲೆಮಾರಿನ ಡಿಸ್ ಪ್ಲೇಯಾಗಿರಲಿದೆ.

ತನ್ನದೇ ಮೈಕ್ರೋ LED ಡಿಸ್ ಪ್ಲೇಯನ್ನು ಅಭಿವೃದ್ಧಿ ಪಡಿಸುತ್ತಿರುವ ಆಪಲ್..!


ಈಗಾಗಲೇ ಮಾರುಕಟ್ಟೆಯಲ್ಲಿರುವ OLED ಡಿಸ್ ಪ್ಲೇ ಹೆಚ್ಚು ಸದ್ದು ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಮೈಕ್ರೋ LED ಡಿಸ್ ಪ್ಲೇಯನ್ನು ಆಪಲ್ ಅಭಿವೃದ್ಧಿ ಮಾಡುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ. ಇದು ಹೊಸ ಮಾದರಿಯ ಲೈಟಿಂಗ್ ಅನ್ನು ಹೊಂದಿರಲಿದ್ದು, ಗುಣಮಟ್ಟದ ಪಿಚ್ಚರ್ ಕ್ವಾಲಿಟಿಯನ್ನು ಹೊಂದಿರಲಿದೆ.

ಇದಲ್ಲದೇ ಮೈಕ್ರೋ LED ಡಿಸ್ ಪ್ಲೇ ಹೆಚ್ಚು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳದೆ, ಕಡಿಮೆ ಪವರ್ ಬಳಕೆ ಮಾಡಿಕೊಂಡು ಹೆಚ್ಚು ಸಮಯ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಈ ಹಿಂದೆಯೇ ಮೈಕ್ರೋ LED ಡಿಸ್ ಪ್ಲೇಯನ್ನು ಅಭಿವೃದ್ಧಿ ಮಾಡಲು ಆಪಲ್ ಮುಂದಾಗಿತ್ತು. ಆದರೆ ಕಾರಣಾಂತರಗಳಿಂದ ನಿಲ್ಲಿಸಿತ್ತು, ಮತ್ತೆ ಈ ಕಾರ್ಯಕ್ಕೆ ಚಾಲನೆಯನ್ನು ನೀಡಿದೆ ಎನ್ನಲಾಗಿದೆ.

ಈ ಹಿಂದೆ ಆಪಲ್ LG ಮತ್ತು ಸ್ಯಾಮ್ ಸಂಗ್ ಕಡೆಯಿಂದ ಡಿಸ್ ಪ್ಲೇಯನ್ನು ಖರೀದಿಸುತಿತ್ತು, ಇದನ್ನು ನಿಲ್ಲಿಸಿ, ತನ್ನದೇ ವಿಶೇಷವಾದ ಡಿಸ್ ಪ್ಲೇಯನ್ನು ಅಭಿವೃದ್ಧಿ ಮಾಡಲು ಮುಂದಾಗಿದೆ. ತನ್ನದೇ ವಿಶೇಷ ಹಾರ್ಡ್ ವೇರ್ ನಿಂದ ಆಪಲ್ ನಿರ್ಮಿಸುತ್ತಿರುವ ಡಿಸ್ ಪ್ಲೇ ಕುರಿತಂತೆ ನಿರೀಕ್ಷೆಗಳು ಹೆಚ್ಚಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಸಾಧ್ಯತೆ ಇದೆ.

Bike-Car ಜಾತಕ ಹೇಳುವ ಆಪ್..!

ಫೇಸ್‌ಬುಕ್ ಬಳಕೆ ಸೇಫ್‌ ಅಲ್ಲ: ಆಧಾರ್ ನಂತರ ಕೋಟಿ-ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್..!ಫೇಸ್‌ಬುಕ್ ಬಳಕೆ ಸೇಫ್‌ ಅಲ್ಲ: ಆಧಾರ್ ನಂತರ ಕೋಟಿ-ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್..!

ಈಗಾಗಲೇ ಮಾರುಕಟ್ಟೆಯಲ್ಲಿ OLED ಡಿಸ್ ಪ್ಲೇ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಮೀರಿಸುವಂತೆ ಡಿಸ್ ಪ್ಲೇಯನ್ನು ಅಭಿವೃದ್ದಿ ಪಡಿಸಲು ಆಪಲ್ ಮುಂದಾಗಿದೆ. ಇದು ಆಪಲ್ ಐಫೋನ್ ಮಾರಾಟದ ಪ್ರಮಾಣದಲ್ಲಿ ಏರಿಕೆಯನ್ನು ಮಾಡಿಕೊಳ್ಳು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಇದಲ್ಲದೇ ಆಪಲ್ ತನ್ನ ಮೈಕ್ರೋ LED ಡಿಸ್ ಪ್ಲೇಯನ್ನು ಬೇರೆ ಕಂಪನಿಗಳಿಗೂ ಮಾರಾಟ ಮಾಡುವ ದೊಡ್ಡ ಯೋಜನೆಯೊಂದನ್ನು ರೂಪಿಸಿಕೊಂಡಿದೆ ಎನ್ನಲಾಗಿದೆ.

Best Mobiles in India

Read more about:
English summary
Apple is developing its own displays for the first time, using a manufacturing facility near its California headquarters to make few screens for testing purposes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X