Subscribe to Gizbot

GST ಪರಿಣಾಮ: ಐಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ ಆಪಲ್..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳ ಮಾದರಿಯಲ್ಲಿ ಭದ್ರವಾಗಿ ತಳವೂರಬೇಕು ಎಂದು ನಿರ್ಧಾರ ಮಾಡಿರುವ ಆಪಲ್, ದೇಶದಲ್ಲಿ GST ಜಾರಿಗೆ ಬಂದ ಮೇಲೆ ತನ್ನ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ಸ್ ಬೆಲೆಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಉತ್ಪನ್ನಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ.

GST ಪರಿಣಾಮ: ಐಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ ಆಪಲ್..!!

ಓದಿರಿ: ಶೀಘ್ರವೇ ಕೊನೆಯಾಗಲಿದೆ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್: ತಿಳಿಯುವುದು ಹೇಗೆ..?

GST ಜಾರಿಯಾದ ನಂತರದಲ್ಲಿ ದೇಶದಲ್ಲಿ ಮೊಬೈಲ್ ಬೆಲೆಗಳಲ್ಲಿ ಹೆಚ್ಚಾಗಲಿದೆ ಎನ್ನುವ ಮಾತು ಕೇಳಿಬಂದಿತ್ತು. ಇದಕ್ಕೆ ಅಪವಾದ ಎನ್ನುವಂತೆ ಆಪಲ್ ತನ್ನ ಉತ್ಪನ್ನಗಳ ಬೆಲೆಯನ್ನು ಕಡಿತ ಮಾಡುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಶೇ.7.2 ರಷ್ಟು ಬೆಲೆಯಗಳಲ್ಲಿ ಇಳಿಕೆ ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 7 ಪ್ಲಸ್ ಬೆಲೆಯಲ್ಲಿ ರೂ.6,600 ಕಡಿತ:

ಐಫೋನ್ 7 ಪ್ಲಸ್ ಬೆಲೆಯಲ್ಲಿ ರೂ.6,600 ಕಡಿತ:

ಸದ್ಯ ಆಪಲ್ ಬಿಡುಗಡೆ ಮಾಡಿರುವ ಐಫೋನ್‌ಗಳಲ್ಲಿ ಟಾಪ್ ನಲ್ಲಿರುವ ಐಫೋನ್ 7 ಪ್ಲಸ್ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಕಾಣಬಹುದಾಗಿದೆ. ಐಫೋನ್ 7 ಪ್ಲಸ್ (256 GB) ಸದ್ಯ ಮಾರುಕಟ್ಟೆಯಲ್ಲಿ ರೂ.85,400ಗೆ ದೊರೆಯುತ್ತಿದೆ. ಇದೇ ಫೋನ್ ಈ ಹಿಂದೆ ರೂ.92,000ಕ್ಕೆ ಮಾರಾಟವಾಗುತ್ತಿತು. ಇದರ ಬೆಲೆಯಲ್ಲಿ ರೂ.6,600 ರಷ್ಟು ವ್ಯತ್ಯಾಸ ಕಾಣಬಹುದಾಗಿದೆ.

ಐಫೋನ್ SE ಮೇಲೆ ಬೆಲೆ ಕಡಿತ:

ಐಫೋನ್ SE ಮೇಲೆ ಬೆಲೆ ಕಡಿತ:

ಇದೇ ಮಾದರಿಯಲ್ಲಿ ಭಾರತದಲ್ಲಿ ತಯಾರಾಗುತ್ತಿರುವ ಐಫೋನ್ SE ಮೇಲೆಯೂ ಬೆಲೆ ಕಡಿತ ಘೋಷಣೆಯಾಗಿದ್ದು, ರೂ. 2,200 ಕಡಿಮೆಯಾಗಿ ರೂ.35,000ಕ್ಕೆ ಮಾರಾಟವಾಗುತ್ತಿದೆ.

ಐಪ್ಯಾಡ್ ಪ್ರೋ ಮೇಲೆ ರೂ.3000 ಕಡಿತ:

ಐಪ್ಯಾಡ್ ಪ್ರೋ ಮೇಲೆ ರೂ.3000 ಕಡಿತ:

ಆಪನ್ ನೂತನವಾಗಿ ಲಾಂಚ್ ಮಾಡಿರುವ ಐಪ್ಯಾಡ್ ಪ್ರೋ (512 GB) ಬೆಲೆಯಲ್ಲಿಯೂ ಇಳಿಕೆ ಕಾಣಬಹುದಾಗಿದ್ದು, ಒಂದು ಲಕ್ಷಕ್ಕೇ ಮಾರಾಟವಾಗುತ್ತಿದ್ದ 12.9 ಇಂಚಿನ ಐಪ್ಯಾಡ್ ಪ್ರೋ ಸದ್ಯ ರೂ.97,000ಕ್ಕೆ ದೊರೆಯುತ್ತಿದೆ.

ಎಲ್ಲಾ ಉತ್ಪನ್ನಗಳ ಮೇಲೆಯೂ ಕಡಿತ:

ಎಲ್ಲಾ ಉತ್ಪನ್ನಗಳ ಮೇಲೆಯೂ ಕಡಿತ:

ಇದಲ್ಲದೇ ಆಪಲ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ, ಐಫೋನ್, ಐಪ್ಯಾಡ್, ಮ್ಯಾಕ್ಸ್ ಖರೀದಿಗೆ ಇದು ಒಳ್ಳೆಯ ಸಮಯ ಎನ್ನಲಾಗಿದೆ. ಈಗಾಗಲೇ ಆಪಲ್ ಅಭಿಮಾನಿಗಳು ನೂತನ ಬೆಲೆಗಳಿಂದ ಸಂತಸಗೊಂಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Tech giant Apple has slashed prices of products, including iPhone, iPad and Mac, India from July 1, as it looks to pass on the benefits accrued from the recently rolled out GST to customers. to knwo more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot