ಇನ್ಮುಂದೆ ಭಾರತದಲ್ಲೇ ತಯಾರಾಗಲಿವೆ ಆಪಲ್‌ ಐಪ್ಯಾಡ್: ಹಾಗಿದ್ರೆ, ಚೀನಾ ಗತಿ ಏನು?

|

ಜಾಗತಿಕವಾಗಿ ಆಪಲ್‌ನ ಐಫೋನ್‌ಗಳು ಭಾರೀ ಜನಮನ್ನಣೆ ಗಳಿಸಿಕೊಂಡಿವೆ. ಅದರಲ್ಲೂ ಜಗತ್ತಿನ ಮೂಲೆಮೂಲೆಯಲ್ಲಿ ಈ ಫೋನ್‌ಗಳ ಮೇಲಿನ ಕ್ರೇಜ್‌ ಹೆಚ್ಚಾಗುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆ ನಡುವೆ ಭಾರತ ಹಾಗೂ ಚೀನಾದ ನಡುವೆ ಟೆಕ್‌ ವಲಯದಲ್ಲಿ ಒಂದು ರೀತಿಯ ಮುಸುಕಿನ ಗುದ್ದಾಟ ಆರಂಭವಾದಂತೆ ಆಗಿದೆ. ಯಾಕೆಂದರೆ ಚೀನಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಕೊರೊನಾ ಲಾಕ್‌ಡೌನ್‌ಗಳ ಪರಿಣಾಮ ಆಪಲ್ ತನ್ನ ಕೆಲವು ಐಪ್ಯಾಡ್‌ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸುತ್ತಿದೆ.

ಚೀನಾ

ಹೌದು, ಆಪಲ್‌ ಚೀನಾದ ಜೊತೆಗಿನ ತನ್ನ ಸಂಬಂಧವನ್ನು ಹಂತಹಂತವಾಗಿ ಕಡಿಮೆ ಮಾಡಿಕೊಂಡು ಬರುತ್ತಿದೆ. ಅದರಲ್ಲೂ ಚೀನಾ ಬಿಟ್ಟರೆ ಭಾರತವೇ ಬೆಸ್ಟ್‌ ಎಂಬಂತೆ ತಯಾರಿಕಾ ಘಟಕಗಳನ್ನು ಭಾರತದಲ್ಲಿ ಸ್ಥಾಪನೆ ಮಾಡುತ್ತಿರುವುದು ಚೀನಾಕ್ಕೆ ದೊಡ್ಡ ಪೆಟ್ಟು ಎಂದು ಹೇಳಬಹುದು. ಅದರಲ್ಲೂ 2025 ರ ವೇಳೆಗೆ ನಾಲ್ಕು ಐಫೋನ್‌ಗಳಲ್ಲಿ ಒಂದನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ ಎನ್ನಲಾಗಿದೆ. ಹಾಗೆಯೇ ಕೆಲವು ಐಪ್ಯಾಡ್‌ಗಳನ್ನು ಭಾರತದಲ್ಲಿ ತಯಾರಿಸಲು ಪ್ಲ್ಯಾನ್‌ ಸಿದ್ಧವಾಗುತ್ತಿದೆ.

ಈ ನಿರ್ಧಾರಕ್ಕೆ ಕಾರಣ ಏನು?

ಈ ನಿರ್ಧಾರಕ್ಕೆ ಕಾರಣ ಏನು?

ಕೊರೊನಾ ಹಿನ್ನೆಲೆ ಹಾಗೂ ಇತರೆ ಕಾರಣಗಳಿಂದ ಚೀನಾದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. ಈ ಕಾರಣಕ್ಕೆ ಆಪಲ್‌ ತಯಾರಿಕಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಮುಂದಾಗಿದೆ. ಹಾಗೆಯೇ ಚೀನಾದಿಂದ ಭಾರತಕ್ಕೆ ಬರಲು ಹಲವು ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ಸಂಬಂಧ ಐಫೋನ್ ತಯಾರಕರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರಂತೆ. ಇಷ್ಟೆಲ್ಲಾ ಆದರೂ ಆಪಲ್‌ ಸಂಕೀರ್ಣ ಡಿವೈಸ್‌ ಆಗಿದ್ದು, ಭಾರತದಲ್ಲಿ ಸಂಪೂರ್ಣವಾಗಿ ತಯಾರಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ.

ಚೀನಾ ನಂತರ ಭಾರತ..

ಚೀನಾ ನಂತರ ಭಾರತ..

2025 ರ ವೇಳೆಗೆ ಆಪಲ್‌ ಭಾರತದಲ್ಲಿ ನಾಲ್ಕು ಐಫೋನ್‌ಗಳಲ್ಲಿ ಒಂದು ಫೋನ್‌ ಅನ್ನು ತಯಾರಿಸಲು ಮುಂದಾಗಿದೆ. ಅದರಂತೆ ಆಪಲ್ 2022 ರ ಅಂತ್ಯದಿಂದ ಐಫೋನ್ 14 ಉತ್ಪಾದನೆಯ ಸುಮಾರು 5 ಪ್ರತಿಶತವನ್ನು ಭಾರತಕ್ಕೆ ವರ್ಗಾಯಿಸಲು ಯೋಜಿಸುವ ಗುರಿಹೊಂದಿದೆ. ಈ ಈ ಪ್ಲ್ಯಾನ್‌ ಯಶಸ್ಸು ಕಂಡರೆ ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿ ಭಾರತ ಹೆಸರುಗಳಿಸಲಿದೆ.

ಹೊಸೂರಿನಲ್ಲಿ ಐಫೋನ್ ಘಟಕ

ಹೊಸೂರಿನಲ್ಲಿ ಐಫೋನ್ ಘಟಕ

ಈ ಎಲ್ಲಾ ಬೆಳವಣಿಗೆಗಳಿಗೆ ಇಂಬು ನೀಡುವಂತೆ ಭಾರತದ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಬೆಂಗಳೂರು ಸಮೀಪದ ಹೊಸೂರಿನಲ್ಲಿ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಹಾಗೆಯೇ ಈ ಮೂಲಕ 60,000 ಜನರಿಗೆ ಉದ್ಯೋಗ ಲಭಿಸಲಿದೆ ಎಂದೂ ಸಹ ಹೇಳಿಕೆ ನೀಡಿದ್ದರು. ಇದಿಷ್ಟೇ ಅಲ್ಲದೆ ರಾಂಚಿ ಮತ್ತು ಹಜಾರಿಬಾಗ್ ಬಳಿಯ ಕನಿಷ್ಠ 6000 ಬುಡಕಟ್ಟು ಮಹಿಳೆಯರಿಗೆ ಐಫೋನ್‌ಗಳನ್ನು ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು.

ಯುಎಸ್‌ ಹಾಗೂ ಚೀನಾಕ್ಕೆ ಆಂತರಿಕ ಕಲಹ

ಯುಎಸ್‌ ಹಾಗೂ ಚೀನಾಕ್ಕೆ ಆಂತರಿಕ ಕಲಹ

ಆಪಲ್ ಸದ್ಯಕ್ಕೆ ಚೀನಾದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿದ್ದು, ಇನ್ನೇನು ಕೆಲವು ವರ್ಷಗಳಲ್ಲಿ ಹಂತಹಂತವಾಗಿ ವಿಯೆಟ್ನಾಂ ಸೇರಿದಂತೆ ಇನ್ನಿತರೆ ದೇಶಗಳಿಗೆ ಉತ್ಪಾದನೆಯನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆಲ್ಲಾ ಕಾರಣವಾಗಿರುವುದು ಯುಎಸ್ ಮತ್ತು ಚೀನಾ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆ. ಅದರಂತೆ ಚೀನಾದಲ್ಲಿ ತಯಾರಿಸಲಾದ ಐಫೋನ್ ಘಟಕಗಳು 2021 ರಲ್ಲಿ ಜಾಗತಿಕ ಸಾಗಣೆಗೆ 95 ಪ್ರತಿಶತದಷ್ಟು ಮತ್ತು 2020 ರಲ್ಲಿ ಸುಮಾರು 98 ಪ್ರತಿಶತದಷ್ಟು ಕೊಡುಗೆ ನೀಡಿವೆ. ಆದರೆ, ಈ ವರ್ಷ 91.2 ರಿಂದ 93.5 ಪ್ರತಿಶತದಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕೊರೊನಾ ಇದ್ದರೂ ಕುಸಿಯದ ಆಪಲ್‌

ಕೊರೊನಾ ಇದ್ದರೂ ಕುಸಿಯದ ಆಪಲ್‌

ಆಪಲ್ ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಆರ್ಥಿಕತೆ ಕುಸಿತವನ್ನು ಎದುರಿಸಿದ್ದರೂ ಶೀಘ್ರಗತಿಯಲ್ಲಿ ಚೇತರಿಸಿಕೊಂಡಿದೆ. ಜಾಗತಿಕ ಮಾರುಕಟ್ಟೆಯ 16 ಪ್ರತಿಶತವನ್ನು ಆಪಲ್‌ ತನ್ನದಾಗಿಸಿಕೊಂಡಿದ್ದು, ಆಪಲ್‌ನ ಐಫೋನ್‌ ವಿಭಾಗದಲ್ಲಿ 32,900ರೂ. ಕ್ಕಿಂತ ಹೆಚ್ಚು ಬೆಲೆಯ ಡಿವೈಸ್‌ಗಳಿಗೆ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಮಾರುಕಟ್ಟೆ ಷೇರು 62 % ನಷ್ಟಿತ್ತು. ಈ ಮೂಲಕ ಗ್ರಾಹಕರು ಉನ್ನತ ಮಟ್ಟದ ಡಿವೈಸ್‌ಗಳಿಗೆ ಇನ್ನೂ ಹೆಚ್ಚು ಖರ್ಚು ಮಾಡಲು ಸಿದ್ಧರಿದ್ದಾರೆ ಎಂದು. ಆಪಲ್‌ ಕಂಡುಕೊಂಡಿದೆ. ಇದೆಲ್ಲದರ ನಡುವೆ ಮೇಡ್ ಇನ್ ಇಂಡಿಯಾ ಐಫೋನ್ 14 ಆಪಲ್‌ನ ಕ್ರೇಜ್ ಅನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿದೆ.

Best Mobiles in India

Read more about:
English summary
Apple to move some iPads production to India from China.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X