ಕಾರು ಅಪಘಾತದಲ್ಲಿ ಗಂಭೀರವಾಗಿದ್ದ ವ್ಯಕ್ತಿ; ಜೀವ ಉಳಿಸಿದ ಆಪಲ್‌ ವಾಚ್‌!

|

ಆಪಲ್‌ನ ಡಿವೈಸ್‌ಗಳು ಕೇವಲ ಕರೆ ಮಾಡಲು ಅಥವಾ ಯಾವುದೇ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಮಾತ್ರವಲ್ಲದೆ ಜೀವ ಉಳಿಸುವ ಮಹತ್ವದ ಕೆಲಸವನ್ನೂ ಸಹ ಮಾಡಿಕೊಂಡು ಬರುತ್ತಿವೆ. ಅದರಲ್ಲೂ ಕೆಲವು ದಿನಗಳ ಹಿಂದೆ ಆಪಲ್‌ ಫೋನ್‌ಗಳು ಅಪಘಾತದಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗಳನ್ನು ಬದುಕುಳಿಸಲು ಸಹಾಯ ಮಾಡಿದ್ದವು. ಇದೀಗ ಆಪಲ್ ವಾಚ್‌ ಸಹ ಓರ್ವ ವ್ಯಕ್ತಿಯ ಜೀವ ಉಳಿಸಿದೆ.

ಕಾರು ಅಪಘಾತದಲ್ಲಿ ಗಂಭೀರವಾಗಿದ್ದ ವ್ಯಕ್ತಿ; ಜೀವ ಉಳಿಸಿದ ಆಪಲ್‌ ವಾಚ್‌!

ಹೌದು, ಆಪಲ್ ವಾಚ್ ಅಥವಾ ಆಪಲ್‌ ಡಿವೈಸ್‌ ಹಲವಾರು ಬಾರಿ ಹಲವರ ಜೀವ ರಕ್ಷಕವಾಗಿ ಕೆಲಸ ಮಾಡಿವೆ. ಇದರಲ್ಲಿನ ತುರ್ತು SOS ಮತ್ತು ಕ್ರ್ಯಾಶ್ ಪತ್ತೆ ಫೀಚರ್ಸ್‌ ಸಾವಿನ ಹತ್ತಿರಕ್ಕೆ ಹೋದವರನ್ನು ರಕ್ಷಣೆ ಮಾಡಿವೆ. ಇದರ ನಡುವೆ ಆಪಲ್‌ ವಾಚ್‌ ಯುಎಸ್‌ನಲ್ಲಿ ಓರ್ವ ವ್ಯಕ್ತಿಯ ಜೀವವನ್ನು ಉಳಿಸಿದೆ. ಈ ವ್ಯಕ್ತಿಯ ಕಾರು ಕಂಬಕ್ಕೆ ಅಪ್ಪಳಿಸಿದ್ದು, ತುರ್ತು ವೈದ್ಯಕೀಯ ನೆರವು ಕೇವಲ ಐದು ನಿಮಿಷಗಳಲ್ಲಿ ಸಿಕ್ಕಿದೆ.

ಏನಿದು ಘಟನೆ?
ಅಮೆರಿಕದ ಇಂಡಿಯಾನಾಪೊಲಿಸ್ ನಲ್ಲಿ ವಾಸವಿರುವ ನೋಲನ್ ಅಬೆಲ್ ಕಾರು ಚಾಲನೆ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದರಲ್ಲೂ ಇದು ಗಂಭೀರ ಅಪಘಾತವಾಗಿದ್ದು, ಅಬೆಲ್ ತೀವ್ರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದರು. ಅದೃಷ್ಟವಶಾತ್, ಅವರ ಕೈಯಲ್ಲಿ ಆಪಲ್ ವಾಚ್ 8 ಸರಣಿ ಇದ್ದುದ್ದರಿಂದ ಪ್ರಾಣ ಉಳಿದಿದೆ.

ಕಾರು ಅಪಘಾತದಲ್ಲಿ ಗಂಭೀರವಾಗಿದ್ದ ವ್ಯಕ್ತಿ; ಜೀವ ಉಳಿಸಿದ ಆಪಲ್‌ ವಾಚ್‌!

ತುರ್ತು SoS ಸೇವೆ
ಅಬೆಲ್ ಅಪಘಾತಕ್ಕೀಡಾಗಿ ತನ್ನ ಪ್ರಾಣಕ್ಕಾಗಿ ಹೋರಾಡುತ್ತಿದ್ದ ಸಂದರ್ಭದಲ್ಲಿ ತನ್ನ ಆಪಲ್ ವಾಚ್‌ನಿಂದ ಒಂದು ವಾಯ್ಸ್‌ ಅನ್ನು ಆಲಿಸುತ್ತಾರೆ. ಅದರಲ್ಲಿ ಕ್ರ್ಯಾಶ್ ಅನ್ನು ಪತ್ತೆಹಚ್ಚಿದ ಆಪಲ್ ವಾಚ್, ನೀವು ಚೆನ್ನಾಗಿದ್ದೀರಾ? ಎಂದು ಕೇಳುತ್ತದೆ. ಈ ನಡುವೆ ಯವುದೇ ಪ್ರತಿಕ್ರಿಯೆ ವಾಚ್‌ಗೆ ಸಿಕ್ಕದಿದ್ದಾಗ SOS ಫೀಚರ್ಸ್‌ ಸಕ್ರಿಯಗೊಂಡು ಅವರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಪ್ರಮುಖ ವಿಷಯ ಎಂದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅಬೆಲ್ ಒಂದು ವಾರದ ಹಿಂದೆಯಷ್ಟೇ ಆಪಲ್ ವಾಚ್ ಖರೀದಿ ಮಾಡಿದ್ದರಂತೆ. ಆದರೆ ಈಗ ಈ ವಾಚ್‌ ಅವರ ಜೀವ ಉಳಿಸಿರುವುದು ಎಲ್ಲರೂ ಸಂತಸ ಪಡುವ ವಿಷಯವಾಗಿದೆ. ಈ ಮೂಲಕ ಅಬೆಲ್ ಕೃತಜ್ಞರಾಗಿದ್ದಾರೆ.

ಕ್ರ್ಯಾಶ್ ಪತ್ತೆ ಹೇಗೆ?
ತುರ್ತು SOS ಅಪಘಾತ ಪತ್ತೆ ಫೀಚರ್ಸ್‌ ಆಗಿದ್ದು, ಇದು ಆಪಲ್‌ ಡಿವೈಸ್‌ಗಳಲ್ಲಿ ಇನ್‌ಬಿಲ್ಟ್‌ ಆಗಿದೆ. ಹೆಸರೇ ಸೂಚಿಸುವಂತೆ ಅಪಘಾತ ಪತ್ತೆ ಫೀಚರ್ಸ್‌ ಮೂಲಕ ನೀವು ಗಂಭೀರವಾದ ಕಾರು ಅಪಘಾತದಲ್ಲೋ ಅಥವಾ ಇನ್ಯಾವುದೋ ಅಪಘಾತಕ್ಕೆ ಒಳಗಾದಾಗ ಈ ಫೀಚರ್ಸ್‌ ಉಪಯೋಗಕ್ಕೆ ಬರುತ್ತದೆ.

ಕಾರು ಅಪಘಾತದಲ್ಲಿ ಗಂಭೀರವಾಗಿದ್ದ ವ್ಯಕ್ತಿ; ಜೀವ ಉಳಿಸಿದ ಆಪಲ್‌ ವಾಚ್‌!

ಐಫೋನ್‌ 14, ಐಫೋನ್‌ 14 ಪ್ರೊ, ಆಪಲ್‌ ವಾಚ್‌ ಅಲ್ಟ್ರಾ, ಆಪಲ್‌ ವಾಚ್‌ ಸೀರಿಸ್‌ 8 ನಂತಹ ಡಿವೈಸ್‌ಗಳು ಕ್ರ್ಯಾಶ್ ಡಿಟೆಕ್ಷನ್ ಸೆನ್ಸರ್‌ಗಳನ್ನು ಹೊಂದಿದ್ದು, ಈ ಸೆನ್ಸರ್‌ಗಳಿಂದ ಲಭ್ಯವಿರುವ ಮಾಹಿತಿಯೊಂದಿಗೆ ಬಳಕೆದಾರರಿಗೆ ಅಪಾಯಗಳನ್ನು ಪತ್ತೆ ಮಾಡಿ ಬೇಕಾದವರಿಗೆ ತಿಳಿಸುವ ಕೆಲಸ ಮಾಡುತ್ತದೆ. ಅದರಲ್ಲೂ ಅಪಘಾತವಾದ ಕೆಲವೇ ಸೆಕೆಂಡುಗಳಲ್ಲಿ ಈ ಫೀಚರ್ಸ್‌ ಆಕ್ಟಿವ್ ಆಗುತ್ತದೆ.

10 ಸೆಕೆಂಡ್‌ ಕಾಯುತ್ತದೆ
ಈ ಫೀಚರ್ಸ್‌ ಇರುವ ಡಿವೈಸ್‌ ಬಳಕೆ ಮಾಡಿದ್ದ ಸಂದರ್ಭದಲ್ಲಿ ಏನಾದರೂ ಅಪಘಾತ ಸಂಭವಿಸಿದರೆ ತಕ್ಷಣವೇ ನೀವು ಚೆನ್ನಾಗಿದ್ದೀರಾ ಎಂದು ಕೇಳುತ್ತದೆ. ಆಗ ಏನಾದರೂ ನೀವು ಪ್ರತಿಕ್ರಿಯೆ ನೀಡಲಿಲ್ಲ ಎಂದರೆ 10 ಸೆಕೆಂಡ್‌ಗಳ ನಂತರ SOS ಫೀಚರ್ಸ್‌ ಆಕ್ಟಿವ್‌ ಆಗುವ ಮೂಲಕ ನಿಮ್ಮನ್ನು ರಕ್ಷಣೆ ಮಾಡಲು ಮುಂದಾಗುತ್ತದೆ. ಅಂದರೆ ಆಟೋಮ್ಯಾಟಿಕ್‌ ಆಗಿ ತುರ್ತು ಕರೆ ಮಾಡುತ್ತದೆ. ಹಾಗೆಯೇ ನಿಮ್ಮ ಸ್ಥಳವನ್ನು ಬೇಕಾದವರ ಜೊತೆಗೆ ಶೇರ್‌ ಮಾಡಿಕೊಳ್ಳುತ್ತದೆ. ಈ ಮೂಲಕ ಈವರೆಗೆ ಅನೇಕ ಜೀವಗಳನ್ನು ಆಪಲ್‌ ಉಳಿಸಿದೆ.

Best Mobiles in India

English summary
Apple Watch 8 Series saves yet another life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X