ವಾಚ್‌ಗೆ ಜಿಯೋ ಸಿಮ್ ಹಾಕಿಕೊಂಡು ಕರೆ ಮಾಡಬಹುದು..!!!

|

ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೀಡುತ್ತಿರುವ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಜಿಯೋ ಮತ್ತೊಂದು ಹೊಸ ಸೇವೆಯನ್ನು ನೀಡುತ್ತಿದೆ. ಇಂದಿನಿಂದ ಜಿಯೋ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸೀರಿಸ್ 3 (GPS + ಸೆಲ್ಯುಲಾರ್) ಅನ್ನು ಮಾರಾಟ ಮಾಡಲು ಆರಂಭಿಸಿದೆ. ಈ ಮೂಲಕ ಆಪಲ್ ವಾಚ್ ನಲ್ಲಿಯೂ ಕರೆ ಮಾಡುವ ಅವಕಾಶವನ್ನು ಪಡೆಯಬಹುದಾಗಿದೆ.

ವಾಚ್‌ಗೆ ಜಿಯೋ ಸಿಮ್ ಹಾಕಿಕೊಂಡು ಕರೆ ಮಾಡಬಹುದು..!!!

ವಿಶ್ವದ ನಂಬರ್ ಒನ್ ಸ್ಮಾರ್ಟ್‌ ವಾಚ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಆಪಲ್ ವಾಚ್ ಇನ್ ಸೆಲ್ಯುಲಾರ್ ಆಯ್ಕೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಜಿಯೋ ತನ್ನ ಬಳಕೆದಾರರಿಗೆ ಹೆಚ್ಚು ಲಾಭವನ್ನು ಮಾಡಿಕೊಡುವ ಸಲುವಾಗಿ ಆಪಲ್ ವಾಚ್ ಸೀರಿಸ್ 3 (GPS + ಸೆಲ್ಯುಲಾರ್) ಅನ್ನು ಮಾರಾಟ ಮಾಡುತ್ತಿದೆ.

ಸಿಮ್ ಹಾಕಬಹುದಾಗಿದೆ:

ಸಿಮ್ ಹಾಕಬಹುದಾಗಿದೆ:

ಗ್ರಾಹಕರು ಕೇವಲ ತಮ್ಮ ಆಪಲ್ ವಾಚ್ ಸೀರಿಸ್ 3ಯನ್ನು ಕೈನಲ್ಲಿ ಕಟ್ಟಿಕೊಂಡು ಎಲ್ಲಿ ಹೋದರೂ ಜನರೊಂದಿಗೆ ಹಾಗೂ ಮಾಹಿತಿಯೊಂದಿಗೆ ಸಂಪರ್ಕದಲ್ಲಿ ಇರಬಹುದಾಗಿದೆ. ಆಪಲ್ ವಾಚ್ ಸೀರಿಸ್ 3 ನಲ್ಲಿ GPS + ಸೆಲ್ಯುಲಾರ್ ಸೇವೆ ಇದ್ದು, ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

ಉಚಿತ ಸೇವೆ:

ಉಚಿತ ಸೇವೆ:

ಜಿಯೋ ಕ್ರಾಂತಿಕಾರಕ ಜಿಯೋ ಎವ್ರೀವೇರ್ ಕನೆಕ್ಟ್ ಸೇವೆಯನ್ನು ತನ್ನ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಚಿತವಾಗಿ ವಾಗಿ ನೀಡಲಿದೆ ಎನ್ನಲಾಗಿದೆ. ಆಪಲ್ ವಾಚ್ ಸೀರಿಸ್ 3 (GPS + ಸೆಲ್ಯುಲಾರ್) ಈಗ ಜಿಯೋದಲ್ಲಿ www.jio.com, ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಮಳಿಗೆಗಳಲ್ಲಿ ದೊರೆಯಲಿದೆ ಎನ್ನಲಾಗಿದೆ.

ಒಂದೇ ನಂಬರ್ ಎರಡಲ್ಲೂ ಬಳಕೆ:

ಒಂದೇ ನಂಬರ್ ಎರಡಲ್ಲೂ ಬಳಕೆ:

ಜಿಯೋದ ಹೊಸ ಚಿಂತನೆಯ ಸೇವೆಯಾದ ಜಿಯೋ ಎವ್ರೀವೇರ್ ಕನೆಕ್ಟ್ ಪಡೆಯುವ ಮೂಲಕ ಜಿಯೋ ಬಳಕೆದಾರರಿಗೆ ತಮ್ಮ ಐಫೋನ್ ಮತ್ತು ಆಪಲ್ ವಾಚ್ ಸೀರಿಸ್ 3 (GPS + ಸೆಲ್ಯುಲಾರ್) ಎರಡರಲ್ಲೂ ಒಂದೇ ಜಿಯೋ ನಂಬರ್ ಬಳಕೆ ಮಾಡಲು ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಐಫೋನ್ ಬೇಕಾಗಿಲ್ಲ;

ಐಫೋನ್ ಬೇಕಾಗಿಲ್ಲ;

ಐಫೋನ್ ಇಲ್ಲದೇ ಇದ್ದರೂ ಕೂಡ ಕರೆ ಮಾಡಲು ಮತ್ತು ಸ್ವೀಕರಿಸಲು, ಜಿಯೋ ಡೇಟಾ ಮತ್ತು ಅಪ್ಲಿಕೇಶನ್‍ಗಳನ್ನು ಬಳಸಲು ಆಪಲ್ ವಾಚ್ ಸೀರಿಸ್ 3 (GPS + ಸೆಲ್ಯುಲಾರ್) ಅವಕಾಶವಿದೆ ಎನ್ನಲಾಗಿದೆ.

ಆಪಲ್ ವಾಚ್ ಸೀರಿಸ್ 3:

ಆಪಲ್ ವಾಚ್ ಸೀರಿಸ್ 3:

ಆಪಲ್ ವಾಚ್ ಸೀರಿಸ್ 3ನಲ್ಲಿ ಬಿಲ್ಟ್ ಇನ್ ಸೆಲ್ಯುಲಾರ್ ಇದ್ದು, ಇದು ಪಕ್ಕದಲ್ಲಿ ಐಫೋನ್ ಇಲ್ಲದೇ ಇದ್ದರೂ ಕೂಡಾ ಕರೆ ಮಾಡಲು, ಸಂದೇಶ ಸ್ವೀಕರಿಸಲು ಅವಕಾಶ ಕಲ್ಪಿಸುತ್ತದೆ. ಹೀಗಾಗಿ ದಿನಪೂರ್ತಿ ಸಂಪರ್ಕದಲ್ಲಿರಬಹುದಾಗಿದೆ.

ಆಪಲ್ ವಾಚ್ ಸೀರಿಸ್ 3 ವಿಶೇಷತೆ:

ಆಪಲ್ ವಾಚ್ ಸೀರಿಸ್ 3 ವಿಶೇಷತೆ:

ಈ ಥರ್ಡ್ ಜನರೇಶನ್ ಆಪಲ್ ವಾಚ್ ಇಂಟಲಿಜೆಂಟ್ ಕೋಚಿಂಗ್ ಫೀಚರ್ ಹೊಂದಿದೆ, ಜಲ ನಿರೋಧಕವಾಗಿದೆ, ಇದು ಎರಡು ಆವೃತ್ತಿಗಳಲ್ಲಿ ದೊರೆಯಲಿದ್ದು, GPS + ಸೆಲ್ಯುಲಾರ್ ಆವೃತ್ತಿಯೊಂದು ಮತ್ತೊಂದು ಕೇವಲ GPS ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ. ಈ ವಾಚ್ ಹಿಂದಿನ ವಾಚ್ ಗಿಂತಲು ಶೇಕಡಾ 70ರಷ್ಟು ವೇಗದ ಡ್ಯುವಲ್ ಕೋರ್ ಪ್ರೊಸೆಸರ್ ಹಾಗೂ ಹೊಸ ವೈರ್‍ ಲೇಸ್ ಚಿಪ್ ಅನ್ನು ಹೊಂದಿವೆ.

ಆಪ್‌ಡೇಟ್ ಬೇಕು:

ಆಪ್‌ಡೇಟ್ ಬೇಕು:

ಆಪಲ್ ವಾಚ್ ಸೀರಿಸ್ 3 (GPS + ಸೆಲ್ಯುಲಾರ್) ಅನ್ನು ಸಕ್ರಿಯಗೊಳಿಸಲು ಗ್ರಾಹಕರು ಮೊದಲು iOS 11.3 ಮತ್ತು ವಾಚ್ OS 4.3 ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ನಂತರ ಐಫೋನ್ > ಜನರಲ್> ಅಬೌಟ್ ಆಂಡ್ ಫಾಲೋ ದಿ ಪ್ರಾಂಪ್ಟ್ ಟು ಅಪ್ಡೇಟ್ ಟು ಲೇಟೆಸ್ಟ್ ಕ್ಯಾರಿಯರ್ ಸೆಟಿಂಗ್ಸ್ ನಲ್ಲಿ ಟ್ಯಾಪ್ ಸೆಟಿಂಗ್ಸ್ ಮಾಡಬೇಕು.

Best Mobiles in India

English summary
Apple Watch Series 3 with built-in cellular arrives. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X