ಅಪ್ಡೇಟ್‌ ಆಗದ ಅಪ್ಲಿಕೇಶನ್‌ಗಳಿಗೆ ಗೇಟ್‌ಪಾಸ್‌ ನೀಡಲು ಮುಂದಾದ ಆಪಲ್‌ ಕಂಪೆನಿ!

|

ಆಪಲ್‌ ಕಂಪೆನಿ ತನ್ನ ಆಪಲ್‌ನ ಆಪ್‌ ಸ್ಟೋರ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಇದಕ್ಕಾಗಿ ಕೆಲವು ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ''ಅಪ್ಲಿಕೇಶನ್‌ ಸುಧಾರಣೆ ಸೂಚನೆ" ಎಂಬ ಶೀರ್ಷಿಕೆಯ ಇಮೇಲ್ ಅನ್ನು ಕಳುಹಿಸಲು ಮುಂದಾಗಿದೆ. ಅಂದರೆ ಈಗಾಗಲೇ ಔಟ್‌ಡೇಟೆಡ್‌ ಆಗಿರುವ ಇನ್ನು ಕೂಡ ಅಪ್ಲೇಡ್‌ ಆಗದ ಅಪ್ಲಿಕೇಶನ್‌ಗಳನ್ನು ಆಪಲ್‌ ಅಪ್ಲಿಕೇಶನ್ ಸ್ಟೋರ್ ಗಳಿಂದ ತೆಗೆದುಹಾಕಲಾಗುತ್ತದೆ ಎಂದು ಎಚ್ಚರಿಸಿದೆ. ಇದರಿಂದ ಈಗಾಗಲೇ ಔಟ್‌ಡೇಟೆಡ್‌ ಆಗಿರುವ ಅಪ್ಲಿಕೇಶನ್‌ಗಳನ್ನು ರಿಮೂವ್‌ ಮಾಡಲಾಗುತ್ತದೆ.

ಆಪಲ್‌

ಹೌದು, ಆಪಲ್‌ ಅಪ್ಲಿಕೇಶನ್‌ ಸ್ಟೋರ್‌ ಔಟ್‌ ಡೇಟೆಡ್‌ ಆಪ್‌ಗಳನ್ನು ಡಿಲೀಟ್‌ ಮಾಡಲು ಮುಂದಾಗಿದೆ. ಇದಕ್ಕಾಗಿ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ "ಅಪ್ಲಿಕೇಶನ್ ಸುಧಾರಣೆ ಸೂಚನೆ" ಎಂಬ ಐಟಲ್‌ ಹೊಂದಿರುವ ಇಮೇಲ್‌ ರವಾನಿಸಿದೆ. ಈ ಇಮೇಲ್‌ನಲ್ಲಿ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಇಮೇಲ್‌ ತಲುಪಿದ ನಂತರವೂ ಅಪ್ಡೇಟ್‌ ಮಾಡಲು ಕೇವಲ 30 ದಿನಗಳ ಸಮಯವನ್ನು ನೀಡುತ್ತದೆ ಎಂದು ವರದಿಯಾಗಿದೆ. ಹಾಗಾದ್ರೆ ಆಪಲ್‌ ಸ್ಟೋರ್‌ ನೀಡಿರುವ ಎಚ್ಚರಿಕೆಯ ಸಂದೇಶವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್‌

ಆಪಲ್‌ ಕಂಪೆನಿ ಆಪ್‌ಸ್ಟೋರ್‌ ಅನ್ನು ಅಪ್ಡೇಟ್‌ ಮಾಡಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಔಟ್‌ಡೇಟೆಡ್‌ ಆಗಿರುವ ಅಪ್ಲಿಕೇಶನ್‌ಗಳನ್ನು ರಿಮೂವ್‌ ಮಾಡಲು ಮುಂದಾಗಿದೆ. ಬಹಳ ದಿನಗಳಿಂದಲೂ ಯಾವುದೇ ಅಪ್ಡೇಟ್‌ ಪಡೆಯದ ಅಪ್ಲಿಕೇಶನ್‌ಗಳು ಆಪ್‌ಸ್ಟೋರ್‌ನಿಂದ ಕಿಕ್‌ಔಟ್‌ ಆಗಲಿವೆ. ಸದ್ಯ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಆಪಲ್‌ ಕಂಪೆನಿ ಎಚ್ಚರಿಕೆಯ ಇಮೇಲ್‌ ರವಾನಿಸಿದೆ. ಈ ಇಮೇಲ್‌ ತಲುಪಿದ 30 ದಿನಗಳಲ್ಲಿ ಅಪ್ಲಿಕೇಶನ್‌ ಅಪ್ಡೇಟ್‌ ಆಗದೆ ಹೋದರೆ ಅಪ್‌ಸ್ಟೋರ್‌ನಿಂದ ಆಪ್ಲಿಕೇಶನ್‌ಗೆ ಗೇಟ್‌ಪಾಸ್‌ ಸಿಗಲಿದೆ.

ಅಪ್ಲಿಕೇಶನ್‌

ಇಮೇಲ್‌ ತಲುಪಿದ ಮೂವತ್ತು ದಿನಗಳ ಒಳಗೆ ಅಪ್ಲಿಕೇಶನ್‌ ಅಪ್ಡೇಟ್‌ ಮಾಡಿದರೆ ಆಪ್ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳು ಮುಂದುವರೆಯಲಿವೆ. ಈ ಅಪ್ಲಿಕೇಶನ್‌ಗಳನ್ನು ಹೊಸ ಬಳಕೆದಾರರು ಡೌನ್‌ಲೋಡ್‌ ಮಾಡಲು ಸಾಧ್ಯವಾಗಲಿದೆ ಎಂದು ಆಪಲ್‌ ಕಂಪೆನಿ ಹೇಳಿದೆ. ಒಂದು ವೇಳೆ ಅಪ್ಲಿಕೇಶನ್‌ ಡೆವಲಪರ್‌ 30 ದಿನಗಳಲ್ಲಿ ಯಾವುದೇ ನವೀಕರಣವನ್ನು ಸಲ್ಲಿಸದಿದ್ದರೆ, ಅಪ್ಲಿಕೇಶನ್ ಅನ್ನು ಆಪ್‌ ಸ್ಟೋರ್‌ನಿಂದ ತೆಗೆದುಹಾಕಲಾಗುತ್ತದೆ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.

ಸ್ಟೋರ್

ಆಪಲ್‌ನ ಆಪ್ ಸ್ಟೋರ್ ಅಪ್ಡೇಟ್‌ ಪೇಜ್‌ನಲ್ಲಿ ಕಂಪನಿಯು ಅಪ್ಲಿಕೇಶನ್‌ಗಳನ್ನು ಮೌಲ್ಯಮಾಪನ ಮಾಡುತ್ತಿರುವುದರ ಬಗ್ಗೆ ವರದಿಯಾಗಿದೆ. ಅದರಂತೆ ಇನ್ನು ಮುಂದೆ ಕಾರ್ಯನಿರ್ವಹಿಸದ ಅಥವಾ ಪ್ರಸ್ತುತ ವಿಮರ್ಶೆ ಮಾರ್ಗಸೂಚಿಗಳನ್ನು ಅನುಸರಿಸದ ಅಥವಾ ಹಳೆಯದಾದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತದೆ ಎಂದು ವರದಿಯಾಗಿದೆ. ಇನ್ನು ಆಪ್‌ಸ್ಟೋರ್‌ನ ಈ ನಿಯಮಕ್ಕೆ ಪ್ರೊಟೊಪಾಪ್ ಗೇಮ್ಸ್ ಡೆವಲಪರ್ ರಾಬರ್ಟ್ ಕಾಬ್ವೆಯಂತಹ ವಿವಿಧ ಅಪ್ಲಿಕೇಶನ್ ತಯಾರಕರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕಾಬ್ವೆ ತನ್ನ ಅಪ್ಲಿಕೇಶನ್‌ ಅನ್ನು ಮಾರ್ಚ್ 2019 ರಿಂದ ಅಪ್ಡೇಟ್‌ ಮಾಡಲ್ಲ ಅನ್ನೊದು ಗಮನಿಸಬೇಕಾದ ಸಂಗತಿಯಾಗಿದೆ.

ಗೂಗಲ್‌

ಇನ್ನು ಇತ್ತೀಚೆಗೆ, ಗೂಗಲ್‌ ಪ್ಲೇ ಸ್ಟೋರ್‌ ಕೂಡ ಯಾವುದೇ ಅಪ್‌ಡೇಟ್‌ಗಳಿಲ್ಲದೆ ನಿಷ್ಕ್ರಿಯವಾಗಿರುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದಕ್ಕೆ ಮುಂದಾಗಿದೆ. ಅಲ್ಲದೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೊಸ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಅದರಂತೆ ಈಗಾಗಲೇ ಔಟ್‌ಡೇಟೆಡ್‌ ಆಗಿರುವ ಅಪ್ಲಿಕೇಶನ್‌ಗಳನ್ನು ರಿಮೂವ್‌ ಮಾಡುತ್ತಾ ಬಂದಿದೆ. ಇತ್ತೀಚಿಗೆ ಬಿಡುಗಡೆಯಾದ ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಎರಡು ವರ್ಷಗಳಿಗಿಂತಲೂ ಹೆಚ್ಚು ಹಳೆಯ ಅಪ್ಲಿಕೇಶನ್‌ಗಳು ಸೆಟ್‌ ಆಗದೆ ಇರುವುದು ಕೂಡ ವರದಿಯಾಗಿದೆ.

ಗೂಗಲ್‌

ಇದಲ್ಲದೆ ಆಂಡ್ರಾಯ್ಡ್‌ ಫೋನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡುವ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡುವುದಕ್ಕೆ ಗೂಗಲ್‌ ಮುಂದಾಗಿದೆ. ಇದಕ್ಕಾಗಿ ಗೂಗಲ್‌ ಪ್ಲೇ ಸ್ಟೋರ್‌ನ ನೀತಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದೆ. ಆಂಡ್ರಾಯ್ಡ್‌ನ ಆಕ್ಸೆಸಿಬಿಲಿಟಿ ನೀತಿಯನ್ನು ಅಪ್ಡೇಟ್‌ ಮಾಡಲಿದೆ. ಅದರಂತೆ ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್‌ ಅನುಮತಿಸುವ ಅಪ್ಲಿಕೇಶನ್‌ಗಳಿಗೆ ಪ್ಲೇ ಸ್ಟೋರ್‌ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. ಇನ್ನು ರೆಕಾರ್ಡಿಂಗ್ ಅಪ್ಲಿಕೇಶನ್‌ಗೆ ಪ್ರವೇಶವಿಲ್ಲದೆ, ಲೋಕಲ್‌ ಕಾಲ್‌ ರೆಕಾರ್ಡಿಂಗ್ ಮಾಡುವುದಕ್ಕೆ ಇನ್ಮುಂದೆ ಸಾಧ್ಯವಾಗುವುದಿಲ್ಲ. ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೇ 11 ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಗೂಗಲ್‌ ವಿವರಿಸಿದೆ.

Best Mobiles in India

Read more about:
English summary
Apple will removee apps that haven’t received updates

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X