ಅಮೀರ್ ಹೇಳಿಕೆ: ಪಾತಾಳಕ್ಕೆ ಕುಸಿದ ಸ್ನ್ಯಾಪ್‌ಡೀಲ್

By Shwetha
|

ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯಿಂದಾಗಿ ದೇಶವನ್ನೇ ಬಿಟ್ಟು ಹೋಗಬೇಕೆನ್ನುವ ನಿರ್ಧಾರಕ್ಕೆ ತಮ್ಮ ಪತ್ನಿ ಬಂದಿರುವುದಾಗಿ ಹೇಳಿಕೆ ನೀಡಿದ್ದ ಅಮೀರ್ ಖಾನ್ ಇಂದು ವ್ಯಾಪಕ ಪ್ರತಿರೋಧವನ್ನು ಗಳಿಸಿಕೊಳ್ಳುತ್ತಿದ್ದಾರೆ. ತಮ್ಮ ಮಗನ ಭವಿಷ್ಯವನ್ನು ನೆನೆದು ಭಾರತದ ಸುಭದ್ರವಾಗಿಲ್ಲ ಎಂಬ ಹೇಳಿಕೆಯನ್ನು ಅಮೀರ್ ರಾಮ್‌ನಾಥ್ ಗೊಯೆಂಕಾ ಎಕ್ಸಲೆನ್ಸಿಯಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನೀಡಿದ್ದರು.

ಓದಿರಿ: ಅಮೀರ್ ಖಾನ್ ವಿವಾದಾತ್ಮಕ ಹೇಳಿಕೆ ಟ್ವಿಟ್ಟರ್‌ನಲ್ಲಿ ಕಟು ಟೀಕೆ

ಅಮೀರ್‌ರ ಈ ಹೇಳಿಕೆ ರಾಷ್ಟ್ರಾದ್ಯಂತ ವ್ಯಾಪಕ ಖಂಡನೆಗೆ ಒಳಗಾಗಿದ್ದು ಸಿನಿ ತಾರೆಯರು, ಜನಸಾಮಾನ್ಯರು ಸೇರಿದಂತೆ ಗಣ್ಯಾತಿಗಣ್ಯರು ಟ್ವಿಟ್ಟರ್‌ನಲ್ಲಿ ಖಂಡನೆಯ ಟ್ವೀಟ್‌ಗಳನ್ನು ಹರಿಯಬಿಡುತ್ತಿದ್ದಾರೆ. ಅಮೀರ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಪ್ರಮುಖ ಉತ್ಪನ್ನಗಳ ಮೇಲೂ ಖಂಡನೆಯ ಬಿಸಿ ತಟ್ಟಿದ್ದು ಅಮೀರ್ ರಾಯಭಾರಿಯಾಗಿರುವ ಯಾವುದೇ ಉತ್ಪನ್ನಗಳ ಖರೀದಿ ಮಾಡಬಾರದು ಎಂಬುದಾಗಿ ಜನರು ಟ್ವೀಟ್ ಮಾಡುತ್ತಿದ್ದಾರೆ. ಅಮೀರ್ ರಾಯಭಾರಿಯಾಗಿರುವ ಸ್ನ್ಯಾಪ್‌ಡೀಲ್ ಕುರಿತಾಗಿ ಜನರು ಟ್ವೀಟ್ ಮಾಡಿದ್ದು ರೀಟೈಲ್ ತಾಣದ ಟೆಕ್ ಮೌಲ್ಯ ಕುಸಿಯುತ್ತಿದೆ.

ಹ್ಯಾಶ್‌ಟ್ಯಾಗ್‌

ಹ್ಯಾಶ್‌ಟ್ಯಾಗ್‌

ಆಪ್‌ವಾಪ್ಸಿ, ನೊ ಟು ಸ್ನ್ಯಾಪ್‌ಡೀಲ್ ಮೊದಲಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಜನರು ಅಮೀರ್ ಖಾನ್ ಹೇಳಿಗೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಅಮೀರ್ ರಾಯಭಾರಿಯಾಗಿರುವ ಸ್ನ್ಯಾಪ್‌ಡೀಲ್‌ನಿಂದ ಉತ್ಪನ್ನಗಳನ್ನು ಖರೀದಿಸಬಾರದು ಎಂಬ ಮಾತು ಕೇಳಿ ಬರುತ್ತದೆ.

ಸ್ನ್ಯಾಪ್‌ಡೀಲ್ ಅಪ್ಲಿಕೇಶನ್‌ ಡಿಲೀಟ್

ಸ್ನ್ಯಾಪ್‌ಡೀಲ್ ಅಪ್ಲಿಕೇಶನ್‌ ಡಿಲೀಟ್

ಈ ಕಾರ್ಯಾಗಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು ತಮ್ಮ ಸೆಲ್‌ ಫೋನ್‌ಗಳಿಂದ ಸ್ನ್ಯಾಪ್‌ಡೀಲ್ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುತ್ತಿರುವ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.

ಕಂಪೆನಿ ಬಾಲಿವುಡ್ ಸ್ಟಾರ್‌ನ ಹೇಳಿಕೆಗೆ ಜೊತೆಯಾಗಿದೆ

ಕಂಪೆನಿ ಬಾಲಿವುಡ್ ಸ್ಟಾರ್‌ನ ಹೇಳಿಕೆಗೆ ಜೊತೆಯಾಗಿದೆ

ಕೆಲವರು ಪ್ರತಿಭಟನಾಕಾರರು ತಮ್ಮ ಟೀಕೆಗಳನ್ನು ವ್ಯಕ್ತಪಡಿಸಿದ್ದು, ಏಕೈಕ ಸ್ಟಾರ್ ಅನ್ನು ನಮೂದಿಸುವ ಮೂಲಕ ಅಪ್ಲಿಕೇಶನ್ ಅನ್ನು ಕೆಳಮುಖವಾಗಿಸಿದ್ದಾರೆ. ಕಂಪೆನಿ ಬಾಲಿವುಡ್ ಸ್ಟಾರ್‌ನ ಹೇಳಿಕೆಗೆ ಜೊತೆಯಾಗಿದೆ ಎಂಬುದು ಬಳಕೆದಾರರ ಟೀಕೆಯಾಗಿದೆ.

ಸ್ನ್ಯಾಪ್‌ಡೀಲ್ ಅಧಿಕಾರಿ ವಲಯ

ಸ್ನ್ಯಾಪ್‌ಡೀಲ್ ಅಧಿಕಾರಿ ವಲಯ

ಈ ಸ್ಥಿತಿಯ ಬಗ್ಗೆ ನಾವು ಯಾವುದೇ ಕಾಮೆಂಟ್‌ಗಳನ್ನು ಮಾಡಲು ಇಚ್ಛಿಸುವುದಿಲ್ಲ ಎಂದು ಸ್ನ್ಯಾಪ್‌ಡೀಲ್ ಅಧಿಕಾರಿ ವಲಯ ತಿಳಿಸಿದೆ.

ಸ್ನ್ಯಾಪ್‌ಡೀಲ್ ವಿರುದ್ಧ

ಸ್ನ್ಯಾಪ್‌ಡೀಲ್ ವಿರುದ್ಧ

ಬಳಕೆದಾರರು ಸ್ನ್ಯಾಪ್‌ಡೀಲ್ ವಿರುದ್ಧ ಟ್ವಿಟ್ಟರ್‌ನಲ್ಲಿ ಯಾವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿ.

ಅನಿಕೇತ್ ಟ್ವೀಟ್

ಅನಿಕೇತ್ ಟ್ವೀಟ್

ಆತ್ಮೀಯ ಸ್ನ್ಯಾಪ್‌ಡೀಲ್ ನೀವು ಅಮೀರ್ ಖಾನ್‌ರನ್ನು ರಾಯಭಾರಿ ಹುದ್ದೆಯಿಂದ ವಜಾಗೊಳಿಸದ ಹೊರತು ಈ ಸೈಟ್‌ನಿಂದ ಯಾವುದೇ ಉತ್ಪನ್ನಗಳನ್ನು ನಾವು ಖರೀದಿಸುವುದಿಲ್ಲ ಎಂಬುದಾಗಿ ಅನಿಕೇತ್ ಟ್ವೀಟ್ ಮಾಡಿದ್ದಾರೆ.

ಪೂಜಾ ವರ್ಮಾ ಟ್ವೀಟ್

ಪೂಜಾ ವರ್ಮಾ ಟ್ವೀಟ್

ಸ್ನ್ಯಾಪ್‌ಡೀಲ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದ್ದೇನೆ. ಅಮೀರ್ ಖಾನ್ ಚಿತ್ರಗಳನ್ನು ನಾನು ಇನ್ನು ಮುಂದೆ ನೋಡುವುದಿಲ್ಲ. ಅವರ ಹೇಳಿಕೆ ನೋವುಂಟು ಮಾಡಿದೆ ಎಂಬುದಾಗಿ ಪೂಜಾ ವರ್ಮಾ ಟ್ವೀಟ್ ಮಾಡಿರುವುದು

ಬಳಕೆದಾರರು ಎಚ್ಚರಿಸಿದ್ದಾರೆ

ಬಳಕೆದಾರರು ಎಚ್ಚರಿಸಿದ್ದಾರೆ

ಅಮೀರ್‌ರನ್ನು ಕಂಪೆನಿ ರಾಯಭಾರಿಯಾಗಿ ಮುಂದುವರಿಸಬಾರದು ಇಲ್ಲದಿದ್ದರೆ ರೀಟೈಲ್ ತಾಣದಿಂದ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂಬುದಾಗಿ ಬಳಕೆದಾರರು ಎಚ್ಚರಿಸಿದ್ದಾರೆ.

ಉತ್ಪನ್ನಗಳನ್ನು ಖರೀದಿಸುವುದಿಲ್ಲ

ಉತ್ಪನ್ನಗಳನ್ನು ಖರೀದಿಸುವುದಿಲ್ಲ

ಅಮೀರ್ ಖಾನ್‌ರಿಂದಾಗಿ ಸ್ನ್ಯಾಪ್‌ಡೀಲ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದ್ದೇನೆ. ಈ ತಾಣದಿಂದ ಇನ್ನು ಮುಂದೆ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ನಿಕಿಲ್ ಟ್ವೀಟ್

ಅಮೀರ್ ರಾಯಭಾರಿ ಉತ್ಪನ್ನಗಳ ಮೇಲೆ ಬಹಿಷ್ಕಾರ

ಅಮೀರ್ ರಾಯಭಾರಿ ಉತ್ಪನ್ನಗಳ ಮೇಲೆ ಬಹಿಷ್ಕಾರ

ಗುಪ್ತಾ ಜೀ ಎಂಬ ಬಳಕೆದರರು ಟ್ವೀಟ್ ಮಾಡಿದ್ದು ಅಮೀರ್ ಖಾನ್ ಇರುವ ರಾಯಭಾರಿಯಾಗಿರುವ ಸ್ನ್ಯಾಪ್‌ಡೀಲ್, ಟಾಟಾ ಸ್ಕೈ, ಟೈಟಾನ್ ವಾಚ್‌ಗಳನ್ನು ಕೋಕಾಕೋಲವನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

Best Mobiles in India

English summary
The controversy surrounding actor Aamir Khan’s comments on the debate whether India is becoming increasingly intolerant has claimed an unlikely victim -- e-commerce website Snapdeal.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X