ಈ ವಾರದ ಟಾಪ್‌ ಸುದ್ದಿಗಳು

Posted By:

ಗಿಜ್ಬಾಟ್‌ ಪ್ರತಿದಿನವು ಹೊಸ ಹೊಸ ಸುದ್ದಿಗಳನ್ನು ತರುತ್ತಿದೆ. ಆದರಲ್ಲೂ ಕೆಲವು ಸುದ್ದಿಗಳನ್ನು ಓದುಗರು ತುಂಬ ಖಷಿ ಪಟ್ಟು ಅವುಗಳನ್ನು ಶೇರ್‌ ಮಾಡುತ್ತಾರೆ. ಹೀಗಾಗಿ ಈ ವಾರ ಓದುಗರು ಅತಿ ಹೆಚ್ಚು ಓದಿರುವ ಸುದ್ದಿಗಳನ್ನು ತಂದಿದೆ. ಇಲ್ಲಿ ಸುದ್ದಿ ಮತ್ತು ಅವುಗಳನ್ನು ಓದಲು ಲಿಂಕ್‌ಗಳನ್ನು ನೀಡಲಾಗಿದೆ. ಓದಿಲ್ಲದಿದ್ದರೆ ಈ ಸುದ್ದಿಗಳನ್ನು ಓದಿಕೊಳ್ಳಿ.

ಈ ವಾರದ ಟಾಪ್‌ ಸುದ್ದಿಗಳು

ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ಹೆಚ್ಚಾಗುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಹೈದರಾಬಾದಿನ ದಿಲ್‌ಸುಕ್‌ ನಗರದಲ್ಲಿ ಬಾಂಬ್‌ ಸ್ಟೋಟಿಸಿದ್ರು. ಈಗ ಬೆಂಗಳೂರಿನಲ್ಲಿ ಬಾಂಬ್‌ ಸ್ಪೋಟಿಸಿದ್ದಾರೆ.ಆದರೆ ಉಗ್ರರ ಚಟುವಟಿಕೆ ಮೆಟ್ಟಿ ಹಾಕಲು ವಿಶ್ವದ ಅನೇಕ ದೇಶಗಳಲ್ಲಿ ತಂತ್ರಜ್ಞಾನಗಳ ಪ್ರಯೋಗ ನಡೆಯುತ್ತಲೇ ಇದೆ. ಹೀಗಾಗಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ವಿಶ್ವದ ಪ್ರಭಲ ದೇಶಗಳು ಉಪಯೋಗಿಸುವ 5 ಪ್ರಮುಖ ಸಾಧನಗಳನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ : ಉಗ್ರರನ್ನು ಪತ್ತೆ ಮಾಡುವ ಆಧುನಿಕ ಸಾಧನಗಳು

ಈಗ ಏನಿದ್ರೂ 3ಡಿಯದ್ದೇ ಜಮಾನ, 3ಡಿ ಪುಸ್ತಕ, 3ಡಿ ಸಿನೆಮಾ,3ಡಿ ಟೀವಿ ಆಯ್ತು. ಈಗ ಮಹಿಳೆಯರ ಒಳ ಉಡುಪಿನ ಸರದಿ.ಅಮೆರಿಕದ ಬಟ್ಟೆ ತಯಾರಿಸುವ ಕಂಪೆನಿ ಈಗ 3ಡಿ ಪ್ರಿಂಟರ್‌ ಉಪಯೋಗಿಸಿ ಪ್ರಪ್ರಥಮ ಬಾರಿಗೆ ವಾಟರ್‌ಪ್ರೂಫ್‌ ಬಿಕಿನಿ ತಯಾರಿಸಿದೆ. ಈ ಬಿಕಿನಿ ಹೇಗಿದೆ ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ : ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮೊಬೈಲ್‌ ಬಂದ ಮೇಲೆ ಅದಕ್ಕೆ ಸಂಬಂಧಿದಂತೆ ಹೊಸದಾಗಿ ಬರುವಂತಹ ಮಿಥ್‌ಗಳಿಗೆ ಏನು ಕೊರತೆಯಿಲ್ಲ. ಈ ಮಿಥ್‌ಗಳನ್ನೇ ಬಹಳಷ್ಟು ಜನ ನಂಬುತ್ತಾರೆ. ಹಾಗಂತ ಈ ಮಿಥ್‌ಗಳಲ್ಲಿ ಕೆಲವೊಂದು ಸತ್ಯವೂ ಹೌದು. ಹಾಗಾಗಿ ಈ ಮೊಬೈಲ್‌ ಮಿಥ್‌ಗಳು ಯಾವುದು ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ : ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

ವಿಶ್ವದ ಎಲ್ಲಾ ಜನರ ಕುತೂಹಲಕ್ಕೆ ಕಾರಣವಾಗಿದ್ದ ಗೂಗಲ್‌ ಗ್ಲಾಸ್‌ ವೈಶಿಷ್ಟಗಳು ಬಹಿರಂಗಗೊಂಡಿದೆ.ಆಂಡ್ರಾಯ್ಡ್‌ ಓಎಸ್, 5 ಎಂಪಿ ಕ್ಯಾಮೆರಾ,ವೈಫೈ ಬ್ಲೂಟೂತ್‌ 16ಜಿಬಿ ಮೆಮೋರಿ ಸಾಮರ್ಥ್ಯದ ಈ ಗ್ಲಾಸ್‌ ನೋಡಲು ಸುಂದರವಾಗಿದ್ದು ಸುಲಭವಾಗಿ ಇಂಟರ್‌ನೆಟ್‌ ಬಳಸಬಹುದಾಗಿದೆ. ಒಟ್ಟಿನಲ್ಲಿ ನೋಡಲು ಸುಂದರವಾಗಿರುವ ಈ ಗ್ಲಾಸ್‌ನ ಮತ್ತಷ್ಟು ವಿಶೇಷತೆಗಳನ್ನು ತಿಳಿಯುಲು ಇಲ್ಲಿ ಕ್ಲಿಕ್‌ ಮಾಡಿ: ಗೂಗಲ್‌ ಗ್ಲಾಸ್‌ ವೈಶಿಷ್ಟ ಬಹಿರಂಗ

ಸ್ಮಾರ್ಟ್‌ಫೋನ್‌ ಪ್ರೋಸೆಸರ್‌ ವೇಗ ಕಡಿಮೆಯಾದ್ರೆ ನಮಗೆಲ್ಲ ಕಿರಿಕಿರಿ ಆಗುತ್ತದೆ. ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚುಸುವುದು ಹೇಗೆ ಎಂಬುದಕ್ಕೆ ಸಂಬಂಧಿಸಿದಂತೆ ಕೆಲವು ಉಪಯುಕ್ತ ಮಾಹಿತಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಸ್ಮಾರ್ಟ್‌ಫೋನ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ ?

ಬಹಳಷ್ಟು ಮಂದಿಗೆ ಕಾಮಸೂತ್ರವನ್ನು ಓದುಬೇಕೆಂಬ ತುಡಿತವಿರುತ್ತದೆ. ಆದರೆ ಮಡಿವಂತಿಕೆಯಿಂದಾಗಿ ಅವರು ಓದಲು ಸಾಧ್ಯವಾಗದೇ ಹೋಗುತ್ತದೆ .ಹಾಗಾಗಿ ಕಾಮ ಸೂತ್ರವನ್ನು ಓದಬೇಕು ಎಂದು ಹಂಬಲಿಸುವರಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳಿವೆ.ಯಾವುದೆಲ್ಲ ಅಪ್ಲಿಕೇಶನ್‌ಗಳಿವೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಬೇಸಗೆಯ ಬಿಸಿಲಿನ ಝಳಕ್ಕೆ ಕಂಗೆಟ್ಟ ಜನತೆಗೆ ಹೊಸ ಸೋಲಾರ್‌ ಅಂಗಿ ಬಂದಿದೆ. ಈ ಅಂಗಿಯನ್ನು ಧರಿಸಿದ್ರೆ ಒಳಗಡೆ ಕೂಲ್‌ ಕೂಲ್‌ ವಾತವಾರಣ ಸೃಷ್ಟಿಯಾಗಿ ಸೆಕೆಯ ಅನುಭವ ಆಗೋದಿಲ್ವಂತೆ. ಹಾಗಾದ್ರೆ ಆ ಆಂಗಿಯ ವಿಶೇಷತೆ ಏನು? ಆ ಅಂಗಿಯನ್ನು ಕಂಡು ಹುಡುಕಿದ್ದು ಯಾರು? ಬೆಲೆ ಎಷ್ಟು ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಸೋಲಾರ್‌ ಶರ್ಟ್‌ ಹಾಕಿ. ಕೂಲ್‌ ಕೂಲ್‌ ಆಗಿ

ಟ್ವೀಟರ್‌ನಲ್ಲಿ ಫೇಮಸ್ಸಾಗಿರುವ ಕ್ರಿಕೆಟ್ ಆಟಗಾರರ ಮಾಹಿತಿ ಮತ್ತು ಅವರ ಟ್ಬೀಟರ್‌ ವಿಳಾಸ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ : ಟ್ವೀಟರ್‌ನಲ್ಲಿ ಕ್ರಿಕೆಟ್‌ ಆಟಗಾರರುPlease Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot