ಭೂಮಿ ನಾಶವಾದರೂ ನಾವು ಸೇಫ್!!!

  By Shwetha
  |

  ಭೂಮಿಯಂತೆಯೇ ಇರುವ ಇನ್ನೊಂದು ಗ್ರಹವನ್ನು ವಿಜ್ಞಾನಿಗಳು ಕಂಡುಹುಡುಕಿದ್ದಾರೆ. ನಾಸಾದ ಖಗೋಳ ಶಾಸ್ರ್ರಜ್ಞರು ಈ ಅನ್ವೇಷಣೆಯನ್ನು ಮಾಡಿದ್ದು, ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಈ ಅದ್ಭುತ ಅನ್ವೇಷಣೆಯನ್ನು ಮಾಡಿದೆ.

  ಓದಿರಿ: ಕಪ್ಪು ರಂಧ್ರಗಳ ಡಿಕ್ಕಿಯಿಂದ ಹಿಂಸಾತ್ಮಕ ಘಟನೆಗಳು

  ಇನ್ನು ಹೊಸದಾಗಿ ಅನ್ವೇಷಣೆ ಮಾಡಿದ ಗ್ರಹಕ್ಕೆ ಕೆಪ್ಲರ್ 452ಬಿ ಎಂದು ಹೆಸರನ್ನಿರಿಸಲಾಗಿದ್ದು, ನಮ್ಮ ಸೂರ್ಯನಿಗಿಂತಲೂ ಇದು 1.4 ಬಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಭೂಮಿಯಂತೆಯೇ ರಚನೆಯನ್ನು ಈ ಗ್ರಹ ಪಡೆದುಕೊಂಡಿದ್ದು ಭೂಮಿಯಲ್ಲಿ ವಾಸಿಸುವಂತೆಯೇ ಈ ಜೀವಿಗಳ ವಾಸ ಈ ಗ್ರಹದಲ್ಲಿ ಸಾಧ್ಯವಿರುವಂತಹ ಸುದ್ದಿಯಾಗಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗ್ರಾವಿಟಿ ಶಕ್ತಿ

  ಹೆಚ್ಚಿನ ಗ್ರಾವಿಟಿ ಶಕ್ತಿಯನ್ನು ಈ ಗ್ರಹ ಪಡೆದುಕೊಂಡಿದೆ ಎಂಬುದಾಗಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

  1,400 ಬೆಳಕಿನ ವರ್ಷಗಳಷ್ಟು ಹಳೆಯದಾಗಿದೆ

  ಆದ್ದರಿಂದಲೇ ಇದು 1,400 ಬೆಳಕಿನ ವರ್ಷಗಳಷ್ಟು ಹಳೆಯದಾಗಿದೆ ಮತ್ತು ತನ್ನ ಕಕ್ಷೆಗೆ ಮತ್ತು ಗ್ರಹಕ್ಕಿರುವ ದೂರ ಭೂಮಿ ಹಾಗೂ ಸೂರ್ಯನ ನಡುವಿನ ಅಂತರದಷ್ಟೇ ಇದೆ. ಇನ್ನು ಇದರಲ್ಲಿ ನೀರು ಕೂಡ ಇರಬಹುದು ಎಂಬುದು ವಿಜ್ಞಾನಿಗಳ ತರ್ಕವಾಗಿದೆ.

  ಭೂಮಿಯಷ್ಟೇ ಅನುಭವಿ ವರ್ಷ

  ಇನ್ನು ಇದರ ನಕ್ಷತ್ರದ ಗಾತ್ರವನ್ನು ನೋಡಿದಾಗ, ಭೂಮಿಯಷ್ಟೇ ಅನುಭವಿ ವರ್ಷಗಳನ್ನು ಈ ಪ್ಲಾನೆಟ್ ಪಡೆದುಕೊಂಡಿರಬಹುದು.

  60 ಪಟ್ಟು ದೊಡ್ಡದಾಗಿದೆ

  ಇನ್ನು ಭೂಮಿಗಿಂತ ಈ ಗ್ರಹ 60 ಪಟ್ಟು ದೊಡ್ಡದಾಗಿದೆ ಮತ್ತು ಕಲ್ಲುಗಳ ಮೇಲ್ಮೈ ಸಕ್ರಿಯ ಜ್ವಾಲಾಮುಖಿಗಳನ್ನು ಪತ್ತೆಹಚ್ಚಲಾಗಿದೆ.

  ಗಡುಸಾದ ವಾತಾವರಣ

  ಇನ್ನು ಮೋಡಗಳ ತೀಕ್ಷ್ಮ ಮೇಲ್ಮೈಯೊಂದಿಗೆ ಇದು ಭೂಮಿಗಿಂತಲೂ ಹೆಚ್ಚು ಗಡುಸಾದ ವಾತಾವರಣವನ್ನು ಪಡೆದುಕೊಂಡಿರಬಹುದು ಎಂಬುದಾಗಿ ಲೆಕ್ಕಾಚಾರ ಮಾಡಲಾಗಿದೆ.

  ಮನುಷ್ಯರು ನಿವಾಸ ಮಾಡಬಹುದು

  ಮನುಷ್ಯರು ನಿವಾಸ ಮಾಡಬಹುದು ಎಂಬುದನ್ನು ದೃಢೀಕರಿಸುವ ಇನ್ನೊಂದು ಜಾಗವನ್ನು ನಾವು ಕಂಡುಕೊಂಡಿದ್ದೇವೆ ಎಂಬುದು ಸಂತಸದ ವಿಚಾರವಾಗಿದೆ.

  ಭೂಮಿ ಗಾತ್ರದ ಗ್ರಹ

  ಇನ್ನು ಈ ಹಿಂದೆ ಕೂಡ ವಿಜ್ಞಾನಿಗಳು ಭೂಮಿ ಗಾತ್ರದ ಗ್ರಹಗಳನ್ನು ಪತ್ತೆಹಚ್ಚಿದ್ದಾರೆ ಆದರೆ ಇದರಲ್ಲಿರುವ ನಕ್ಷತ್ರಗಳು ಹೆಚ್ಚು ತಂಪು ಅಂತೆಯೇ ಸೂರ್ಯನಿಗಿಂತಲೂ ಸಣ್ಣದಾಗಿ ಹೊರಹೊಮ್ಮಿವೆ.

  ನಾಸಾ ಕೆಪ್ಲರ್ ಸಕ್ಸೆಸಸರ್ ಮಿಶನ್

  2017 ರಲ್ಲಿ ನಾಸಾ ಕೆಪ್ಲರ್ ಸಕ್ಸೆಸಸರ್ ಮಿಶನ್ ಅನ್ನು ಲಾಂಚ್ ಮಾಡುವ ಯೋಜನೆಯಲ್ಲಿದೆ.

  ತೀವ್ರ ಶೋಧನೆ

  ಇನ್ನು ಭೂಮಿಯಂತೆಯೇ ಕಾಣುವ ಹಲವಾರು ಗ್ರಹಗಳಿದ್ದು ಅದಕ್ಕಾಗಿ ತೀವ್ರ ಶೋಧನೆಯನ್ನು ನಾವು ಮಾಡಬೇಕಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

  ಬರಿಯ ಆರಂಭ ಮಾತ್ರ

  ದೀರ್ಘ ಪ್ರಯಾಣದ ಬರಿಯ ಆರಂಭ ಮಾತ್ರ ಇದು ಎಂಬುದಾಗಿ ಕೇಂಬ್ರಿಡ್ಜ್ ಪ್ರೊಫೆಸರ್ ಡಿಡಿಯರ್ ಕ್ವೆಲಾಜ್ ತಿಳಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  On the hunt for extraterrestrial life, astronomers have discovered the "closest thing we have to another planet like Earth..

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more