ಅಸುಸ್‌ ನಿಂದ A3 ಸರಣಿ ಡೆಸ್ಕ್‌ಟಾಪ್‌ಗಳು ಲಾಂಚ್‌; ಬೆಲೆ, ಫೀಚರ್ಸ್‌ ತಿಳಿಯಿರಿ

|

ಅಸುಸ್‌ ಕಂಪೆನಿಯು ವಿವಿಧ ರೀತಿಯಲ್ಲಿ ತಂತ್ರಜ್ಞಾನ ವಲಯದಲ್ಲಿ ಸೇವೆ ನೀಡುತ್ತಾ ಬರುತ್ತಿದೆ. ಅದರಲ್ಲಿ ಪ್ರಮುಖವಾಗಿ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌, ಸರ್ವರ್ ಕಂಪ್ಯೂಟರ್ ಮಾನಿಟರ್‌, ಮದರ್‌ಬೋರ್ಡ್‌ ಇತ್ಯಾದಿ. ಇದರ ನಡುವೆ ಈಗ ಅಸುಸ್‌ನಿಂದ ಅಸುಸ್‌ A3 ಸರಣಿಯ ಎರಡು ಡೆಸ್ಕ್‌ಟಾಪ್‌ಗಳನ್ನು ಅನಾವರಣ ಮಾಡಲಾಗಿದೆ.

ಅಸುಸ್‌

ಹೌದು, ಅಸುಸ್‌ ಭಾರತದಲ್ಲಿ ಅಸುಸ್‌ A3 ಸರಣಿಯ ಅಡಿಯಲ್ಲಿ ಎರಡು ಡೆಸ್ಕ್‌ಟಾಪ್‌ಗಳನ್ನು ಲಾಂಚ್‌ ಮಾಡಿದ್ದು, ಇದಕ್ಕೆ A3402 ಮತ್ತು A3202 ಎಂದು ಹೆಸರಿಸಲಾಗಿದೆ. ಇವು ಅಸುಸ್‌ನ A3 ಸರಣಿಯು 12ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ಗಳಿಂದ ಕಾರ್ಯನಿರ್ವಹಿಸಲಿವೆ. ಹಾಗಿದ್ರೆ ಇವುಗಳ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇವುಗಳಿಗೆ ನಿಗದಿ ಮಾಡಿದ ಬೆಲೆ ಎಷ್ಟು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ ನೋಡಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಅಸುಸ್‌ನ A3402 ಡೆಸ್ಕ್‌ಟಾಪ್ 23.8 ಇಂಚಿನ ವೈಡ್‌ಸ್ಕ್ರೀನ್ ನ್ಯಾನೋ ಎಡ್ಜ್‌ 100 % SRGB ಕಲರ್‌ ಗ್ಯಾಮಟ್‌ ಇರುವ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದರಲ್ಲಿ ಟಚ್‌ಸ್ಕ್ರೀನ್‌ ಸೌಲಭ್ಯ ಸಹ ಇದೆ. ಇನ್ನು ವೀಕ್ಷಣೆಯ ಅನುಭವವನ್ನು ಹೆಚ್ಚಿಸುವ ಉದ್ದೇಶದಿಂದ ವಿಶೇಷವಾದ ಅಸುಸ್‌ ಸ್ಪ್ಲೆಂಡಿಡ್ ಹಾಗೂ Tru2Life ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಅಸುಸ್‌ A3202

ಅದರಂತೆ ಅಸುಸ್‌ A3202 ಡೆಸ್ಕ್‌ಟಾಪ್‌ 21.45 ಇಂಚಿನ ವೈಡ್‌ಸ್ಕ್ರೀನ್ ಡಿಸ್‌ಪ್ಲೇ ಆಯ್ಕೆಯನ್ನು ಪಡೆದುಕೊಂಡಿದ್ದು, ಇದು 88% ಸ್ಕ್ರೀನ್-ಟು-ಬಾಡಿ ರೇಟ್‌ ಹಾಗೂ 100% SRGB ಯ ಕಲರ್‌ ಗ್ಯಾಮಟ್‌ ಅನ್ನು ಹೊಂದಿದೆ. ಇದೂ ಸಹ ಅಸುಸ್‌ ASUS ಸ್ಪ್ಲೆಂಡಿಡ್ ಮತ್ತು Tru2Life ತಂತ್ರಜ್ಞಾನಗಳನ್ನು ಪಡೆದುಕೊಂದ್ದು, ದಇದರ ಮತ್ತೊಂದು ವಿಶೇಷತೆ ಎಂದರೆ ವೈಡ್-ವ್ಯೂ ತಂತ್ರಜ್ಞಾನ. ಈ ಮೂಲಕ ಪೂರ್ಣ ಹೆಚ್‌ಡಿ ರೆಸಲ್ಯೂಶನ್ ಮತ್ತು ಆಂಟಿ-ಗ್ಲೇರ್ ಡಿಸ್‌ಪ್ಲೇ ಜೊತೆಗೆ 178 ಡಿಗ್ರಿಗಳವರೆಗೆ ವೀಕ್ಷಣಾ ಕೋನವನ್ನು ಇದು ನೀಡುತ್ತದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಈ ಎರಡೂ ಡೆಸ್ಕ್‌ಟಾಪ್‌ಗಳು ಇಂಟೆಲ್‌ನ i5 ಮತ್ತು i3 12ನೇ ಜನ್‌ ಪ್ರೊಸೆಸರ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದರೊಂದಿಗೆ SODIMM ಸ್ಲಾಟ್‌ಗಳ ಮೂಲಕ 32GB ವರೆಗಿನ RAM ಅಪ್‌ಗ್ರೇಡ್‌ ಮಾಡಲು ಅವಕಾಶ ಕಲ್ಪಿಸಿಕೊಡಲಿದ್ದು, ಹಾಗೆಯೇ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿವೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ವಿಶೇಷವಾದ ಅಸುಸ್‌ ಸೋನಿಕ್‌ ಮಾಸ್ಟರ್‌ ಪ್ರೀಮಿಯಂ ತಂತ್ರಜ್ಞಾನವನ್ನು ಹೊಂದಿರುವ ಇವು ಡಾಲ್ಬಿ ಅಟ್ಮಾಸ್ ಮೂಲಕ ಅದ್ಭುತವಾದ ಧ್ವನಿಯನ್ನು ನೀಡಲಿದೆ. ಹಾಗೆಯೇ ಆಡಿಯೊ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಇದು ಸಂಯೋಜಿಸುತ್ತದೆ. ಇನ್ನು ಉನ್ನತ ಗುಣಮಟ್ಟದ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಹೊಸ ಸುಧಾರಿತ ಬಾಸ್ ರಿಫ್ಲೆಕ್ಸ್ ವಿನ್ಯಾಸವನ್ನು ಇವು ಪಡೆದಿದ್ದು. ಇವುಗಳ ಮೂಲಕ ಫೋಟೋ ಎಡಿಟಿಂಗ್ ಸಾಫ್ಟ್‌ವೇರ್‌ಗಳನ್ನು ರನ್‌ ಮಾಡಬಹುದು ಹಾಗೂ ಕೆಲವು ಕ್ಯಾಶುಯಲ್ ಗೇಮಿಂಗ್‌ಗಳನ್ನು ಆಡಬಹುದಾಗಿದೆ.

ಹೆಚ್‌ಡಿಎಂಐ ಇನ್ ಪೋರ್ಟ್‌

ಇದರಲ್ಲಿ ಹೆಚ್‌ಡಿಎಂಐ ಇನ್ ಪೋರ್ಟ್‌ ಆಯ್ಕೆ ನೀಡಲಾಗಿದ್ದು, ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಇದನ್ನು ಒದಗಿಸಲಾಗಿದೆ. ಅಂತೆಯೇ ಮತ್ತೊಂದು ಬಾಹ್ಯ ಪ್ರದರ್ಶನವಾಗಿ ಇದನ್ನು ಬಳಕೆ ಮಾಡಬಹುದು. ಅಂದರೆ ಲ್ಯಾಪ್‌ಟಾಪ್‌ಗಳು, ಗೇಮಿಂಗ್ ಕನ್ಸೋಲ್‌ಗಳು ಅಥವಾ ಇತರ ಪೋಷಕ ಡಿವೈಸ್‌ಗಳಿಗೆ ಇದನ್ನು ಸಂಪರ್ಕಿಸಿಕೊಳ್ಳಬಹುದು.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಸುಸ್‌ A3 ಸರಣಿಯ ಈ ಡೆಸ್ಕ್‌ಟಾಪ್‌ಗಳಲ್ಲಿ A3202 ಡೆಸ್ಕ್‌ಟಾಪ್‌ಗೆ 54,990ರೂ. ಗಳು ಹಾಗೂ A3402 ಡೆಸ್ಕ್‌‌ಟಾಪ್‌ಗೆ 65,990 ರೂ. ಗಳನ್ನು ನಿಗದಿ ಮಾಡಲಾಗಿದೆ. ಇನ್ನು ಭಾರತೀಯ ಗ್ರಾಹಕರು ಅಸುಸ್‌ನ ಇ-ಶಾಪ್ ಮತ್ತು ಅಸುಸ್‌ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. ಅದಲ್ಲದೆ, ಈ ಡೆಸ್ಕ್‌ಟಾಪ್‌ಗಳು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿಯೂ ಲಭ್ಯ ಇವೆ.

Best Mobiles in India

English summary
Asus A3 Series Desktops Launched: Price and Features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X