ಭಾರತದಲ್ಲಿ ಆಸುಸ್‌ ಎಕ್ಸ್‌ಪರ್ಟ್‌ಬುಕ್‌ ಸರಣಿ ಲಾಂಚ್‌; ಆಕರ್ಷಕ ಫೀಚರ್ಸ್‌!

|

ಆಸುಸ್‌ ಕಂಪೆನಿಯು ವಿಶ್ವದ ಅತ್ಯುತ್ತಮ ಮದರ್‌ಬೋರ್ಡ್‌ಗಳು ಮತ್ತು ಉತ್ತಮ ಗುಣಮಟ್ಟದ ವೈಯಕ್ತಿಕ ಕಂಪ್ಯೂಟರ್‌ಗಳು, ಮಾನಿಟರ್‌ಗಳು, ಗ್ರಾಫಿಕ್ಸ್ ಕಾರ್ಡ್‌ಗಳು, ರೂಟರ್‌ಗಳು ಹಾಗೂ ಇನ್ನಿತರೆ ತಂತ್ರಜ್ಞಾನ ಸಂಬಂಧಿತ ಗ್ಯಾಜೆಟ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇದರ ಭಾಗವಾಗಿಯೇ ಈಗ ಭಾರತದಲ್ಲಿ ಆಸುಸ್‌ ಎಕ್ಸ್‌ಪರ್ಟ್‌ಬುಕ್ ಲ್ಯಾಪ್‌ಟಾಪ್‌ ಸರಣಿಯನ್ನು (ExpertBook Laptop Series ) ಲಾಂಚ್‌ ಮಾಡಲಾಗಿದೆ. ಈ ಲ್ಯಾಪ್‌ಟಾಪ್‌ B2, B3, B7, ಮತ್ತು B5 ಸರಣಿಯಲ್ಲಿ ಲಭ್ಯವಿದೆ.

ಎಕ್ಸ್‌ಪರ್ಟ್‌ಬುಕ್

ಹೌದು, ಆಸುಸ್‌ ಎಕ್ಸ್‌ಪರ್ಟ್‌ಬುಕ್ ಲ್ಯಾಪ್‌ಟಾಪ್‌ಗಳು ಇಂಟೆಲ್‌ 12 ನೇ ಜನ್‌ CPU ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಎಲ್ಲಾ ಸರಣಿಯ ಲ್ಯಾಪ್‌ಟಾಪ್‌ಗಳು ಇಂಟಿಗ್ರೇಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಟ್ರಸ್ಟೆಡ್ ಪ್ಲಾಟ್‌ಫಾರ್ಮ್ ಮಾಡ್ಯೂಲ್ (TPM) 2.0 ಚಿಪ್, ಇಂಟಿಗ್ರೇಟೆಡ್ ಕೆನ್ಸಿಂಗ್ಟನ್ ನ್ಯಾನೋ ಲಾಕ್ ಸ್ಲಾಟ್ ಹಾಗೂ ಇನ್ನಿತರೆ ಹೆಚ್ಚಿನ ಭದ್ರತಾ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಹಾಗಿದ್ರೆ, ಈ ಲ್ಯಾಪ್‌ಟಾಪ್‌ಗಳ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸೋ.

ಆಸುಸ್‌ ಎಕ್ಸ್‌ಪರ್ಟ್‌ಬುಕ್ B7 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B7 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B7 ಲ್ಯಾಪ್‌ಟಾಪ್‌ 14 ಇಂಚಿನ ಕ್ಯೂಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆಯನ್ನು ಹೊಂದಿದ್ದು, ಇದು 16:10 ಆಕಾರ ಅನುಪಾತ ಪಡೆದುಕೊಂಡಿದೆ. ಹಾಗೆಯೇ ಖಾಸಗಿ ವ್ಯೂ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರುವುದು ಇದರ ವಿಶೇಷತೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಅನ್ನು 360 ಡಿಗ್ರಿ ವರೆಗೆ ತಿರುಗಿಸುವ ಹಿಂಜ್ ಫೀಚರ್ಸ್‌ ಆಯ್ಕೆ ಹೊಂದಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಈ ಲ್ಯಾಪ್‌ಟಾಪ್‌ ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ಬಲದೊಂದಿಗೆ 12 ನೇ ಜನ್ ಇಂಟೆಲ್‌ ಕೋರ್‌ i7 28 ವ್ಯಾಟ್ P ಸರಣಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 64 GB RAM ವರೆಗೆ ಬೆಂಬಲ ನೀಡಲಿದೆ. ಇದರೊಂದಿಗೆ 5G ಕನೆಕ್ಟಿವಿಟಿ ಆಯ್ಕೆ, ವೈ-ಫೈ 6 ಹಾಗೂ ಬ್ಲೂಟೂತ್ ಆವೃತ್ತಿ 5.2 ನಲ್ಲಿ ಕೆಲಸ ಮಾಡಲಿದೆ.

ಆಸುಸ್‌ ಎಕ್ಸ್‌ಪರ್ಟ್‌ಬುಕ್ B5 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B5 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B5 ಸರಣಿ ಲ್ಯಾಪ್‌ಟಾಪ್‌ನಲ್ಲಿ B5402CBA ಹಾಗೂ B5402FBA ಎಂಬ ಎರಡು ಮಾಡೆಲ್‌ ಇವೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ 400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ. ಜೊತೆಗೆ 16:9 ಆಕಾರ ಅನುಪಾತ ಇದ್ದು, ಆಂಟಿ ಗ್ಲೇರ್ ಫೀಚರ್ಸ್‌ನಿಂದಾಗಿ ಈ ಡಿಸ್‌ಪ್ಲೇ ವಿಶೇಷವಾಗಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಈ ಲ್ಯಾಪ್‌ಟಾಪ್‌ ಇಂಟೆಲ್ ಐರಿಸ್ x ಗ್ರಾಫಿಕ್ಸ್‌ನೊಂದಿಗೆ ಇಂಟೆಲ್ 12 ನೇ ಜನ್ ಕೋರ್ TM i7-1260P ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 40GB RAM ಹಾಗೂ 2TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ಆಸುಸ್‌ ಎಕ್ಸ್‌ಪರ್ಟ್‌ಬುಕ್ B3 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B3 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B3 ಸರಣಿಯ ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ನೀಲಿ ಬೆಳಕಿನಿಂದ ರಕ್ಷಣೆ ನೀಡುತ್ತದೆ. ಹಾಗೆಯೇ 360 ಡಿಗ್ರಿ ಹಿಂಜ್ ಆಯ್ಕೆ ಇರುವುದು ವಿಶೇಷ. ಜೊತೆಗೆ ಇದನ್ನು ಮಲ್ಟಿಮೋಡ್‌ ಡಿವೈಸ್‌ ಆಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಈ ಲ್ಯಾಪ್‌ಟಾಪ್‌ 12 ನೇ ಜನ್‌ ಕೋರ್‌ i7 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 32GB RAM ಹಾಗೂ 2TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನುಳಿದಂತೆ ಈ ಡಿವೈಸ್‌ ವೆಬ್ ಕ್ಯಾಮೆರಾ, AI ನಾಯ್ಸ್‌ಕ್ಯಾನ್ಸಲಿಂಗ್‌ ತಂತ್ರಜ್ಞಾನ ಸೇರಿದಂತೆ ಇತರೆ ಫೀಚರ್ಸ್‌ ಹೊಂದಿದೆ.

ಆಸುಸ್‌ ಎಕ್ಸ್‌ಪರ್ಟ್‌ಬುಕ್ B2 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B2 ಫೀಚರ್ಸ್‌

ಆಸುಸ್‌ ಎಕ್ಸ್‌ಪರ್ಟ್‌ಬುಕ್ B2 ಲ್ಯಾಪ್‌ಟಾಪ್‌ 14 ಇಂಚು ಮತ್ತು 15.6 ಇಂಚಿನ ಎರಡು ವೇರಿಯಂಟ್ ಡಿಸ್‌ಪ್ಲೇ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಐಆರ್‌ ಹೆಚ್‌ಡಿ ವೆಬ್ ಕ್ಯಾಮೆರಾದೊಂದಿಗೆ ಪ್ಯಾಕ್‌ ಆಗಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಲ್ಯಾಪ್‌ಟಾಪ್‌ 12 ನೇ ಜನ್‌ ಇಂಟೆಲ್‌ vಪ್ರೊ ಪ್ರೊಸೆಸರ್‌ಗಳೊಂದಿಗೆ ಕೋರ್ i3 ಮತ್ತು i7 ಎಂಬ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. ಜೊತೆಗೆ ಇದು 64GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, AI ನಾಯ್ಸ್‌ ಕ್ಯಾನ್ಸಲಿಂಗ್‌ ತಂತ್ರಜ್ಞಾನ ಮತ್ತು ಫೇಸ್‌ ಫೈಂಡ್‌ ಫೀಚರ್ಸ್‌ನೊಂದಿಗೆ ವೆಬ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಆಸುಸ್‌ ಎಕ್ಸ್‌ಪರ್ಟ್‌ಬುಕ್ B9 ಹಾಗೂ B14

ಆಸುಸ್‌ ಎಕ್ಸ್‌ಪರ್ಟ್‌ಬುಕ್ B9 ಹಾಗೂ B14

ಆಸುಸ್‌ ಎಕ್ಸ್‌ಪರ್ಟ್‌ಬುಕ್ B9 ಹಾಗೂ B14 ಲ್ಯಾಪ್‌ಟಾಪ್‌ 12 ನೇ ಜನ್‌ ಇಂಟೆಲ್‌ ಕೋರ್‌ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 48 GB RAM ಜೊತೆಗೆ ಹೈಬ್ರಿಡ್ SSD + HDD ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿವೆ. ಈ ಲ್ಯಾಪ್‌ಟಾಪ್‌ಗಳು ಸಹ ಎರಡು ಮಾರ್ಗದ AI ನಾಯ್ಸ್‌ ಕ್ಯಾನ್ಸಲಿಂಗ್ ಫೀಚರ್ಸ್‌ ಹೊಂದಿರುವುದು ವಿಶೇಷ. ಈ ಎಲ್ಲಾ ಲ್ಯಾಪ್‌ಟಾಪ್‌ಗಳು ಯಾವಾಗ ಎಷ್ಟು ಬೆಲೆಗೆ ಲಭ್ಯವಾಗುತ್ತವೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Best Mobiles in India

English summary
Asus ExpertBook Laptop Series B2, B3, B7, B5 with Intel 12th Gen CPU Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X