ಅಸುಸ್‌ನಿಂದ ಹೊಸ ಲ್ಯಾಪ್‌ಟಾಪ್‌; ಕನ್ನಡಕ ಇಲ್ಲದೆ 3D ವೀಕ್ಷಣೆ ಲಭ್ಯ!

|

ಈಗಂತೂ ಬಹುಪಾಲು ಮಂದಿ ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಲ್ಯಾಪ್‌ಟಾಪ್‌ ಹೊಂದಿರುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದ ಅಥವಾ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಅದಕ್ಕೆ ಬೆಂಬಲ ನೀಡುವ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿಯೇ ಲಭ್ಯ ಇವೆ. ಅದೇ ರೀತಿ ಪ್ರಮುಖ ಕಂಪೆನಿಗಳು ಸಹ ಪ್ರಮುಖ ಫೀಚರ್ಸ್‌ಗಳ ಆಧಾರದ ಮೇಲೆ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇದರ ಭಾಗವಾಗಿಯೇ ಅಸುಸ್‌ ಇತರೆ ಬ್ರ್ಯಾಂಡ್‌ಗಳಿಂತ ಭಿನ್ನವಾಗಿ ವೃತ್ತಿಪರರನ್ನು ಗುರಿಯಾಗಿಸಿಕೊಂಡು ಹೊಸ ಲ್ಯಾಪ್‌ಟಾಪ್‌ ಒಂದನ್ನು ಪರಿಚಯಿಸಿದೆ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ವಿಭಾಗದಲ್ಲಿ ಸದ್ಯಕ್ಕೆ ಫೋಲ್ಡಬಲ್‌, 360 ಡಿಗ್ರಿ ರೊಟೇಟ್‌ ಹಾಗೂ ಇನ್ನಿತರೆ ಶೈಲಿಯಲ್ಲಿ ಹೆಚ್ಚಿನ ಆಕರ್ಷಕ ಶೈಲಿ ಪಡೆದುಕೊಂಡಿವೆ. ಇವೆಲ್ಲವನ್ನೂ ಮೀರಿಸುವ ಹಾಗೆ ಅಸುಸ್‌ ವಿಭಿನ್ನ ಲ್ಯಾಪ್‌ಟಾಪ್‌ ಆದ ಅಸುಸ್‌ ಪ್ರೊ ಆರ್ಟ್‌ ಸ್ಟುಡಿಯೋ ಬುಕ್‌ 16 3D (Asus ProArt Studiobook 16 3D OLED) ಅನ್ನು ಪರಿಚಯಿಸಿದೆ. ಅದರಂತೆ ಈ ಲ್ಯಾಪ್‌ಟಾಪ್‌ 13 ನೇ ಜನ್ HX CPU ಮೂಲಕ ಕಾರ್ಯನಿರ್ವಹಿಸುವುದು ಮತ್ತಷ್ಟು ವಿಶೇಷ. ಹಾಗಿದ್ರೆ, ಈ ಲ್ಯಾಪ್‌ಟಾಪ್‌ನಲ್ಲಿ 3D ವೀಕ್ಷಣೆಗೆ ಗ್ಲಾಸ್ ಅವಶ್ಯಕತೆ ಇದೆಯೇ?,ಯಾವಾಗ ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಅಸುಸ್‌ ಪ್ರೊಆರ್ಟ್‌ಸ್ಟುಡಿಯೋ ಬುಕ್‌ 16 3D ಲ್ಯಾಪ್‌ಟಾಪ್ 16 ಇಂಚಿನ 3.2K OLED ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಇದು ನಿಮ್ಮ ಕಣ್ಣಿಗೆ ಇತರೆ 3D ಬೆಂಬಲಿಸುವ ಯಾವುದೇ ಗ್ಲಾಸ್ ಧರಿಸದೇ ಈ ಲ್ಯಾಪ್‌ಟಾಪ್‌ನ ಸಾಮಾನ್ಯ ಡಿಸ್‌ಪ್ಲೇನಲ್ಲಿಯೇ 3D ವೀಕ್ಷಣೆ ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಒಂದು ಬಟನ್‌ ಆಯ್ಕೆ ನೀಡಲಾಗಿದೆ. ಈ ಲ್ಯಾಪ್‌ಟಾಪ್‌ನ ಡಿಸ್‌ಪ್ಲೇ 120 ಹರ್ಟ್ಜ್ ರಿಫ್ರೆಶ್ ರೇಟ್‌ ಆಯ್ಕೆ ಹೊಂದಿದ್ದು, ಗೇಮರ್‌ಗಳಿಗೆ ಉತ್ತಮವಾದ ಆಯ್ಕೆಯಾಗಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಅಸುಸ್‌ ಪ್ರೊ ಆರ್ಟ್‌ಸ್ಟುಡಿಯೋ ಬುಕ್‌ 16 3D ಲ್ಯಾಪ್‌ಟಾಪ್‌ ಇಂಟೆಲ್‌ನ ಹೊಸ 13 ನೇ ಜನ್ HX ಸಿಪಿಯು ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಎನ್ವಿಡಿಯಾದ RTX 4000 ಗ್ರಾಫಿಕ್ಸ್‌ ನ ಶಕ್ತಿ ಪಡೆದುಕೊಂಡಿದೆ. ಇದರೊಂದಿಗೆ 64 GB RAM ಹಾಗೂ 8 TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದೆ.

ಪ್ರಾದೇಶಿಕ

ಅಸುಸ್‌ ಈ ಹೊಸ ತಂತ್ರಜ್ಞಾನವನ್ನು ಪ್ರಾದೇಶಿಕ ದೃಷ್ಟಿ (spatial vision)ಎಂದು ಕರೆದಿದ್ದು, ಇದು ಮೂಲತಃ ಕಣ್ಣಿನ ಟ್ರ್ಯಾಕಿಂಗ್ ಮತ್ತು ಲೆಂಟಿಕ್ಯುಲರ್ ಲೆನ್ಸ್‌ಗಳ ಮೇಲೆ ಕಾರ್ಯನಿರ್ವಹಿಸಲಿದೆ. ಹೀಗಾಗಿ ನಿಮ್ಮ ಕಣ್ಣಿಗೆ ಒಂದೇ ಸಮಯದಲ್ಲಿ ಎರಡು ಪ್ರತ್ಯೇಕ ಚಿತ್ರಗಳನ್ನು ಡಿಸ್‌ಪ್ಲೇ ಮಾಡುವ ಈ ಲ್ಯಾಪ್‌ಟಾಪ್‌ನಲ್ಲಿ ಸಂಪೂರ್ಣ 3D ವೀಕ್ಷಣೆಗೆ ಯಾವುದೇ ರೀತಿಯ ಕನ್ನಡಕದ ಅಗತ್ಯವಿಲ್ಲ, ಈ ಮೂಲಕ ನೀವು 3D ಮಾದರಿಗಳನ್ನು ಅಥವಾ 3D ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಅಸುಸ್‌

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಅಸುಸ್‌ನ ಈ ಕಲ್ಪನೆಯು ನಿಖರವಾಗಿ ಹೊಸದೇನಲ್ಲ. ಏಸರ್ ಕಳೆದ ಕೆಲವು ವರ್ಷಗಳಿಂದ ತನ್ನ ಪ್ರಾದೇಶಿಕ ಪ್ರಯೋಗಾಲಯದ (SpatialLabs) ತಂತ್ರಜ್ಞಾನವನ್ನು ನಿರಂತರವಾಗಿ ಪರೀಕ್ಷಿಸಿಕೊಂಡು ಬರುತ್ತಿದೆ. ಇದೇ ತಂತ್ರಜ್ಞಾನವನ್ನು ಕಳೆದ ವರ್ಷ ಗೇಮಿಂಗ್ ನೋಟ್‌ಬುಕ್‌ಗೆ ತರಲಾಗಿತ್ತು. ಆದರೆ, ಈಗ ವಿಡಿಯೋ ಹಾಗೂ ಚಿತ್ರಗಳ ವೀಕ್ಷಣೆಯಲ್ಲೂ ಈ ಮಾರ್ಗ ಅನುಸರಿಸಲು ಮುಂದಾಗಿರುವುದು ವಿಶೇಷವೇ ಹೌದು.

ತಂತ್ರಜ್ಞಾನ

ಇನ್ನು ಈ ರೀತಿಯ ತಂತ್ರಜ್ಞಾನದ ಆಧಾರದ ಮೇಲೆ ಅಸುಸ್‌ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಪ್ರಮುಖವಾಗಿ ಅಸುಸ್‌ ವೃತ್ತಿಪರರನ್ನು ಕೇಂದ್ರೀಕರಿಸಿಕೊಂಡಿರುತ್ತದೆ. ಅದಾಗ್ಯೂ ಗೇಮರ್‌ಗಳು ಇದರಿಂದ ಹೆಚ್ಚಿನ ಅನುಕೂಲ ಪಡೆಯುತ್ತಾ ಬರುತ್ತಿರುವುದು ಮತ್ತೊಂದು ವಿಷಯ.

ಒಂದು ಬಾರಿಗೆ ಓರ್ವರು ಮಾತ್ರ ವೀಕ್ಷಿಸಬಹುದು

ಒಂದು ಬಾರಿಗೆ ಓರ್ವರು ಮಾತ್ರ ವೀಕ್ಷಿಸಬಹುದು

ಈ ಹೊಸ ಫೀಚರ್ಸ್‌ನಲ್ಲಿ ಲ್ಯಾಪ್‌ಟಾಪ್‌ ವೀಕ್ಷಣೆ ಮಾಡುವಾಗ ಓರ್ವ ವ್ಯಕ್ತಿ ಮಾತ್ರ ವೀಕ್ಷಣೆ ಮಾಡಬಹುದಾಗಿದೆ. ಯಾಕೆಂದರೆ ಒಂದು ಪೂರ್ಣ ಡಿಸ್‌ಪ್ಲೇಯನ್ನು ಏಕಕಾಲದಲ್ಲಿ ಓರ್ವ ವ್ಯಕ್ತಿ ವೀಕ್ಷಣೆ ಮಾಡಿದಾಗ ನೈಜ 3D ಅನುಭವ ಸಿಗುತ್ತದೆ. ಮೂರು ಅಥವಾ ನಾಲ್ಕು ಜನ ಒಟ್ಟಾಗಿ ವೀಕ್ಷಣೆ ಮಾಡುತ್ತೇವೆ ಎಂದರೆ ಸಾಧ್ಯವಾಗುವುದಿಲ್ಲ ಎಂದು ಕಂಪೆನಿ ಮಾಹಿತಿ ನೀಡಿದೆ. ಇನ್ನು ಈ ಡಿವೈಸ್‌ನ ಬೆಲೆ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಆದರೆ, 3D ತಂತ್ರಜ್ಞಾನ ಇರುವ ಈ ಲ್ಯಾಪ್‌ಟಾಪ್‌ಗೆ ಖಂಡಿತಾ ಬೆಲೆ ಸ್ವಲ್ಪ ಹೆಚ್ಚಾಗಿಯೇ ಇರಲಿದೆ ಎನ್ನುವುದನ್ನು ನಿರೀಕ್ಷಿಸಬಹುದು.

ಅಸುಸ್‌

ಅಸುಸ್‌ ಪ್ರೊಆರ್ಟ್‌ಸ್ಟುಡಿಯೋ ಬುಕ್‌ 16 3D ನಲ್ಲಿ ಅಲ್ಲದೆ, ಇದೇ ಫಿಚರ್ಸ್‌ ವಿವೋಬುಕ್‌ ಪ್ರೊ ನೋಟ್‌ಬುಕ್‌ನಲ್ಲಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬದಿದೆ. ಅದರಲ್ಲೂ ಕೈಗೆಟುಕುವ ಮತ್ತು ಕಡಿಮೆ ಪ್ರೀಮಿಯಂ ಸಾಧನವಾಗಿ ಇದು ಗುರುತಿಸಿಕೊಳ್ಳಲಿದೆ.

Best Mobiles in India

English summary
Asus introduces ProArt Studiobook 16 laptop with 3D technology.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X