ಭಾರತದಲ್ಲಿ ಅಸುಸ್‌ನಿಂದ ಹೊಸ ಲ್ಯಾಪ್‌ಟಾಪ್‌ ಲಾಂಚ್‌! ಆಕರ್ಷಕ ವಿನ್ಯಾಸ!

|

ಭಾರತದ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಅಸುಸ್‌ ಕಂಪೆನಿ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳ ಮೂಲಕ ಗ್ರಾಹಕರ ಗಮನಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಅಸುಸ್‌ ವಿವೋಬುಕ್‌ 14 (X1402) ಲ್ಯಾಪ್‌ಟಾಪ್‌ ಪರಿಚಯಿಸಿದೆ. ಇದು 12 ನೇ ತಲೆಮಾರಿನ ಇಂಟೆಲ್ ಕೋರ್ i5-1240P ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 42 WHrs ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಅಸುಸ್‌

ಹೌದು, ಅಸುಸ್‌ ಕಂಪೆನಿ ಭಾರತದಲ್ಲಿ ಹೊಸ ಅಸುಸ್‌ ವಿವೋಬುಕ್‌ 14 (X1402) ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ HD IPS ಡಿಸ್‌ಪ್ಲೇಯನ್ನು ಹೊಂದಿದೆ. ಇದು 82% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಕ್ವೈಟ್ ಬ್ಲೂ ಮತ್ತು ಐಸ್ಲೈಟ್ ಸಿಲ್ವರ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಈ ಅಸುಸ್‌ ವಿವೋಬುಕ್‌ 14 ಲ್ಯಾಪ್‌ಟಾಪ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲ್ಯಾಪ್‌ಟಾಪ್‌

ಅಸುಸ್‌ ವಿವೋಬುಕ್‌ 14 (X1402) ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ HD IPS ಡಿಸ್‌ಪ್ಲೇಯನ್ನು ಹೊಂದಿದೆ. ಇದು 82% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದು ಆರಾಮದಾಯಕ ವಿನ್ಯಾಸವನ್ನು ಹೊಂದಿದ್ದು, ವಿಶಾಲವಾದ 178 ಡಿಗ್ರಿ ವ್ಯೂ ಆಂಗಲ್‌ ಜೊತೆಗೆ ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ i5-1240P ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಸ್ಟೋರೇಜ್‌ ಅನ್ನು ಹೊಂದಿದೆ.

ಬ್ಯಾಟರಿಯನ್ನು

ಅಸುಸ್‌ ವಿವೋಬುಕ್ 65W ವೇಗದ ಚಾರ್ಜಿಂಗ್ ಬೆಂಬಲಿಸುವ 42 WHrs ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಪೆರಿಫೆರಲ್‌ಗಳಿಗೆ ಸುಲಭವಾದ ಸಂಪರ್ಕಕ್ಕಾಗಿ ಅಗತ್ಯವಿರುವ ಎಲ್ಲಾ I/O ಪೋರ್ಟ್‌ಗಳನ್ನು ಹೊಂದಿದೆ. ಇದು USB 3.2 Gen 1 (ಟೈಪ್-C), 2 x USB 3.2 Gen 1 (ಟೈಪ್-A), USB 2.0, ಫುಲ್‌ ರೇಂಜ್‌ HDMI 1.4, 3.5mm ಆಡಿಯೋ ಜ್ಯಾಕ್ ಅನ್ನು ಬೆಂಬಲಿಸುತ್ತದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ಭಾರತದಲ್ಲಿ 49,990ರೂ. ಆರಂಭಿಕ ಬೆಲೆಯಲ್ಲಿ ಬರಲಿದೆ. ಇದು ಕ್ವೈಟ್ ಬ್ಲೂ ಮತ್ತು ಐಸ್ಲೈಟ್ ಸಿಲ್ವರ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ 19.9mm ಥಿಕ್‌ನೆಸ್‌ ಅನ್ನು ಹೊಂದಿದ್ದು, MIL-STD 810H ನಿಯತಾಂಕಗಳೊಂದಿಗೆ ಮಿಲಿಟರಿ-ದರ್ಜೆಯ ಪ್ರಮಾಣೀಕರಣವನ್ನು ಪಡೆದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ.

ಆಸುಸ್‌

ಇದಲ್ಲದೆ ಆಸುಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಮಾರುಕಟ್ಟೆಯಲ್ಲಿ ಹೊಸ ಸರಣಿಯ ಆಸುಸ್‌ ಜೆನ್‌ಬುಕ್‌ ಪ್ರೊ14 Duo OLED, ಜೆನ್‌ಬುಕ್‌ ಪ್ರೊ 16X OLED, ಪ್ರೊ ಆರ್ಟ್‌ ಸ್ಟುಡಿಯೋಬುಕ್‌ ಪ್ರೊ 16 OLED, ಪ್ರೊ ಆರ್ಟ್‌ ಸ್ಟುಡಿಯೋಬುಕ್‌ 16 OLED, ವಿವೋಬುಕ್‌ ಪ್ರೊ 15 OLED, ಮತ್ತು ವಿವೋಬುಕ್‌ ಪ್ರೊ 16X OLED ಅನ್ನು ಪರಿಚಯಿಸಿದೆ. ಈ ಕ್ರಿಯೇಟರ್ ಸಿರೀಸ್ ಲ್ಯಾಪ್‌ಟಾಪ್‌ಗಳನ್ನು ಕಂಟೆಂಟ್‌ ರಚನೆಕಾರರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಅಸುಸ್‌ ಜೆನ್‌ಬುಕ್‌ ಪ್ರೊ 14 Duo OLED

ಅಸುಸ್‌ ಜೆನ್‌ಬುಕ್‌ ಪ್ರೊ 14 Duo OLED

ಅಸುಸ್‌ ಜೆನ್‌ಬುಕ್‌ ಪ್ರೊ 14 Duo OLED ಲ್ಯಾಪ್‌ಟಾಪ್‌ ಸ್ಕ್ರೀನ್‌ಪ್ಯಾಡ್ ಪ್ಲಸ್ ಸೆಕೆಂಡರಿ ಟಚ್‌ಸ್ಕ್ರೀನ್‌ಹೊಂದಿರುವ ಡ್ಯುಯಲ್-ಸ್ಕ್ರೀನ್ ಲ್ಯಾಪ್‌ಟಾಪ್ ಆಗಿದೆ. ಇದು 12 ನೇ ತಲೆಮಾರಿನ ಇಂಟೆಲ್ ಕೋರ್ i9, i7 ಮತ್ತು i5 ಪ್ರೊಸೆಸರ್ ಆಯ್ಕೆಗಳನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ 32GB RAM ಮತ್ತು 512GB ಅಥವಾ 1TB SSD ಶೇಖರಣಾ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ OLED ಟಚ್‌ಸ್ಕ್ರೀನ್ 2.8K ರೆಸಲ್ಯೂಶನ್, HDR ಬೆಂಬಲ, 16:10 ರಚನೆಯ ಅನುಪಾತ ಮತ್ತು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಜೊತೆಗೆ 76WHrs ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 180W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಆರಂಭಿಕ ಬೆಲೆ 1,44,990ರೂ. ಆಗಿದೆ.

ಅಸುಸ್‌ ಜೆನ್‌ಬುಕ್‌ ಪ್ರೊ 16X OLED

ಅಸುಸ್‌ ಜೆನ್‌ಬುಕ್‌ ಪ್ರೊ 16X OLED

ಅಸುಸ್‌ ಜೆನ್‌ಬುಕ್‌ ಪ್ರೊ 16X OLED ಲ್ಯಾಪ್‌ಟಾಪ್‌ ಸ್ಪೋರ್ಟ್ಸ್ ಆಕ್ಟಿವ್ ಏರೋಡೈನಾಮಿಕ್ ಸಿಸ್ಟಮ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 16-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, HDR ಮತ್ತು ಸ್ಟೈಲಸ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್ ಕೋರ್‌ i9-12900H ಹಾಗೂ ಇಂಟೆಲ್‌ ಕೋರ್‌i7-12700H ಪ್ರೊಸೆಸರ್ ಆಯ್ಕೆಗಳಲ್ಲಿ ಬರಲಿದೆ. ಹಾಗೆಯೇ 32GB RAM, 16GB RAM ಆಯ್ಕೆಗಳಲ್ಲಿ ದೊರೆಯಲಿದೆ. ಈ ಲ್ಯಾಪ್‌ಟಾಪ್ ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ThunderBolt 4 ಮತ್ತು USB ಟೈಪ್-ಸಿ ಪೋರ್ಟ್‌ಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಆರಂಭಿಕ ಬೆಲೆ 2,49,990ರೂ. ಆಗಿದೆ.

Best Mobiles in India

English summary
ASUS launched its new Vivobook 14 touch (X1402) laptop in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X