ಆಸುಸ್‌ನಿಂದ ಎರಡು ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಅನಾವರಣ!

|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಗೇಮಿಂಗ್‌ ಬೆಂಬಲಿಸುವ ಡಿವೈಸ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಗೇಮಿಂಗ್‌ ಸ್ಮಾರ್ಟ್‌ಫೋನ್‌, ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಆಸುಸ್‌ ಕಂಪೆನಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಆಸುಸ್‌ ಕಂಪೆನಿ ಈಗಾಗಲೇ ಹಲವು ಆಕರ್ಷಕ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಆಸುಸ್‌ ಕಂಪೆನಿ ಭಾರತದಲ್ಲಿ ಎರಡು ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ.

ಆಸುಸ್‌

ಹೌದು, ಆಸುಸ್‌ ಕಂಪೆನಿ ಭಾರತದಲ್ಲಿ ಆಸುಸ್‌ ROG ಫ್ಲೋ Z13 ಮತ್ತು TUF ಡ್ಯಾಶ್‌ F15 ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಡಿಟ್ಯಾಚೇಬಲ್ 2-ಇನ್-1 ಗೇಮಿಂಗ್ ಲ್ಯಾಪ್‌ಟಾಪ್ ಆಗಿವೆ. ಇದರಲ್ಲಿ ಆಸುಸ್‌ ROG ಫ್ಲೋ Z13 14-ಕೋರ್ ಇಂಟೆಲ್ ಕೋರ್ i9-12900H ಪ್ರೊಸೆಸರ್‌ ಹೊಂದಿದೆ. ಆದರೆ TUF ಡ್ಯಾಶ್‌ F15 ಗೇಮಿಂಗ್ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ i7-12650H ಪ್ರೊಸೆಸರ್ ಬಲವನ್ನು ಪಡೆದಿದೆ.

ಆಸುಸ್‌

ಆಸುಸ್‌ ಕಂಪೆನಿ ಇದೇ ಮೊದಲ ಬಾರಿಗೆ ಡಿಟ್ಯಾಚೇಬಲ್ 2-ಇನ್-1 ಗೇಮಿಂಗ್ ಲ್ಯಾಪ್‌ಟಾಪ್ ಪರಿಚಯಿಸಿದೆ. ಇದರಿಂದ ಈ ಲ್ಯಾಪ್‌ಟಾಪ್‌ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿವೆ. ಇನ್ನು ಆಸುಸ್‌ ROG ಫ್ಲೋ Z13 ಲ್ಯಾಪ್‌ಟಾಪ್‌ ಎನ್‌ವಿಡಿಯಾ ಜಿಫೋರ್ಸ್‌ RTX 3050 Ti GPU ಹೊಂದಿದೆ. ಹಾಗೆಯೇ TUF ಡ್ಯಾಶ್ F15 ಲ್ಯಾಪ್‌ಟಾಪ್‌ ಆಧುನಿಕ ವಿನ್ಯಾಸವನ್ನು ಹೊಂದಿದೆ. ಇನ್ನುಳಿದಂತೆ ಈ ಎರಡು ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ROG ಫ್ಲೋ Z13

ಆಸುಸ್‌ ROG ಫ್ಲೋ Z13

ಆಸುಸ್‌ ROG ಫ್ಲೋ Z13 ಲ್ಯಾಪ್‌ಟಾಪ್ ಎರಡು ಡಿಸ್‌ಪ್ಲೇ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಮೊದಲನೇ ಆಯ್ಕೆಯು 13.4 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,920x1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಮತ್ತು 16:10 ರಚನೆಯ ಅನುಪಾತ ಹೊಂದಿದೆ. ಜೊತೆಗೆ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ನ ಎರಡನೆಯ ಆಯ್ಕೆಯು 13.4 ಇಂಚಿನ ಅಲ್ಟ್ರಾ HD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಎರಡೂ ಡಿಸ್‌ಪ್ಲೇಗಳು ಡಾಲ್ಬಿ ವಿಷನ್ HDR ಮತ್ತು ಅಡಾಪ್ಟಿವ್ ಸಿಂಕ್ ಬೆಂಬಲವನ್ನು ಹೊಂದಿವೆ.

ಲ್ಯಾಪ್‌ಟಾಪ್‌

ಆಸುಸ್‌ ROG ಫ್ಲೋ Z13 ಗೇಮಿಂಗ್‌ ಲ್ಯಾಪ್‌ಟಾಪ್‌ 12 ತಲೆಮಾರಿನ ಇಂಟೆಲ್‌ ಕೋರ್‌ i9-12900H ಪ್ರೊಸೆಸರ್ ಹೊಂದಿದೆ. ಇದು 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಹಾಗೆಯೇ ಗ್ರಾಫಿಕ್ಸ್‌ಗಾಗಿ,ಎನ್‌ವಿಡಿಯಾ ಜಿಪೋರ್ಸ್‌ RTX 3050 Ti GPU ಹೊಂದಿದೆ. ಇದು ಗೇಮ್‌ನಲ್ಲಿನ ಲೇಟೆನ್ಸಿಗಳನ್ನು ಕಡಿಮೆ ಮಾಡಲಿದೆ. ಅಲ್ಲದೆ ಇದರ ಕಾರ್ಯಕ್ಷಮತೆಯನ್ನು 10% ಹೆಚ್ಚಿಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ನಲ್ಲಿ ಸೈಲೆಂಟ್‌ ಕಾರ್ಯಾಚರಣೆಗಳಿಗಾಗಿ 0dB ಆಂಬಿಯೆಂಟ್ ಕೂಲಿಂಗ್ ಅನ್ನು ಸಹ ಒಳಗೊಂಡಿದೆ.

ಇದಲ್ಲದೆ ಈ ಲ್ಯಾಪ್‌ಟಾಪ್‌ ಡಿಟ್ಯಾಚೇಬಲ್ ಬ್ಯಾಕ್‌ಲಿಟ್ ಚಿಕ್ಲೆಟ್ ಸಿಂಗಲ್ ಝೋನ್ RGB ಕೀಬೋರ್ಡ್ ಜೊತೆಗೆ AuraSync ಬೆಂಬಲವನ್ನು ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಮತ್ತು HD ವೆಬ್‌ಕ್ಯಾಮ್ ಹೊಂದಿದೆ. ಅಲ್ಲದೆ AI ನಾಯ್ಸ್‌-ಕ್ಯಾನ್ಸಲೇಶನ್‌ ಟೆಕ್ನಾಲಜಿ ಒಳಗೊಂಡಿರುವ 3 ಮೈಕ್ರೊಫೋನ್ ರಚನೆಯನ್ನು ಮತ್ತು ಸ್ಮಾರ್ಟ್ ಆಂಪ್ಲಿಫೈಯರ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6 ಮತ್ತು ಬ್ಲೂಟೂತ್ v5.2 ಅನ್ನು ಒಳಗೊಂಡಿದೆ.

ಆಸುಸ್‌ ROG ಟಫ್‌ ಡ್ಯಾಶ್‌ F15

ಆಸುಸ್‌ ROG ಟಫ್‌ ಡ್ಯಾಶ್‌ F15

ಆಸುಸ್‌ ROG ಟಫ್‌ ಡ್ಯಾಶ್‌ F15 ಲ್ಯಾಪ್‌ಟಾಪ್‌ ಮೆಕಾ-ಪ್ರೇರಿತ ಅಲ್ಯೂಮಿನಿಯಂ ಮುಚ್ಚಳವನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಹೊಸ ಮಾದರಿ ವಿನ್ಯಾಸವನ್ನು ಹೊಂದಿದ್ದು, ಮಿಲಿಟರಿ ದರ್ಜೆಯ MIL-STD ಮಾನದಂಡಗಳನ್ನು ಪೂರೈಸುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಕೂಡ ಎರಡು ಡಿಸ್‌ಪ್ಲೇ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ಮೊದಲನೇ ಆಯ್ಕೆಯು 144Hz ರಿಫ್ರೆಶ್ ರೇಟ್‌ ಒಳಗೊಂಡ 15.6 ಇಂಚಿನ IPS ಲೆವೆಲ್‌ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಎರಡನೇ ಆಯ್ಕೆಯು 165Hz ರಿಫ್ರೆಶ್ ರೇಟ್‌ ಬೆಂಬಲಿಸುವ 15.6 ಇಂಚಿನ IPS ಲೆವೆಲ್‌ WQHD ಡಿಸ್‌ಪ್ಲೇಯನ್ನು ಹೊಂದಿದೆ.

ಆಸುಸ್‌ ROG ಟಫ್‌ ಡ್ಯಾಶ್‌ F15 ಲ್ಯಾಪ್‌ಟಾಪ್‌ 12 ನೇ ತಲೆಮಾರಿನ ಇಂಟೆಲ್ ಕೋರ್ i7-12650H ಪ್ರೊಸೆಸರ್ ಹೊಂದಿದ ಜೊತೆಗೆ 16GB RAM ಮತ್ತು 1TB ಸ್ಟೋರೇಜ್‌ ಬಲವನ್ನು ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ ಎನ್‌ವಿಡಿಯಾ ಜಿಪೋರ್ಸ್‌ RTX 3070 GPU ಹೊಂದಿದೆ. ಈ ಲ್ಯಾಪ್‌ಟಾಪ್ ಬ್ಯಾಕ್‌ಲಿಟ್ ಚಿಕ್ಲೆಟ್ ಕೀಬೋರ್ಡ್, ಬಿಲ್ಟ್-ಇನ್ ಅರೇ ಮೈಕ್ರೊಫೋನ್‌ನೊಂದಿಗೆ HD ಕ್ಯಾಮೆರಾ ಮತ್ತು AI ನಾಯ್ಸ್‌ ಕ್ಯಾನ್ಸಲೇಶನ್‌ ಟೆಕ್ನಾಲಜಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6 ಮತ್ತು ಬ್ಲೂಟೂತ್ v5.2 ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಆಸುಸ್‌ ROG ಫ್ಲೋ Z13 ಲ್ಯಾಪ್‌ಟಾಪ್‌ ಬೆಲೆ 1,36,990ರೂ ಆಗಿದೆ. ಆದರೆ ಆಸುಸ್‌ ಟಫ್‌ ಡ್ಯಾಶ್‌ F15 ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ 90,990ರೂ. ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಆಸುಸ್‌ ಇ-ಶಾಪ್‌, ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದಲ್ಲದೆ ಆಸಕ್ತ ಗ್ರಾಹಕರು ಲ್ಯಾಪ್‌ಟಾಪ್ ಅನ್ನು ಆಸುಸ್‌ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ROG ಸ್ಟೋರ್‌ಗಳು ಮತ್ತು ಕ್ರೋಮಾ, ವಿಜಯ್ ಸೇಲ್ಸ್, ರಿಲಯನ್ಸ್ ಡಿಜಿಟಲ್ ಮತ್ತು ಎಲ್ಲಾ ಆಸುಸ್ ಅಧಿಕೃತ ಡೀಲರ್‌ಗಳು ಸೇರಿದಂತೆ ಮಲ್ಟಿ-ಬ್ರಾಂಡ್ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ಆಸುಸ್‌ ಟಫ್‌ ಡ್ಯಾಶ್ F15 ಅನ್ನು ಮೂನ್‌ಲೈಟ್ ವೈಟ್ ಮತ್ತು ಆಫ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ.

Best Mobiles in India

English summary
Asus ROG Flow Z13, TUF Dash F15 Gaming Laptops Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X