ಅಸುಸ್‌ನ ಹೊಸ ಮೌಸ್‌ ಲಾಂಚ್‌; ಇದರ ಫೀಚರ್ಸ್‌ಗೆ ಫಿದಾ ಆಗ್ತೀರ!

|

ನಿಮ್ಮ ಬಳಿ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ಇದೆ ಎಂದಾದಮೇಲೆ ಮೌಸ್‌ ಅತ್ಯಗತ್ಯ. ಮೌಸ್ ಮೂಲಕ ಸುಲಭವಾಗಿ ಹಾಗೂ ವೇಗವಾಗಿ ಡಿವೈಸ್‌ ಅನ್ನು ಬಳಕೆ ಮಾಡಬಹುದು, ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್‌ನ ಮೌಸ್‌ಗಳು ಲಭ್ಯ ಇದ್ದು, ಇವುಗಳ ಸಾಲಿಗೆ ವಿಶೇಷವಾಗಿ ಅಸುಸ್‌ ಸೇರಿಕೊಳ್ಳಲಿದೆ. ಅಸುಸ್‌ನ ಈ ಮೌಸ್ ಡಿವೈಸ್‌ಅನ್ನು ಅಸುಸ್‌ ROG ಕೆರಿಸ್ ವಾಯರ್‌ಲೆಸ್‌ ಏಮ್‌ಪಾಯಿಂಟ್ ಮೌಸ್ ( Asus ROG Keris Wireless AimPoint Mouse) ಎಂಬ ಹೆಸರಿನಲ್ಲಿ ಪರಿಚಯಿಸಲಾಗಿದೆ.

ಅಸುಸ್‌ನ ಹೊಸ ಮೌಸ್‌ ಲಾಂಚ್‌; ಇದರ ಫೀಚರ್ಸ್‌ಗೆ ಫಿದಾ ಆಗ್ತೀರ!

ಹೌದು, ನೀವು ಯೋಗ್ಯವಾದ ಮೌಸ್ ಹೊಂದಿದ್ದರೆ ಮಾತ್ರ ನಿಮ್ಮ ಲ್ಯಾಪ್‌ಟಾಪ್‌ ಹಾಗೂ ಕಂಪ್ಯೂಟರ್ ಅನ್ನು ಒತ್ತಡವಿಲ್ಲದೆ ಕಂಟ್ರೋಲ್‌ ಮಾಡಬಹುದು. ಹಾಗೆಯೇ ತಂತ್ರಜ್ಞಾನವು ಹೆಚ್ಚು ಸುಧಾರಿಸುತ್ತಿರುವಂತೆ ಮೌಸ್‌ನ ಕಾರ್ಯಕ್ಷಮತೆಗಳೂ ಸಹ ಬದಲಾಗುತ್ತಾ ಸಾಗಿವೆ. ಇದರ ಭಾಗವಾಗಿಯೇ ಇಂದು ವಾಯರ್‌ಲೆಸ್‌ ಮೌಸ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಹಾಗಿದ್ರ, ಈ ಹೊಸ ಮೌಸ್‌ನ ಪ್ರಮುಖ ಫೀಚರ್ಸ್‌ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಗೇಮಿಂಗ್ ಗ್ಯಾಜೆಟ್‌ಗಳನ್ನು ಪರಿಚಯಿಸುತ್ತಿರುವ ಅಸುಸ್‌ ಕಂಪೆನಿ ಈಗ ಹೊಸ ಮೌಸ್ ಡಿವೈಸ್‌ ಅನ್ನು ಪರಿಚಯಿಸಿದೆ. ಇದು ಬ್ಲೂಟೂತ್ ವಾಯರ್‌ಲೆಸ್‌ ಡಿವೈಸ್‌ ಆಗಿದ್ದು, ಇದಕ್ಕೆ ಅಸುಸ್‌ ROG ಕೆರಿಸ್ ವಾಯರ್‌ಲೆಸ್‌ ಏಮ್‌ಪಾಯಿಂಟ್ ಮೌಸ್ ಎಂಬ ಹೆಸರು ನೀಡಲಾಗಿದೆ. ಹಾಗೆಯೇ ಗೇಮರ್‌ಗಳನ್ನು ಕೇಂದ್ರೀಕರಿಸಿಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದ್ದು, ಡ್ಯುಯಲ್ ಟೋನ್ ವಿನ್ಯಾಸದಲ್ಲಿ ಕಂಡುಬರುತ್ತದೆ.

ವಿನ್ಯಾಸ ಹೇಗಿದೆ ಗೊತ್ತಾ!?
ಮೌಸ್‌ ಅನ್ನು ಹಿಡಿದುಕೊಂಡಾಗ ಉತ್ತಮ ಅನುಭವ ಪಡೆದುಕೊಳ್ಳುವ ಕಾರಣಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಕೇವಲ 75 ಗ್ರಾಂ ತೂಕ ಹೊಂದಿದ್ದು, ಈ ಮೂಲಕ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಆಗಲಿದೆ. ಇದರ ಸ್ಲಿಮ್ ವಿನ್ಯಾಸ ಮತ್ತು ಕಡಿಮೆ ತೂಕವು ನಿಮ್ಮ ಕೈಗಳಿಗೆ ಮೃದುವಾದ ಅನುಭವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

ಅಸುಸ್‌ನ ಹೊಸ ಮೌಸ್‌ ಲಾಂಚ್‌; ಇದರ ಫೀಚರ್ಸ್‌ಗೆ ಫಿದಾ ಆಗ್ತೀರ!

ಆರ್‌ಜಿಬಿ ಲೈಟ್
ಆರ್‌ಜಿಬಿ ಲೈಟ್ ಫೀಚರ್ಸ್‌ ಇದೀಗ ಪ್ರಮುಖ ಡಿವೈಸ್‌ಗಳ ಅಂದ ಹೆಚ್ಚಿಸುವ ಮಾರ್ಗವಾಗಿದೆ. ಈಗಾಗಲೇ ಇಯರ್‌ಬಡ್ಸ್‌ಗಳ ಚಾರ್ಜಿಂಗ್‌ ಕೇಸ್‌ ಹಾಗೂ ಇನ್ನಿತರೆ ಡಿವೈಸ್‌ಗಳು ಆರ್‌ಜಿಬಿ ಲೈಟ್ ಆಯ್ಕೆಯಿಂದ ಅತ್ಯುತ್ತಮ ನೋಟ ಹೊಂದಿದ್ದು, ಇದರ ನಡುವೆ ಈಗ ಈ ಹೊಸ ಮೌಸ್‌ ಸಹ ಆರ್‌ಜಿಬಿ ಲೈಟ್ ನೊಂದಿಗೆ ವಿನ್ಯಾಸಗೊಂಡಿದೆ. ಇದಿಷ್ಟೇ ಅಲ್ಲದೆ, ಈ ಮೌಸ್‌ನಲ್ಲಿ ಒಟ್ಟು ಐದು ಪ್ರೋಗ್ರಾಮೆಬಲ್ ಬಟನ್‌ಗಳನ್ನು ಹೊಂದಿದ್ದು. ಬಲ ಕ್ಲಿಕ್ ಹಾಗೂ ಎಡ ಕ್ಲಿಕ್‌ಗಳಿಗಾಗಿ ಬಟನ್‌ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಸ್ಕ್ರೋಲಿಂಗ್‌ಗಾಗಿ ಮತ್ತೊಂದು ಬಟನ್‌ ಆಯ್ಕೆ ನೀಡಲಾಗಿದ್ದು, ಉಳಿದ ಎರಡು ಬಟನ್‌ಗಳನ್ನು ಎಡಭಾಗದಲ್ಲಿ ಇರಿಸಲಾಗಿದೆ.

ಇದರ ವಿಶೇಷತೆ ಏನು?
ಈ ಮೌಸ್ ಆಪ್ಟಿಕಲ್ ಸೆನ್ಸರ್ ಮತ್ತು ROG ಸ್ಪೀಡ್ ನೋವಾ ವಾಯರ್‌ಲೆಸ್‌ ತಂತ್ರಜ್ಞಾನದಿಂದ ಕೆಲಸಮಾಡಲಿದೆ. ಇದರಿಂದಾಗಿ ಹೆಚ್ಚು ನಿಖರವಾದ ಮೌಸ್ ಟ್ರ್ಯಾಕಿಂಗ್ ಅನುಭವವನ್ನು ಪಡೆದುಕೊಳ್ಳಬಹುದು. ಹಾಗೆಯೇ ಈ ಡಿವೈಸ್‌ನ ಸೂಕ್ಷ್ಮತೆಯ ಸೆಟ್ಟಿಂಗ್‌ಗಳು 100 ರಿಂದ 36,000 ಡಿಪಿಐ ವರಗೂ ಇರಲಿವೆ.

ಅಸುಸ್‌ನ ಹೊಸ ಮೌಸ್‌ ಲಾಂಚ್‌; ಇದರ ಫೀಚರ್ಸ್‌ಗೆ ಫಿದಾ ಆಗ್ತೀರ!

ಇದರ ವೇಗ ಎಷ್ಟಿದೆ ಗೊತ್ತಾ!?
ಈ ಮೌಸ್‌ನ ವೇಗದ ಬಗ್ಗೆ ಹೇಳುವುದಾದರೆ ಸೆಕೆಂಡಿಗೆ 650 ಇಂಚುಗಳನ್ನು ದಾಟುತ್ತದೆ. ಇದು ವಾಯರ್‌ಲೆಸ್‌ ಮೌಸ್ ಡಿವೈಸ್‌ ಆಗಿರುವುದರಿಂದ ಬ್ಲೂಟೂತ್, ಯುಎಸ್‌ಬಿಯಲ್ಲಿ ಹಾಗೂ 2.4GHz RF ನಲ್ಲಿ ಕಾರ್ಯನಿರ್ವಹಿಸುತ್ತದೆ. RF ಮೋಡ್‌ನಲ್ಲಿ ಬಳಕೆ ಮಾಡಿದಾಗ ಈ ಮೌಸ್ 119 ಗಂಟೆಗಳ ಬಳಕೆಯನ್ನು ನೀಡುತ್ತದೆ. ಹಾಗೆಯೇ ಈ ಮೌಸ್ ಬ್ಲೂಟೂತ್ ಮೋಡ್‌ನಲ್ಲಿ ಚಾಲನೆಯಲ್ಲಿರುವಾಗ 150 ಗಂಟೆಗಳವರೆಗೆ ಬ್ಯಾಕಪ್‌ ನೀಡಲಿದೆ.

ಬೆಲೆ ಎಷ್ಟು?
ಈ ಹೊಸ ಮೌಸ್‌ನ ಮೂಲ ಬೆಲೆ 8,999 ರೂ. ಗಳಾಗಿದ್ದು, 7,499 ರೂ.ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ ಕಪ್ಪು ಹಾಗೂ ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ. ಈ ಡಿವೈಸ್‌ ಅನ್ನು ನೀವು ಫ್ಲಿಪ್‌ಕಾರ್ಟ್‌ ಹಾಗೂ ಅಸುಸ್‌ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
ASUS ROG Keris Wireless AimPoint Mouse with big welcome offer Launched In India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X