ಆಸುಸ್‌ ROG ಫೋನ್‌ 5 ಗೇಮಿಂಗ್ ಫೋನ್ ಸೇಲ್‌ಗೆ ದಿನಾಂಕ ಫಿಕ್ಸ್‌!

|

ಜನಪ್ರಿಯ ಟೆಕ್‌ ಸಂಸ್ಥೆಗಳಲ್ಲಿ ಒಂದಾದ ಆಸೂಸ್ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿ ಸೈ ಅನಿಸಿಕೊಂಡಿದೆ. ಮುಖ್ಯವಾಗಿ ಕಂಪನಿಯ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಗಮನ ಸೆಳೆದಿವೆ. ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಆಸುಸ್‌ ROG ಫೋನ್ 5 ಫೋನಿನ ಫಸ್ಟ್‌ ಸೇಲ್‌ಗೆ ಈಗ ಅಧಿಕೃತ ದಿನಾಂಕ ನಿಗದಿ ಆಗಿದೆ. ಇದೇ ಏಪ್ರಿಲ್ 15ರಂದು ಮಧ್ಯಾಹ್ನ 12 ಗಂಟೆಗೆ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಮೊದಲ ಮಾರಾಟ ಶುರು ಮಾಡಲಿದೆ ಎಂದು ಹೇಳಲಾಗಿದೆ.

ಸರಣಿಯು

ನೂತನ ಆಸುಸ್‌ ROG ಫೋನ್ 5 ಸರಣಿಯು ROG ಫೋನ್ 5, ROG ಫೋನ್ 5 ಪ್ರೊ, ಮತ್ತು ROG ಫೋನ್ 5 ಅಲ್ಟಿಮೇಟ್ ಎಂಬ ಮೂರು ವಿಭಿನ್ನ ಮಾದರಿಗಳಲ್ಲಿ ಲಭ್ಯವಾಗಲಿದೆ. ಈ ಎಲ್ಲಾ ಮೂರು ಮಾದರಿಗಳು 144Hz ಸ್ಯಾಮ್‌ಸಂಗ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ROG ಫೋನ್ 3 ಗಿಂತ 23% ಬ್ರೈಟ್‌ನೆಸ್‌ ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಹಾಗಾದರೇ ಆಸುಸ್‌ ROG ಫೋನ್‌ 5 ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಆಸುಸ್ ROG ಫೋನ್ 5 ಸ್ಮಾರ್ಟ್‌ಫೋನ್‌ 1,080x2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 20.4: 9 ರಚನೆಯ ಅನುಪಾತ, 144Hz ರಿಫ್ರೆಶ್ ರೇಟ್‌ ಮತ್ತು 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಡಿಸಿ ಡಿಮ್ಮಿಂಗ್ ಬೆಂಬಲವನ್ನು ಸಹ ಒಳಗೊಂಡಿದೆ. ಅಲ್ಲದೆ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಯಾವ ಪ್ರೊಸೆಸರ್‌

ಯಾವ ಪ್ರೊಸೆಸರ್‌

ROG ಫೋನ್ 5 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ROG UI ಮತ್ತು ZEN UI ಕಸ್ಟಮ್ ಇಂಟರ್ಫೇಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8 GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಆಸುಸ್ ROG ಫೋನ್ 5 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 686 ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 24 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇದು 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6, ಬ್ಲೂಟೂತ್ 5.0, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್ ಕೂಡ ಸೇರಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಆಸುಸ್ ROG ಫೋನ್ 5 ಬೆಲೆಯನ್ನು 8GB RAM+ 128GB ಶೇಖರಣಾ ರೂಪಾಂತರಕ್ಕೆ 49,999 ರೂ., 12 GB RAM + 256 GB ಶೇಖರಣಾ ಮಾದರಿಯ ಬೆಲೆ ರೂ. 57,999 ಆಗಿದೆ. ಇನ್ನು ಆಸುಸ್ ROG ಫೋನ್ 5 ಪ್ರೊ ಬೆಲೆ ಏಕೈಕ 16GB + 512GB ಸ್ಟೋರೇಜ್‌ ಆಯ್ಕೆಗೆ 69,999 ರೂ. ಹಾಗೂ ಆಸುಸ್ ROG ಫೋನ್ 5 ಅಲ್ಟಿಮೇಟ್ ಬೆಲೆ 18GB RAM + 512GB ಸ್ಟೋರೇಜ್‌ ಆಯ್ಕೆಗೆ 79,999 ರೂ.ಆಗಿದೆ.

Most Read Articles
Best Mobiles in India

English summary
The lineup includes three smartphones, namely ROG Phone 5, ROG Phone 5 Pro, and ROG Phone 5 Ultimate.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X