ಅಸುಸ್‌ ಸಂಸ್ಥೆಯಿಂದ ಹೊಸ ಫೋನ್‌ ಲಾಂಚ್‌! ಇದರ ವಿನ್ಯಾಸವೇ ಬಲು ಆಕರ್ಷಕ!

|

ಅಸುಸ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಗೇಮಿಂಗ್‌ ಪ್ರಿಯರ ಹಾಟ್‌ ಫೇವರಿಟ್‌ಗಳಲ್ಲಿ ಒಂದು. ಅಷ್ಟರ ಮಟ್ಟಿಗೆ ಅಸುಸ್‌ ಕಂಪೆನಿ ತನ್ನ ಗೇಮಿಂಗ್‌ ಫೋನ್‌ಗಳ ಮೂಲಕ ಪ್ರಾಬಲ್ಯ ಸಾಧಿಸಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಅಸುಸ್‌ ಕಂಪೆನಿ ಇದೀಗ ಹೊಸ ಅಸುಸ್‌ ROG ಫೋನ್ 6 ಡಯಾಬ್ಲೊ ಇಮ್ಮಾರ್ಟಲ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ಇದು ಡಯಾಬ್ಲೊ ಇಮ್ಮಾರ್ಟಲ್ ಗ್ರಾಫಿಕ್ಸ್‌ನೊಂದಿಗೆ Aura RGB ಲೋಗೋವನ್ನು ಹೊಂದಿದೆ.

ಅಸುಸ್‌

ಹೌದು, ಅಸುಸ್‌ ಕಂಪೆನಿ ಹೊಸ ಅಸುಸ್‌ ROG ಫೋನ್ 6 ಡಯಾಬ್ಲೊ ಇಮ್ಮಾರ್ಟಲ್ ಆವೃತ್ತಿಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಲುಕ್‌ ಸಾಕಷ್ಟು ವಿಶೇಷವಾಗಿದ್ದು, ಆಕರ್ಷಕವಾಗಿದೆ. ಇದರ ರಿಯರ್‌ ಪ್ಯಾನಲ್‌ ಹೆಲ್‌ಫೈರ್ ರೆಡ್ ಸೆಮಿ-ಮ್ಯಾಟ್ ವಿನ್ಯಾಸವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಫೋನ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಅಸುಸ್‌ ROG ಫೋನ್ 6 ಡಯಾಬ್ಲೊ ಇಮ್ಮಾರ್ಟಲ್ ಆವೃತ್ತಿಯು 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೆಯನ್ನು ಹೊಂದಿದೆ. ಇದು 1,080x2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 165Hz ರಿಫ್ರೆಶ್ ರೇಟ್, 720Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 23ms ಟಚ್ ಲೇಟೆನ್ಸಿ, HDR10+ ಬೆಂಬಲ ಮತ್ತು 1200 nits ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಅಸುಸ್‌ ROG ಫೋನ್ 6 ಡಯಾಬ್ಲೊ ಇಮ್ಮಾರ್ಟಲ್ ಆವೃತ್ತಿಯು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಜೊತೆಗೆ ಈ ಫೋನ್‌ ಕೂಲಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದು CPU ತಾಪಮಾನವನ್ನು 10 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಏನಿರಬಹುದು?

ಕ್ಯಾಮೆರಾ ಸೆಟ್‌ಅಪ್‌ ಏನಿರಬಹುದು?

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌?

ಬ್ಯಾಟರಿ ಮತ್ತು ಇತರೆ ಫೀಚರ್ಸ್‌?

ಅಸುಸ್‌ ROG ಫೋನ್ 6 ಡಯಾಬ್ಲೊ ಇಮ್ಮಾರ್ಟಲ್ ಆವೃತ್ತಿಯು 6,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದನ್ನು ಚಾರ್ಜ್ ಮಾಡಲು ಡ್ಯುಯಲ್ USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಈ ಫೋನ್‌ ಗ್ರಾಫಿಕ್ಸ್ ಮತ್ತು ಹೆಲ್ಫೈರ್ ರೆಡ್ ಸೆಮಿ-ಮ್ಯಾಟ್ ವಿನ್ಯಾಸವನ್ನು ಸಹ ಹೊಂದಿದೆ. ಇದರಲ್ಲಿ ಡಯಾಬ್ಲೊ ಥೀಮ್ ಅನ್ನು ಸೇರಿಸಲು ಮತ್ತು ಅನಿಮೇಷನ್‌ಗಳು, ಐಕಾನ್‌ಗಳು ಮತ್ತು ಧ್ವನಿ ಪರಿಣಾಮಗಳನ್ನು ಸೇರಿಸಲು ಸ್ಮಾರ್ಟ್‌ಫೋನ್‌ನ ಸಾಫ್ಟ್‌ವೇರ್ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಸ್ಮಾರ್ಟ್‌ಫೋನ್‌ ಬೆಲೆ ವಿವರವನ್ನು ಕಂಪೆನಿ ಇನ್ನು ಬಹಿರಂಗಗೊಳಿಸಿಲ್ಲ. ಇನ್ನು ಇದರ ಸೀಮಿತ ಆವೃತ್ತಿಯ ಶೀಲ್ಡ್ ಬ್ಲೆಸ್ಸಿಂಗ್ ಏರೋ ಕೇಸ್ ಬಂಪರ್ ಮತ್ತು ಡಯಾಬ್ಲೊ ಲಾಂಛನ ಸಿಮ್ ಎಜೆಕ್ಟರ್ ಟೂಲ್‌ನೊಂದಿಗೆ ಬರುತ್ತದೆ.

Best Mobiles in India

English summary
Asus ROG Phone 6 Diablo Immortal Edition Launched: specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X