ಭಾರತದಲ್ಲಿ ಆಸುಸ್‌ ROG ಫೋನ್ 6 ಸರಣಿ ಅನಾವರಣ! ಬೆಲೆ ಎಷ್ಟು?

|

ತೈವಾನ್‌ ಮೂಲದ ಆಸುಸ್‌ ಕಂಪೆನಿ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಬಿನ್ನ ಮಾದರಿಯ ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌ ಕಾರ್ಯದಕ್ಷತೆಯ ಕಾರಣಕ್ಕೆ ಆಸುಸ್‌ ಕಂಪೆನಿಯ ಫೋನ್‌ಗಳು ಪ್ರಸಿದ್ಧಿ ಪಡೆದಿವೆ. ಸದ್ಯ ಇದೀಗ ಆಸುಸ್‌ ಕಂಪೆನಿ ಭಾರತದಲ್ಲಿ ತನ್ನ ಹೊಸ ಆಸುಸ್‌ ROG ಫೋನ್ 6 ಸರಣಿಯನ್ನು ಪರಿಚಯಿಸಿದೆ. ಇದರಲ್ಲಿ ಆಸುಸ್‌ ROG ಫೋನ್ 6 ಮತ್ತು ಆಸುಸ್‌ ROG ಫೋನ್ 6 ಪ್ರೊ ಸೇರಿವೆ.

ಆಸುಸ್‌

ಹೌದು, ಆಸುಸ್‌ ಕಂಪೆನಿ ಭಾರತದಲ್ಲಿ ಆಸುಸ್‌ ROG ಫೋನ್ 6 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಆಸುಸ್‌ ಕಂಪೆನಿ ROG ಫೋನ್ 5 ರ ಉತ್ತರಾಧಿಕಾರಿಯಾಗಿದೆ. ಇನ್ನು ಆಸುಸ್‌ 6 ಸರಣಿಯ ಸ್ಮಾರ್ಟ್‌ಫೋನ್‌ಗಳು 165Hz ರಿಪ್ರೇಶ್‌ ರೇಟ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಹಾಗೆಯೇ 18GB RAM ಸಾಮರ್ಥ್ಯವನ್ನು ಒಳಗೊಂಡಿವೆ.

ಸ್ಮಾರ್ಟ್‌ಫೋನ್‌ಗಳು

ಆಸುಸ್‌ ROG ಫೋನ್ 6 ಮತ್ತು ROG ಫೋನ್ 6 ಪ್ರೊ ಸ್ಮಾರ್ಟ್‌ಫೋನ್‌ಗಳು ವಿಭಿನ್ನ RAM ಆಯ್ಕೆಗಳಲ್ಲಿ ದೊರೆಯಲಿವೆ. ಅಲ್ಲದೆ ವಿಭಿನ್ನ ಗ್ರಾಫಿಕ್ಸ್ ಅನ್ನು ಶೋ ಮಾಡಲು ಬಳಸಬಹುದಾದ ಪ್ರೊಗ್ರಾಮ್ ಮಾಡಬಹುದಾದ ಅಮೋಲೆಡ್‌ ರಿಯರ್‌ ಡಿಸ್‌ಪ್ಲೇಯನ್ನು ಕೂಡ ಪಡೆದುಕೊಂಡಿವೆ. ಇದರಲ್ಲಿ ಆಸುಸ್‌ ROG ಫೋನ್ 6 ಪ್ರೊ ಡ್ಯುಯಲ್ ಸ್ಪೀಕರ್‌ಗಳು ಮತ್ತು ಮೂರು ಮೈಕ್ರೊಫೋನ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ವಿಶೇಷತೆ ಹೊಂದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ROG ಫೋನ್ 6

ಆಸುಸ್‌ ROG ಫೋನ್ 6

ಆಸುಸ್‌ ROG ಫೋನ್ 6 ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 165Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಫೋನ್‌ಗಳಲ್ಲಿನ ಡಿಸ್‌ಪ್ಲೇ ರಿಫ್ರೆಶ್ ರೇಟ್‌ ಅನ್ನು 60Hz, 90Hz, 120Hz, 144Hz ಮತ್ತು 165Hz ನಡುವೆ ಆಯ್ಕೆ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಇದು ಕಾರ್ನಿಂಗ್‌ ಗ್ಲಾಸ್‌ ವಿಕ್ಷಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಕ್ವಾಲ್ಕಾಮ್‌

ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 6,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿದೆ.

ಆಸುಸ್‌ ROG ಫೋನ್ 6 ಪ್ರೊ

ಆಸುಸ್‌ ROG ಫೋನ್ 6 ಪ್ರೊ

ಆಸುಸ್‌ ROG ಫೋನ್ 6 ಪ್ರೊ ಸ್ಮಾರ್ಟ್‌ಫೋನ್‌ ಕೂಡ 6.78 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್‌ ಗ್ಲಾಸ್‌ ವಿಕ್ಷಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 18GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ಫೋನ್‌ ಕೂಲಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಇದು CPU ತಾಪಮಾನವನ್ನು 10 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್‌ ರೈಟ್‌ ಸ್ಪೈನ್‌ ಮೇಲೆ ಏರ್‌ಟ್ರಿಗ್ಗರ್ ಅಲ್ಟ್ರಾಸಾನಿಕ್ ಬಟನ್‌ಗಳನ್ನು ನೀಡಿದೆ. ಇದು ಗೇಮ್‌ಳಿಂದ ವಿಭಿನ್ನ ಕಂಟ್ರೋಲ್‌ಗಳನ್ನು ಮ್ಯಾಪ್ ಮಾಡಲು ನಿಮಗೆ ಅನುಮತಿಸುತ್ತದೆ.

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು (3,000 + 3,000mAh) ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದನ್ನು ಚಾರ್ಜ್ ಮಾಡಲು ಡ್ಯುಯಲ್ USB ಟೈಪ್-C ಪೋರ್ಟ್ ಅನ್ನು ಹೊಂದಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಈ ಫೋನ್‌ ಡ್ಯುಯಲ್ ಸ್ಪೀಕರ್‌ಗಳು ಮತ್ತು ಮೂರು ಮೈಕ್ರೊಫೋನ್‌ಗಳನ್ನು ಹೊಂದಿದೆ. ಆಡಿಯೊಗಾಗಿ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಕೂಡ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi ಡೈರೆಕ್ಟ್, ಬ್ಲೂಟೂತ್ v5.2, NFC, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಎರಡು USB ಟೈಪ್-C ಪೋರ್ಟ್‌ಗಳನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಆಸುಸ್‌ ROG ಫೋನ್ 6 ಸ್ಮಾರ್ಟ್‌ಫೋನ್‌ 12GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 71,999ರೂ.ಬೆಲೆಯನ್ನು ಹೊಂದಿದೆ. ಇನ್ನು ಆಸುಸ್‌ ROG ಫೋನ್ 6 ಪ್ರೊ ಸ್ಮಾರ್ಟ್‌ಫೋನ್‌ 18GB RAM + 512GB ಸ್ಟೋರೇಜ್ ರೂಪಾಂತರದ ಆಯ್ಕೆಯ ಬೆಲೆ 89,999ರೂ. ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿವೆ.

Best Mobiles in India

English summary
Asus ROG Phone 6, ROG Phone 6 Pro Launched In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X