ಆಸೂಸ್‌ನಿಂದ ಮೂರು ಹೊಸ 'ಝೆನ್‌ಬುಕ್' ಲ್ಯಾಪ್‌ಟಾಪ್‌ ಬಿಡುಗಡೆ!..ಬೆಲೆ?

|

ವಿಶ್ವದ ಪ್ರತಿಷ್ಠಿತ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಆಸೂಸ್‌ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಲ್ಯಾಪ್‌ಟಾಪ್‌ ಸರಣಿಗಳನ್ನು ಪರಿಚಯಿಸಿದೆ. ಆ ಪೈಕಿ ಝೆನ್‌ಬುಕ್ ಸರಣಿಯ ಲ್ಯಾಪ್‌ಟಾಪ್‌ಗಳು ಭಾರಿ ಜನಪ್ರಿಯತೆ ಗಳಿಸಿದ್ದು, ಇದೀಗ ಕಂಪನಿಯು ಝೆನ್‌ಬುಕ್ ಸರಣಿಗೆ ಮತ್ತೆ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಸೇರ್ಪಡೆ ಮಾಡಿದೆ. ಇವು ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಆಸೂಸ್‌ ಝೆನ್‌ಬುಕ್

ಹೌದು, ಆಸೂಸ್‌ ಕಂಪನಿಯು ತನ್ನ ಝೆನ್‌ಬುಕ್ ಲ್ಯಾಪ್‌ಟಾಪ್‌ ಸರಣಿಯಲ್ಲಿ ಹೊಸದಾಗಿ 'ಝೆನ್‌ಬುಕ್ ಫ್ಲಿಪ್‌ 13', 'ಝೆನ್‌ಬುಕ್ 14' ಮತ್ತು 'ಝೆನ್‌ಬುಕ್ 15' ಹೆಸರಿನ ಮೂರು ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಝೆನ್‌ಬುಕ್ ಫ್ಲಿಪ್‌ 13 ಲ್ಯಾಪ್‌ಟಾಪ್ ವಿಶ್ವದ ಕಂಪ್ಯಾಕ್ಟ್ ಕನ್ವರ್ಟೆಬಲ್ ಲ್ಯಾಪ್‌ಟಾಪ್‌ ಆಗಿ ಗುರುತಿಸಿಕೊಂಡಿದೆ. ನ್ಯಾನೋ ಎಡ್ಜ್ ಮತ್ತು ನ್ಯಾರೋ ಬೆಜಲ್ ಡಿಸ್‌ಪ್ಲೇಯ ಮಾದರಿಯನ್ನು ಹೊಂದಿವೆ. ಹಾಗಾದರೇ ಆಸೂಸ್‌ನ ಹೊಸ ಝೆನ್‌ಲ್ಯಾಪ್‌ಟಾಪ್‌ ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಜಿಯೋ ಫೈಬರ್‌ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!ಓದಿರಿ : ಜಿಯೋ ಫೈಬರ್‌ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!

ಝೆನ್‌ಬುಕ್ ಫ್ಲಿಪ್‌ 13

ಝೆನ್‌ಬುಕ್ ಫ್ಲಿಪ್‌ 13 ಲ್ಯಾಪ್‌ಟಾಪ್‌ 13 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ನಾಲ್ಕು ಕಡೆಗಳಲ್ಲಿ ಅಂಚುರಹಿತ ನ್ಯಾನೋ ಎಡ್ಜ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಎಂಟನೇ ತಲೆಮಾರಿನ ಇಂಟಲ್ ಕೋರ್ i7 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, 16GB RAM ಮತ್ತು 512GB PCIe SSD ಸ್ಟೋರೇಜ್ ಆಯ್ಕೆಯನ್ನು ನೀಡಲಾಗಿದೆ. 50Wh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ಗೆ 13ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಬೆಲೆಯು 76,990ರೂ. ಆಗಿದ್ದು, ಇ ಕಾಮರ್ಸ್‌ ತಾಣಗಳಲ್ಲಿ ಲಭ್ಯ.

ಝೆನ್‌ಬುಕ್ 14

'ಝೆನ್‌ಬುಕ್ 14' ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ನಾಲ್ಕು ಕಡೆಗಳಲ್ಲಿ ಫ್ರೇಮ್‌ ರಹಿತ ಹಾಗೂ ಅಂಚುರಹಿತ ನ್ಯಾನೋ ಎಡ್ಜ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಎಂಟನೇ ತಲೆಮಾರಿನ ಇಂಟಲ್ ಕೋರ್ i7-8565U ಅಥವಾ i5-8265U ಸಾಮರ್ಥ್ಯದ ಆಯ್ಕೆ ಪಡೆದಿದ್ದು, GeForce GTX 1650 Max-Q GPU ಸಹ ಇದೆ. 8GB/16GB RAM ಮತ್ತು 512GB/1TB SSD ಸ್ಟೋರೇಜ್ ಆಯ್ಕೆಯನ್ನು ನೀಡಲಾಗಿದೆ. 50Wh ಬ್ಯಾಟರಿ, ಯುಎಸ್‌ಬಿ ಟೈಪ್‌-ಸಿ, ಟೈಪ್‌-ಎ, ಎಚ್‌ಡಿಎಮ್‌ಐ, ಮೈಕ್ರೋ ಎಸ್‌ಡಿ ಕಾರ್ಡ್‌ ಸೌಲಭ್ಯಗಳನ್ನು ಒಳಗೊಂಡಿದೆ. ಬೆಲೆಯು 79,990 ರೂ. ಆಗಿದ್ದು, ಇ ಕಾಮರ್ಸ್‌ ತಾಣಗಳಲ್ಲಿ ಲಭ್ಯ.

ಓದಿರಿ : ಇದೇ ಸೆಪ್ಟೆಂಬರ್ 17ರಂದು ಭಾರತಕ್ಕೆ ಬರಲಿದೆ ಶಿಯೋಮಿ 'ಮಿ ಬ್ಯಾಂಡ್ 4'!ಓದಿರಿ : ಇದೇ ಸೆಪ್ಟೆಂಬರ್ 17ರಂದು ಭಾರತಕ್ಕೆ ಬರಲಿದೆ ಶಿಯೋಮಿ 'ಮಿ ಬ್ಯಾಂಡ್ 4'!

ಝೆನ್‌ಬುಕ್ 15

'ಝೆನ್‌ಬುಕ್ 15' ಲ್ಯಾಪ್‌ಟಾಪ್‌ 15 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ನಾಲ್ಕು ಕಡೆಗಳಲ್ಲಿ ಫ್ರೇಮ್‌ ರಹಿತ ಹಾಗೂ ಅಂಚುರಹಿತ ನ್ಯಾನೋ ಎಡ್ಜ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಎಂಟನೇ ತಲೆಮಾರಿನ ಇಂಟಲ್ ಕೋರ್ i7-8565U ಸಾಮರ್ಥ್ಯವನ್ನು ಪಡೆದಿದ್ದು, GeForce GTX 1650 Max-Q GPU ಗ್ರಾಫಿಕ್ಸ್‌ ಸಹ ಇದೆ. ಹಾಗೆಯೇ 16GB RAM ಮತ್ತು 1TB PCIe SSD ಸ್ಟೋರೇಜ್ ಆಯ್ಕೆಯನ್ನು ನೀಡಲಾಗಿದ್ದು, ವಿಂಡೊಸ್‌ 10 ಓಎಸ್‌ನ ಬೆಂಬಲವಿದೆ. 71Wh ಬ್ಯಾಟರಿ, ಯುಎಸ್‌ಬಿ ಟೈಪ್‌-ಸಿ, ಟೈಪ್‌-ಎ, ಎಚ್‌ಡಿಎಮ್‌ಐ, ಮೈಕ್ರೋ ಎಸ್‌ಡಿ ಕಾರ್ಡ್‌ ಸೌಲಭ್ಯಗಳನ್ನು ಒಳಗೊಂಡಿದೆ. ಬೆಲೆಯು 1,19,990ರೂ. ಆಗಿದ್ದು, ಇ ಕಾಮರ್ಸ್‌ ತಾಣಗಳಲ್ಲಿ ಲಭ್ಯ.

ಓದಿರಿ : ಹೊಸ 'ಸೋನಿ ಎಕ್ಸ್‌ಪಿರಿಯಾ 5' ಫೀಚರ್ಸ್‌ ಹೇಗಿವೆ ಗೊತ್ತಾ?..ಬೆಲೆ?ಓದಿರಿ : ಹೊಸ 'ಸೋನಿ ಎಕ್ಸ್‌ಪಿರಿಯಾ 5' ಫೀಚರ್ಸ್‌ ಹೇಗಿವೆ ಗೊತ್ತಾ?..ಬೆಲೆ?

Best Mobiles in India

English summary
Asus has launched three new ZenBook laptops in India. the ZenBook 14 , ZenBook 15 , and ZenBook Flip 13. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X