ಭಾರತದಲ್ಲಿ ಮೂರು ಹೊಸ ಲ್ಯಾಪ್‌ಟಾಪ್‌ ಲಾಂಚ್‌ ಮಾಡಿದ ಆಸುಸ್‌! ಬೆಲೆ ಎಷ್ಟು?

|

ಟೆಕ್‌ ವಲಯದಲ್ಲಿ ಆಸುಸ್‌ ಕಂಪೆನಿ ವೈವಿಧ್ಯಮಯ ಗ್ಯಾಜೆಟ್ಸ್‌ಗಳಿಂದ ಗುರುತಿಸಿಕೊಂಡಿದೆ. ಗೇಮಿಂಗ್‌ ಸ್ಮಾರ್ಟ್‌ಫೋನ್‌, ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ. ಇವುಗಳನ್ನ ಆಸುಸ್‌ ಜೆನ್‌ಬುಕ್‌ S 13 OLED, ವಿವೋಬುಕ್‌ ಪ್ರೊ 14 OLED ಮತ್ತು ವಿವೋಬುಕ್‌ 16X ಎಂದು ಹೆಸರಿಸಲಾಗಿದೆ. ಈ ಮೂರು ಲ್ಯಾಪ್‌ಟಾಪ್‌ಗಳು AMD-ಚಾಲಿತ ಲ್ಯಾಪ್‌ಟಾಪ್‌ಗಳಾಗಿವೆ.

ಆಸುಸ್‌

ಹೌದು, ಆಸುಸ್‌ ಕಂಪೆನಿ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಲ್ಯಾಪ್‌ಟಾಪ್‌ಗಳು ಆಕರ್ಷಕ ಬೆಲೆಯನ್ನು ಕೂಡ ಹೊಂದಿವೆ. ಇದಲ್ಲದೆ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಿದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಕೂಡ ಈ ಲ್ಯಾಪ್‌ಟಾಪ್‌ಗಳಲ್ಲಿ ಒದಗಿಸಲಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು? ಬೆಲೆ ಎಷ್ಟು? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ಜೆನ್‌ಬುಕ್‌ S 13 OLED (UM5302)

ಆಸುಸ್‌ ಜೆನ್‌ಬುಕ್‌ S 13 OLED (UM5302)

ಆಸುಸ್‌ ಜೆನ್‌ಬುಕ್‌ S 13 OLED ಲ್ಯಾಪ್‌ಟಾಪ್‌ 13.3 ಇಂಚಿನ OLED ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 550ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು 16:10 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ 89% ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ನ ಚಾಸಿಸ್ ಅನ್ನು ಮೆಗ್ನೀಸಿಯಮ್ ಅಲ್ಯೂಮಿನಿಯಂ ಮಿಶ್ರಲೋಹದಿಂದ ಹಾಗೂ ಆಕ್ವಾ ಸೆಲಾಡಾನ್ ಮತ್ತು ಪಾಂಡರ್ ಬ್ಲೂ ಬಣ್ಣಗಳಲ್ಲಿ ಮಾಡಲಾಗಿದೆ. ಇದು ಕೀಬೋರ್ಡ್ ಡೆಕ್, ಟಚ್‌ಪ್ಯಾಡ್ ಮತ್ತು ಪಾಮ್ ರೆಸ್ಟ್ ಆಂಟಿಬ್ಯಾಕ್ಟೀರಿಯಲ್ ಗಾರ್ಡ್ ಅನ್ನು ಹೊಂದಿದೆ. ಇದಲ್ಲದೆ ಆಸುಸ್‌ "ಝೆನ್-ಕ್ಯಾಪ್ಡ್ 180-ಡಿಗ್ರಿ ಹಿಂಜ್ ಜೊತೆಗೆ ಅನನ್ಯ ಕ್ರೋಮ್ ಫಿನಿಶ್" ಅನ್ನು ಬಳಸುತ್ತಿದೆ. ಈ ಲ್ಯಾಪ್‌ಟಾಪ್‌ AMD ಯ ರೈಜೆನ್‌ 5 6600U ಅಥವಾ ರೈಜೆನ್‌ 7 6800U CPU ನ ಆಯ್ಕೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 65W ವೇಗದ ಚಾರ್ಜಿಂಗ್ ಬೆಂಬಲಿಸುವ 67WHr ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3 x USB 3.2 Gen 2 Type-C ಮತ್ತು 3.5 mm ಕಾಂಬೊ ಆಡಿಯೋ ಜ್ಯಾಕ್ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಿದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದು ಕ್ವೈಟ್ ಬ್ಲೂ ಮತ್ತು ಪಾರದರ್ಶಕ ಸಿಲ್ವರ್ ಫಿನಿಶ್‌ಗಳಲ್ಲಿ ಲಭ್ಯವಾಗಲಿದೆ.

ಆಸುಸ್‌ ವಿವೋಬುಕ್‌ 16X (M1603)

ಆಸುಸ್‌ ವಿವೋಬುಕ್‌ 16X (M1603)

ಆಸುಸ್‌ ವಿವೋಬುಕ್‌ 16X (M1603) ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 300ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 16:10 ರಚನೆಯ ಅನುಪಾತವನ್ನು ಹೊಂದಿದ್ದು, 86%ನ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ AMD ಯ ರೈಜೆನ್‌ 7 5800H ಅಥವಾ ರೈಜೆನ್‌ 5 5600H CPU ನ ಆಯ್ಕೆಯಲ್ಲಿ ಬರಲಿದೆ. ಇದು AMD ರೇಡಿಯನ್ ಗ್ರಾಫಿಕ್ಸ್, 16GB RAM ಮತ್ತು 512GB PCIe 3.0 SSD ಸ್ಟೋರೇಜ್‌ ಒಳಗೊಂಡಿದೆ. ಜೊತೆಗೆ 50WHr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 90W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 1x USB 3.2 Gen 1 Type-C, 2 x USB 3.2 Gen 1 Type-A, USB 2.0, Micro HDMI, ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. ಈ ಲ್ಯಾಪ್‌ಟಾಪ್ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಿದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದು ಕ್ವೈಟ್ ಬ್ಲೂ ಮತ್ತು ಪಾರದರ್ಶಕ ಸಿಲ್ವರ್ ಫಿನಿಶ್‌ಗಳಲ್ಲಿ ಲಭ್ಯವಾಗಲಿದೆ.

ಆಸುಸ್‌ ವಿವೋಬುಕ್‌ ಪ್ರೊ14 OLED (M3400)

ಆಸುಸ್‌ ವಿವೋಬುಕ್‌ ಪ್ರೊ14 OLED (M3400)

ಆಸುಸ್‌ ವಿವೋಬುಕ್‌ ಪ್ರೊ14 OLED ಲ್ಯಾಪ್‌ಟಾಪ್‌ 14 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದ್ದು, 16:10ರಚನೆಯ ಅನುಪಾತವನ್ನು ಹೊಂದಿದೆ. ಇದು ನಿಮಗೆ AMD ಯ ರೈಜೆನ್‌ 7 5800H ಅಥವಾ ರೈಜೆನ್‌ 5 5600H CPU ನ ಆಯ್ಕೆಯನ್ನು ನೀಡಲಿದೆ. ಹಾಗೆಯೇ AMD ರೇಡಿಯನ್ ಗ್ರಾಫಿಕ್ಸ್, 16GB RAM ಮತ್ತು 512GB PCIe 3.0 SSD ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ 50WHr ಬ್ಯಾಟರಿಯನ್ನು ಹೊಂದಿದ್ದು, 90W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 1x USB 3.2 Gen 2 Type-A, 2 x USB 2.0, HDMI 1.4, ಮತ್ತು 3.5mm ಆಡಿಯೋ ಜ್ಯಾಕ್ ಹೊಂದಿದೆ. ಇದು ಸೋಲಾರ್ ಸಿಲ್ವರ್ ಮತ್ತು ಕಾಸ್ಮೊಸ್ ಬ್ಲೂ ಫಿನಿಶ್‌ಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್ ಕೂಡ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಿದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದು ಕ್ವೈಟ್ ಬ್ಲೂ ಮತ್ತು ಪಾರದರ್ಶಕ ಸಿಲ್ವರ್ ಫಿನಿಶ್‌ಗಳಲ್ಲಿ ಲಭ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಆಸುಸ್‌ ಜೆನ್‌ಬುಕ್‌ S 13 OLED ಲ್ಯಾಪ್‌ಟಾಪ್‌ ಬೆಲೆ 99,990ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಆಸುಸ್‌ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ROG ಸ್ಟೋರ್‌ಗಳು, ಫ್ಲಿಪ್‌ಕಾರ್ಟ್, ಅಮೆಜಾನ್, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ರಿಲಯನ್ಸ್ ಡಿಜಿಟಲ್‌ನಲ್ಲಿ ಲಭ್ಯವಿರುತ್ತದೆ.
ಇನ್ನು ಆಸುಸ್‌ ವಿವೋಬುಕ್‌ 16X ಲ್ಯಾಪ್‌ಟಾಪ್‌ ಬೆಲೆ 54,990ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಆಸುಸ್‌ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ROG ಸ್ಟೋರ್‌ಗಳು, ಅಮೆಜಾನ್, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ರಿಲಯನ್ಸ್ ಡಿಜಿಟಲ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.
ಇದಲ್ಲದೆ ಆಸುಸ್‌ ವಿವೋಬುಕ್‌ ಪ್ರೊ 14 OLED ಲ್ಯಾಪ್‌ಟಾಪ್‌ ಬೆಲೆ 59,990ರೂ. ಗಳಿಂದ ಆರಂಭವಾಗಲಿದೆ. ಇದು ಆಸುಸ್‌ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ROG ಸ್ಟೋರ್‌ಗಳು, ಅಮೆಜಾನ್, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ರಿಲಯನ್ಸ್ ಡಿಜಿಟಲ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Asus launched Zenbook S 13 OLED, Vivobook Pro 14 OLED and Vivobook 16X trio of AMD-powered laptops in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X