Subscribe to Gizbot

64 ಜಿಬಿ ಆವೃತ್ತಿಯ ಅಸೂಸ್ ಜೆನ್‌ಫೋನ್ 2 ಶೀಘ್ರ ಲಾಂಚ್

Written By:

64 ಜಿಬಿ ಆವೃತ್ತಿಯ ಅಸೂಸ್ ಜೆನ್‌ಫೋನ್ 2 ನ ಲಾಂಚಿಂಗ್ ನಿರ್ಧಾರವಾಗಿದೆ. ಜೆನ್‌ಫೋನ್ 2 ನ ಬೆಲೆಯನ್ನು ಮತ್ತು ಹ್ಯಾಂಡ್‌ಸೆಟ್ ಬಗೆಗಿನ ಮಾಹಿತಿಯನ್ನು ತೈವಾನೀ ಕಂಪೆನಿ ನೀಡಿದೆ. ಇನ್ನು 4ಜಿಬಿ RAM ಮತ್ತು 64 ಜಿಬಿ ಸಂಗ್ರಹಣಾ ಸಾಮರ್ಥ್ಯವುಳ್ಳ ಜೆನ್‌ಫೋನ್ 2 ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಕಂಪೆನಿ ಜೆನ್‌ಫೋನ್ ಅನ್ನು 2 ಆವೃತ್ತಿಗಳಲ್ಲಿ ಹೊರತರುತ್ತಿದ್ದು ಯಾವ ಫೋನ್ ಗ್ರಾಹಕರ ಕೈ ಸೇರಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದೀಗ ಅಸೂಸ್ ಜೆನ್‌ಫೋನ್ 2 ZE551ML 4ಜಿಬಿ RAM ನೊಂದಿಗೆ ಬಂದಿದ್ದು 64 ಜಿಬಿ ಆಂತರಿಕ ಸಂಗ್ರಹವನ್ನು ಡಿವೈಸ್ ಪಡೆದುಕೊಂಡಿದೆ. ಬೆಲೆ ರೂ 19,900 ಎಂದು ನಿರ್ಧರಿಸಲಾಗಿದೆ. ಇನ್ನು ಫೋನ್ ತೈವಾನ್‌ನಲ್ಲಿ ಮಾರಾಟಕ್ಕೆ ಮಾರ್ಚ್ 23 ರಂದು ತೊಡಗಲಿದ್ದು ಅಸೂಸ್ ಜೆನ್‌ಫೋನ್ 2 ZE551ML 4ಜಿಬಿ RAM 32 ಜಿಬಿ ಸಂಗ್ರಹಣೆಯ ಇನ್ನೊಂದು ಡಿವೈಸ್‌ನೊಂದಿಗೆ ಮಾರುಕಟ್ಟೆಗೆ ಇಳಿಯಲಿದೆ.

64 ಜಿಬಿ ಆವೃತ್ತಿಯ ಅಸೂಸ್ ಜೆನ್‌ಫೋನ್ 2 ಶೀಘ್ರ ಲಾಂಚ್

ಇನ್ನು ಜೆನ್‌ಫೋನ್ 2 ಸಿರೀಸ್‌ನಲ್ಲಿ 4ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹದ ಅಸೂಸ್ ಜೆನ್‌ಫೋನ್ 2 ZE551ML ಹೆಚ್ಚು ಜನಪ್ರಿಯ ಹ್ಯಾಂಡ್‌ಸೆಟ್ ಎಂದು ನಿರ್ಧರಿಸಲಾಗಿದೆ.

ಇನ್ನು 4ಜಿಬಿ RAM 32 ಜಿಬಿ ಸಂಗ್ರಹದ ಅಸೂಸ್ ಡಿವೈಸ್‌ಗೆ ರೂ 18,000 ಮೌಲ್ಯವನ್ನು ಗೊತ್ತುಪಡಿಸಲಾಗಿದ್ದು, ಇದೇ ಆವೃತ್ತಿಯ 2 ಜಿಬಿಮ RAM ಫೋನ್ ರೂ 13,900 ಕ್ಕೆ ಗ್ರಾಹಕರ ಕೈ ಸೇರಲಿದೆ.

English summary
Asus ZenFone 2 64GB Storage Variant Price and Availability Confirmed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot