ಇಂದು ಎಂಟ್ರಿ ಕೊಡಲಿದೆ 'ಆಸುಸ್‌ ಜೆನ್‌ಫೋನ್‌ 9' ಫೋನ್‌; ಅಚ್ಚರಿಯ ಡಿಸ್‌ಪ್ಲೇ ಸೈಜ್‌!

|

ಟೆಕ್‌ ವಲಯದಲ್ಲಿ ಆಸುಸ್‌ ಸಂಸ್ಥೆಯು ಪ್ರಮುಖ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆಸುಸ್‌ ಭಿನ್ನ ಶ್ರೇಣಿಯಲ್ಲಿ ಮೊಬೈಲ್‌ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಮುಖ್ಯವಾಗಿ ಆಸುಸ್‌ ಜೆನ್‌ಫೋನ್‌ (Asus Zenfone) ಸರಣಿಯ ಫೋನ್‌ಗಳು ಹೆಚ್ಚು ಸದ್ದು ಮಾಡಿವೆ. ಅದರ ಮುಂದುವರಿದ ಭಾಗವಾಗಿ ಆಸುಸ್‌ ಸಂಸ್ಥೆಯು ಇದೀಗ ಆಸುಸ್‌ ಜೆನ್‌ಫೋನ್‌ ಸರಣಿಯಲ್ಲಿ ಹೊಸದಾಗಿ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ.

ಆಸುಸ್‌

ಹೌದು, ಆಸುಸ್‌ ಸಂಸ್ಥೆಯು ಈಗ 'ಆಸುಸ್‌ ಜೆನ್‌ಫೋನ್‌ 9' (Asus Zenfone 9) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು (ಜುಲೈ 28) ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಅಧಿಕೃತವಾಗಿ ಆಸುಸ್‌ ಜೆನ್‌ಫೋನ್‌ 9' ಫೋನ್‌ ಲಾಂಚ್ ಆಗಲಿದೆ. ಇನ್ನು ಈ ಬಿಡುಗಡೆ ಕಾರ್ಯಕ್ರಮವನ್ನು ಗ್ರಾಹಕರು ಲೈವ್‌ ವೀಕ್ಷಿಸಬಹುದು. ಅಧಿಕೃತ ಆಸುಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಬಹುದು.

ಆಕರ್ಷಕ

ನೂತನ ಆಸುಸ್‌ ಜೆನ್‌ಫೋನ್‌ 9 ಈ ಹಿಂದಿನ ಜೆನ್‌ಫೋನ್‌ಗಳಿಗಿಂತ ಸಾಕಷ್ಟು ಅಪ್‌ಡೇಟ್‌ ಆಗಿದ್ದು, ಕೆಲವೊಂದು ಆಕರ್ಷಕ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಲೀಕ್ ಮಾಹಿತಿ ಪ್ರಕಾರ ಈ ಫೋನ್ AMOLED ಡಿಸ್‌ಪ್ಲೇ, ಅಧಿಕ ರೆಸಲ್ಯೂಶನ್‌ ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌, ಆಕರ್ಷಕ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಹಾಗದರೆ ಲೀಕ್ ಮಾಹಿತಿಯಂತೆ ಈ ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಫೋನ್

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್ 5.92 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಇದರ ಡಿಸ್‌ಪ್ಲೇಯು 1,080 x 2,400 ಪಿಕ್ಸಲ್‌ ರೆಸಲ್ಯೂಶನ್ ಹೊಂದಿರಲಿದ್ದು, ಜೊತೆಗೆ 120Hz ರಿಫ್ರೆಶ್ ರೇಟ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೇ ಈ ಡಿಸ್‌ಪ್ಲೇಯು 20:9 ಅನುಪಾತವನ್ನು ಒಳಗೊಂಡಿರಲಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿರುತ್ತದೆ.

ಸ್ಟೋರೇಜ್‌

ಹಾಗೆಯೇ ಆಸುಸ್‌ ಜೆನ್‌ಫೋನ್‌ 9 ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್‌ ಸಪೋರ್ಟ್‌ ಸಹ ಪಡೆದಿರಲಿದೆ. ಇದರೊಂದಿಗೆ 16GB RAM ಮತ್ತು 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿರಲಿದೆ. ಅಲ್ಲದೇ 16/256GB ಸ್ಟೋರೇಜ್‌ ಜೊತೆಗೆ 8/128GB ಮತ್ತು 8/256GB ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿರಲಿದೆ.

ಮುಂಭಾಗದಲ್ಲಿ

ಈ ಕಾಂಪ್ಯಾಕ್ಟ್‌ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿರಲಿದೆ. ಇನ್ನೊಂದು ಕ್ಯಾಮೆರಾವು ಅಲ್ಟ್ರಾ-ವೈಡ್ 12 ಮೆಗಾ ಪಿಕ್ಸಾಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 12 ಮೆಗಾ ಪಿಕ್ಸಾಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಸೆಲ್ಫಿ ಕ್ಯಾಮೆರಾವು ವಿಡಿಯೋ ಕರೆ ಹಾಗೂ ಫೋಟೋಗಳಿಗೆ ಪೂರಕ ಇರಲಿದೆ.

ಚಾರ್ಜಿಂಗ್‌

ಆಸುಸ್‌ ಜೆನ್‌ಫೋನ್‌ 9 ಫೋನಿನ ಬ್ಯಾಟರಿಗೆ ಸಂಬಂಧಿಸಿದಂತೆ ನೋಡುವುದಾರೆ, ಈ ಫೋನ್ 4,300mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದೆ. ಇದಕ್ಕೆ ಪೂರಕವಾಗಿ 30W ವೇಗದ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿರಲಿದೆ. ಇನ್ನು ಆಸುಸ್‌ ಜೆನ್‌ಫೋನ್‌ 9 ಫೋನ್‌ 16GB + 256GB ವೇರಿಯಂಟ್‌ ಬೆಲೆಯು EUR 799 (ಭಾರತದಲ್ಲಿ ಅಂದಾಜು 64,770ರೂ. ಗಳ) ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಇನ್ನು ಈ ಫೋನ್ ಮೂನ್‌ಲೈಟ್ ವೈಟ್, ಮಿಡ್‌ನೈಟ್ ಬ್ಲಾಕ್, ಸ್ಟಾರಿ ಬ್ಲೂ ಮತ್ತು ಸನ್‌ಸೆಟ್ ರೆಡ್ ಬಣ್ಣಗಳಲ್ಲಿ ಲಭ್ಯ.

ಆಸುಸ್‌ 8z ಸ್ಮಾರ್ಟ್‌ಫೋನ್‌ ಫೀಚರ್ಸ್‌

ಆಸುಸ್‌ 8z ಸ್ಮಾರ್ಟ್‌ಫೋನ್‌ ಫೀಚರ್ಸ್‌

ಆಸುಸ್‌ ಸಂಸ್ಥೆಯು ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿರುವ ಆಸುಸ್‌ 8z ಸ್ಮಾರ್ಟ್‌ಫೋನ್‌ ಆಕರ್ಷಕ ಎನಿಸಿದೆ. ಈ ಫೋನ್ 5.9 ಇಂಚಿನ ಫುಲ್‌ HD+ ಸ್ಯಾಮ್‌ಸಂಗ್‌ E4 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಒಳಗೊಂಡಿದೆ

ಆಸುಸ್‌ 8z ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ZenUI 8 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ.

ಸಾಮರ್ಥ್ಯದ

ಆಸುಸ್‌ 8z ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೋನಿ IMX686 ಸೆನ್ಸಾರ್‌ f/1.8 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೋನಿ IMX363 ಸೆನ್ಸಾರ್ ಜೊತೆಗೆ f/2.2 ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಇದಲ್ಲದೆ 12 ಮೆಗಾ ಪಿಕ್ಸೆಲ್ ಸೋನಿ IMX663 ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಡ್ಯುಯಲ್ ಫೇಸ್-ಡಿಟೆಕ್ಷನ್ ಆಟೋಫೋಕಸ್ ಲೆನ್ಸ್ ಹೊಂದಿದೆ. ಅಲ್ಲದೇ ಆಸುಸ್‌ 8z ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ, ಇದು 30W ವೇಗದ ಚಾರ್ಜಿಂಗ್ ಮತ್ತು ಕ್ವಿಕ್ ಚಾರ್ಜ್ 4.0 ಮತ್ತು ಪವರ್ ಡೆಲಿವರಿ ಬೆಂಬಲವನ್ನು ಬೆಂಬಲಿಸುತ್ತದೆ.

ಬಣ್ಣದ

ಈ ಫೋನ್ ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ, ಈ ಫೋನ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಟ್ರಿಪಲ್ ಮೈಕ್ರೊಫೋನ್‌ ಪಡೆದಿದೆ. ಇನ್ನು ಭಾರತದಲ್ಲಿ ಆಸುಸ್‌ 8z ಸ್ಮಾರ್ಟ್‌ಫೋನ್‌ ಬೆಲೆ ಏಕೈಕ 8GB + 128GB ಸ್ಟೋರೇಜ್ ರೂಪಾಂತರಕ್ಕೆ 42,999ರೂ ಆಗಿದೆ. ಇನ್ನು ಈ ಫೋನ್ ಹೊರೈಜಾನ್ ಸಿಲ್ವರ್ ಮತ್ತು ಅಬ್ಸಿಡಿಯನ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯ.

Best Mobiles in India

English summary
Asus Zenfone 9 Launch Today: Here's How to Watch and what to expect.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X