CES 2018 : ಅಸುಸ್ ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ ಲಾಂಚ್

By Lekhaka
|

CES 2018 ಕಾರ್ಯಕ್ರಮದಲ್ಲಿ ಅನೇಕ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೇ ಮಾದರಿಯಲ್ಲಿ ಅಸುಸ್ ಈ ಬಾರಿ ಮಾರುಕಟ್ಟೆಗೆ ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ ಅನ್ನು CES 2018 ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

CES 2018 : ಅಸುಸ್ ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ ಲಾಂಚ್


ಅಸುಸ್ ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಂಡಿದ್ದು, ಸರಿ ಸುಮಾರು ರೂ.14,500ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ. ಮುಂದಿನ ತಿಂಗಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಬ್ಲಾಕ್ ಮತ್ತು ಸಿಲ್ವರ್ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ.

ಇದಲ್ಲದೇ ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ ನಲ್ಲಿ 5.7 ಇಂಚಿನ IPS ಡಿಸ್ ಪ್ಲೇ ಅಳವಡಿಸಲಾಗಿದ್ದು, FHD+ ಗುಣಮಟ್ಟವನ್ನು ಈ ಸ್ಮಾರ್ಟ್ ಫೋನ್ ಹೊಂದಿದ್ದು, 18:9 ಅನುಪಾತದ ಡಿಸ್ ಪ್ಲೇ ಇದಾಗಿದೆ. ಇದಲ್ಲದೇ ಮಿಡಿಯಾ ಟೆಕ್ MT6750T ಪ್ರೋಸೆಸರ್ ಅನ್ನು ನೀಡಲಾಗಿದೆ. ಅಲ್ಲದೇ ಕಾರ್ಡ್ ಕಾಡಿಕೊಳ್ಳುವ ಮೂಲಕ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, 16MP + 8MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ, 120 ಡಿಗ್ರಿ ವೈಡ್ ಆಂಗಲ್ ಲೈನ್ಸ್ ಅನ್ನು ಇದರಲ್ಲಿ ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೋಡಬಹುದಾಗಿದೆ.

2018ರಲ್ಲಿ ವಾಟ್ಸ್ಆಪ್ ಮೊದಲ ಅಪ್‌ಡೇಟ್!!..ಹೊಸ ಆಯ್ಕೆ ಏನು ಗೊತ್ತಾ?2018ರಲ್ಲಿ ವಾಟ್ಸ್ಆಪ್ ಮೊದಲ ಅಪ್‌ಡೇಟ್!!..ಹೊಸ ಆಯ್ಕೆ ಏನು ಗೊತ್ತಾ?

ಜೆನ್ ಫೋನ್ ಮ್ಯಾಕ್ ಪ್ಲಸ್ (M1) ಸ್ಮಾರ್ಟ್ ಫೋನ್ ನಲ್ಲಿ 4130mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, 4G VoLTEಯಲ್ಲಿ ಕಾರ್ಯನಿರ್ವಹಿಸಲಿದೆ. ಬ್ಯಾಟರಿ ಬ್ಯಾಳಿಕೆಯನ್ನು ಹೆಚ್ಚು ಮಾಡುವ ಸಲುವಾಗಿ ಪವರ್ ಮಾಸ್ಟರ್ ಫೀಚರ್ ಅನ್ನು ಸಹ ನೀಡಲಾಗಿದೆ.

Best Mobiles in India

Read more about:
English summary
Asus ZenFone Max Plus (M1) price has been announced at the CES 2018 tech show. Asus has announced that the ZenFone Max Plus (M1) will be released in the US with 3GB RAM and 32GB storage space. This variant will be priced at $229 (approx. Rs. 14,500). The sale will debut in February this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X