ಬರೀ 1 ರೂಪಾಯಿಗೆ 1GB ಇಂಟರ್ನೆಟ್!...ಜಿಯೋ ಗತಿ ಏನು?

|

ಭಾರತದಲ್ಲಿ ರಿಲಾಯನ್ಸ್‌ ಜಿಯೋ ಟೆಲಿಕಾಂ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆ ಪರಿಚಯಿಸಿ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೆ ಮಾಡಿತು. ಅದಾದ ಬಳಿಕ ಬಹುತೇಕ ಎಲ್ಲ ಟೆಲಿಕಾಂಗಳು ತಮ್ಮ ಡಾಟಾ ದರವನ್ನು ಇಳಿಕೆ ಮಾಡಿದವು. ಸದ್ಯ ಈಗಲೂ ಜಿಯೋ ಹವಾ ಮುಂದುವರೆದಿದೆ. ಆದ್ರೆ ಲೋಕಲ್ ಸಂಸ್ಥೆಯೊಂದು ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ಟೆಲಿಕಾಂಗೆ ಸೆಡ್ಡು ಹೊಡಯಲು ಮುಂದಾಗಿದೆ.

ವೈಫೈ ಡಬ್ಬಾ

ಹೌದು, ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ 'ವೈಫೈ ಡಬ್ಬಾ'-WIFI Dabba ಸಂಸ್ಥೆಯು ಅತೀ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುವ ಯೋಜನೆ ಜಾರಿ ಮಾಡುವ ಹಂತದಲ್ಲಿದೆ. ಈ ಮೂಲಕ ಜಿಯೋ ಟೆಲಿಕಾಂಗೆ ನೇರ ಫೈಟ್ ನೀಡುವ ಸೂಚನೆ ಹೊರಹಾಕಿದೆ. ಈ ಸಂಸ್ಥೆಯು ಅತೀ ವೇಗದ ಇಂಟರ್ನೆಟ್ ಸೇವೆಯನ್ನು ಕಡಿಮೆ ಬೆಲೆಗೆ ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶ ಹೊಂದಿದೆ.

1ರೂ.ಗೆ 1GB

ವೈಫೈ ಡಬ್ಬಾ ಸಂಸ್ಥೆಯು ಕೇವಲ 1ರೂ.ಗೆ 1GB ಡಾಟಾ ಒದಗಿಸುವ ಪ್ಲ್ಯಾನ್ ಹೊಂದಿದೆ. ಈ ಸೇವೆಯನ್ನು ಮೊದಲು ಬೆಂಗಳೂರಿನಲ್ಲಿಯೇ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯ ಅಗತ್ಯ ನೋಡಿಕೊಂಡು ಇತರೆ ನಗರಗಳಿಗೂ ವಿಸ್ತರಿಸುವ ಯೋಜನೆಗಳಿವೆ ಎಂದಿದೆ. ವೈಫೈ ಡಬ್ಬಾ ಸಂಸ್ಥೆಯ ಇನ್ನಷ್ಟು ಕುತೂಹಲಕರ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿರಿ.

ಕೈಕೊಟ್ಟ ಫೈಬರ್

ಕೈಕೊಟ್ಟ ಫೈಬರ್

ಕೊನೆಯ ಮೈಲಿ ಸಂಪರ್ಕ ಮತ್ತು ಕಡಿಮೆ ಬೆಲೆ ಮೂಲಕ ಗುರಿ ಸಾಧಿಸುಲು ಸಾಧ್ಯ ಎಂದು ಆರಂಭದಲ್ಲಿ ನಂಬಿದ್ದೆವು. ಹಾಗಾಗಿ ನಾವು ಫೈಬರ್ ಇಂಟರ್ನೆಟ್ ಜಾಲ ಹೊಂದಿರುವ ಟೆಲಿಕಾಂಗಳಿಂದ ಇಂಟರ್ನೆಟ್ ಕನೆಕ್ಷನ್ ಪಡೆದು, ISP ಅಗ್ರಿಗೇಟರ್‌ಗಳಾಗಿ ಕೆಲಸ ಮಾಡಿದ್ದೇವೆ. ಆದ್ರೆ ಈಗ ಫೈಬರ್ ಗಿಂತ supernodes-ಸೂಪರ್‌ನೊಡ್ಸ್‌ ತಂತ್ರಜ್ಞಾನ ಉತ್ತಮ ಎಂದು ಅರಿತಿದ್ದೆವೆ ಎಂದು ವೈಫೈ ಡಬ್ಬಾ CEO ಕರಮ್ ಲಕ್ಷ್ಮಣ ಹೇಳಿದ್ದಾರೆ.

1GB ಡಾಟಾಗೆ 1ರೂ.

1GB ಡಾಟಾಗೆ 1ರೂ.

ವೈಫೈ ಡಬ್ಬಾ ಸ್ಟಾರ್ಟ್‌ಅಪ್‌ ಸಂಸ್ಥೆಯು ಕನಿಷ್ಠ ಬೆಲೆಗೆ ಇಂಟರ್ನೆಟ್ ಪರಿಚಯಿಸುವ ಯೋಜನೆ ಮಾಡಿದೆ. ಅದಕ್ಕಾಗಿ ಬರೀ 1ರೂಪಾಯಿಗೆ 1GB ಡಾಟಾ ಒದಗಿಸಲಿದೆ ಎಂದಿದೆ. ಕನಿಷ್ಠ ದರದಲ್ಲಿ ಆಟೋ ಚಾಲಕರಿಗೆ, ವಿದ್ಯಾರ್ಥಿಗಳಿಗೆ, ಸಣ್ಣ ಪುಟ್ಟ ಅಂಗಡಿಕಾರರಿಗೆ ಸೇರಿದಂತೆ ಎಲ್ಲರಿಗೂ ಇಂಟರ್ನೆಟ್ ಬಳಕೆ ಒದಗಿಸುವ ಯೋಜನೆ ಹೊಂದಿದೆ.

supernodes-ತಂತ್ರಜ್ಞಾನ

supernodes-ತಂತ್ರಜ್ಞಾನ

ವೈಫೈ ಸೇವೆ ಪೂರೈಸಲು ಸಂಸ್ಥೆಯು ಇತರ ಮೂಲಗಳನ್ನು ಅವಲಂಭಿಸುವುದಿಲ್ಲ. ಬದಲಿಗೆ ಈ ಸೇವೆಗೆ ಅಗತ್ಯವಿರುವ ಸ್ವಂತ ಹಾರ್ಡವೇರ್ ಮತ್ತು ಸಾಫ್ಟ್‌ವೇರ್ ತಂತ್ರಾಂಶಗಳನ್ನು ಅಭಿವೃದ್ಧಿ ಮಾಡಿಕೊಳ್ಳಲಿದೆ. ಈ ಸೇವೆಯಲ್ಲಿ ಸೂಪರ್‌ನೋಡ್ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದೆ. ಇನ್ನು ಈ ಲೇಸರ್ ಕಣ್ಣುಗಳಿಗೆ ಹಾನಿ ಆಗದು ಎಂದಿದೆ. ಹಾಗೆಯೇ ಇದು ಥರ್ಡ್‌ಪಾರ್ಟಿಗಳಿಗೆ ನೀಡುವ ಹಣ ಉಳಿಕೆ ಮಾಡಲಿದೆ ಹಾಗೂ ಖರ್ಚು ಕಡಿಮೆ ಆಗಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ

ಹೇಗೆ ಕಾರ್ಯನಿರ್ವಹಿಸಲಿದೆ

ಪ್ರತಿ ಸೂಪರ್‌ನೋಡ್‌ ಡಿವೈಸ್‌ಗಳು ಹೋಮ್ ರೋಟರ್‌ಗಳೊಂದಿಗೆ ಕನೆಕ್ಟ್ ಆಗುತ್ತವೆ. ಹೋಮ್ ರೋಟರ್ಸ್‌ಗಳು ಡ್ಯುಯಲ್ ಬ್ಯಾಂಡ್ ಕನೆಕ್ಟಿವಿಟಿ ಸಂಪರ್ಕ ಪಡೆದಿರುತ್ತವೆ. ಸೂಪರ್‌ನೋಡ್ ತಂತ್ರಜ್ಞಾನವು 2 ಕಿ.ಮೀ. ವ್ಯಾಪ್ತಿಯವರೆಗೂ ಸಂಪರ್ಕ ಸಾಧಿಸಬಲ್ಲವು ಅವರು 100 ಜಿಬಿಪಿಎಸ್ ವರೆಗೆ ಥ್ರೋಪುಟ್ ಮಾಡಬಹುದು ಎಂದು ಕಂಪನಿಯು ಹೇಳಿಕೊಂಡಿದೆ.

ನಕಲಿ IRCTC ವೆಬ್‌ಸೈಟ್‌ ಹಾವಳಿ!..ಯಾಮಾರಿದ್ರೆ ದುಡ್ಡು ಹರೋಹರ!

ನಕಲಿ IRCTC ವೆಬ್‌ಸೈಟ್‌ ಹಾವಳಿ!..ಯಾಮಾರಿದ್ರೆ ದುಡ್ಡು ಹರೋಹರ!

ಪ್ರಯಾಣಿಕರು ಈ ಮೊದಲು ರೈಲು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬೇಕಿದ್ದರೇ, ರೈಲ್ವೆ ಸ್ಟೇಷನ್‌ಗೆ ಭೇಟಿ ನೀಡಬೇಕಿತ್ತು. ಆದ್ರೆ, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಶುರುವಾದಾಗಿನಿಂದ ಪ್ರಯಾಣಿಕರಿಗೆ ಮನೆಯಲ್ಲಿ ಕುಳಿತೇ ರೈಲ್ವೆ ಟಿಕೆಟ್ ಬುಕ್ ಮಾಡುವಂತಾಗಿದೆ. ಅದಕ್ಕೆ IRCTC ವೆಬ್‌ಸೈಟ್ ಸೂಕ್ತ ಪ್ಲಾಟ್‌ಫಾರ್ಮ್ ಒದಗಿಸಿದೆ. ಆದರೆ ಆನ್‌ಲೈನ್ ವಂಚಕರು ಇಲ್ಲಿಯೂ ತಮ್ಮ ಕೈಚಳಕ ತೋರಿಸಿದ್ದು, ಗ್ರಾಹಕರು ಯಾಮಾರಿದರೇ ದುಡ್ಡು ಹರೋಹರಾ.

ಹೌದು, IRCTC ವೆಬ್‌ಸೈಟ್‌ ಹೋಲುವ ನಕಲಿ ವೆಬ್‌ಸೈಟ್‌ಗಳನ್ನು ವಂಚಕರು ರಚಿಸಿದ್ದು, ಟೂರ್ ಪ್ಯಾಕೇಜ್ ಬುಕ್ಕಿಂಗ್ ಆಫರ್ ಘೋಷಿಸಿರುವ ಘಟನೆಗಳು ನಡೆದಿವೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಪೋರ್ಟಲ್ ಐಆರ್‌ಸಿಟಿಸಿ-IRCTC ಸಂಸ್ಥೆಯು ‌ಪ್ರಯಾಣಿಕರು ಟೂರ್ ಪ್ಯಾಕೇಜ್ ಬುಕ್ಕಿಂಗ್ ಮಾಡುವಾಗ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಜಾಗೃತವಾಗಿರಬೇಕು ಎಂದು ಹೇಳಿದೆ.

ಇ-ಮೇಲ್ ಮೂಲಕ

ಇ-ಮೇಲ್ ಮೂಲಕ

ನಕಲಿ ವೆಬ್‌ಸೈಟ್‌ಗಳ ಮೂಲಕ ವಂಚಕರು ನೀಡುವ ವಿಶೇಷ ಟೂರ್/ಪ್ರವಾಸದ ಪ್ಯಾಕೇಜ್ ಆಫರ್‌ಗಳ ಆಸೆಗೊಳಗಾಗಬಾರದು ಎಂದು IRCTC ಸಂಸ್ಥೆಯು ಈಗಾಗಲೇ ತನ್ನ ಬಳಕೆದಾರರಿಗೆ ಇ-ಮೇಲ್ ಮೂಲಕ ಎಚ್ಚರಿಕೆಯ ಸಂದೇಶ ಕಳುಹಿಸಿದೆ. ವಂಚಕರು ರಚಿಸಿರುವ ನಕಲಿ ವೆಬ್‌ಸೈಟ್‌ ಬಹುತೇಕ ಪೋರ್ಟಲ್ ಹೋಲುವಂತೆ ಇದೆ. ಹೀಗಾಗಿ ಟೂರ್ ಪ್ಯಾಕೇಜ್ ಬುಕ್ ಮಾಡುವಾಗ ಎಚ್ಚರವಹಿಸಬೇಕಿದೆ.

ನಕಲಿ ವೆಬ್‌ಸೈಟ್

ನಕಲಿ ವೆಬ್‌ಸೈಟ್

ಆನ್‌ಲೈನ್ ವಂಚಕರು ‘www.irctctour.com' ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ರಚಿಸಿದ್ದು, ಇದು ಬಹುತೇಕ ಅಧಿಕೃತ IRCTC ವೆಬ್‌ಸೈಟ್ (www.irctctourism.com) ಹೋಲಿಕೆಯನ್ನು ಪಡೆದಿದೆ. ಸದ್ಯ ಈ ನಕಲಿ ವೆಬ್‌ಸೈಟ್ ಚಾಲ್ತಿಯಲ್ಲಿ ಇಲ್ಲ(This Account has been suspended). ಹೀಗಾಗಿ IRCTC ಹೆಸರನ್ನು ಬಳಸಿ ಇಂತಹ ಯಾವುದೇ ನಕಲಿ ವೆಬ್‌ಸೈಟ್‌ಗಳು ನೀಡುವ ಟೂರ್ ಪ್ಯಾಕೇಜ್‌ಗಳಿಗೆ ಪ್ರಯಾಣಿಕರು ಮಾರು ಹೋಗಬಾರದು.

ಆಫರ್‌ಗಳ ಆಸೆ ತೋರಿಸ್ತಾರೆ

ಆಫರ್‌ಗಳ ಆಸೆ ತೋರಿಸ್ತಾರೆ

ಅಧಿಕೃತ IRCTC ವೆಬ್‌ಸೈಟ್ ಹೊಸ ಆಫರ್, ಕೊಡುಗೆಗಳ ಬಗ್ಗೆ ತನ್ನ ಗ್ರಾಹಕರಿಗೆ ಮೇಲಿಂದ ಮೇಲೆ ಇ-ಮೇಲ್ ಮೂಲಕ ಮಾಹಿತಿ ತಲುಪಿಸುತ್ತದೆ. ಇದೇ ರೀತಿಯಲ್ಲಿ ವಂಚಕರು ಸಹ ತಮ್ಮ ನಕಲಿ ವೆಬ್‌ಸೈಟ್‌ ಮೂಲಕ ಗ್ರಾಹಕರಿಗೆ ಆಫರ್‌ಗಳ ಮೆಸೆಜ್ ಕಳುಹಿಸುವ ತಂತ್ರ ಕಂಡು‌ಕೊಂಡಿದ್ದಾರೆ. ಹೀಗಾಗಿ ಬುಕ್ ಮಾಡುವಾಗ ಜಾಗೃತರಾಗಿರಿ.

IRCTC ಸೇವೆಗಳು

IRCTC ಸೇವೆಗಳು

ಪ್ರಸ್ತುತ IRCTC, ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಆಹಾರ ಮತ್ತು ಪ್ಯಾಕ್ ಮಾಡಿದ ಕುಡಿಯುವ ನೀರಿನ ಸೇವೆ ಒದಗಿಸುತ್ತಿದೆ. ಹಾಗೆಯೇ ಆನ್‌ಲೈನ್ ರೈಲ್ವೆ ಟಿಕೆಟ್‌ಗಳು ಬುಕ್ಕಿಂಗ್ ಮಾಡಲು ಅನುಕೂಲ ಮಾಡಿರುವ ಒಂದು ಘಟಕವಾಗಿದೆ. IRCTC, ವಿವಿಧ ಪ್ರವಾಸೋದ್ಯಮ ವಿಭಾಗಗಳಲ್ಲಿ ಐಷಾರಾಮಿ ರೈಲು ಪ್ರವಾಸಗಳು, ಭಾರತ್ ದರ್ಶನ ವಿಶೇಷ ಪ್ರವಾಸಿ ರೈಲುಗಳು, ರೈಲು ಪ್ರವಾಸ ಪ್ಯಾಕೇಜುಗಳು, ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ಪ್ಯಾಕೇಜುಗಳು, ಲ್ಯಾಂಡ್ ಟೂರ್ ಪ್ಯಾಕೇಜುಗಳು, ಹೋಟೆಲ್ ಬುಕಿಂಗ್ ಇತ್ಯಾದಿಗಳು ಸೇರಿವೆ. ಇದರ ಅಧಿಕೃತ ಪೋರ್ಟಲ್ irctctourism.com ಆಗಿದೆ.

ಪ್ರತಿದಿನ 3GB ಡೇಟಾಗೆ ಬಿಎಸ್ಎನ್ಎಲ್‌ನ ಈ ಒಂದು ಪ್ಲ್ಯಾನ್ ಸಾಕು!

ಪ್ರತಿದಿನ 3GB ಡೇಟಾಗೆ ಬಿಎಸ್ಎನ್ಎಲ್‌ನ ಈ ಒಂದು ಪ್ಲ್ಯಾನ್ ಸಾಕು!

ದೇಶದ ಟೆಲಿಕಾಂ ವಲಯವು ಸದ್ಯ ಪೈಪೋಟಿಯಲ್ಲಿದ್ದು, ಖಾಸಗಿ ಟೆಲಿಕಾಂಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿವೆ. ಈ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ನೇರವಾಗಿ ಟಕ್ಕರ್ ನೀಡುತ್ತಾ ಸಾಗಿದೆ. ಬಿಎಸ್ಎನ್ಎಲ್ ಇತ್ತೀಚಿನ ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳ ಪ್ರಯೋಜನಗಳನ್ನು ನೋಡಿ ಖಾಸಗಿ ಟೆಲಿಕಾಂಗಳು ದಂಗಾಗಿ ಹೋಗಿವೆ. ಏಕೆಂದರೇ ಬಿಎಸ್ಎನ್ಎಲ್ ಹೆಚ್ಚು ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಬಿಎಸ್ಎನ್ಎಲ್ ನೆಟವರ್ಕ

ಬಿಎಸ್ಎನ್ಎಲ್ ನೆಟವರ್ಕ ಸರಿಯಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು, ಆದರೆ ಇರುವುದರಲ್ಲಿ ಬಿಎಸ್ಎನ್ಎಲ್ ನೆಟವರ್ಕ ಎಷ್ಟೋ ಉತ್ತಮ ಅಂತಾ ಅಪ್ಪಿಕೊಳ್ಳುವ ಗ್ರಾಹಕರು ಇದ್ದಾರೆ. ಬಿಎಸ್ಎನ್ಎಲ್ ಇದೀಗ 4G ನೆಟವರ್ಕಗೆ ಲಗ್ಗೆ ಇಟ್ಟಿದ್ದು, ಸದ್ಯದಲ್ಲಿಯೇ ದೇಶದಾದ್ಯಂತ ಎಲ್ಲಾ ಟೆಲಿಕಾಂ ಸರ್ಕಲ್‌ಗಳಲ್ಲಿ ಬಿಎಸ್ಎನ್ಎಲ್ 4G ಸೇವೆ ಲಭ್ಯವಾಗಲಿದೆ. ಇನ್ನು ಬಹುತೇಕ ಗ್ರಾಹಕರು ಬಯಸುವ ಅಧಿಕ ಡೇಟಾ ಮತ್ತು ದೀರ್ಘ ವ್ಯಾಲಿಡಿಟಿ ಸೌಲಭ್ಯಗಳಿರುವ ಪ್ಲ್ಯಾನ್‌ಗಳನ್ನು ಬಿಎಸ್ಎನ್ಎಲ್ ಪರಿಚಯಿಸಿದ್ದು, ಆ ಪ್ಲ್ಯಾನ್‌ಗಳು ಈಗಾಗಲೇ ಚಾಲ್ತಿಯಲ್ಲಿವೆ. ಹಾಗಾದರೆ ಬಿಎಸ್ಎನ್ಎಲ್ ಟೆಲಿಕಾಂನ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು? ಏನೆಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬಿಎಸ್ಎನ್ಎಲ್ ಪ್ರೀಪೇಡ್‌ ಪ್ಲ್ಯಾನ್‌

ಬಿಎಸ್ಎನ್ಎಲ್ ಪ್ರೀಪೇಡ್‌ ಪ್ಲ್ಯಾನ್‌

ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ತಮ್ಮ ಪ್ರೀಪೇಡ್‌ ಬೆಲೆಯಲ್ಲಿ ಏರಿಕೆ ಮಾಡಿದವು. ಬಿಎಸ್‌ಎನ್ಎಲ್ ಸಹ ಬೆಲೆ ಹೆಚ್ಚಳ ಮಾಡುವ ಮಾತುಗಳು ಕೇಳಿಬಂದಿದ್ದವು ಆದರೆ ಯಾವುದೇ ದರ ಏರಿಕೆ ಮಾಡಲಿಲ್ಲ. ಬಿಎಸ್ಎನ್ಎಲ್ ತನ್ನ ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಮತ್ತಷ್ಟು ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಯೋಜನೆಗಳನ್ನು ಮಾಡಿತು. ಅವುಗಳಲ್ಲಿ ವಾರ್ಷಿಕ ಪ್ರೀಪೇಡ್ರ್ ಪ್ಲ್ಯಾನ್ ಹೆಚ್ಚು ಪ್ರಯೋಜನಗಳನ್ನು ಪಡೆದಿದೆ.

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್ ಇದು ವಾರ್ಷಿಕ ಪ್ರೀಪೇಡ್ ಯೋಜನೆ ಆಗಿದೆ. ಒಂದು ವರ್ಷದ 365 ದಿನಗಳ ವ್ಯಾಲಿಡಿಟಿಯನ್ನು ಪಡೆದಿರುವ ಈ ಪ್ಲ್ಯಾನ್ ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಉತ್ತಮ. ಇನ್ನು ಈ ಪ್ಲ್ಯಾನ್ ಪ್ರತಿದಿನ 3GB ಡೇಟಾ ಸೌಲಭ್ಯ ಒದಗಿಸುತ್ತದೆ. ಇದರೊಂದಿಗೆ ಪ್ರತಿದಿನ 250 ನಿಮಿಷಗಳ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳ ಪ್ರಯೋಜನಗಳು ಸೇರಿವೆ. ಇದರೊಂದಿಗೆ ಬಿಎಸ್ಎನ್ಎಲ್ ಟ್ಯೂನ್ ಚಂದಾದಾರಿಕೆ ಸೇವೆ ಪಡೆದಿದೆ.

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್ ಸಹ ಒಂದು ವಾರ್ಷಿಕ ಅವಧಿಯ ಪ್ರೀಪೇಡ್ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಒದಗಿಸುವ ಜೊತೆಗೆ ಪ್ರತಿದಿನ 250 ನಿಮಿಷಗಳ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ನೀಡುತ್ತದೆ. ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳ ಪ್ರಯೋಜನಗಳು ಸೇರಿವೆ. ಇದರೊಂದಿಗೆ ಬಿಎಸ್ಎನ್ಎಲ್ ಟ್ಯೂನ್ ಚಂದಾದಾರಿಕೆ ಸೇವೆ ಪಡೆದಿದೆ.

ಈ ಪ್ಲ್ಯಾನ್ ಉತ್ತಮವೇ?

ಈ ಪ್ಲ್ಯಾನ್ ಉತ್ತಮವೇ?

ಬಿಎಸ್ಎನ್ಎಲ್ ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್ ಮತ್ತು 1,699ರೂ ಪ್ಲ್ಯಾನ್ ಪ್ಲ್ಯಾನ್‌ ಎರಡು ವಾರ್ಷಿಕ ಅವಧಿಯ ಪ್ರೀಪೇಡ್ ಪ್ಲ್ಯಾನ್‌ಗಳಾಗಿವೆ. ಇದರೊಂದಿಗೆ ಪ್ರತಿದಿನ ಡೇಟಾ, ವಾಯಿಸ್‌ ಕರೆ ಸೌಲಭ್ಯ ಸಹ ಪಡೆದಿವೆ ಹಾಗೂ ಎಸ್ಎಮ್ಎಸ್ ಸಹ ಒಳಗೊಂಡಿವೆ. ಹೀಗಾಗಿ ಪ್ರತಿದಿನ 1GB ಗಿಂತಲೂ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೆ ಮತ್ತು ಒಂದು ವರ್ಷದ ವ್ಯಾಲಿಡಿಟಿ ಬೇಕು ಎನ್ನುವ ಗ್ರಾಹಕರಿಗೆ ಈ ಪ್ಲ್ಯಾನ್ ಖಂಡಿತಾ ಉತ್ತಮ ಎಂದು ಹೇಳಬಹುದು.

ಏರ್‌ಟೆಲ್‌ನ ವಾರ್ಷಿಕ ಪ್ಲ್ಯಾನ್

ಏರ್‌ಟೆಲ್‌ನ ವಾರ್ಷಿಕ ಪ್ಲ್ಯಾನ್

ಏರ್‌ಟೆಲ್‌ ಟೆಲಿಕಾಂ ಸಹ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್ ಅನ್ನು ಹೊಂದಿದ್ದು, ಬೆಲೆಯು 2398ರೂ. ಆಗಿದೆ. ಇನ್ನು ಈ ಪ್ಲ್ಯಾನ್ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಸೌಲಭ್ಯಗಳನ್ನು ಒದಗಿಸಲಿದೆ. ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ ಇರಲಿದೆ. ಹಾಗೆಯೇ ಏರ್‌ಟೆಲ್‌ ಆಪ್‌ನ ಇತರೆ ಸೇವೆಗಳು ಸಹ ಲಭ್ಯವಾಗಲಿವೆ.

ವೊಡಾಫೋನ್‌ ವಾರ್ಷಿಕ ಪ್ಲ್ಯಾನ್

ವೊಡಾಫೋನ್‌ ವಾರ್ಷಿಕ ಪ್ಲ್ಯಾನ್

ವೊಡಾಫೋನ್ ಸಂಸ್ಥೆಯು 2399ರೂ.ಬೆಲೆಯ ಪ್ರೀಪೇಡ್‌ ಪ್ಲ್ಯಾನ್ ಒಂದನ್ನು ಹೊಂದಿದ್ದು, ಈ ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ನೀಡಲಿದೆ. ಇನ್ನು ಇದರೊಂದಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಿದೆ. ಹಾಗೆಯೆ ವೊಡಾಫೋನ್ ಆ ಪ್‌ನ ಇತರೆ ಸೇವೆಗಳು ಸಿಗಲಿವೆ.

ಜಿಯೋ ವಾರ್ಷಿಕ ಪ್ಲ್ಯಾನ್ ಹೇಗಿದೆ

ಜಿಯೋ ವಾರ್ಷಿಕ ಪ್ಲ್ಯಾನ್ ಹೇಗಿದೆ

ಜನಪ್ರಿಯ ಜಿಯೋ ಟೆಲಿಕಾಂ ಸಹ 2020ರೂ. ಬೆಲೆಯ ವಾರ್ಷಿಕ ಪ್ರೀಪೇಡ್ ಪ್ಲ್ಯಾನ್‌ ಅನ್ನು ಒಳಗೊಂಡಿದೆ. ಈ ಪ್ರೀಪೇಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಹಾಗೆಯೇ ಜಿಯೋ ಟು ಜಿಯೋ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಇದೆ. ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಒಟ್ಟು 12000 ನಿಮಿಷಗಳ ಉಚಿತ ಕರೆ ಸೌಲಭ್ಯ ಹೊಂದಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್‌ ಸೌಲಭ್ಯ ಇರಲಿದೆ ಹಾಗೂ ಜಿಯೋ ಆಪ್‌ ಸೇವೆಗಳು ಸಿಗುತ್ತವೆ.

3GB ಡೇಟಾ ಯಾವ ಪ್ಲ್ಯಾನ್ ಬೆಸ್ಟ್?

3GB ಡೇಟಾ ಯಾವ ಪ್ಲ್ಯಾನ್ ಬೆಸ್ಟ್?

ಸ್ಮಾರ್ಟ್‌ಫೋನಿನಲ್ಲಿ ಇಂದಿನ ಪ್ರತಿಯೊಂದು ಕೆಲಸಕ್ಕೂ ಇಂಟರ್ನೆಟ್ ಅಗತ್ಯ ಇದೆ. ಹೀಗಾಗಿ ಪ್ರತಿದಿನ ಅಧಿಕ ಇಂಟರ್ನೆಟ್ ಅವಶ್ಯಕತೆ ಬೇಕಾಗುತ್ತದೆ. ಬಹುತೇಕರು 2GB ಡೇಟಾ ಮತ್ತು 3GB ಡೇಟಾ ಸೌಲಭ್ಯವನ್ನು ಬಯಸುತ್ತಾರೆ. ಅಧಿಕ ಡೇಟಾ ಪ್ರಯೋಜನ ಬೇಕಿದ್ದರೇ ಸದ್ಯ ಬಿಎಸ್ಎನ್ಎಲ್‌ನ 1999ರೂ ಹಾಗೂ 1699ರೂ ಪ್ರೀಪೇಡ್‌ ಪ್ಲ್ಯಾನ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಏಕೆಂದರೇ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್‌ಗಳಿಗಿಂತ ಬಿಎಸ್‌ನ್ಎಲ್ ಪ್ಲ್ಯಾನ್ ಯೋಗ್ಯ ಅನಿಸುತ್ತದೆ.

Most Read Articles
Best Mobiles in India

English summary
Bengaluru startup Wifi Dabba is offering 1GB data at just Re 1. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more