Subscribe to Gizbot

ಸದ್ಯ ಡೇಟಾ ಬೆಲೆ 90% ರಷ್ಟು ಕಡಿಮೆ: ಜಿಯೋ ಆರಂಭಕ್ಕೂ ಮುನ್ನ ಹೇಗಿತ್ತು..? ಇಲ್ಲಿದೆ ಶಾಕಿಂಗ್ ವರದಿ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯೂ ಕಳೆದ ಎರಡು ವರ್ಷದಲ್ಲಿ ನಾಟಕೀಯ ಬೆಳಣಿಗೆಗೆ ಸಾಕ್ಷಿಯಾಗಿದ್ದು, ಇದಕ್ಕೆ ರಿಲಯನ್ಸ್ ಮಾಲೀಕತ್ವದ ಜಿಯೋ ನೇರಾ ಕಾರಣ ಎಂದರೆ ತಪ್ಪಾಗುವುದಿಲ್ಲ. 2016 ಡಿಸೆಂಬರ್ ಹಾಗೂ 2017ರ ಡಿಸೆಂಬರ್ ನಲ್ಲಿ ಇದ್ದ ಡೇಟಾ ದರಗಳು ಹಾಗೂ ಕರೆ ದರಗಳನ್ನು ಹೋಲಿಕೆ ಮಾಡಿದರೆ ಶೇ.90ರಷ್ಟು ಡೇಟಾ ದರಗಳು ಕಡಿಮೆಯಾಗಿದ್ದು, ಕರೆದರಗಳು ಶೇ.60ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ.

 ಸದ್ಯ ಡೇಟಾ ಬೆಲೆ 90% ರಷ್ಟು ಕಡಿಮೆ: ಜಿಯೋ ಆರಂಭಕ್ಕೂ ಮುನ್ನ ಹೇಗಿತ್ತು..?

ಈ ಹಿನ್ನಲೆಯಲ್ಲಿ ದೇಶದಲ್ಲಿ ಡೇಟಾ ಮತ್ತು ಕರೆಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ಇಂದು ಒಂದು GB ಸರಾಸರಿ ಡೇಟಾ ಬೆಲೆ ರೂ.19 ಆಗಿದ್ದು, ಹಾಗೆಯೇ ಒಂದು ನಿಮಿಷದ ಕರೆ ದರವು ಸರಾಸರಿ 19 ಪೈಸೆಯಾಗಿದೆ. ಇದು 2016ರದಲ್ಲಿ 49 ಪೈಸೆ ಇತ್ತು ಎನ್ನಲಾಗಿದೆ. ಜಿಯೋ ಆರಂಭದ ನಂತರದಲ್ಲಿ ಮಾರುಕಟ್ಟೆಯ ಪರಿಸ್ಥಿತಿಯೇ ಬದಲಾಗಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕಡಿಮೆ ಬೆಲೆಯ ಸೇವೆಯನ್ನು ನೀಡಲು ಮುಂದಾದವು ಎನ್ನಲಾಗಿದೆ.

2016ರಲ್ಲಿ ಒಂದು GB ಡೇಟಾ ಬೆಲೆ ರೂ.205 ರೂಗಳಾಗಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ ಎಲ್ಲಾ ಕಂಪನಿಗಳು ಆಪರ್ ನೀಡಿದ್ದು, ರೂ.19ಕ್ಕೆ ಒಂದು GB ಡೇಟಾ ದೊರೆಯುತ್ತಿದ್ದು, ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಟೆಲಿಕಾಂ ವಲಯವು ಸಾಕಷ್ಟು ಚರ್ಚೆಯಲ್ಲಿದೆ.

 ಸದ್ಯ ಡೇಟಾ ಬೆಲೆ 90% ರಷ್ಟು ಕಡಿಮೆ: ಜಿಯೋ ಆರಂಭಕ್ಕೂ ಮುನ್ನ ಹೇಗಿತ್ತು..?

ಜಿಯೋ ಉಚಿತ ಸೇವೆಯೊಂದಿಗೆ ಆರಂಭವಾಗಿ ಕಾಲಾನುಕ್ರಮದಲ್ಲಿ ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಪ್ಲಾನ್ ಮಾರಾಟ ಮಾಡಿಕೊಂಡು ಬಂದಿದೆ. ಇದಲ್ಲದೇ ಇತರೆ ಟೆಲಿಕಾಂ ಕಂಪನಿಗಳು ಸಹ ತಮ್ಮ ಬಳಕೆದಾರರನ್ನು ಉಳಿಸಿಕೊಳ್ಳುವ ಸಲುವಾಗಿ ಅತೀ ಕಡಿಮೆ ಬೆಲೆಗೆ ಡೇಟಾ ಮತ್ತು ಕರೆ ಸೇವೆಯನ್ನು ನೀಡುವಂತೆ ಮಾಡಿದೆ.

ಈ ಹಿನ್ನಲೆಯಲ್ಲಿ ಜಿಯೋ ಮಾತ್ರವಲ್ಲದೇ ಟೆಲಿಕಾಂ ಗ್ರಾಹಕರು ಕಡಿಮೆ ಬೆಲೆಗೆ ಅತೀ ಹೆಚ್ಚಿನ ಡೇಟಾವನ್ನು ಬಳಕೆಗೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಗ್ರಾಮೀಣ ಭಾಗಕ್ಕೂ ಗುಣಮಟ್ಟದ ಮೊಬೈಲ್ ಸೇವೆಯೂ ಇದರಿಂದ ಲಭ್ಯವಾಗುತ್ತಿದೆ. ಕೇಲವ ಡೇಟಾ-ಕರೆ ಸೇವೆ ಮಾತ್ರವಲ್ಲದೇ ಇನ್ನು ಹೆಚ್ಚಿನದನ್ನು ಜಿಯೋ ನೀಡಲು ಮುಂದಾಗಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಜಿಯೋ ಬೇಡಿಕೆ ಹೆಚ್ಚಾಗಿದೆ.

English summary
Average Per GB Data Price Decreased by 90% to Rs 19. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot