Subscribe to Gizbot

ವಿಶ್ವದ ಕೆಲವೇ ನಗರಗಳು ಹೊಂದಿರುವ ಇಂಟರ್‌ನೆಟ್‌ ಸ್ಪೀಡ್ ಈಗ ಬೆಂಗಳೂರಿನಲ್ಲಿ!!

Written By:

ವಿಶ್ವದ ಅತ್ಯಂತ ಮುಂಚೂಣಿ ಹೈಟೆಕ್ ಸಿಟಿಯಾಗಿ ಮಾನ್ಯತೆ ಪಡೆದಿರುವ ಬೆಂಗಳೂರು ಇಂದಿನಿಂದ ಒಂದು ಗಿಗಾಬೈಟ್ ವೇಗದ ಇಂಟರ್‌ನೆಟ್ ಸ್ಪೀಡ್ ಹೊಂದಿರಲಿದೆ.! ಹೌದು, ಸಿಲಿಕಾನ್ ಸಿಟಿ ಇನ್ನು ಗಿಗಾಸಿಟಿಯಾಗಿ ಬದಲಾಗಿದ್ದು, ವಿಶ್ವದಲ್ಲಿಯೇ ಕೆಲವೇ ನಗರಗಳು ಹೊಂದಿರುವ ದಾಖಲೆಯ ಮಟ್ಟದ ಇಂಟರ್‌ನೆಟ್‌ ಸ್ಪೀಡ್ ಈಗ ಬೆಂಗಳೂರಿನವರ ಪಾಲಾಗಿದೆ.!!

ಇದೆ ಮೊದಲ ಭಾರಿ ಬೆಂಗಳೂರಿನಲ್ಲಿ ಒಂದು ಗಿಗಾಬೈಟ್ ವೇಗದ ಇಂಟರ್‌ನೆಟ್ ಸೇವೆ ನಗರಕ್ಕೆ ಲಭ್ಯವಾಗಿದ್ದು, ಬೆಂಗಳೂರು ಮೂಲದ ಭಾರತದ ಅತಿದೊಡ್ಡ ಫೈಬರ್ ಬ್ರಾಡ್‌ಬ್ಯಾಂಡ್ ಸೇವಾ ಕಂಪೆನಿ "ಆಕ್ಟ್ ಫೈಬರ್‌ನೆಟ್‌" ನಗರದಲ್ಲಿಂದು ದಾಖಲೆ ಮಟ್ಟದ ಇಂಟರ್‌ನೆಟ್ ಸ್ಪೀಡ್ ಸೇವೆಯನ್ನು ಪ್ರಾರಂಭಿಸಿದೆ.! ಹಾಗಾದರೆ, ಗಿಗಾಬೈಟ್ ವೇಗದ ಇಂಟರ್‌ನೆಟ್‌ ಬೆಲೆ ಎಷ್ಟು? ಇದರಿಂದ ಗ್ರಾಹಕರಿಗೆ ಏನು ಲಾಭ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಿಯಾಂಕ ಖರ್ಗೆ ಅವರಿಂದ ಉದ್ಘಾಟನೆ!!

ಪ್ರಿಯಾಂಕ ಖರ್ಗೆ ಅವರಿಂದ ಉದ್ಘಾಟನೆ!!

ನಗರದಲ್ಲಿ ಮೊಟ್ಟ ಮೊದಲ ಭಾರಿಗೆ "ಆಕ್ಟ್ ಫೈಬರ್‌ನೆಟ್‌" ತಂದಿರುವ ಒಂದು ಗಿಗಾಬೈಟ್ ವೇಗದ ಇಂಟರ್‌ನೆಟ್ ಸೇವೆಯನ್ನು ಕರ್ನಾಟಕ ಸರ್ಕಾರದ ಐಟಿ ಮತ್ತು ಪ್ರವಾಸೋಧ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರು ಉದ್ಘಾಟಿಸಿದರು.! ತಂತ್ರಜ್ಞಾನ ಸಂಬಂಧಿಸಿದಂತೆ ನಾವು ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಡಿಜಿಟಲ್ ಅರ್ಥವ್ಯವಸ್ಥೆ ಗುರಿಗೆ ಈ ಸೇವೆ ಪೂರಕ ಎಂದು ತಿಳಿಸಿದರು.!!

ಗಿಗಾಬೈಟ್ ವೇಗದ ಇಂಟರ್‌ನೆಟ್‌ !!

ಗಿಗಾಬೈಟ್ ವೇಗದ ಇಂಟರ್‌ನೆಟ್‌ !!

ಜಿಯೋ, ಏರ್‌ಟೆಲ್‌ ಕಂಪೆನಿಗಳು ಸೇರಿ ಯಾವುದೇ ಬ್ರಾಡ್‌ಬ್ಯಾಂಡ್ ಸಂಸ್ಥೆಗಳು ಈ ವರೆಗೂ ನೀಡದೆ ಇರುವ ಗಿಗಾಬೈಟ್ ವೇಗದ ಇಂಟರ್‌ನೆಟ್ ಅನ್ನು "ಆಕ್ಟ್ ಫೈಬರ್‌ನೆಟ್‌" ನಗರದಲ್ಲಿಂದು ಬಿಡುಗಡೆ ಮಾಡಿದೆ.! ಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕದಿಂದ ನಾವು ಭಾರತೀಯ ಬ್ರಾಡ್‌ಬ್ಯಾಂಡ್ ಉಧ್ಯಮದಲ್ಲಿ ಸಂಚಲನ ಸೃಷ್ಟಿಸುವುದಾಗಿ ಆಕ್ಟ್ ಫೈಬರ್‌ನೆಟ್ ಮುಖ್ಯಸ್ಥ ಬಾಲಾ ಮಲ್ಲಾಡಿ ಹೇಳಿದ್ದಾರೆ.!!

ಗಿಗಾಬೈಟ್ ವೇಗದ ಇಂಟರ್‌ನೆಟ್‌ ಬೆಲೆ ಎಷ್ಟು?

ಗಿಗಾಬೈಟ್ ವೇಗದ ಇಂಟರ್‌ನೆಟ್‌ ಬೆಲೆ ಎಷ್ಟು?

ಇದೇ ಮೊದಲ ಭಾರಿಗೆ ನಗರಕ್ಕೆ ಕಾಲಿಟ್ಟಿರುವ ಗಿಗಾಬೈಟ್ ವೇಗದ ಇಂಟರ್‌ನೆಟ್‌ "ಆಕ್ಟಾಗಿಗಾ ಪ್ಲಾನ್" ಮಾಸಿಕ 5,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ. ಈ ಆಕ್ಟಾಗಿಗಾ ಪ್ಲಾನ್‌ನಲ್ಲಿ 1250GB ಡೇಟಾ ಗಿಗಾಬೈಟ್ ವೇಗದದಲ್ಲಿ ಸಿಗಲಿದ್ದು, ನಂತರ ವೇಗ 1MBPSಗೆ ಇಳಿಯಲಿದೆ.! 6 ತಿಂಗಳ ಚಂದಾದಾರಿಕೆಗೆ 35,994 ರೂಗಳಾಗಿದ್ದರೆ, ವರ್ಷಕ್ಕೆ 71,988 ರೂಪಾಯಿಗಳಿಗೆ ಈ ಸೇವೆ ಲಭ್ಯವಿದೆ.!!

ಸಣ್ಣ ಉಧ್ಯಮಗಳಿಗೆ ಗಿಗಾಪ್ಲಸ್!!

ಸಣ್ಣ ಉಧ್ಯಮಗಳಿಗೆ ಗಿಗಾಪ್ಲಸ್!!

ಬೆಂಗಳೂರಿನಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳಿದ್ದು, ಅವುಗಳ ಮೇಲೆ ದೃಷ್ಟಿಇಟ್ಟಿರುವ "ಆಕ್ಟ್ ಫೈಬರ್‌ನೆಟ್‌" ಸಣ್ಣ ಉಧ್ಯಮಗಳಿಗೆ ಗಿಗಾಪ್ಲಸ್ ಆಫರ್ ಅನ್ನು ನೀಡಿದೆ. ಈ ಆಫರ್‌ನಲ್ಲಿ ಪ್ರತಿ ತಿಂಗಳೂ 15,000 ರೂಪಾಯಿಗಳಿಗೆ ಒಂದು ಜಿಬಿಪಿಎಸ್ ವೇಗದಲ್ಲಿ 5 ಟಿಬಿ ಡೇಟಾ ಬದಗಿಸಲಿದೆ. ನಂತರ ವೇಗ 5MBPS ವೇಗಕ್ಕೆ ಇಳಿಯಲಿದೆ.!!

ಓದಿರಿ:3G ಗ್ರಾಹಕರು 'ಐಡಿಯಾ'ಗೆ ಪೋರ್ಟ್ ಆಗಲು ಇದೊಂದೇ ಆಫರ್ ಸಾಕು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
introducing 1 GBPS speed internet in bangalore.!! to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot