Subscribe to Gizbot

ಜಿಯೋ ವಿರುದ್ಧ ಬೆಸ್ಟ್‌ ಆಫರ್ ಕೊಟ್ಟ ಏರ್‌ಟೆಲ್‌: ಮಾರುಕಟ್ಟೆಯಲ್ಲಿ ಈ ಮಾದರಿ ಆಫರ್ ಇಲ್ಲವೇ ಇಲ್ಲ.!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋ ನಡುವೆ ದರ ಸಮರದ ತಿಕ್ಕಾಟವೂ ತಾರಕಕ್ಕೇ ಏರಿದೆ. ಎರಡು ಕಂಪನಿಗಳು ಬಳಕೆದಾರರಿಗೆ ಆಫರ್ ಮೇಲೆ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಈ ಬಾರಿ ಏರ್‌ಟೆಲ್ ಹೊಸದೊಂದು ಆಫರ್ ಘೋಷಣೆ ಮಾಡಿದ್ದು, ಈ ಆಫರ್ ಜಿಯೋ ನೀಡಿರುವ ಕೊಡುಗೆಯನ್ನು ಮೀರಿಸುವಂತಿದೆ ಎನ್ನುವ ಮಾತು ಕೇಳಿ ಬಂದಿದೆ.

ಏರ್‌ಟೆಲ್‌: ಮಾರುಕಟ್ಟೆಯಲ್ಲಿ ಈ ಮಾದರಿ ಆಫರ್ ಇಲ್ಲವೇ ಇಲ್ಲ.!

ಈಗಾಗಲೇ ಜಿಯೋ ನೀಡಿರುವ ರೂ. 498 ಆಫರ್ ಎದುರಾಗಿ ಏರ್‌ಟೆಲ್ ಹೊಸ ಆಫರ್ ಅನ್ನು ಲಾಂಚ್ ಮಾಡಿದೆ. ದೇಶದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್‌ಟೆಲ್ ರೂ.499 ಪ್ಲಾನ್‌ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಈ ಮೂಲಕ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿದೆ. ತನ್ನ ಫೋಸ್ಟ್‌ಪೇಯ್ಡ್ ಕುಟುಂಬವನ್ನು ವೃದ್ಧಿಸಿಕೊಳ್ಳುವ ಯೋಜನೆಯನ್ನು ರೂಪಿಸಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?

ಓದಿರಿ: ಐಫೋನ್ X ಅಲ್ಲ, ಟ್ರೆಂಡ್ ಬದಲಾಯಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್: 19:9 ಡಿಸ್‌ಪ್ಲೇ, ಇನ್‌-ಡಿಸ್‌ಪ್ಲೇ ಸ್ಕ್ಯಾನರ್.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೋಸ್ಟ್‌ಪೇಯ್ಡ್‌ ಪ್ಲಾನ್:

ಪೋಸ್ಟ್‌ಪೇಯ್ಡ್‌ ಪ್ಲಾನ್:

ಜಿಯೋ ತನ್ನ ಬಳಕೆದಾರರಿಗೆ ಪ್ರೀಪೇಯ್ಡ್ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿದ್ದು, ಇದರ ಬದಲಾಗಿ ಏರ್‌ಟೆಲ್ ಪೋಸ್ಟ್ ಪೇಯ್ಡ್ ಬಳಕೆದಾರರನ್ನು ಉಳಿಸಿಕೊಳ್ಳುವ ಸಲುವಾಗಿ ರೂ.499 ಪ್ಲಾನ್ ಅನ್ನು ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ನೀಡಲು ಮುಂದಾಗಿದೆ.

40GB ಡೇಟಾ:

40GB ಡೇಟಾ:

ಏರ್‌ಟೆಲ್ ಘೋಷಣೆ ಮಾಡಿರುವ ರೂ.499 ಪ್ಲಾನ್‌ನಲ್ಲಿ ಬಳಕೆದಾರರಿಗೆ 4೦GB 3G/4G ಡೇಟಾ ಬಳಕೆಗೆ ದೊರೆಯಲಿದೆ. ಇದು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಬಳಕೆದಾರರು ಹೆಚ್ಚಿನ ವೇಗದ ಡೇಟಾವನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಉಚಿತ ಕರೆ ಮಾಡುವ ಅವಕಾಶ:

ಉಚಿತ ಕರೆ ಮಾಡುವ ಅವಕಾಶ:

ಇದಲ್ಲದೇ ಏರ್‌ಟೆಲ್ ತನ್ನ ಫೋಸ್ಟ್‌ಪೇಯ್ಡ್ ಬಳಕೆದಾರರು ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಇದರಲ್ಲಿ ಅನ್‌ಲಿಮಿಟೆಡ್ ಲೋಕಲ್ ಕರೆಗಳು, STD ಕರೆ ಮತ್ತು ರೋಮಿಂಗ್ ಸಂದರ್ಭದಲ್ಲಿ ಉಚಿತ ಒಳಬರುವ ಕರೆಗಳು ಮತ್ತು ಹೊರ ಹೋಗುವ ಕರೆಗಳನ್ನು ಮಾಡಬಹುದಾಗಿದೆ.

ಅಮೆಜಾನ್‌ ಪ್ರೈಮ್:

ಅಮೆಜಾನ್‌ ಪ್ರೈಮ್:

ಇದಲ್ಲದೇ ಈ ಪ್ಲಾನ್ ಬಳಕೆದಾರರಿಗೆ ಏರ್‌ಟೆಲ್ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಉಚಿತವಾಗಿ ನೋಡುವಂತಹ ಅವಕಾಶವನ್ನು ಮಾಡಿಕೊಡಲಿದೆ. ಇದಲ್ಲದೇ ವೈಯಾಂಕ್ ಮೂಸಿಕ್, ಲೈವ್ ಟಿವಿ ಮತ್ತು ಹ್ಯಾಂಡ್ ಸೆಟ್ ಡ್ಯಾಮೆಜ್ ಪ್ರೋಟೆಕ್ಷನ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಬೆಸ್ಟ್ ಪೋಸ್ಟ್ ಪೇಯ್ಡ್ ಆಫರ್:

ಬೆಸ್ಟ್ ಪೋಸ್ಟ್ ಪೇಯ್ಡ್ ಆಫರ್:

ಏರ್‌ಟೆಲ್ ಸದ್ಯ ನೀಡುವ ಆಫರ್ ಪೋಸ್ಟ್‌ಪೇಯ್ಡ್‌ನಲ್ಲಿ ಬೆಸ್ಟ್ ಎನ್ನಲಾಗಿದೆ. ಬೇರೆ ಯಾವುದೇ ಕಂಪನಿಗಳು ತಮ್ಮ ಫೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಇಷ್ಟು ಪ್ರಮಾಣದ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio effect: Airtel offering unlimited calls, 40GB data at Rs 499. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot