ಮೈಕ್ರೋಸಾಫ್ಟ್‌ ಜತೆಗೂಡಿ ಬೆಂಗಳೂರಿನ ಶಾಲೆಗಳಿಗೆ ಬಿಬಿಎಂಪಿ ಹೈಟೆಕ್‌ ಟಚ್‌..!

  |

  ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಎಂದುಕೊಂಡಿದ್ದಿರಾ. ಹಾಗಾದರೆ, ಆ ಕೆಲಸಕ್ಕೂ ಮುನ್ನ ಈ ಸುದ್ದಿಯನ್ನು ಓದಿ. ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ, ಸೌಲಭ್ಯಗಳು ಸಿಗುತ್ತವೆ, ಸರ್ಕಾರಿ ಶಾಲೆಯಲ್ಲಿ ಏನೀದೆ ಎಂಬುವವರಿಗೆ ಬಿಬಿಎಂಪಿ ತಕ್ಕ ಉತ್ತರ ನೀಡಲು ಮುಂದಾಗಿದೆ. ಹೌದು, ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

  ಮೈಕ್ರೋಸಾಫ್ಟ್‌ ಜತೆಗೂಡಿ ಬೆಂಗಳೂರಿನ ಶಾಲೆಗಳಿಗೆ ಬಿಬಿಎಂಪಿ ಹೈಟೆಕ್‌ ಟಚ್‌..!

  ಹೌದು, 'ಬಿಬಿಎಂಪಿ ರೋಷಣಿ' ಎನ್ನುವ ಯೋಜನೆ ಆರಂಭಿಸಿರುವ ಬಿಬಿಎಂಪಿ ಮೈಕ್ರೋಸಾಫ್ಟ್‌ ಹಾಗೂ ಟೆಕ್ ಅವಾಂತೆಗಾರ್ಡ್‌ ಸಹಯೋಗದಲ್ಲಿ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆರಿಸುತ್ತಿದೆ. ಈಒಟ್ಟು ಬಿಬಿಎಂಪಿ ವ್ಯಾಪ್ತಿಯ 153 ಶಾಲೆಗಳು ಯೋಜನೆಯ ವ್ಯಾಪ್ತಿಗೆ ಒಳಪಡುತ್ತಿದೆ. ಹಾಗಿದ್ದರೆ, 'ಬಿಬಿಎಂಪಿ ರೋಷಣಿ' ಏನೇಲ್ಲಾ ವಿಶೇಚತೆ ಹೊಂದಿದೆ..? ಶಾಲೆಗಳನ್ನು ಯಾವ ರೀತಿ ಮೇಲ್ದರ್ಜೆಗೇರಿಸಲಾಗುತ್ತದೆ..? ಮೈಕ್ರೊಸಾಫ್ಟ್‌ ಜತೆ ಬೇರೆ ಯಾವ ಕಂಪನಿಗಳು ಯೋಜನೆಯ ಸಹಭಾಗಿತ್ವ ಹೊಂದಿವೆ..? ಎಂಬುದನ್ನು ಮುಂದೆ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಏನೀದು ಬಿಬಿಎಂಪಿ ರೋಷಣಿ..?

  ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಅಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ 21ನೇ ಶತಮಾನದ ಕಲಿಕೆಯನ್ನು ನೀಡಲಾಗುವುದು. ಮತ್ತು 4 ಗೋಡೆಯ ಮಧ್ಯದ ಶಿಕ್ಷಣವನ್ನು ಸಂಪರ್ಕಿತ ಶಿಕ್ಷಣ ಸಮುದಾಯವನ್ನಾಗಿ ಪರಿವರ್ತಿಸುವ ಅಂಶವನ್ನು ಬಿಬಿಎಂಪಿ ರೋಷಣಿ ಹೊಂದಿದೆ. ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ತಯಾರಿಸುವ ಗುರಿ ಹೊಂದಿದ್ದು, ಯಾವ ಮಗುವು ಕೂಡ ಹಿಂದುಳಿಯಬಾರದೆಂಬ ಮಹತ್ತರ ಉದ್ದೇಶವನ್ನು ಈ ಯೋಜನೆ ಹೊಂದಿದೆ.

  ಯೋಜನೆಯ ಕಾರ್ಯನಿರ್ವಹಣೆ

  ಅತಿ ಹಿಂದುಳಿದ ಶಾಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಶಾಲೆಗಳು ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಲಿದ್ದು, ಸ್ಥಳೀಯ ಕಲೆ, ತಂತ್ರಜ್ಞಾನವನ್ನು ಪ್ರತಿನಿಧಿಸಲಿವೆ. ಈ ಶಾಲೆಗಳಲ್ಲಿ ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, STEM & STEAM (Robotics) usage of Cloud, IOT & Bots ಹೊಂದಿರಲಿವೆ.

  ಶಿಕ್ಷಕರಿಗೆ ತರಬೇತಿ

  ಬಿಬಿಎಂಪಿ ರೋಷಣಿ ಯೋಜನೆಯಲ್ಲಿ ಆಯ್ಕೆಯಾದ ಶಾಲೆಯ ಶಿಕ್ಷಕರಿಗೆ 21ನೇ ಶತಮಾನದ ಬೋಧನೆಯ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುವುದು. ಭವಿಷ್ಯದ ತರಗತಿಯ ಬಗ್ಗೆ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿ ಮಕ್ಕಳನ್ನು ಭವಿಷ್ಯಕ್ಕಾಗಿ ರೂಪಿಸಲಾಗುತ್ತದೆ.

  ಪಾಲಕರ ಸಹಭಾಗಿತ್ವ

  ಬಿಬಿಎಂಪಿ ರೋಷಣಿ ಯೋಜನೆಯಲ್ಲಿ ಮಕ್ಕಳ ಪಾಲಕರು ನೇರವಾಗಿ ಭಾಗವಹಿಸುತ್ತಾರೆ. ಶಾಲೆಗಳಲ್ಲಿ ಅಥವಾ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಿರಂತರವಾಗಿ ಪಾಲಕರಿಗೆ ತಿಳಿಸಲಾಗುತ್ತದೆ. ಅದಲ್ಲದೇ ಅನೇಕ ಶಾಲಾ ಚಟುವಟಿಕೆಗಳಲ್ಲಿ ಪಾಲಕರನ್ನು ಭಾಗವಹಿಸುವಂತೆ ಮಾಡಿ ಅವರ ಅನುಭವ, ಮೌಲ್ಯಗಳನ್ನು ಮಕ್ಕಳಿಗೆ ನೀಡುವಂತೆ ಬಿಬಿಎಂಪಿ ರೋಷಣಿ ಮಾಡುತ್ತದೆ.

  ವಿಶ್ವದ ಮೊದಲ ಸಂಪರ್ಕಿತ ಕಲಿಕಾ ಸಮುದಾಯ

  ಬಿಬಿಎಂಪಿ ರೋಷಣಿ ಯೋಜನೆಯು ವಿಶ್ವದ ಮೊದಲ ಸಂಪರ್ಕಿತ ಕಲಿಕಾ ಸಮುದಾಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಲಿಕೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಯಾವಾಗ ಬೇಕಾದರೂ, ಎಲ್ಲಿಯಾದರೂ ಕಲಿಯುವ, ಭೋದಿಸುವ ಆಯ್ಕೆ ಲಭ್ಯವಿದೆ. ಇಲ್ಲಿ ಕಲಿಕೆ ಪ್ರಸ್ತುತ, ವೈಯುಕ್ತಿಕವಾಗಿರುತ್ತದೆ. ಶಾಲೆಗಳು ಸಹ ಪಾರದರ್ಶಕತೆ ಹಾಗೂ ಉತ್ತಮ ಕಾರ್ಯನಿರ್ವಹಣೆಯನ್ನು ಹೊಂದಿರುತ್ತವೆ. ಶಾಲೆ, ಕ್ಯಾಂಪಸ್‌, ಮನೆ, ಗ್ರಂಥಾಲಯ, ಉದ್ಯಮ ಹಾಗೂ ಜಾಗತಿಕ ಸಂಪನ್ಮೂಲಗಳ ಜತೆ ಕಲಿಕೆಯು ಮೊದಲ ಸಂಪರ್ಕಿತ ಕಲಿಕಾ ಸಮುದಾಯದಲ್ಲಿ ನಡೆಯುತ್ತದೆ.

  ಹೀಗಾಗಲೇ ಕಾರ್ಯಾರಂಭ

  ಬಿಬಿಎಂಪಿ ರೋಷಣಿ ಯೋಜನೆ ಹೀಗಾಗಲೇ ಕಾರ್ಯರಂಭ ಮಾಡಿದ್ದು, ಶಾಲೆ, ಶಿಕ್ಷಕರು, ವಿದ್ಯಾರ್ಥಿಗಳು, ಸೌಲಭ್ಯಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿದೆ. ಶಿಕ್ಷಕರ ಭೋದನಾ ಕೌಶಲ್ಯಗಳನ್ನು ಅಂದಾಜಿಸಲಾಗಿದ್ದು, School ERP, Connected Portal ಮತ್ತು e-Governanceಗಳನ್ನು ಅಭಿವೃದ್ಧಿ ಪಡಿಸಿ ಶಾಲೆಗಳನ್ನು ಟ್ರಾಕ್‌ ಮಾಡಲು ಆರಂಭಿಸಲಾಗಿದೆ. ಶಿಕ್ಷಕರಿಗೆ ತರಬೇತಿ ಪ್ರಾರಂಭವಾಗಿದೆ.

  ಕೌನ್ಸಿಲ್‌ಗಳ ರಚನೆ

  ಬಿಬಿಎಂಪಿ ರೋಷಣಿ ಯೋಜನೆಯಡಿ ಆಡಳಿತ ಮತ್ತು ನಿರ್ವಹಣೆ ಕೌನ್ಸಿಲ್‌ಗಳು ರಚನೆಯಾಗಲಿವೆ. ಕ್ರೀಡೆ, ಕಲೆ, ಬಾಹ್ಯಾಕಾಶ, ಇತಿಹಾಸ ಮತ್ತು ಪುರಾತತ್ವ, ಸಂಸ್ಕೃತಿ, ಪರಿಸರ ಮತ್ತು ಸುಸ್ಥಿರತೆಯ ಕುರಿತು ಸಲಹಾ ಸಮಿತಿಗಳು ರಚನೆಯಾಗುತ್ತವೆ. ಈ ಸಲಹಾ ಸಮಿತಿಗಳಲ್ಲಿ ಪರಿಣಿತರಿದ್ದು, ಅವರಿಂದ ಬಿಬಿಎಂಪಿ ವಿದ್ಯಾರ್ಥಿಗಳು ಕಲಿಯುತ್ತಾರೆ.

  ಮೈಕ್ರೋಸಾಫ್ಟ್‌ನಿಂದ ಹೇಗೆ..?

  ಟೆಕ್ ಅವಾಂತೆ ಗಾರ್ಡ್‌ ಮತ್ತು ಮೈಕ್ರೋಸಾಫ್ಟ್‌ ಸಹಯೋಗದಲ್ಲಿ ಬಿಬಿಎಂಪಿ ರೋಷಣಿ ಯೋಜನೆ ಆರಂಭವಾಗುತ್ತಿದ್ದು, ಮೈಕ್ರೋಸಾಫ್ಟ್‌ ಈ ಯೋಜನೆಯಲ್ಲಿ ವಿಂಡೋಸ್, ಮೈಕ್ರೋಸಾಪ್ಟ್‌ ಆಫೀಸ್‌ 365ನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಉವಿತವಾಗಿ ನೀಡಲಿದೆ. ತರಗತಿಗಳಲ್ಲಿ ಸ್ಕೈಪ್‌, ಒನ್‌ನೋಟ್‌, Learning Apps on 5C's, ಶಿಕ್ಷಕರಿಗೆ ತರಬೇತಿ ಮತ್ತು ಪ್ರಮಾಣ ಪತ್ರ, ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಸಾಧನಗಳನ್ನು ವಿತರಿಸಿ 21ನೇ ಶತಮಾನದ ಕಲಿಕೆಗೆ ಅನುವು ಮಾಡಿಕೊಡುತ್ತದೆ.

  ಯಾವ್ಯಾವ ಸಂಸ್ಥೆಗಳು ಸಹಭಾಗಿತ್ವ..?

  ಬಿಬಿಎಂಪಿ ರೋಷಣಿ ಯೋಜನೆಯಲ್ಲಿ ಮೈಕ್ರೋಸಾಫ್ಟ್‌ ಮತ್ತು ಟೆಕ್‌ ಅವಾಂತೆ ಗಾರ್ಡ್‌ ಪ್ರಮುಖ ಸಹಯೋಗ ಹೊಂದಿವೆ. ಇವೇರಡು ಕಂಪನಿಗಳಲ್ಲದೇ Lycee Corp, Ararat, Knowledge Key Foundation, Odin, Tech Bar, Dooradarshan, Quality Council India for accrediation of School, Teachers office and support Staff ಸಂಸ್ಥೆಗಳು ಸಹಭಾಗಿತ್ವವನ್ನು ಹೊಂದಿವೆ.

  ಪರಮೇಶ್ವರ್‌ ಅಭಿನಂದನೆ

  ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮೈಕ್ರೋಸಾಫ್ಟ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾರ್ಪೊರೇಷನ್ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡಬೇಕಾಗಿದೆ. ಬಿಬಿಎಂಪಿಯ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಇದನ್ನು ಬದಲಾಯಿಸಲು ಬಿಬಿಎಂಪಿ ರೋಷಣಿ ಯೋಜನೆಯನ್ನು ಮೈಕ್ರೋಸಾಫ್ಟ್‌ ಮತ್ತು ಟೆಕ್‌ ಅವಾಂತೆ ಗಾರ್ಡ್‌ ಸಂಸ್ಥೆಗಳು ಕೈ ಜೋಡಿಸಿವೆ. ಮೈಕ್ರೋಸಾಫ್ಟ್‌ನ್ನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

  560 ಕೋಟಿ ರೂ. ವಿನಿಯೋಗ

  ಬಿಬಿಎಂಪಿ ರೋಷಣಿ ಯೋಜನೆಗೆ ಮುಂದಿನ 5 ವರ್ಷಗಳಲ್ಲಿ 500 ಕೋಟಿ ರೂ.ಯನ್ನು ಮೈಕ್ರೋಸಾಫ್ಟ್‌ ವಿನಿಯೋಗಿಸಲಿದ್ದು, ಬೆಂಗಳೂರಿನ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಆಧುನಿಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ನೀಡಲಿದೆ.

  ಸಿಎಂ ಚಾಲನೆ

  ಟೌನ್‌ಹಾಲ್‌ನಲ್ಲಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರ್‌ಸ್ವಾಮಿ ಮೈಕ್ರೋಸಾಫ್ಟ್‌ ಮತ್ತು ಟೆಕ್‌ ಅವಾಂತೆಗಾರ್ಡ್ ಸಹಯೋಗದ 'ಬಿಬಿಎಂಪಿ ರೋಷಣಿ' ಯೋಜನೆಗೆ ಚಾಲನೆ ನೀಡಿದ್ದಾರೆ.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಶಾಸಕ ಉದಯ್‌ ಬಿ ಗರುಡಾಚಾರ್, ಬಿಬಿಎಂಪಿ ಮೇಯರ್‌ ಸಂಪತ್‌ ರಾಜ್‌ ಮತ್ತೀತರರು ಇದ್ದರು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  BBMP, Microsoft to launch 'Project BBMP Roshini to implement digital learning in BBMP schools. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more