ಆಕ್ಸಿಮೀಟರ್ ಆಪ್‌ ಡೌನ್‌ಲೋಡ್ ಮಾಡುವಾಗ ಇರಲಿ ಎಚ್ಚರ!

|

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ಇದೀಗ ಕಡಿಮೆ ಆಗುತ್ತಾ ಬರುತ್ತಿದೆ. ಆದರೆ ಈ ಎರಡನೇ ಅಲೆಯು ಜನರನ್ನು ಹೆಚ್ಚಾಗಿ ಬಾಧಿಸಿದ್ದು, ಬಹುತೇಕ ಸೋಂಕಿತರಲ್ಲಿ ಉಸಿರಾಟದ ಸಮಸ್ಯೆಯನ್ನು ಉಂಟು ಮಾಡಿದೆ. ಈ ನಿಟ್ಟಿನಲ್ಲಿ ದೇಹದಲ್ಲಿನ ಆಮ್ಲಜನಕ ಮಟ್ಟ ತಿಳಿಯಲು ಜನರು ಆಕ್ಸಿಮೀಟರ್ ಖರೀದಿಸುವುದು ಈಗ ಸಾಮಾನ್ಯ ಆಗಿದೆ. ಇನ್ನು ಕೆಲವರು ಆಕ್ಸಿಜನ ಮಟ್ಟ ತಿಳಿಸುವ ಆಯ್ಕೆ ಹೊಂದಿರುವ ಸ್ಮಾರ್ಟ್‌ವಾಚ್, ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ಗಳ ಬಳಕೆ ಮಾಡುತ್ತಾರೆ. ಹಾಗೆಯೇ ಆಕ್ಸಿಜನ ಮಟ್ಟ ತಿಳಿಸುವ ಆಪ್‌ಗಳು ಲಭ್ಯ ಇವೆ.

ಅಮ್ಲಜನಕ

ಹೌದು, ಕೋವಿಡ್ ಕಾರಣದಿಂದಾಗಿ ದೇಹದ ಅಮ್ಲಜನಕ ಮಟ್ಟದ ಮೇಲೆ ನಿಗಾ ಇಡುಲು ಆಕ್ಸಿಮೀಟರ್‌ಗಳ ಅಗತ್ಯ ಇದ್ದು, ಹೀಗಾಗಿ ಆಕ್ಸಿಮೀಟರ್‌ಗಳ ಬೇಡಿಕೆಯು ಹೆಚ್ಚಾಗಿದೆ. ಹಾಗೆಯೇ ಪ್ಲೇ ಸ್ಟೋರ್‌ನಲ್ಲಿ ಆಕ್ಸಿಜನ ಮಟ್ಟ ತಿಳಿಸುವ ಆಪ್‌ಗಳು ಸೇರಿವೆ. ಆದರೆ ಅವುಗಳಲ್ಲಿ ಬಹುತೇಕ ನಕಲಿ ಆಪ್‌ಗಳು ಎನ್ನುವುದನ್ನು ಗಮನಿಸಬೇಕು. ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಅನೇಕ ಡೆವಲಪರ್‌ಗಳು ಪ್ಲೇ ಸ್ಟೋರ್‌ನಲ್ಲಿ ನಕಲಿ ಆಕ್ಸಿಮೀಟರ್ ಅಪ್ಲಿಕೇಶನ್‌ಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅವುಗಳನ್ನು ಭದ್ರತಾ ಸಂಶೋಧಕರು ಗುರುತಿಸಿದ್ದಾರೆ.

ನಕಲಿ

ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ಗಳ ತಂಡವು ಬಳಕೆದಾರರ ಬ್ಯಾಂಕಿಂಗ್ ಮಾಹಿತಿ ಕದಿಯಲು ಈ ರೀತಿಯ ನಕಲಿ ಮಾಲ್ವೇರ್ ಆಪ್‌ಗಳು ಉದ್ದೇಶಗಳನ್ನು ಹೊಂದಿರುತ್ತವೆ. ಮಾಲ್‌ವೇರ್ ಲೇಖಕರು ಟ್ರೋಜನ್‌ನೊಂದಿಗೆ ಅಧಿಕೃತ ಅಪ್ಲಿಕೇಶನ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಂಡುಹಿಡಿದಿದೆ. ಸೈಬರ್ ವಂಚಕರು ಮುಖ್ಯವಾಗಿ ಅಪ್ಲಿಕೇಶನ್ ಸ್ಟೋರ್ ಗುರಿಯಾಗಿಸುತ್ತಾರೆ, ಅಲ್ಲಿ ಉಚಿತ ಮತ್ತು ಪೇಯ್ಡ್‌ ಅಪ್ಲಿಕೇಶನ್‌ಗಳು ಲಭ್ಯವಿದೆ. QooApp, Huawei ನಂಹತ ವಿಭಿನ್ನ ನಕಲಿ ಅಪ್ಲಿಕೇಶನ್ ಮಾರುಕಟ್ಟೆಗಳನ್ನು ನಿಯೋಜಿಸಲು ಅವರು ಫೈರ್‌ಬೇಸ್ ಅಥವಾ ಗಿಟ್‌ಹಬ್‌ನಂತಹ ವಿಭಿನ್ನ ಸಾಧನಗಳನ್ನು ಬಳಸುತ್ತಾರೆ.

ತೆರೆಯದಂತೆ

ಸಂದೇಶಗಳ ಮೂಲಕ ಅಥವಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಲಾದ ಲಿಂಕ್‌ಗಳನ್ನು ತೆರೆಯದಂತೆ ಅವರು ಸಲಹೆ ನೀಡಿದರು. ಹೀಗಾಗಿ ಬಳಕೆದಾರರು ಪ್ರತಿಯೊಂದು ಹಂತದಲ್ಲೂ ಜಾಗರೂಕರಾಗಿರುವುದು ಅತ್ಯಂತ ನಿರ್ಣಾಯಕವಾಗಿದೆ ಎಂದು ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ಗಳ ತಂಡವು ಹೇಳಿದೆ. ಇನ್ನು ಸಾಮಾನ್ಯವಾಗಿ ಹ್ಯಾಕರಗಳು ಆಪ್ ವಿವರಣೆಯಲ್ಲಿ ತಪ್ಪಾದ ಇಂಗ್ಲಿಷ್ ಬಳಕೆ ಮಾಡಿರುತ್ತಾರೆ. ಈ ಬಗ್ಗೆ ಗಮನಿಸಿ ಎಂದು ಹೇಳಿದ್ದಾರೆ. ಅಲ್ಲದೇ ನಕಲಿ ಆಪ್‌ಗಳು ಕಡಿಮೆ ರೇಟಿಂಗ್ ಮತ್ತು ವಿಮರ್ಶೆ ಹೊಂದಿರುತ್ತವೆ ಇದನ್ನು ಗಮನಿಸಬಹುದು ಎಂದಿದ್ದಾರೆ.

ಪಲ್ಸ್‌ ಆಕ್ಸಿಮೀಟರ್ ಅನ್ನು ಸರಿಯಾಗಿ ಬಳಸುವುದು ಹೇಗೆ:

ಪಲ್ಸ್‌ ಆಕ್ಸಿಮೀಟರ್ ಅನ್ನು ಸರಿಯಾಗಿ ಬಳಸುವುದು ಹೇಗೆ:

- ರಕ್ತದ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುವ ಮೊದಲು, ನೀವು 10-15 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು ಮತ್ತು ಆಳವಾದ ಉಸಿರಾಟವನ್ನು ತೆಗೆದುಕೊಳ್ಳಬೇಕು. ಇದು ನಿಖರವಾದ ಅಳತೆಗೆ ಸಹಾಯ ಮಾಡುತ್ತದೆ.

- ನೀವು ಎದೆಯ ಮೇಲೆ ಒಂದು ಕೈಯನ್ನು ವಿಶ್ರಾಂತಿ ಮಾಡಬೇಕು ಮತ್ತು ಸ್ವಲ್ಪ ಸಮಯದವರೆಗೆ ಇನ್ನೂ ಹಿಡಿದಿರಬೇಕು

ಮಧ್ಯ

- ಬಲ ಬೆರಳನ್ನು ಆರಿಸಿ. ನಿಮ್ಮ ಮಧ್ಯ ಅಥವಾ ತೋರು ಬೆರಳಿನಲ್ಲಿ ಆಕ್ಸಿಮೀಟರ್ ಇರಿಸಿ. ಆಕ್ಸಿಮೀಟರ್ ರಾಂಡೋಮ್ ಅಂಕಿಗಳನ್ನು ತೋರಿಸುತ್ತಿದೆ ಎಂದು ನೀವು ಭಾವಿಸಿದರೆ, ಕೈ ಬದಲಾಯಿಸಿ ಮತ್ತು ಮತ್ತೆ ಪ್ರಯತ್ನಿಸಿ.

- ಪಲ್ಸ್‌ ಆಕ್ಸಿಮೀಟರ್‌ನಲ್ಲಿ ರೀಡಿಂಗ್ ಸ್ಥಿರವಾಗುವವರೆಗೆ, ಆಕ್ಸಿಮೀಟರ್ ಅನ್ನು ಬೆರಳಿಂದ ತೆಗೆಯಬಾರದು.

Best Mobiles in India

English summary
Beawar of Fake oximeter apps on Google Play Store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X