ಜಿಯೋ ಎಫೆಕ್ಟ್..ಆರು ತಿಂಗಳಲ್ಲಿ ಬೆಂಗಳೂರಿನೆಲ್ಲೇಡೆ ಉಚಿತ ವೈಫೈ ಭಾಗ್ಯ!

|

ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ರಿಲಾಯನ್ಸ್ ಜಿಯೋ ಕಂಪೆನಿ ಬೆಂಗಳೂರು ನಗರಕ್ಕೆ ಉಚಿತ ವೈಫೈ ಭಾಗ್ಯವನ್ನು ಕರುಣಿಸಿದೆ. ನಗರದ ವಸತಿ ಪ್ರದೇಶವೊಂದರಲ್ಲಿ ಇದೇ ಮೊದಲ ಬಾರಿಗೆ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, ಗೋವಿಂದರಾಜನಗರ ವಾರ್ಡ್‌ನ 3 ಕಿ.ಮೀ. ವ್ಯಾಪ್ತಿಯಲ್ಲಿ ಜನರು ಉಚಿತ ಅಂತರ್ಜಾಲವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ದೇಶದಲ್ಲಿ ಸುಮಾರು 60 ಕೋಟಿ ಜನರು ಅಂತರ್ಜಾಲ ಬಳಕೆದಾರರಾಗಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಗರವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ಸಲುವಾಗಿ ಆರು ತಿಂಗಳಲ್ಲಿ ನಗರದ ಎಲ್ಲ ಭಾಗಗಳಿಗೂ ಉಚಿತ ವೈಫೈ ಸೌಲಭ್ಯ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಜಿಯೋ ಎಫೆಕ್ಟ್..ಆರು ತಿಂಗಳಲ್ಲಿ ಬೆಂಗಳೂರಿನೆಲ್ಲೇಡೆ ಉಚಿತ ವೈಫೈ ಭಾಗ್ಯ!

ಗೋವಿಂದರಾಜನಗರ ವಾರ್ಡ್‌ನ ನಾಗರಬಾವಿ ಪ್ರದೇಶಕ್ಕೆ ಈ ಜಿಯೋ ಉಚಿತ ವೈಫೈ ಅನ್ನು ನೀಡಲಾಗಿದ್ದು, ಉಚಿತ ವೈಫೈ ಒದಗಿಸಲೆಂದೇ ಜಿಯೋ ಭಾರೀ ಬಂಡವಾಳವನ್ನು ಹೂಡಿದೆ. ಹಾಗಾದರೆ, ಜಿಯೋ ನೀಡಿರುವ ಉಚಿತ ವೈಫೈ ಎಷ್ಟು ? ಉಚಿತ ವೈಫೈ ಬಳಕೆ ಮಾಡಿಕೊಳ್ಳುವುದು ಹೇಗೆ? ಇದರಿಂದ ಜಿಯೋಗೇನು ಲಾಭ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ನಾಗರಬಾವಿ ರಸ್ತೆಯಲ್ಲಿ ವೈಫೈ!

ನಾಗರಬಾವಿ ರಸ್ತೆಯಲ್ಲಿ ವೈಫೈ!

ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವ ನಾಗರಬಾವಿ ರಸ್ತೆಯಲ್ಲಿ ವೈಫೈ ಹೆಚ್ಚು ಸಿಗಲಿದೆ. ನಾಗರಬಾವಿ ಮುಖ್ಯರಸ್ತೆಯಲ್ಲಿ ನಿತ್ಯ ಸಾವಿರಾರು ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರು ಓಡಾಡುವುದರಿಂದ ಅವರಿಗೂ ಮತ್ತು ಅಲ್ಲಿನ ನಿವಾಸಿಗಳಿಗೂ ಜಿಯೋ ಉಚಿತ ವೈಫೈ ಲಭ್ಯವಾಗಲಿದೆ.

2.50 ಕೋಟಿ ರೂ.ವೆಚ್ಚ!

2.50 ಕೋಟಿ ರೂ.ವೆಚ್ಚ!

ನಾಗರಬಾವಿ ಮುಖ್ಯರಸ್ತೆಯಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಸಲುವಾಗಿ ರಿಲಯನ್ಸ್ ಜಿಯೋ ಕಂಪೆನಿ 2.50 ಕೋಟಿ ರೂ. ವೆಚ್ಚ ಮಾಡಿದೆ. ಇದಲ್ಲದೇ ಬೆಂಗಳೂರು ಮಹಾನಗರ ಪಾಲಿಕೆಗೆ 24 ಲಕ್ಷ ರೂ. ಶುಲ್ಕವನ್ನು ಕೂಡ ಜಿಯೋ ಪಾವತಿಸಿದೆ ಎಂದು ತಿಳಿದುಬಂದಿದೆ.!

ಎಷ್ಟು ಉಚಿತ ವೈಫೈ ಲಭ್ಯ?

ಎಷ್ಟು ಉಚಿತ ವೈಫೈ ಲಭ್ಯ?

ಉಚಿತ ವೈಫೈ ಸೌಲಭ್ಯ ಕಲ್ಪಿಸುವ ಸಲುವಾಗಿ 2.50 ಕೋಟಿ ರೂ. ವೆಚ್ಚ ಮಾಡಿರುವ ಜಿಯೋ ಮಿತಿಯಿಲ್ಲದ ಅಂತರ್ಜಾಲ ಸಂಪರ್ಕವನ್ನು ನೀಡಲು ಮುಂದಾಗಿದೆ. ಗೋವಿಂದರಾಜನಗರ ವಾರ್ಡ್‌ನ ನಾಗರಬಾವಿ ಪ್ರದೇಶದ 3 ಕಿ.ಮೀ. ವ್ಯಾಪ್ತಿಯಲ್ಲಿ ಜನರು ಉಚಿತ ಅಂತರ್ಜಾಲವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಅಂತರ್ಜಾಲ ಬಳಕೆ ವೇಗ ಎಷ್ಟು?

ಅಂತರ್ಜಾಲ ಬಳಕೆ ವೇಗ ಎಷ್ಟು?

ದಿನದ 24 ಗಂಟೆಗಳ ಕಾಲ ಉಚಿತವಾಗಿ ವೈಫೈ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶವಿರುವ ಜಿಯೋ ವೈಫೈ ವೇಗ 3 ರಿಂದ 4 ಎಂಬಿಪಿಎಸ್ ಆಗಿದೆ. ವೈಫೈ ಸಂಪರ್ಕಕ್ಕಾಗಿ ಈಗಾಗಲೇ 15 ಸ್ಮಾರ್ಟ್‌ ಪೋಲ್‌ಗಳನ್ನು ಅಳವಡಿಸಲಾಗಿದ್ದು, ಈಗಾಗಲೇ ಉಚಿತ ವೈಫೈ ನಾಗರಬಾವಿ ಪ್ರದೇಶಗಲ್ಲಿ ಜನರಿಗೆ ಉಚಿತ ವೈಫೈ ದೊರೆಯುತ್ತಿದೆ.!

ಜಿಯೋಗೆ ಏನು ಲಾಭ?

ಜಿಯೋಗೆ ಏನು ಲಾಭ?

ದಿನದ 24 ಗಂಟೆಗಳ ಕಾಲ ಉಚಿತವಾಗಿ ವೈಫೈ ನೀಡುವುದರಿಂದ ಜಿಯೋ ಕಂಪೆನಿ ತನ್ನ ಸೇವೆಗಳನ್ನು ಹೆಚ್ಚು ಜನರಿಗೆ ತಲುಪಿಸಲು ಮುಂದಾಗಿದೆ. ಜಿಯೋ ಉಚಿತ ವೈಫೈ ನೀಡುವ ಅತ್ಯಂತ ದೊಡ್ಡ ಪ್ರಯೋಜನವೆಂದರೆ, ವೈಫೈ ಮೂಲಕ ಜನರು ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಸಿದರೆ ಗ್ರಾಹಕರು ಮುಂದೆ ಉಳಿಯಲು ಒಲವು ತೋರುತ್ತಾರೆ. ಮತ್ತು ಜಾಹಿರಾತು ಆದಾಯ ಹೆಚ್ಚುತ್ತದೆ ಎಂದು ತಿಳಿಯಬಹುದಾಗಿದೆ.!

Best Mobiles in India

English summary
All 198 wards of Bengaluru will get free wireless connectivity to access internet in public places. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X