ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದವನ ವಿರುದ್ದ ಬೆಂಗಳೂರಿನಲ್ಲಿ ಬಿತ್ತು ಕೇಸ್‌!

|

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರ ವಿರುದ್ದ ಸೊಶೀಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದ ವ್ಯಕ್ತಿಯ ವಿರುದ್ದ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಜ್ಯದಲ್ಲಿ ಹಿಜಾಬ್ ವಿವಾದದ ಕುರಿತ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ಪೀಠದ ನ್ಯಾಯಾಧೀಶರ ವಿರುದ್ಧ ಸೊಶೀಯಲ್‌ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಲಾಗಿತ್ತು. ಹೀಗೆ ಪೋಸ್ಟ್‌ ಮಾಡಿದ್ದ ವ್ಯಕ್ತಿಯ ವಿರುದ್ದ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೈಕೋರ್ಟ್‌

ಹೌದು, ಹೈಕೋರ್ಟ್‌ ನ್ಯಾಯಾಧೀಶರ ವಿರುದ್ದ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ವ್ಯಕ್ತಿಯ ವಿರುದ್ದ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸುಮೋಟೊ ಕೇಸ್‌ ದಾಖಲಾಗಿದೆ, ಫೆಬ್ರವರಿ 9 ರಂದು ಸೊಶೀಯಲ್‌ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಲಾಗಿತ್ತು. ಅಲ್ಲದೆ ನಿರಂತರವಾಗಿ ಪೋಸ್ಟ್‌ಗಳನ್ನು ಮಾಡುತ್ತಲೇ ಬಂದಿದ್ದರಿಂದ ಪೋಲಿಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಸೊಶೀಯಲ್‌ ಮೀಡಿಯಾ ಪೋಸ್ಟ್‌ ಮಾಡಿದ್ದವರ ವಿರುದ್ದ ಯಾವ ಕೇಸ್‌ ದಾಖಲಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೊಶೀಯಲ್‌

ಸೊಶೀಯಲ್‌ ಮೀಡಿಯಾದಲ್ಲಿ ಏನೇ ಮಾಡಿದರೂ ನಡೆಯುತ್ತೇ ಅನ್ನೊರಿಗೆ ಈಗಾಗಲೇ ಪೋಲಿಸರು ಹಲವು ಭಾರಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಕೂಡ ಫೇಸ್‌ಬುಕ್‌ ಸೇರಿದಂತೆ ಅನೇಖ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡುವುದ ನಿಂತಿಲ್ಲ. ಸದ್ಯ ಕರ್ನಾಟಕದಲ್ಲಿ ಹಿಜಾಬ್‌ ವಿವಾದದ ಕೇಸ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಹಿಜಾಬ್ ವಿವಾದದ ಕುರಿತ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ಪೀಠದ ನ್ಯಾಯಾಧೀಶರ ವಿರುದ್ಧ ಮಂಗಳೂರು ಮುಸ್ಲಿಮರು ಪೇಜ್‌ನಲ್ಲಿ ಅವಹೇಳನಕಾರಿ ಬರಹ ಪೋಸ್ಟ್‌ ಮಾಡಲಾಗಿತ್ತು. ಇದೇ ಕಾರಣಕ್ಕೆ ಅತೀಕ್ ಷರೀಫ್ ಎಂಬ ವ್ಯಕ್ತಿಯ ವಿರುದ್ದ ಪೋಲಿಸರು ಸ್ವಯಂ ಪ್ರೇರಿತ ಕೇಸ್‌ ಅನ್ನು ದಾಖಲಿಸಿದ್ದಾರೆ.

ಇನ್ಸ್‌ಪೆಕ್ಟರ್

ದೂರು ದಾಖಲಿಸಿರುವ ಸಬ್ ಇನ್ಸ್‌ಪೆಕ್ಟರ್ ಅಕ್ಷತಾ ಕುರಕುಂದಿ ಅವರ ದೂರಿನ ಪ್ರಕಾರ, ಪೇಸ್‌ಬುಕ್‌ ಪೋಸ್ಟ್‌ನಲ್ಲಿ ನ್ಯಾಯಾಧೀಶರ ಸ್ವಾತಂತ್ರ್ಯದ ಮೇಲೆ ಅವಹೇಳನಕಾರಿಯಾಗಿ ಬರೆಯಲಾಗಿದೆ. ಆದರಿಂದ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66 (ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಲು ಕಂಪ್ಯೂಟರ್ ಸಾಧನಗಳ ಬಳಕೆ) ಹೊರತುಪಡಿಸಿ ಐಪಿಸಿ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಹಿಜಾಬ್

ಇನ್ನು ಹಿಜಾಬ್ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಾಧೀಶರಿಗೆ ಅವಮಾನ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ದಾಖಲಿಸಿರುವ ಎರಡನೇ ಪ್ರಕರಣ ಇದಾಗಿದೆ. ಈಗಾಗಲೇ ಫೆಬ್ರವರಿ 22 ರಂದು ಕನ್ನಡ ಚಲನಚಿತ್ರ ನಟ ಚೇತನ್ ಕುಮಾರ್ ವಿರುದ್ದ ಕೂಡ ಕೇಸ್‌ ದಾಖಲಿಸಲಾಗಿತ್ತು. ಅಲ್ಲದೆ ಇದೇ ಕೇಸ್‌ನಲ್ಲಿ ಅವರನ್ನು ಪೋಲಿಸರು ಬಂದಿಸಿದ್ದರು, ಬಳಿಕ ಫೆಬ್ರವರಿ 24ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದರ ನಡುವೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ನಟ ಚೇತನ್‌ ವಿರುದ್ಧ ಐಪಿಸಿಯ 504 ಮತ್ತು 505 (2) - ಸೆಕ್ಷನ್‌ಗಳ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

Best Mobiles in India

English summary
Bengaluru police registered a case against an individual allegedly over social media posts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X