10,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ದೊರೆಯುವ ಅತ್ಯಾಕರ್ಷಕ ಮಾನಿಟರ್‌ಗಳು!

|

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಕಚೇರಿ ಮತ್ತು ವೈಯುಕ್ತಿಕ ಬಳಕೆಗಾಗಿ ಮಾನಿಟರ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅಲ್ಲದೆ ಗೇಮಿಂಗ್‌ ಪ್ರಿಯರು ಕೂಡ ಮಾನಿಟರ್‌ಗಳನ್ನು ಬಳಸುವುದಕ್ಕೆ ಇಷ್ಟ ಪಡುತ್ತಾರೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ನಾನಾ ಬೆಲೆಯಲ್ಲಿ ಅನೇಕ ಮಾನಿಟರ್‌ಗಳು ದೊರೆಯುತ್ತಿವೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳು ಅನೇಕ ಮಾನಿಟರ್‌ಗಳನ್ನು ಅಗ್ಗದ ಬೆಲೆಯಲ್ಲಿ ಪರಿಚಯಿಸಿವೆ. ಇವುಗಳಲ್ಲಿ 10,000ರೂ.ಒಳಗಿನ ಮಾನಿಟರ್‌ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ.

ಮಾನಿಟರ್‌ಗಳು

ಹೌದು, ಭಾರತದಲ್ಲಿ ಮಾನಿಟರ್‌ಗಳು ವೈವಿಧ್ಯಮಯ ಬೆಲೆಯಲ್ಲಿ ಲಭ್ಯವಿವೆ. ಗ್ರಾಹಕರು ಹಗುರವಾದ, ಅದ್ಭುತ ಧ್ವನಿ ಗುಣಮಟ್ಟ, ಉತ್ತಮ ರೆಸಲ್ಯೂಶನ್ ಮತ್ತು ರೆಸ್ಪಾನ್ಸ್‌ ಟೈಂ, ಬಜೆಟ್ ಸ್ನೇಹಿ ಮತ್ತು ಐ ಕೇರ್‌ ಟೆಕ್ನಾಲಜಿಯನ್ನು ಹೊಂದಿರುವ ಮಾನಿಟರ್‌ಗಳನ್ನು ಖರೀದಿಸಲು ಬಯಸುತ್ತಾರೆ. ಇದಲ್ಲದೆ ಬ್ಲೂ ಲೈಟ್‌ ಫಿಲ್ಟರ್ ಟೆಕ್ನಾಲಜಿ ಹೊಂದಿರುವ ಮಾನಿಟರ್‌ಗಳಿಗೆ ಒಳ್ಳೆಯ ಬೇಡಿಕೆ ಇದೆ. ಹಾಗಾದ್ರೆ ಭಾರತದಲ್ಲಿ ನೀವು 10,000ರೂ.ಒಳಗೆ ಖರೀದಿಸಬಹುದಾದ ಅತ್ಯುತ್ತಮ ಮಾನಿಟರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಏಸರ್ SA220Q 21.5 ಇಂಚಿನ ಮಾನಿಟರ್

ಏಸರ್ SA220Q 21.5 ಇಂಚಿನ ಮಾನಿಟರ್

ಏಸರ್‌ ಕಂಪೆನಿಯ SA220Q ಮಾನಿಟರ್‌ ಕೂಡ ನಿಮಗೆ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಮಾನಿಟರ್‌ 21.5 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಮಾನಿಟರ್‌ 1 VGA 1 HDMI ಪೋರ್ಟ್‌ಗಳು ಅನ್ನು ಒಳಗೊಂಡಿದೆ. ಇದು 250 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ಉಚಿತ ಸಿಂಕ್ ಅನ್ನು ಸಹ ಹೊಂದಿದೆ. ಈ ಮಾನಿಟರ್‌ ಫ್ಲಿಕರ್-ಫ್ರೀ ಟೆಕ್ನಾಲಜಿಯನ್ನು ಒಳಗೊಂಡಿದ್ದು, ಬ್ಲೂ ಲೈಟ್ ಫಿಲ್ಟರ್, ಕಂಫರ್ಟ್ ವ್ಯೂ ಅನ್ನು ಹೊಂದಿದೆ. ಪ್ರಸ್ತುತ ಈ ಮಾನಿಟರ್‌ ಅನ್ನು ನೀವು ಅಮೆಜಾನ್‌ನಲ್ಲಿ 9,499ರೂ.ಬೆಲೆಗೆ ಖರೀದಿಸಬಹುದಾಗಿದೆ.

ಡೆಲ್‌ 1918H 18.5 ಇಂಚಿನ ಮಾನಿಟರ್

ಡೆಲ್‌ 1918H 18.5 ಇಂಚಿನ ಮಾನಿಟರ್

ಡೆಲ್‌ ಕಂಪೆನಿಯ ಡೆಲ್‌ 1918H ಮಾನಿಟರ್ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಮಾನಿಟರ್‌ ಆಂಟಿ-ಗ್ಲೇರ್ ಟೆಕ್ನಾಲಜಿಯನ್ನು ಹೊಂದಿದ್ದು ಗೇಮಿಂಗ್‌ ಪ್ರಿಯರಿಗೆ ಸೂಕ್ತವಾಗಿದೆ. ಇನ್ನು ಈ ಮಾನಿಟರ್‌ 18.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 600:01 ಕಾಂಟ್ರಾಸ್ಟ್ ಅನುಪಾತವನ್ನು ಪಡೆದಿದೆ. ಇದು ಟಚ್ ಸ್ಕ್ರೀನ್ ಮತ್ತು ಫ್ಲಿಕರ್-ಫ್ರೀ ಟೆಕ್ನಾಲಜಿಯನ್ನ ಒಳಗೊಂಡಿದೆ. ಈ ಮಾನಿಟರ್‌ ಅಮೆಜಾನ್‌ನಲ್ಲಿ ನಿಮಗೆ ಕೇವಲ 8,000ರೂ.ಬೆಲೆಗೆ ಲಭ್ಯವಾಗಲಿದೆ.

ಬೆನ್‌ಕ್ಯೂ GW2280 22 ಇಂಚಿನ ಮಾನಿಟರ್

ಬೆನ್‌ಕ್ಯೂ GW2280 22 ಇಂಚಿನ ಮಾನಿಟರ್

ಬೆನ್‌ಕ್ಯೂ ಕಂಪೆನಿಯ GW2280 ಮಾನಿಟರ್ ಅನ್ನು ಎಲ್ಲಾ ಮಾದರಿಯ ಕೆಲಸ ಕಾರ್ಯಗಳಿಗೆ ಬಳಸಬಹುದಾಗಿದೆ. ಈ ಮಾನಿಟರ್‌ 1920x1080 ರೆಸಲ್ಯೂಶನ್ ಹೊಂದಿರುವ 22 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 60HZ ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಈ ಮಾನಿಟರ್‌ ಡ್ಯುಯಲ್ HDM1, VGA ಮತ್ತು ಸ್ಮಾರ್ಟ್ ಕೇಬಲ್ ಮ್ಯಾನೇಜ್‌ಮೆಂಟ್‌ ಅನ್ನು ಹೊಂದಿದೆ. ಇದು 1.5m ಪವರ್ ಕೇಬಲ್, ಡಿ-ಸಬ್ ಕೇಬಲ್ ಮತ್ತು ವಾರಂಟಿ ಕಾರ್ಡ್‌ನೊಂದಿಗೆ ಬರುತ್ತದೆ. ಈ ಮಾನಿಟರ್‌ ಅನ್ನು ಅಮೆಜಾನ್‌ನಲ್ಲಿ 9,990ರೂ.ಬೆಲೆಗೆ ಖರೀದಿಸಬಹುದಾಗಿದೆ.

ಲೆನೊವೊ D22e-20 22 ಇಂಚಿನ ಮಾನಿಟರ್

ಲೆನೊವೊ D22e-20 22 ಇಂಚಿನ ಮಾನಿಟರ್

ಬಜೆಟ್‌ ಬೆಲೆಯಲ್ಲಿ ಮಾನಿಟರ್‌ ಖರೀದಿಸುವವರಿಗೆ ಲೆನೊವೊ D22e-20 ಉತ್ತಮ ಆಯ್ಕೆಯಾಗಿದೆ. ಈ ಮಾನಿಟರ್‌ 22 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 16.7 ಮಿಲಿಯನ್ ಬಣ್ಣಗಳೊಂದಿಗೆ ಉತ್ತಮ ದೃಶ್ಯ ಅನುಭವವನ್ನು ನೀಡಲಿದೆ. ಈ ಡಿಸ್‌ಪ್ಲೇ 250 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದ್ದು, TUV ರೈನ್‌ಲ್ಯಾಂಡ್ ಪ್ರಮಾಣೀಕೃತವನ್ನು ಹೊಂದಿದೆ. ಈ ಮಾನಿಟರ್‌ ಬ್ಯುಸಿನೆಸ್‌ ಗ್ರಾಹಕರಿಗೆ ಸೂಕ್ತವಾಗಿದೆ. ಪ್ರಸ್ತುತ ಈ ಮಾನಿಟರ್‌ ಅಮೆಜಾನ್‌ ತಾಣದಲ್ಲಿ 9,399ರೂ.ಬೆಲೆಗೆ ದೊರೆಯಲಿದೆ.

ಅಮೆಜಾನ್‌ ಬೇಸಿಕ್ಸ್‌ AB21M215001 21.5-ಇಂಚಿನ ಮಾನಿಟರ್

ಅಮೆಜಾನ್‌ ಬೇಸಿಕ್ಸ್‌ AB21M215001 21.5-ಇಂಚಿನ ಮಾನಿಟರ್

ಅಮೆಜಾನ್ ಬೇಸಿಕ್ಸ್ AB21M215001 ಮಾನಿಟರ್‌ 21.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಮಾನಿಟರ್‌ 1920x1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಅತ್ಯುತ್ತಮ ಆಡಿಯೊ ಕಾರ್ಯಕ್ಷಮತೆಗಾಗಿ 2X2W ಇಂಟರ್‌ಬಿಲ್ಟ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ. ಅಮೆಜಾನ್‌ ಬೇಸಿಕ್ಸ್‌ AB21M215001 ಮಾನಿಟರ್‌ HDMI ಪೋರ್ಟ್ ಅನ್ನು ಹೊಂದಿದೆ. ಪ್ರಸ್ತುತ ಈ ಮಾನಿಟರ್‌ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ 8,999ರೂ.ಬೆಲೆಗೆ ಲಭ್ಯವಾಗಲಿದೆ.

ವ್ಯೂಸೋನಿಕ್ VA2223H 21.9 ಇಂಚಿನ ಮಾನಿಟರ್

ವ್ಯೂಸೋನಿಕ್ VA2223H 21.9 ಇಂಚಿನ ಮಾನಿಟರ್

ವ್ಯೂಸೋನಿಕ್ ಕಂಪೆನಿಯ ವ್ಯೂಸೋನಿಕ್‌ VA2223H ಲ್ಯಾಪ್‌ಟಾಪ್‌ ಕೈಗೆಟಕುವ ಬೆಲೆಯಲ್ಲಿ ದೊರೆಯುವ ವಿಶ್ವಾಸಾರ್ಹ ಮಾನಿಟರ್ ಆಗಿದೆ. ಈ ಮಾನಿಟರ್‌ 22 ಇಂಚಿನ ಫ್ಲಾಟ್ ಡಿಸ್‌ಪ್ಲೇಯನ್ನು ಹೊಂದಿದ್ದು, 250 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದರಲ್ಲಿರುವ ವ್ಯೂ ಮೋಡ್ ಫೀಚರ್ಸ್‌ ಉತ್ತಮ ವೀಕ್ಷಣೆಯ ಅನುಭವ ನೀಡಲಿದೆ. ಈ ಮಾನಿಟರ್‌ ಫ್ಲಿಕರ್-ಫ್ರೀ ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ. ಪ್ರಸ್ತುತ ಈ ಮಾನಿಟರ್‌ ಅಮೆಜಾನ್‌ನಲ್ಲಿ 9,099ರೂ.ಬೆಲೆಗೆ ಖರೀದಿಗೆ ಲಭ್ಯವಿದೆ.

ಫಿಲಿಪ್ಸ್ 223V5LHSB2/94, 21.5 ಇಂಚಿನ LCD ಮಾನಿಟರ್

ಫಿಲಿಪ್ಸ್ 223V5LHSB2/94, 21.5 ಇಂಚಿನ LCD ಮಾನಿಟರ್

ಫಿಲಿಪ್ಸ್ ಕಂಪೆನಿಯ ಮಾನಿಟರ್‌ಗಳಲ್ಲಿ ಫಿಲಿಪ್ಸ್‌ 223V5LHSB2/94 ಮಾನಿಟರ್‌ ಬಜೆಟ್‌ ಬೆಲೆಯನ್ನು ಹೊಂದಿದೆ. ಈ ಮಾನಿಟರ್‌ 21.5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಈ ಮಾನಿಟರ್‌ ಸ್ಮಾರ್ಟ್ ಕಂಟ್ರೋಲ್ ಲೈಟ್ GUI ಮಾನಿಟರ್ ಕಂಟ್ರೋಲ್‌ ಸಾಫ್ಟ್‌ವೇರ್ ಅನ್ನು ಹೊಂದಿದೆ. ಇದು ಮುಂದಿನ ಪೀಳಿಗೆಯ 3D ಐಕಾನ್ ಆಧಾರಿತ GUI ಮಾನಿಟರ್ ಕಂಟ್ರೋಲ್‌ ಸಾಫ್ಟ್‌ವೇರ್ ಆಗಿದೆ. ಇದು HDMI ಪೋರ್ಟ್ ಅನ್ನು ಬೆಂಬಲಿಸಲಿದೆ. ಇನ್ನು ಈ ಮಾನಿಟರ್‌ ಅಮೆಜಾನ್‌ನಲ್ಲಿ ಪ್ರಸ್ತುತ 9,220ರೂ.ಬೆಲೆಯನ್ನು ಹೊಂದಿದೆ.

LG 22MK400H 21.5 ಇಂಚಿನ ಗೇಮಿಂಗ್ ಮಾನಿಟರ್

LG 22MK400H 21.5 ಇಂಚಿನ ಗೇಮಿಂಗ್ ಮಾನಿಟರ್

ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ಮಾನಿಟರ್‌ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿದೆ. ಎಲ್‌ಜಿ ಕಂಪೆನಿಯ LG 22MK400H ಮಾನಿಟರ್‌ ಅನ್ನು ನೀವು ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದು. ಈ ಮಾನಿಟರ್‌ 21.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು,ಗೇಮಿಂಗ್‌ಗೆ ಸೂಕ್ತವಾಗಿದೆ. ಇದು ಇನ್‌ಪುಟ್ ಲ್ಯಾಗ್ ಅನ್ನು ಕಡಿಮೆ ಮಾಡಲು ಡೈನಾಮಿಕ್ ಆಕ್ಷನ್ ಸಿಂಕ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 250 ನಿಟ್ಸ್ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು 75Hz ರಿಫ್ರೆಶ್‌ ರೇಟ್‌ ನೀಡಲಿದೆ. ಪ್ರಸ್ತುತ ಈ ಮಾನಿಟರ್‌ ಭಾರತದಲ್ಲಿ 8,999ರೂ.ಬೆಲೆಯಲ್ಲಿ ಲಭ್ಯವಿದೆ.

ಡೆಲ್‌ 20 D2020H, 19.5 ಇಂಚಿನ ಮಾನಿಟರ್

ಡೆಲ್‌ 20 D2020H, 19.5 ಇಂಚಿನ ಮಾನಿಟರ್

ಡೆಲ್‌ ಕಂಪೆನಿಯ ಮಾನಿಟರ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೇಡಿಕೆ ಇದೆ. ನಿವು ಕೈ ಗೆಟಕುವ ಬೆಲೆಯಲ್ಲಿ ಮಾನಿಟರ್‌ ಖರೀದಿಸುವುದಾದರೆ ಡೆಲ್‌ 20 D2020H ಮಾನಿಟರ್‌ ಸೂಕ್ತವಾಗಿದೆ. ಈ ಮಾನಿಟರ್‌ 19.5 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, ಆಂಟಿ-ಗ್ಲೇರ್ ಟೆಕ್ನಾಲಜಿ ಒಳಗೊಂಡಿದೆ. ಈ ಮಾನಿಟರ್‌ ಫ್ಲಿಕರ್-ಫ್ರೀ ತಂತ್ರಜ್ಞಾನದಿಂದ ಬೆಂಬಲಿತವಾಗಿದೆ. ಪ್ರಸ್ತುತ ಈ ಮಾನಿಟರ್‌ ನಿಮಗೆ ಅಮೆಜಾನ್‌ನಲ್ಲಿ 8,199ರೂ.ಬೆಲೆಯಲ್ಲಿ ದೊರೆಯಲಿದೆ.

ಏಸರ್ EK220Q 21.5 ಇಂಚುಗಳ LED ಮಾನಿಟರ್

ಏಸರ್ EK220Q 21.5 ಇಂಚುಗಳ LED ಮಾನಿಟರ್

ಏಸರ್‌ ಕಂಪೆನಿ ಗೇಮಿಂಗ್‌ ಮಾನಿಟರ್‌ಗಳಿಗೆ ಜನಪ್ರಿಯತೆಯನ್ನು ಪಡೆದಿದೆ. ನೀವು 10,000ರೂ.ಒಳಗೆ ಮಾನಿಟರ್‌ ಖರೀದಿಸಲು ಬಯಸಿದರೆ ಏಸರ್‌ ಕಂಪೆನಿಯ EK220Q ಮಾನಿಟರ್ ಉತ್ತಮ ಆಯ್ಕೆ ಎನಿಸಲಿದೆ. ಈ ಮಾನಿಟರ್‌ 1920 x 1080 ಫಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 21.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ ವ್ಯೂ ಆಗಲ್‌ ಕಲರ್‌ಗಳನ್ನು 178 ಡಿಗ್ರಿಗಳವರೆಗೆ ಕೋನಗಳಲ್ಲಿ ಮೇಲ್ವಿಚಾರಣೆ ಮಾಡಬಹುದು. ಇದು HDMI ಮತ್ತು VGA ಪೋರ್ಟ್‌ಗಳನ್ನು ಒಳಗೊಂಡಿದ್ದು, ಇದು ವೀಡಿಯೊ ಕನೆಕ್ಟಿವಿಟಿಗೆ ಸಹಾಯ ಮಾಡಲಿದೆ. ಪ್ರಸ್ತುತ ಈ ಮಾನಿಟರ್‌ ನಿಮಗೆ 7,800ರೂ.ಬೆಲೆಯನ್ನು ಹೊಂದಿದೆ.

Best Mobiles in India

English summary
Best desktop monitors under Rs. 10,000 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X